ಗೋವಿಗೆ ಮಗಳಂತೆ ಸೀಮಂತ ಮಾಡಿದ ರೈತ ಕುಟುಂಬ; ಇಡೀ ಊರಿಗೆ ಊಟ ಹಾಕಿಸಿ ಅದ್ದೂರಿ ಕಾರ್ಯಕ್ರಮ

ತುಕಾರಾಮ್ ಆಕಳನ್ನ ಮನೆ ಮಗಳಂತೆ ನೋಡಿಕೊಳ್ಳಲು ಆರಂಭಿಸಿದರು.  ಕಳೆದ ಐದು ತಿಂಗಳ ಹಿಂದಷ್ಟೇ ಗೌರಿ ಗರ್ಭಧರಿಸಿದ್ದಳು. ಅಂದಿನಿಂದಲೂ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು

ಗೋವಿಗೆ ಸೀಮಂತ

ಗೋವಿಗೆ ಸೀಮಂತ

  • Share this:
ಚಿಕ್ಕೋಡಿ (ಫೆ. 5): ಗೋವು ಎಂದರೆ ದೇವರ ಸ್ವರೂಪ ಎಂಬ ಭಾವ ಹಿಂದುಗಳಲ್ಲಿದೆ.  ಪ್ರತಿಯೊಬ್ಬ ರೈತರು ಗೋವಿಗೆ ವಿಶೇಷ ಸ್ಥಾನ ಮಾನಕೊಟ್ಟು ಅದನ್ನ ಮನೆ ಮಗಳಂತೆ ನೋಡಿಕೊಳ್ಳಲಾಗುತ್ತದೆ. ಇಲ್ಲೊಂದು ರೈತ ಕುಟುಂಬ ಗೋವಿಗೆ ಚೆಂದದ ಹೆಸರಿಟ್ಟಿದ್ದರು ಇನ್ನೂ ಐದು ತಿಂಗಳಿರುವ ಗೋವಿಗೆ ಇಂದು ಕುಟುಂಬಸ್ಥರೆಲ್ಲರೂ ಸೇರಿಕೊಂಡು ಸಿಂಗರಿಸಿ ಹಬ್ಬದಂತೆ ಗೋವಿಗೆ ಸೀಮಂತ ಕಾರ್ಯ ಮಾಡಿದ್ದಾರೆ.  ಮನೆಯ ಮುಂದೆ ಶಾಮೀಯಾನ, ಮನೆಗೆಲ್ಲಾ ಸಿಂಗಾರ, ಇತ್ತ ಹೂಗಳಿಂದ ಸಿಂಗರಿಸಲಾಗಿದೆ. ಗೋವಿನ ಕೊರಳಲ್ಲಿ ಸೀರೆಯನ್ನಿಟ್ಟು ಮುತ್ತೈದೆಯರು ಆರತಿ ಮಾಡಿ, ಹುಡಿ ತುಂಬಿಸಿದ್ದಾರೆ. ಬಗೆ ಬಗೆಯ ಅಡುಗೆ ಮಾಡಿ ಮೊದಲು ಗೌರಿಗೆ ಅರ್ಪಿಸಲಾಗಿದೆ. ಗೌರಿ ಕೂಡ ಕಣ್ಣಿಗೆ ಕಾಡಿಗೆ, ಮೈಮೇಲೆ ಬಣ್ಣದ ಚಿತ್ತಾರ ಬಡಿದುಕೊಂಡು ಚೆಂದುಳ್ಳ ಚಲುವೆಯಂತೆ ಫಳ ಫಳ ಮಿಂಚಿದ್ದಾಳೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ನಿವಾಸಿ ತುಕಾರಾಮ್ ಮಾಳಿ ಆಕಳನ್ನ ಖರೀದಿ ಮಾಡಿಕೊಂಡು ಬಂದಿದ್ದರು. ಇದಕ್ಕೆ ಗೌರಿ ಎಂದು ನಾಮಕರಣ ಮಾಡಿ ಮನೆಗೆ ಕರೆ ತಂದ ಬಳಿಕ ಮನೆಯಲ್ಲಿ ಆಗ್ತಿದ್ದ ಸಣ್ಣಪುಟ್ಟ ಜಗಳ ಬಂದ್ ಆದವು.  ಜತೆಗೆ ಆರ್ಥಿಕ ಸ್ಥಿತಿಗತಿ ಕೂಡ ಸುಧಾರಿಸಿತು. ಇದನ್ನೆಲ್ಲಾ ನೋಡಿದ ತುಕಾರಾಮ್ ಆಕಳನ್ನ ಮನೆ ಮಗಳಂತೆ ನೋಡಿಕೊಳ್ಳಲು ಆರಂಭಿಸಿದರು.  ಕಳೆದ ಐದು ತಿಂಗಳ ಹಿಂದಷ್ಟೇ ಗೌರಿ ಗರ್ಭಧರಿಸಿದ್ದಳು. ಅಂದಿನಿಂದಲೂ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು, ಐದು ತಿಂಗಳ ಮುಗಿದ ಬಳಿಕ ಮಗಳಿಗೆ ಹೇಗೆ ತವರು ಮನೆಯವರು ಸೀಮಂತ ಮಾಡುತ್ತಾರೆ. ಅದೇ ಮಾದರಿಯಲ್ಲಿ ಇಂದು ಅದ್ದೂರಿಯಾಗಿ ಗೌರಿಗೆ ಸೀಮಂತ ಮಾಡಲಾಗಿದೆ.

ಇನ್ನೂ ಸೀಮಂತ ಮಾಡುವ ಎರಡು ದಿನ ಪೂರ್ವದಿಂದಲೂ ತಯಾರಿ ಮಾಡಿಕೊಂಡಿದ್ದ ಕುಟುಂಬಸ್ಥರು ಊರಲ್ಲಿದ್ದ ಸಂಬಂಧಿಕರನ್ನೂ ಕರೆಸಿದ್ದರು. ಅಷ್ಟೇ ಅಲ್ಲದೆ ಇಡೀ ಗ್ರಾಮದ ಜನರನ್ನ ಕೂಡ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಬೆಳಿಗ್ಗೆ ಎಂಟು ಗಂಟೆಗೆ ಗೌರಿಗೆ ಮೈತೊಳೆದು ನಂತರ ಬಣ್ಣ ಬಳಿದು ಮಲ್ಲಿಗೆ, ಸೇವಂತಿ, ಚೆಂಡು ಹೂಗಳಿಂದ ಅಲಂಕಾರ ಮಾಡಲಾಯಿತು. ಇದಾದ ಬಳಿಕ ಗೌರಿ ಕಣ್ಣಿಗೆ ಕಾಡಿಗೆ ಬಳಿದು ಕೊರಳಲ್ಲಿ ಸೀರೆಯನ್ನ ಹಾಕಿ ಆರತಿ ಬೆಳಗೆ ಮಂಗಳಾರತಿಯನ್ನ ಹೇಳಿ ಪೂಜೆ ಸಲ್ಲಿಸಲಾಯಿತು. ಇತ್ತ ಬಗೆ ಬಗೆಯ ಅಡುಗೆಯನ್ನ ಮಾಡಿದ್ದು ಮೊದಲು ಗೌರಿಗೆ ಅದನ್ನ ತಿನ್ನಿಸಿ ನಂತರ ಸಂಬಂಧಿಕರು ಹಾಗೂ ಗ್ರಾಮಸ್ಥರಿಗೆ ಶಿರಾ, ಸಜ್ಜಿ ರೊಟ್ಟಿ, ಬದನೆಕಾಯಿ ಪಲ್ಯ, ಅನ್ನ ಸಾಂಬಾರ ಬಡಿಸಲಾಯಿತು. ಇನ್ನೂ ಮನೆ ಮಗಳ ಸೀಮಂತ ಕಾರ್ಯ ಕೂಡ ಇಷ್ಟೊಂದು ಅದ್ದೂರಿಯಾಗಿ ಮಾಡುತ್ತಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಇಂದು ಗೌರಿಗೆ ವಿಶೇಷ ಪೂಜೆ ಸಲ್ಲಿಸುವುದರ ಜತೆಗೆ ಸೀಮಂತ ಕಾರ್ಯ ಮಾಡಲಾಯಿತು ಅಂತಾರೆ ಪೂಜೆ ಮಾಡಿದ ಪುರೋಹಿತ.

ಮೂಕ ಪ್ರಾಣಿಯನ್ನು ಮನೆ ಮಗಳಂತೆ ನೋಡಿಕೊಂಡ ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Published by:Seema R
First published: