ಗೋಹತ್ಯೆ ನಿಷೇಧ: ಶ್ರೀರಾಮ ಸೇನೆಯಿಂದ ವಿಜಯೋತ್ಸವ ಆಚರಣೆ

ನಮ್ಮ ದೇಶದ ಕಾಂಗ್ರೇಸ್ ಮಾತ್ರ ಮುಸ್ಲಿಂರ ಓಟಿಗಾಗಿ ಗೋಹತ್ಯೆಗೆ ಬೆಂಬಲ ನೀಡುತ್ತ ಬಂದಿದೆ. ಮುಸ್ಲಿಂ ತುಷ್ಟಿಕರಣದ ರಾಜಕೀಯ ಫಲದಿಂದಾಗಿ ಹಿಂದಿನ ಸರ್ಕಾರಗಳು 1964ರ ಕಾನೂನು ಜಾರಿಗೆ ತರುತ್ತಿರಲಿಲ್ಲ.  ಬರಿ ನೆಪ ಮಾತ್ರಕ್ಕೆ ಕಾನೂನು ಅನ್ನುವ ಹಾಗಾಗಿತ್ತು.

ಹಸುವಿಗೆ ಹಣ್ಣು ತಿನ್ನಿಸುತ್ತಿರುವ ಪ್ರಮೋದ್ ಮುತಾಲಿಕ್

ಹಸುವಿಗೆ ಹಣ್ಣು ತಿನ್ನಿಸುತ್ತಿರುವ ಪ್ರಮೋದ್ ಮುತಾಲಿಕ್

  • Share this:
ಚಿಕ್ಕೋಡಿ(ಡಿ.10): ರಾಜ್ಯದಲ್ಲಿ ಗೋಹತ್ಯೆ ಕಾಯ್ದೆ ಜಾರಿಗೆ ತಂದಿರುವ ಬೆನ್ನಲ್ಲೇ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಬೆಂಬಲಿಸಿ ಶ್ರೀರಾಮ ಸೇನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ವಿಜಯೋತ್ಸವದ ಆಚರಣೆ ಮಾಡಿದೆ. ಪಟ್ಟಣದ ಸಾಯಿ ಮಂದಿರದ ಎದುರು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಲ್ ಗೋಮಾತೆಗೆ ಪೂಜೆ ಸಲ್ಲಿಸಿ  ಸ್ವತಃ ಅವರೆ ಸಿಹಿ ಹಂಚಿ ವಿಜಯೋತ್ಸವದ ಆಚರಣೆ ಮಾಡಿದ್ದಾರೆ. ಇನ್ನು ವೇಳೆ ಮಾತನಾಡಿದ ಪ್ರಮೋದ್ ಮುತಾಲಿಕ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಭಿನಂದನೆ ಸಲ್ಲಿಸಿ ಕಾಂಗ್ರೆಸ್​ ವಿರುದ್ದ ಹರಿಹಾಯ್ದಿದ್ದಾರೆ.  ಭಾರತ ದೇಶದಲ್ಲಿ ಗೋವನ್ನ ನಾವು ತಾಯಿ ಸಮಾನ ನೋಡುತ್ತೇವೆ. ಗೋವನ್ನ ಹಿಂದು ಸಮಾಜದ ದೇವರು ಎಂದು ಪೂಜೆ ಮಾಡುತ್ತ ಬಂದಿದ್ದೇಬೆ. ದೇಶದ ನೂರಾರು ಕೋಟಿ ಜನರ ಆಶಯ ಗೋಹತ್ಯೆ ನಿಷೇಧ ಆಗಬೇಕು ಎಂದು ಇತ್ತು. ಇವತ್ತು ನೂರಾರು ಕೋಟಿ ಜನರ ಆಶಯ ಈಡೇರಿದೆ ಎಂದು ಹೇಳಿದರು.

ಒಳ್ಳೆಯ ಕಾಯ್ದೆಯನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಆದರೆ ಕಾಯ್ದೆಯಲ್ಲಿ ಇನ್ನು ಬಿಗಿ ಕ್ರಮಗಳನ್ನ ಮಾಡಬೇಕು. ಕಾನೂನು ಉಲ್ಲಂಘನೆ ಮಾಡಿದ್ರೆ 7 ವರ್ಷ ಶಿಕ್ಷೆ ಎಂದು ಕಾನೂನಿನಲ್ಲಿದೆ. ಇದು 7 ವರ್ಷದ ಬದಲು 10 ವರ್ಷ ಮಾಡಬೇಕು, 7 ವರ್ಷದ ಶಿಕ್ಷೆಯ ಕಾನೂನಿಗೆ ಜಾಮೀನು ಸಿಗುತ್ತದೆ 10 ವರ್ಷದ ಶಿಕ್ಷೆ ಆದ್ರೆ ತಪ್ಪು ಮಾಡಿದವರಿಗೆ ಜಮೀನು ಸಹ ಸಿಗಲ್ಲ. ಇನ್ನು ರಾಜ್ಯದಲ್ಲಿ ಬೇಕಾಬಿಟ್ಟಿ  ಬೆಳೆದು ನಿಂತಿರುವ ಕಸಾಯಿ ಖಾನೆಗಳ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕು ಎಂದಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ ಸ್ವಾಗತಾರ್ಹ; ಆದರೆ 10 ವರ್ಷ ಶಿಕ್ಷೆ ಇರಬೇಕಿತ್ತು: ಪ್ರಮೋದ್ ಮುತಾಲಿಕ್

