ರಾಮನಗರ (ಅ.23): ಎಲೆಕ್ಷನ್ (Election) ಹತ್ತಿರವಾಗ್ತಿದ್ದಂತೆ ಚನ್ನಪಟ್ಟಣ (Channapattana) ರಣಾಂಗಣವಾಗಿದ್ದು, ನಾಯಕರ ವಾಗ್ದಾಳಿ ಮುಂದುವರಿದೆ. ಮಾಜಿ ಸಿಎಂ ಕುಮಾರಸ್ವಾಮಿ (H.D Kumaraswamya) ಹಾಗೂ ಬಿಜೆಪಿ ನಾಯಕ ಯೋಗೇಶ್ವರ್ ನಡುವಿನ ವಾಕ್ ಸಮರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ರಾಮನಗರದಲ್ಲಿ ಮಾತಾಡಿದ ಸಿ.ಪಿ ಯೋಗೇಶ್ವರ್, ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ. ರಾಮನಗರದಲ್ಲಿ (Ramanagar) ನಿಲ್ಲೋಕೆ ಕುಮಾರಸ್ವಾಮಿ ಅವರಿಗೆ ಧೈರ್ಯವಿಲ್ಲ. ಕುಮಾರಸ್ವಾಮಿ ಹೆದರಿ ಹೋಗಿದ್ದಾರೆ, ಭಯ ಕಾಡ್ತಿದೆ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (C.P Yogeshwar) ಹೇಳಿದ್ದಾರೆ.
ರಾಮನಗರದಲ್ಲಿ ಯಾವ ಸೀಟ್ ಗೆಲ್ಲೋದಿಲ್ಲ
ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಸಿ.ಪಿ ಯೋಗೇಶ್ವರ್ ಅವ್ರು, ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸ್ಪರ್ಧೆ ಇತ್ತು . ಆದರೆ ಈಗ ಬಿಜೆಪಿ ಅದನ್ನ ಆಕ್ರಮಿಸಿಕೊಂಡಿದೆ. ರಾಮನಗರ ಜಿಲ್ಲೆಯಲ್ಲಿ ಕುಮಾರಸ್ವಾಮಿ ಯಾವ ಸೀಟ್ ಗೆಲ್ಲಲು ಆಗೋದಿಲ್ಲ. ರಾಮನಗರದಲ್ಲೇ ಬಿಜೆಪಿ ಸದೃಢವಾಗ್ತಿದೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ಕುಮಾರಸ್ವಾಮಿ 4 ವರ್ಷ ಕ್ಷೇತ್ರಕ್ಕೆ ಬಂದಿಲ್ಲ
ಗೆದ್ದ ಬಳಿಕ ಕುಮಾರಸ್ವಾಮಿ ಅವರು 4 ವರ್ಷ ಕ್ಷೇತ್ರಕ್ಕೆ ಬರಲಿಲ್ಲ, ನಾನು ಕ್ಷೇತ್ರದಲ್ಲಿ ಓಡಾಡುತ್ತಿದ್ದೇನೆ. ಹೀಗಾಗಿ ಅವರು ಹತಾಷರಾಗಿದ್ದಾರೆ. ಹಾಲಿಗಾದರೂ ಹಾಕಿ, ನೀರಿಗಾದರೂ ಹಾಕಿ ಅಂತಾರೆ, ಈ ಡೈಲಾಗ್ ಹಳೇಯದಾಗಿದೆ ಎಂದು ಯೋಗೇಶ್ವರ್ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: V Somanna: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದೇ ತಪ್ಪಾಯ್ತಾ? ಮಹಿಳೆಯ ಕಪಾಳಕ್ಕೆ ಹೊಡೆದ ಸಚಿವ ಸೋಮಣ್ಣ
ಒಮ್ಮೊಮ್ಮೆ ನನಗೆ ಹಾರ್ಟ್ ಪ್ರಾಬ್ಲಂ ಅಂತಾರೆ
ಒಮ್ಮೊಮ್ಮೆ ನನಗೆ ಹಾರ್ಟ್ ಪ್ರಾಬ್ಲಂ ಅಂತಾರೆ ಕಣ್ಣೀರು ಸುರಿಸುತ್ತಾರೆ. ಭಾವನಾತ್ಮಕವಾಗಿ ಸೆಳೆಯುವ ಕಾಲ ಹೋಯ್ತು ಎಂದು ಹೇಳಿದ್ದಾರೆ. ಇನ್ನು ಚನ್ನಪಟ್ಟಣ ತಹಶೀಲ್ದಾರ್ ಅವರನ್ನ ಇಡೀ ತಾಲೂಕು ಒಪ್ಪಿದೆ. ನೀವೆ ಸರ್ವೆ ಮಾಡಿ ಸರಿಯಿಲ್ಲ ಅಂದರೆ ಸರ್ಕಾರ ಬದಲಿಸಲಿದೆ. ಕುಮಾರಸ್ವಾಮಿ ಒಬ್ಬ PDO ಪರವಾಗಿಯೂ ವಾದ ಮಾಡ್ತಾರೆ. ಆ ಲೆವಲ್ ಗೆ ಹೋಗಿದ್ದಾರೆ ಎಂದು ಯೋಗೇಶ್ವರ್ ಹೇಳಿದ್ದಾರೆ.
