‘ಕಾಡಿ ಬೇಡಿ ರಾಜ್ಯಸಭೆಗೆ ಹೋದ ಎಚ್​​.ಡಿ ದೇವೇಗೌಡ‘ - ಫೇಸ್​​ಬುಕ್​​ನಲ್ಲಿ ಹೀಗೊಂದು ಚರ್ಚೆ

ಸಿ.ಪಿ ಯೋಗೇಶ್ವರ್​​ಗೆ ಎಂಎಲ್​​ಸಿ ಸ್ಥಾನ ಸಿಗುತ್ತಿದ್ದಂತೆ ಚನ್ನಪಟ್ಟಣ ರಾಜಕೀಯ ಕಾವೇರಿದೆ. ಹೀಗಿರುವಾಗ ಕ್ಷೇತ್ರದ ಶಾಸಕ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದತ್ತ ಮುಖ ಮಾಡದೇ ಮೌನವಾಗಿರುವುದು ಕೆಲವು ಜೆಡಿಎಸ್ ನಾಯಕರಿಗೂ ಕಸಿವಿಸಿಯುಂಟಾಗಿದೆ.

ಹೆಚ್​.ಡಿ.  ದೇವೇಗೌಡ

ಹೆಚ್​.ಡಿ. ದೇವೇಗೌಡ

  • Share this:
ರಾಮನಗರ(ಜು.26): ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ನೂತನ ರಾಜ್ಯ ವಿಧಾನ ಪರಿಷತ್​ ಸದಸ್ಯ ಸಿ.ಪಿ ಯೋಗೇಶ್ವರ್​​ ಬೆಂಬಲಿಗರ ನಡುವೇ ಫೇಸ್​​ಬುಕ್​​ ವಾರ್​ ಶುರುವಾಗಿದೆ. ನೂತನ ಎಂಲ್​​ಸಿ ಆಗುತ್ತಿದ್ದಂತೆಯೇ ಸಿ.ಪಿ ಯೋಗೇಶ್ವರ್​​ ಸುದ್ದಿಗೋಷ್ಠಿ ನಡೆಸಿ ಮಾಜಿ ಸಿಎಂ ಎಚ್​.ಡಿ ಕುಮಾರಸ್ವಾಮಿ ಮತ್ತು ಡಿ.ಕೆ ಶಿವಕುಮಾರ್​ ರಿಟೈರ್ಡ್​ ಕುದುರೆಗಳು ಎಂದು ವ್ಯಂಗ್ಯವಾಡಿದ್ದರು. ಈ ಬೆನ್ನಲ್ಲೇ ಜೆಡಿಎಸ್​​ ನಾಯಕರು ಕೂಡ ಸುದ್ದಿಗೋಷ್ಠಿ ನಡೆಸಿ ಸಿ.ಪಿ ಯೋಗೇಶ್ವರ್​​ ಸತ್ತ ಕುದುರೆ, ಎಚ್​ಡಿಕೆ ರನ್ನಿಂಗ್​​ ಹಾರ್ಸ್​ ಎಂದು ಹೊಗಳಿದ್ದರು. ಇದರ ಬೆನ್ನಿಗೆ ಎಚ್​​ಡಿಕೆ ಮತ್ತು ಸಿಪಿವೈ ಬೆಂಬಲಿಗರ ಫೇಸ್​ಬುಕ್​​ ವಾರ್​ ಶುರುವಾಗಿದೆ.

ಸಿ.ಪಿ ಯೋಗೇಶ್ವರ್​​ ಸತ್ತ ಕುದುರೆ, ಎಚ್​ಡಿಕೆ ರನ್ನಿಂಗ್​​ ಹಾರ್ಸ್ ಎಂಬ ವಿಚಾರವಾಗಿಯೇ ಎರಡು ನಾಯಕರ ಬೆಂಬಲಿಗರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಕಾಡಿಬೇಡಿ ರಾಜ್ಯಸಭೆಗೆ ಪ್ರವೇಶ ಮಾಡಿದ್ದಾರೆ. ಹಿಂಬಾಗಿಲಿನಿಂದ ರಾಜಕೀಯ ಮಾಡಿದ್ದಾರೆ ಎಂದು ಸಿ.ಪಿ ಯೋಗೇಶ್ವರ್​​ ಬೆಂಬಲಿಗನೋರ್ವ ಫೇಸ್​​​ಬುಕ್​​ ಸಿಪಿವೈ ಫ್ಯಾನ್ಸ್​ ಪೇಜ್​​ನಲ್ಲಿ ಬರೆದುಕೊಂಡಿದ್ದಾನೆ.