ಇನ್ನು ಗೋ ರಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ಹೇಳಿರುವ ವಿಚಾರ ಕೂಡ ಒಳ್ಳೆಯ ನಿರ್ಧಾರವಾಗಿದೆ. ಕಾಂಗ್ರೆಸ್​​ ಸರ್ಕಾರ ಇದ್ದಾಗ ಗೋರಕ್ಷಕರ ಮೇಲೆಯೆ ಕೇಸ್​ಗಳನ್ನ ಹಾಕಿ ಗೋರಕ್ಷಕರನ್ನ ಹೆದರಿಸುವ ಕೆಲಸ ಆಗುತ್ತಿತ್ತು. ಬಿಜೆಪಿಯವರು ಇದನ್ನ ತೆಗೆದು ಒಳ್ಳೆಯ ಕೆಲಸ ಮಾಡಿದ್ದಾರೆ. ಗೋ ರಕ್ಷಣೆ ವಿಚಾರದಲ್ಲಿ ಪ್ರತ್ಕೇಯ ಕೋರ್ಟ್ ನಲ್ಲಿ ವಿಚಾರಣೆ ವ್ಯವಸ್ಥೆ ಮಾಡಿದ್ದು ಸ್ವಾಗತಾರ್ಹ ಎಂದಿದ್ದಾರೆ.

ಕಾಂಗ್ರೆಸ್​​ನಿಂದ ಮುಸ್ಲಿಂ ತುಷ್ಠೀಕರಣ ರಾಜಕೀಯ

ಮುಸ್ಲಿಮರ ದಾಳಿ ಸಮಯದಲ್ಲಿ ಗೋಮಾತೆಯ ಮೇಲೆ ಹಲ್ಲೆ ಅಕ್ರಮ ಶುರುವಾಗಿದೆ. ಗಾಂಧಿಜಿ ಸಂಪೂರ್ಣ ಗೋಹತ್ಯೆ ನಿಷೇಧ ಮಾಡಬೇಕು ಅಂದಿದ್ರು. ಅಂದ್ರೆ ಕಾಂಗ್ರೆಸ್ ಮಾಡಿರಲಿಲ್ಲ, ಸಿದ್ದರಾಮಯ್ಯ ಹೇಳುತ್ತಾರೆ, ಚರ್ಚೆ ಮಾಡಿರಲಿಲ್ಲ ಎಂದು. ಕಳೆದ 70 ವರ್ಷದಿಂದ ಚರ್ಚೆ ಆಗ್ತಾನೆ ಇದೆ ವಿದೇಶದಲ್ಲೂ ಗೋವನ್ನ ಪೋಜೆ ಮಾಡುತ್ತಾರೆ. ಆದ್ರೆ ನಮ್ಮ ದೇಶದ ಕಾಂಗ್ರೇಸ್ ಮಾತ್ರ ಮುಸ್ಲಿಂರ ಓಟಿಗಾಗಿ ಗೋಹತ್ಯೆಗೆ ಬೆಂಬಲ ನೀಡುತ್ತ ಬಂದಿದೆ. ಮುಸ್ಲಿಂ ತುಷ್ಟಿಕರಣದ ರಾಜಕೀಯ ಫಲದಿಂದಾಗಿ ಹಿಂದಿನ ಸರ್ಕಾರಗಳು 1964ರ ಕಾನೂನು ಜಾರಿಗೆ ತರುತ್ತಿರಲಿಲ್ಲ.  ಬರಿ ನೆಪ ಮಾತ್ರಕ್ಕೆ ಕಾನೂನು ಅನ್ನುವ ಹಾಗಾಗಿತ್ತು. ಸಿದ್ದರಾಮಯ್ಯ ಮುಸ್ಲಿಮರ ಮತಗಳ ಪ್ರೀತಿಯಿಂದ ಈ ಕಾನೂನಿಗೆ ವಿರೋಧ ಮಾಡುತ್ತಿದ್ದಾರೆ. ಗೋಹತ್ಯೆಗೆ ಬೆಂಬಲ ನೀಡಿ ಗೋವಿನ ಶಾಸಪದಿಂದಲೆ ಕಾಂಗ್ರೆಸ್​ ದೇಶದಲ್ಲಿ ನಿರ್ನಾಮವಾಗಿದೆ ಎಂದು ಕಾಂಗ್ರೆಸ್​ ವಿರುದ್ದ ಹರಿಹಾಯ್ದಿದ್ದಾರೆ.
Published by:Latha CG
First published: