Puttur: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ತೆರೆಯಲು ಸರಕಾರ ನಿರ್ಧಾರ

ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ. ಯೋಜನೆ  ಅನುಷ್ಠಾನಕ್ಕಾಗಿ ನೀಲ ನಕಾಶೆ ತಯಾರಾಗಿದೆ. ನರೇಗಾ ಯೋಜನೆಯಡಿಯಲ್ಲಿ ಹಟ್ಟಿಗಳ ರಚನೆ ನಡೆಯಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪುತ್ತೂರು(ಜೂ.30): ಅಶಕ್ತ ಗೋವುಗಳು (Cow) ಕಟುಕರ ಕೈ ಸೇರುವುದನ್ನು ತಪ್ಪಿಸಲು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ (Govt Cow shelter)  ತೆರೆಯಲು ಸರಕಾರ ನಿರ್ಧಾರಿಸಲಾಗಿದೆ ಎಂದು ರಾಜ್ಯ ಪಶುಸಂಗೋಪನಾ ಸಚಿವ ಪ್ರಭು ಚೌಹಾನ್ ಹೇಳಿದರು. ಈ ಯೋಜನೆ  ಅಡಿಯಲ್ಲಿ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ತಾಲೂಕಿನ ರಾಮಕುಂಜದಲ್ಲಿಮುಂದಿನ ಡಿಸೆಂಬರ್ ಅಂತ್ಯಕ್ಕೆ  ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳ್ಳಲಿದೆ. ಗೋಪಾಲಕರು ತಮ್ಮಲ್ಲಿರುವ ಆಶಕ್ತ ಗೋವುಗಳನ್ನು ಈ ಗೋಶಾಲೆಗೆ ನೀಡಿ ಗೋವುಗಳ ರಕ್ಷಣೆ ಮಾಡಬೇಕು ಎಂದರು.

ದಕ್ಷಿಣಕನ್ನಡ ಜಿಲ್ಲಾಡಳಿತ, ದ.ಕ ಜಿಲ್ಲಾ ಪಂಚಾಯಿತಿ, ಪಶುಪಾಲನಾ ವೈದ್ಯಕೀಯ ಇಲಾಖೆ ಮಂಗಳೂರು (Mangaluru), ದ.ಕ ಜಿಲ್ಲಾ ಪ್ರಾಣಿದಯಾ ಸಂಘ ಹಾಗೂ ರಾಮಕುಂಜ ಗ್ರಾಮ ಪಂಚಾಯತ್ ಸಹಯೋಗದಲ್ಲಿ ರಾಮಕುಂಜದಲ್ಲಿ ನಡೆದ ಜಿಲ್ಲೆಯ ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ,ಗೋವುಗಳಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

50 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋಶಾಲೆ

ಸುಮಾರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ. ಯೋಜನೆ  ಅನುಷ್ಠಾನಕ್ಕಾಗಿ ನೀಲ ನಕಾಶೆ ತಯಾರಾಗಿದೆ. ನರೇಗಾ ಯೋಜನೆಯಡಿಯಲ್ಲಿ ಹಟ್ಟಿಗಳ ರಚನೆ ನಡೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ಡಿಸೆಂಬರ್ (December) ವೇಳೆಗೆ ಗೋಶಾಲೆ ಲೋಕಾರ್ಪಣೆಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಗೋವುಗಳು ಕಟುಕರ ಕೈ ಸೇರುವುದನ್ನು ತಪ್ಪಿಸಲು ಯೋಜನೆ

ಗೋವು ನಮ್ಮ ದೇಶದ ಸಂಸ್ಕೃತಿಯ ಭಾಗ. ಹಾಗಾಗಿ ಇವುಗಳ ರಕ್ಷಣೆಗಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇದ ಕಾನೂನು ಜಾರಿಗೊಳಿಸಲಾಗಿದೆ. ಅಶಕ್ತ ಗೋವುಗಳು ಕಟುಕರ ಕೈ ಸೇರುವುದನ್ನು ತಪ್ಪಿಸಲು ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ  ಗೋಶಾಲೆ ತೆರಯಲಾಗುತ್ತದೆ.