ಇದಕ್ಕೆ ಸಿಟ್ಟಾದ ಜೆಡಿಎಸ್​​ ಕಾರ್ಯಕರ್ತರು ಸಿ.ಪಿ ಯೋಗೇಶ್ವರ್​ ಬೆಂಬಲಿಗರ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಹರಿಹಾಯ್ದಿದ್ದಾರೆ. ಜತೆಗೆ ಸಿ.ಪಿ ಯೋಗೇಶ್ವರ್ ಎಂಎಲ್​ಸಿ ಆದ ಎನ್ನುವ ಸಂಭ್ರಮದಲ್ಲಿ ಎಚ್​.ಡಿ ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ಮಾತನಾಡುತ್ತಿದ್ದೀರಿ. ಚನ್ನಪಟ್ಟಣವೂ ಕೊರೋನಾದಿಂದ ತತ್ತರಿಸಿದಾಗ ನೀವು ಎಲ್ಲಿಗೆ ಹೋಗಿದ್ರಿ? ಎಂದು ಸಿಪಿವೈಗೆ ಕೂಡ ಪ್ರಶ್ನಿಸಿದ್ದಾರೆ.ಸಿ.ಪಿ ಯೋಗೇಶ್ವರ್​​ ಬೆಂಬಲಿಗರು ಯಾವುದೇ ಕೆಲಸ ಮಾಡದೆ ಮಾತಾಡುತ್ತಿದ್ಧಾರೆ. ರಾಜ್ಯದ ಹಿರಿಯ ನಾಯಕರ ಬಗ್ಗೆ ಮಾತಾಡೋದು ಒಳ್ಳೆಯದಲ್ಲ. ಇಷ್ಟು ಅಹಂಕಾರ ನಿಮಗೆ ಶೋಭೆ ತರುವುದಿಲ್ಲ ಎಂದು ಸಿ.ಪಿ ಯೋಗೇಶ್ವರ್​​ಗೆ ಜೆಡಿಎಸ್​ ಕಾರ್ಯಕರ್ತರು ಕುಟುಕಿದ್ಧಾರೆ.

ಇದನ್ನೂ ಓದಿ: ’ಪ್ರಜಾಪ್ರಭುತ್ವ ಉಳಿಸಿ, ಸಂವಿಧಾನ ರಕ್ಷಿಸಿ‘ - ಬಿಜೆಪಿ ಸರ್ಕಾರದ ವಿರುದ್ಧ ನಾಳೆ ಕಾಂಗ್ರೆಸ್​ ಪ್ರತಿಭಟನೆ

ಒಟ್ಟಾರೆ ಸಿ.ಪಿ ಯೋಗೇಶ್ವರ್​​ಗೆ ಎಂಎಲ್​​ಸಿ ಸ್ಥಾನ ಸಿಗುತ್ತಿದ್ದಂತೆ ಚನ್ನಪಟ್ಟಣ ರಾಜಕೀಯ ಕಾವೇರಿದೆ. ಹೀಗಿರುವಾಗ ಕ್ಷೇತ್ರದ ಶಾಸಕ ಮತ್ತು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣದತ್ತ ಮುಖ ಮಾಡದೇ ಮೌನವಾಗಿರುವುದು ಕೆಲವು ಜೆಡಿಎಸ್ ಮುಖಂಡರಿಗೆ ಕಸಿವಿಸಿಯುಂಟಾಗಿದೆ.
Published by:Ganesh Nachikethu
First published: