ಸರ್ಕಾರ ರಚಿಸುವಾಗ ಇಲ್ಲದ ವಿರೋಧ, ಸಚಿವ ಸ್ಥಾನ ನೀಡುವಾಗ ಯಾಕೆ?; ಸಿಪಿ ಯೋಗೇಶ್ವರ್​​

ಈಗ ಸಚಿವ ಸ್ಥಾನ ನೀಡಲು ಮುಂದಾಗುತ್ತಿದ್ದಂತೆ ವಿರೋಧಿಸುತ್ತಿರುವ ನಾಯಕರು ಸರ್ಕಾರ ರಚನೆ ಮಾಡುವಾಗ ಏನು ಮಾಡಿದರು?. ಆಗ ಯಾಕೆ ವಿರೋಧಿಸಲಿಲ್ಲ?. ಸರ್ಕಾರ ರಚಿಸುವಾಗ ನನ್ನ ಬಗ್ಗೆ ಯಾವುದೇ ಅಭ್ಯಂತರ ಇವರಿಗೆ ಇರಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಾಜಿ ಸಚಿವ
ಸಿ.ಪಿ.ಯೋಗೇಶ್ವರ್

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್

  • Share this:
ಬೆಂಗಳೂರು (ಫೆ.05): ಆಪರೇಷನ್​ ಕಮಲ ನಡೆಸಿ ಬಿಜೆಪಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿಪಿ ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಲು ಹೈ ಕಮಾಂಡ್​ ಸೂಚನೆ ನೀಡಿದೆ. ಆದರೆ, ಈ ನಿರ್ಧಾರಕ್ಕೆ ಈಗಾಗಲೇ ಹಲವು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದು, ಬಹಿರಂಗವಾಗಿ ಕಿಡಿಕಾರುತ್ತಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದ ಮಾಜಿ ಶಾಸಕ ಯೋಗೇಶ್ವರ್​ ಈಗ ತಮ್ಮ ನಾಯಕರ ವಿರುದ್ಧವೇ ಹರಿಹಾಯ್ದಿದ್ದು, ಈಗ ತೋರುತ್ತಿರುವ ವಿರೋಧ ಸರ್ಕಾರ ರಚನೆ ವೇಳೆ ಯಾಕೆ ಇರಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪಕ್ಷದಲ್ಲಿ ಮೂಲ ಬಿಜೆಪಿಗರ ಈ ನಡೆ ಬಗ್ಗೆ ಸಿಎಂ ಬಿಎಸ್​ ಯಡಿಯೂರಪ್ಪ ಹಾಗೂ ವಿಜಯೇಂದ್ರ ಮುಂದೆ ಬೇಸರ ವ್ಯಕ್ತಪಡಿಸಿರುವ ಯೋಗೇಶ್ವರ್​​, ಬಿಜೆಪಿ ಸರ್ಕಾರ ರಚನೆಗೆ ಕಾರಣ ಆಗಿರುವುದು ನಾವು. ಶಾಸಕರನ್ನು ಮುಂಬೈಗೆ ಕರೆದೊಯ್ದದ್ದು ನಾವು. ರಾಜೀನಾಮೆ ಕೊಡಿಸಿ, ಸರ್ಕಾರ ರಚನೆ ಮಾಡಿದ್ದೇನೆ. ಆಗ ವಿರೋಧ ತೋರದವರು. ಈಗ ವಿರೋಧಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ.

 

ಈಗ ಸಚಿವ ಸ್ಥಾನ ನೀಡಲು ಮುಂದಾಗುತ್ತಿದ್ದಂತೆ ವಿರೋಧಿಸುತ್ತಿರುವ ನಾಯಕರು ಸರ್ಕಾರ ರಚನೆ ಮಾಡುವಾಗ ಏನು ಮಾಡಿದರು?. ಆಗ ಯಾಕೆ ವಿರೋಧಿಸಲಿಲ್ಲ?. ಸರ್ಕಾರ ರಚಿಸುವಾಗ ನನ್ನ ಬಗ್ಗೆ ಯಾವುದೇ ಅಭ್ಯಂತರ ಇವರಿಗೆ ಇರಲಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಯೋಗೇಶ್ವರ್​ ಅಳಲು ಕೇಳಿದ  ಸಿಎಂ ಹಾಗೂ ವಿಜಯೇಂದ್ರ ಅವರನ್ನು ಸಮಾಧಾನಿಸುವ ಯತ್ನ ಕೂಡ ನಡೆಸಿದ್ದರು. ಸರ್ಕಾರ ರಚನೆ ಸಂದರ್ಭದಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿನ್ನೆಲೆ ನಿಮ್ಮ ಪರವಾಗಿ ಹೈ ಕಮಾಂಡ್​ ಮುಂದೆ ಬ್ಯಾಟಿಂಗ್​ ನಡೆಸಿದ್ದೇವೆ. ಆದರೆ, ಈಗ ಪಕ್ಷದಲ್ಲಿ ಈ ರೀತಿ ನಡೆ ವ್ಯಕ್ತವಾಗುತ್ತಿದೆ. ಕಾದು ನೋಡೋಣ ಮುಂದೇನಾಗಲಿದೆ ಎಂದು ಅವರನ್ನು ಸಮಾಧಾನಿಸಿದರು ಎನ್ನಲಾಗಿದೆ.

ಇದನ್ನು ಓದಿ: ಸಿಪಿ ಯೋಗೇಶ್ವರ್​ಗೆ ಸಚಿವ ಸ್ಥಾನ: ಅಸಮಾಧಾನಗೊಂಡ ಮೂಲ ಬಿಜೆಪಿ ಶಾಸಕರಿಂದ ರಹಸ್ಯ ಸಭೆ

ಸರ್ಕಾರದಲ್ಲಿ ಸೋತವರಿಗೆ ಸಚಿವ ಸ್ಥಾನ ನೀಡುತ್ತಾ ಹೋದರೆ ಗೆದ್ದವರು ಏನು ಮಾಡಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಬಸನಗೌಡ ಪಾಟೀಲ ಯತ್ನಾಳ್​​ ಸೇರಿದಂತೆ ಹಲವು ನಾಯಕರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಒಂದು ವೇಳೆ ಸಿಪಿ ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡಿದರೆ, ಮುಂದಿನ ನಡೆ ಏನು ಎಂಬ ಬಗ್ಗೆ ಕೂಡ ರಹಸ್ಯ ಸಭೆ ನಡೆಸಿದ್ದರು.
First published: