news18-kannada Updated:January 18, 2021, 8:47 PM IST
ಸಚಿವ ಪ್ರಭು ಚವ್ಹಾಣ
ಕಾರವಾರ(ಜ.18): ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ- 2020 ಇಂದಿನಿಂದ ಜಾರಿಗೆ ಬರುತ್ತಿದ್ದು ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯ ಹಾಗೂ ದಂಡದ ಪ್ರಮಾಣದಲ್ಲಿ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕೆಂದು ಪಶು ಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚೌವ್ಹಾಣ್ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ಆಗಮಿಸಿದ ಸಚಿವ ಪ್ರಭು ಚೌಹಾಣ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗೋಹತ್ಯೆ ನಿಷೇದ ಕಾಯ್ದೆ ಅನುಷ್ಠಾನ ಕುರಿತು ಜಿಲ್ಲಾಧಿಕಾರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.ಈ ಕಾಯ್ದೆಯ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಬೇಕು ಗ್ರಾಮಸಭೆ ಸೇರಿದಂತೆ ಜಿಲ್ಲೆಯ ಎಲ್ಲ ಕಡೆಗಳಲ್ಲಿ ಸಭೆ ಕೈಗೊಳ್ಳಬೇಕು ಯಾವುದೇ ಕಾರಣಕ್ಕೂ ಕೂಡಾ ಕಾಯ್ದೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯ ಪ್ರಮಾಣವನ್ನು 3 ವರ್ಷದಿಂದ 6 ವರ್ಷದವರೆಗೆ ಮತ್ತು ಮೊದಲನೆ ಸಾರಿ 50 ಸಾವಿರದಿಂದ 5 ಲಕ್ಷದವರೆಗೆ, ಎರಡನೇ ಸಾರಿ ಮಾಡಿದರೆ 10 ಲಕ್ಷದವರೆಗೆ ದಂಡ ವಿಧಿಸಬೇಕೆಂದು ತಿಳಿಸಿದರು.
ಉದ್ದವ್ ಠಾಕ್ರೆ ಹಗಲುಗನಸು ಕಾಣುವುದನ್ನ ಬಿಡಬೇಕು; ಮಹಾ ಸಿಎಂಗೆ ಸಚಿವರ ತಿರುಗೇಟು
ಯಾವುದೇ ಗೋವುಗಳು ಖಸಾಯಿ ಖಾನೆಗೆ ಹೊಗಬಾರದು. ಪಶು ವೈದ್ಯಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒ ಗಳು ರೈತರಲ್ಲಿ ಗೋ ಹತ್ಯೆಯ ಶಿಕ್ಷೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಕಾಯಿದೆಯಲ್ಲಿ ಜಾನುವಾರು ಎಂದರೆ ಹಸು ಕರು, ಎತ್ತು, ಹೋರಿಗಳು ಹಾಗೂ 13 ವರ್ಷದೊಳಗಿನ ಎಮ್ಮೆ ಮತ್ತು ಕೋಣಗಳು ಆಗಿವೆ. ಇಂತಹ. ಜಾನುವಾರುಗಳ ಸಾಗಾಣಿಕೆ ಮೇಲೆ ನಿರ್ಬಂಧವಿರುವದರಿಂದ ಕೃಷಿ ಮತ್ತು ಪಶುಪಾಲನಾ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿ ಅನುಮತಿ ನೀಡುವ ವ್ಯವಸ್ಥೆ ಮಾಡಬೇಕು ಎಂದರು.
ಅವುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಾಣಿಕೆ ಮಾಡಬೇಕಾಗಿ ಬಂದಲ್ಲಿ ಪಶು ವೈದ್ಯರ ಪ್ರಮಾಣ ಪತ್ರ ಮತ್ತು ಮಾಲಿಕತ್ವದ ಹಾಗೂ ಎನಿಮಲ್ ಟ್ಯಾಗ್ ಹೊಂದಿರುವಂತೆ ನೊಡಿಕೊಳ್ಳಬೇಕು. ಅಲ್ಲದೇ ವಾಹನದಲ್ಲಿ 5 ರಿಂದ 6 ಜಾನುವಾರುಗಳಿಗೆ ಮಾತ್ರ ಸಾಗಾಣಿಕೆಗೆ ಅವಕಾಶ ನೀಡಬೇಕು ಮತ್ತು ಅಗತ್ಯ ಆಹಾರ ಮತ್ತು ನೀರು ವಾಹನದಲ್ಲಿ ಇರುವಂತೆ ಸೂಚಿಸಬೇಕು. ಗರ್ಭಧಾರಿತ ಜಾನುವಾರುಗಳಿಗೆ ಸಾಗಾಣಿಕೆ ಮಾಡಲು ಅವಕಾಶ ನೀಡಬಾರದು ಮತ್ತು ರಾತ್ರಿ 8 ರಿಂದ ಬೆಳಗ್ಗೆ 6ವರೆಗಿನ ಅವಧಿಯಲ್ಲಿ ಕೂಡ ಸಾಗಾಣಿಕೆ ಅವಕಾಶ ನೀಡಬಾರದೆಂದರು.
ಜಿಲ್ಲೆಯಲ್ಲಿ ಈಗಾಗಲೇ ಕೆಲವು ಗೋಶಾಲೆಗಳಿದ್ದು ಅಲ್ಲಿರುವ ಗೋವುಗಳಿಗೆ ಮೇವು ಹಾಗೂ ಅಗತ್ಯ ಸೌಕರ್ಯಗಳನ್ನು ಅಧಿಕಾರಿಗಳು ಒದಗಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಎರಡರಂತೆ ಗೋ ಶಾಲೆ ಸ್ಥಾಪನೆಗೆ ಚಿಂತನೆ ನಡೆದಿದೆ. ಇದು ಗೋ ಹತ್ಯೆ ನಿಷೇದ ಕಾಯಿದೆ ಪರಿಣಾಮಕಾರಿಯಾಗಿ ಜಾರಿಯಾಗಲು ಸಹಕಾರಿಯಾಗುತ್ತದೆ ಎಂದರು.
ಗೋ ಶಾಲೆ ತೆರೆಯಲು ಚಿಂತನೆ
ಗೋ ರಕ್ಷಣೆಗೆ ಬಿಜೆಪಿ ಸರಕಾರ ಯ್ಯಾ ತ್ತು ಮುಂದಾಗಿದ್ದು ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ, ಬಿಡಾಡಿ ಗೋ ಗಳನ್ನ ರಕ್ಷಣೆ ಮಾಡಲು ಪ್ರತಿ ತಾಲೂಕಿಗೆ ಒಂದರಂತೆ ಗೋ ಶಾಲೆಗಳನ್ನ ತೆರೆಯಲು ಚಿಂತನೆ ನಡೆಸಿದೆ. ಗೋ ಶಾಲೆಗಳನ್ನ ತೆರೆದರೆ ಗೋ ರಕ್ಷಣೆ ಆಗುತ್ತೆ, ಅಕ್ರಮವಾಗಿ ಗೋ ಸಾಗಾಟದಾರರ ಸಂಖ್ಯೆ ಕಡಿಮೆ ಆಗಿದೆ ಸಾಕಲು ಆಗದ ರೈತರು ಗೋ ಗಳನ್ನ ಗೋ ಶಾಲೆಗೆ ಬಿಡಬಹುದು. ಈ ನಿಟ್ಟಿನಲ್ಲಿ ಗೋ ರಕ್ಷಣೆಗೆ ಸರಕಾರ ಮುಂದಾಗಿದೆ ಎಂದು ಸಚಿವರು ಹೇಳಿದ್ದಾರೆ.
Published by:
Latha CG
First published:
January 18, 2021, 8:46 PM IST