ಚಾಮರಾಜನಗರ ( ಜ.17) ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ( ಗೋಹತ್ಯೆ ನಿಷೇಧ ಕಾಯ್ದೆ - Prevention of Cow Slaughter and Preservation of Cattle Act) ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಾಗಿ ನಾಳೆ ( ಜನವರಿ 18) ಗೆ ಸರಿಯಾಗಿ ಒಂದು ವರ್ಷವಾಗಲಿದೆ. ಆದರೆ ಕಾಯ್ದೆ ಜಾರಿಯಾಗಿ ಒಂದು ವರ್ಷ ಆಗುತ್ತಾ ಬಂದರೂ ಗೋವುಗಳ ಹತ್ಯೆ ಮಾತ್ರ ನಿಂತಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನ ಇದೆ. ಹೌದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಗೋಹತ್ಯೆ (cow slaughter Act) ನಿಷೇಧ ಕಾಯ್ದೆಗೆ ಕಿಮ್ಮತ್ತು ಇಲ್ಲದಂತಾಗಿದ್ದು ನಿರಂತರವಾಗಿ ಗೋ ವಧೆ ನಡೆಸಿ ದನಗಳ ಮಾಂಸ ಮಾರಾಟ ದಂಧೆ ನಡೆಯುತ್ತಿದ್ದುದ್ದು ಬೆಳಕಿಗೆ ಬೆಳಕಿಗೆ ಬಂದಿದೆ
ಗಡಿ ಪ್ರದೇಶದಲ್ಲಿ ನಿರ್ಭೀತಿಯಿಂದ ಸಾಗಿದ ವ್ಯಾಪಾರ
ಕೊಳ್ಳೇಗಾಲ ಪಟ್ಟಣದ ಆನಂದಜ್ಯೋತಿ ಕಾಲೋನಿಯಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವುದಲ್ಲದೆ ಬೇರೆ ಬೇರೆ ಜಿಲ್ಲೆಗಳಿಗು ಪ್ಯಾಕ್ ಮಾಡಿ ರವಾನಿಸಲಾಗುತ್ತಿತ್ತು ಎನ್ನಲಾಗಿದೆ ಇಲ್ಲಿ ದನಗಳನ್ನು ಕತ್ತರಿಸುತ್ತಿದ್ದುದ್ದರಿಂದ ಸುತ್ತಮುತ್ತಲ ಪ್ರದೇಶಗಳಲ್ಲಿ ದುರ್ವಾಸನೆ ವ್ಯಾಪಿಸುತ್ತಿತ್ತು. ದುರ್ನಾತದ ಬಗ್ಗೆ ಸ್ಥಳೀಯ ನಿವಾಸಿಗಳು ನಗರಸಭೆಗೆ ಅನೇಕ ಬಾರಿ ದೂರುಗಳನ್ನು ಸಹ ನೀಡಿದ್ದರು. ಆದರೆ ನಗರಸಭಾಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಇದನ್ನು ಓದಿ: ಕೃಷ್ಣನ ಪೂಜಾಧಿಕಾರ ಪಡೆದ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ; ಅದ್ದೂರಿ ದರ್ಬಾರ್ ಮೂಲಕ ಪರ್ಯಾಯ ಸಂಪನ್ನ
ಖಚಿತ ಮಾಹಿತಿ ಮೇರೆಗೆ ದಾಳಿ
ಇಲ್ಲಿ ದನಗಳ ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಆಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಉಮಾವತಿ ಸುಮೊಟೊ ಕೇಸ್ ದಾಖಲಿಸಿಕೊಂಡು ಪಶು ಇಲಾಖೆ ಹಾಗು ನಗರಸಭಾ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ 1226 ಕೆ.ಜಿ. ದನದ ಮಾಂಸ ಹಾಗು ಮಾಂಸ ಸಂಗ್ರಹಿಸುತ್ತಿದ್ದ 4 ಪ್ಲಾಸ್ಟಿಕ್ ಡಬ್ಬಿಗಳನ್ನು ವಶಪಡಿಸಿಕೊಂಡಿದ್ದಾರೆ. ಗೋವುಗಳ ಚರ್ಮ ಸುಲಿದು ಮಾರಾಟಕ್ಕೆ ನೇತು ಹಾಕಿರುವುದು ಸಹ ಕಂಡು ಬಂದಿದೆ. ಪೊಲೀಸರ ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದ ಇಬ್ಬರು ಆರೋಪಿಗಳು ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ಈ ಸಂದರ್ಭದಲ್ಲಿ ವಧೆಗೆ ಸಿದ್ದವಾಗಿದ್ದ ಆರು ಗೋವುಗಳನ್ನು ರಕ್ಷಣೆ ಮಾಡಲಾಗಿದ್ದು, ರಕ್ಷಿಸಲ್ಪಟ್ಟ ಗೋವುಗಳನ್ನು ಮೈಸೂರಿನ ಪಿಂಜರಾಪೋಲ್ ಗೆ ರವಾನಿಸಲಾಗಿದೆ
ಇದನ್ನು ಓದಿ: ಗಲ್ಫ್ ವಿಮಾನಗಳಲ್ಲಿ ಪ್ರಯಾಣಿಸುವ ಸೋಂಕಿತರಿಗಾಗಿ ಉಚಿತ Rescheduling ಅವಕಾಶ
ಆರು ಹಸುಗಳ ರಕ್ಷಣಾ ಕಾರ್ಯ
ರಾಜ್ಯದಲ್ಲಿ ಗೋಹತ್ಯೆ ಹಾಗು ಅಕ್ರಮ ಸಾಗಾಟ ಸಂಪೂರ್ಣ ನಿಷೇಧಿಸಲಾಗಿದೆ, ಗೋಹತ್ಯೆ, ಅಕ್ರಮ ಸಾಗಾಟದ ಮೇಲೆ ಪೊಲೀಸ್ ಇಲಾಖೆ ಹಾgಊ ಪಶುಸಂಗೋಪನಾ ಇಲಾಖೆ ಹೆಚ್ಚು ನಿಗಾ ವಹಿಸಬೇಕು ಎಂದು ಸರ್ಕಾರ ಸೂಚಿಸಿದ್ದರೂ ಸಹ ನಿರ್ಲಕ್ಷ್ಯ ವಹಿಸಲಾಗಿತ್ತು. ಹಾಗಾಗಿ ಇಲ್ಲಿ ಯಾವುದೇ ಎಗ್ಗಿಲ್ಲದೆ ಗೋವಧೆ ನಡೆಸಿ ಮಾಂಸ ಮಾರಾಟ ಮಾಡುವ ದಂಧೆ ನಡೆಯುತ್ತಿತ್ತು. ಇದೀಗ ತಡವಾಗಿ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ದನದ ಮಾಂಸ ಹಾಗೂ ಆರು ಹಸುಗಳನ್ನು ವಶಕ್ಕೆ ಪಡೆದು ರಕ್ಷಣೆ ಮಾಡಿದ್ದಾರೆ. ಗೋವುಗಳ ಹತ್ಯೆ ಹಾಗೂ ಅಕ್ರಮ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ನೆರೆಯ ರಾಜ್ಯಕ್ಕೂ ಮಾರಾಟ
ಗಡಿ ಭಾಗದ ಗುಂಡ್ಲು ಪೇಟೆಯಲ್ಲೂ ಸಹ ಕೇರಳ ಹಾಗೂ ತಮಿಳುನಾಡಿನ ಕಸಾಯಿಖಾನೆಗಳಿಗೆ ಅಕ್ರಮವಾಗಿ ದನಗಳ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಸುತ್ತುಮುತ್ತ ನಡೆಯುವ ಸಂತೆಗಳಲ್ಲಿ ದನಕರುಗಳನ್ಮು ಖರೀದಿಸುವ ದಂಧೆಕೋರರು ಅವುಗಳನ್ನು ಯಾರಿಗೂ ಅನುಮಾನ ಬಾರದಂತೆ ಗಡಿ ಭಾಗದ ಹಳ್ಳಿಗಳ ಮೂಲಕ ಕಾಲ್ನಡಿಗೆಯಲ್ಲಿ ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ವ್ಯಾಪಕ ಆರೋಪಗಳು ಕೇಳಿಬರುತ್ತಿವೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