ಕುಮಾರಸ್ವಾಮಿ ಬಗ್ಗೆ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ
ಇಷ್ಟು ದಿನ ಬಿಜೆಪಿ ಸರ್ಕಾರದ ಸಹಕಾರ ಬೇಕಾಗಿತ್ತು. ದಿನ ಬೆಳಗ್ಗೆ ಸಿಎಂ, ಮಂತ್ರಿಗಳ ಬಳಿ ಹೋಗ್ತಿದ್ದರು, ಎಲ್ಲಾ ಕೆಲಸ ಮಾಡಿಸಿಕೊಳ್ತಿದ್ದರು. ಬೆಳಗ್ಗೆ ಅವರ ಬಗ್ಗೆಯೇ ಮಾತನಾಡ್ತಾರೆ ಬಳಿಕ ಸಂಜೆಗೆ ಬ್ರದರ್ ನನಗೆ ಈ ಕೆಲಸ ಮಾಡಿಕೊಡು ಅಂತ ಅವರ ಬಳಿಯೇ ಹೋಗಿ ಕೇಳಿಕೊಳ್ತಾರೆ, ಅದು ಎಲ್ಲರಿಗೂ ಗೊತ್ತಿರುವ ವಿಚಾರ, ಕುಮಾರಸ್ವಾಮಿ ಬಗ್ಗೆ ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದು ಯೋಗೇಶ್ವರ್ ಹೇಳಿದ್ದಾರೆ.
ಇದನ್ನೂ ಓದಿ: HD Kumaraswamy: ಮೊದಲು ಜನರ ಬದುಕನ್ನು ಕಟ್ಟಲು ನೋಡಿ; ಸಾವರ್ಕರ್ ಮೊಮ್ಮಗನ ಹೇಳಿಕೆಗೆ HDK ಕಿಡಿ
ನಾವು ಸವಾಲ್ ಹಾಕಲು ರೆಡಿಯಿಲ್ಲ
ಮೂಡ್ ಸರಿಯಿದ್ದಾಗ ಮಾತನಾಡಿ, ಹೇ ಬೇಜಾರ್ ನಲ್ಲಿದೆ ಬಿಡು ಬ್ರದರ್ ಅಂತಾರೆ. ನಾವು ಸವಾಲ್ ಹಾಕಲು ರೆಡಿಯಿಲ್ಲ. ಅವರಿಗೆ ಹೆದರಿಸಿ, ಬೆದರಿಸಿ ರೂಢಿ ಇದೆ ಎಂದು ಯೋಗೇಶ್ವರ್ ಹೇಳಿದ್ದಾರೆ. ನಾವು ಜಗ್ಗುವವರಲ್ಲ, ಅದು ಅವರಿಗೂ ಗೊತ್ತಿದೆ. ಸರ್ಕಾರ ಇದ್ದಾಗ ಸರಿಯಾಗಿ ಆಡಳಿತ ಮಾಡಲಿಲ್ಲ
ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಅಸ್ತಿತ್ವ ಇಲ್ಲ
ನೋಡಿ ನಮ್ಮ ಜಿಲ್ಲಾಮಂತ್ರಿ ಎಷ್ಟು ಸ್ಮೂತ್ ಅಗಿ ಮಾತನಾಡಿದರೂ. ಅವರಿಗೆ ಗೊತ್ತಿದೆ ಹೇಗೆ ಆಡಳಿತ ನಡೆಸಬೇಕೆಂದು, ನಾವು ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತೇವೆ . 2023 ಕ್ಕೆ ನಮ್ಮದೇ ಸರ್ಕಾರ ಬರಲಿದೆ. ಅವರು ಎರಡು ಬಾರಿ ಸಿಎಂ ಆಗಿ ಸರಿಯಾದ ಆಡಳಿತ ಕೊಡಲಿಲ್ಲ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಗೆ ಅಸ್ತಿತ್ವ ಇಲ್ಲ ಎಂದು ರಾಮನಗರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