ಇದನ್ನೂ ಓದಿ: ಪದೇ ಪದೇ ಭೂಕಂಪ ಹಿನ್ನೆಲೆ ಕೊಡಗಿಗೆ ಹಿರಿಯ ಭೂವಿಜ್ಞಾನಿಗಳ ತಂಡ ಭೇಟಿ

15 ಸಾವಿರ ಹಸುಗಳ ರಕ್ಷಣೆ

ಗೋವುಗಳ ಸೆಗಣಿ, ಗಂಜಲ ಮುಂತಾದವುಗಳಿಂದ ವಿವಿಧ ಅರೋಗ್ಯಕರ  ಉತ್ಪನ್ನಗಳನ್ನು ತಯಾರಿಸಿ ಅದರಿಂದಲೇ ಗೋಶಾಲೆಗಳ ನಿರ್ವಹಣೆ ಮಾಡುವ ಮೂಲಕ ಆತ್ಮನಿರ್ಭರ ಗೋಶಾಲೆಯನ್ನಾಗಿಸಲಾಗುವುದು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪಶುಸಂಗೋಪಾನಾ ಇಲಾಖೆಯಲ್ಲಿ ಹಲವು ಪರಿವರ್ತನೆಗಳಾಗಿವೆ.  ಗೋಹತ್ಯಾ ನಿಷೇದ ಕಾಯದೆ ಜಾರಿಗೊಳಿಸುವ ಮೂಲಕ 15 ಸಾವಿರ ಹಸುಗಳ ರಕ್ಷಣೆ ಮಾಡಲಾಗಿದೆ.

ಗೋವುಗಳ ಅಂಬ್ಯುಲೆನ್ಸ್

ಮನೆಬಾಗಿಲಲ್ಲಿ ಗೋವುಗಳ ಚಿಕಿತ್ಸೆ ನೀಡಲು ನುರಿತ ತಜ್ಞರೊಂದಿಗಿನ  ಗೋವುಗಳ ಅಂಬ್ಯುಲೆನ್ಸ್ ತಾಲೂಕಿಗೆ ಒಂದರಂತೆ ನೀಡಲಾಗಿದೆ. ಕ್ಷೀರ ಸಮೃದ್ದಿ ಸಹಕಾರಿ ಸಂಘಗಳ ಮೂಲಕ ಗೋಪಾಲಕರಿಗೆ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅನುಗ್ರಹ ಯೋಜನೆ ಮೂಲಕ ಗೋವುಗಳ ಆಕಸ್ಮಿಕ ಮರಣಕ್ಕೆ ಪರಿಹಾರ ನೀಡಲಾಗುವುದು. ಕೊಯಿಲ ಪಶುಸಂಗೋಪನಾ ಕೇಂದ್ರದ‌ ಸುತ್ತಮುತ್ತ ಅಕ್ರಮ ಕಸಾಯಿಕಾನೆ ಕಾರ್ಯಚರಿಸುತ್ತಿದೆ ಎನ್ನುವ ಮಾಹಿತಿ ದೊರೆತಿದೆ.

ಇದನ್ನೂ ಓದಿ: ನಿರುದ್ಯೋಗಿಗಳು ವಡಾಪಾವ್, ಮಿರ್ಚಿ ಮಾಡಿ ಮಾರುವಂತೆ ಸಲಹೆ ಕೊಟ್ಟ BJP ವಕ್ತಾರೆ

ಈ ಬಗ್ಗೆ ತಕ್ಷಣ ಪೊಲೀಸ್ ಇಲಾಖೆ  ಬಗ್ಗೆ ಕಾನೂನು ಕ್ರಮಕೈಗೊಳ್ಳಲು  ಸೂಚಿಸಲಾಗಿದೆ ಎಂದರು.  ಮುಂದಿನ ಬಕ್ರೀದ್ ಹಬ್ಬಗಳ ಸಂದರ್ಭ ಗೋವುಗಳ ಅಕ್ರಮ ಸಾಗಾಟವನ್ನು ತಡೆಯಲು ಪೊಲೀಸ್ ಇಲಾಖೆ ಎಚ್ಚೆತ್ತೆಕೊಳ್ಳಬೇಕು.  ಎಲ್ಲಾ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ಪರೀಶಿಲನೆ ನಡೆಸಬೇಕು. ಪಶುವೈದ್ಯರು ಸ್ಥಳದಲ್ಲಿರಬೇಕು ಎಂದು ಸಂಬಂದ ಪಟ್ಟವರಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ದೇಶದಲ್ಲಿ ಗೋಹತ್ಯೆ ನಿಷೇಧದ ನಂತರವೂ ಬಹಳಷ್ಟು ಸಲ ಗೋಕಳ್ಳ ಸಾಗಣೆ ಪ್ರಕರಣಗಳು ನಡೆದಿವೆ. ಗೋಸಾಗಣೆ ಮಾಡುವವರ ಮೇಲೆ ನೈತಿಕ ಪೊಲೀಸ್ ಗಿರಿ ಪ್ರಕರಣವೂ ಆಗಾಗ ವರದಿಯಾಗುತ್ತಲೇ ಇರುತ್ತದೆ.
Published by:Divya D
First published: