• Home
  • »
  • News
  • »
  • state
  • »
  • ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಗೆ ಬಂದ ಕೋವಿಡ್ ಲಸಿಕೆ; ಸಂಭ್ರಮದಿಂದ ಬರಮಾಡಿಕೊಂಡ ಆರೋಗ್ಯ ಇಲಾಖೆ

ಕೊರೋನಾ ಹಾಟ್ ಸ್ಪಾಟ್ ಕಲಬುರ್ಗಿಗೆ ಬಂದ ಕೋವಿಡ್ ಲಸಿಕೆ; ಸಂಭ್ರಮದಿಂದ ಬರಮಾಡಿಕೊಂಡ ಆರೋಗ್ಯ ಇಲಾಖೆ

ಅರೋಗ್ಯ ಇಲಾಖೆ ಅಧಿಕಾರಿಗಳು

ಅರೋಗ್ಯ ಇಲಾಖೆ ಅಧಿಕಾರಿಗಳು

ಮೊದಲ ದಿನ ಜಿಲ್ಲಾ ಆಸ್ಪತ್ರೆ, ಆರು ತಾಲೂಕು ಆಸ್ಪತ್ರೆ ಮತ್ತು ಒಂದು ಸಮುದಾಯ ಆರೋಗ್ಯ ಕೇಂದ್ರ ಸೇರಿ ಒಟ್ಟು ಎಂಟು ಕಡೆ ಲಸಿಕೆ ವಿತರಣೆ ಕಾರ್ಯ ನಡೆಯಲಿದೆ.

  • Share this:

ಕಲಬುರ್ಗಿ (ಜ. 14): ಜಿಲ್ಲೆ ಈ ಹಿಂದೆ ಕೊರೋನಾ ಹಾಟ್ ಸ್ಪಾಟ್ ಎಂದು ಗುರುತಿಸಿಕೊಂಡಿತ್ತು. ಅಷ್ಟೇ ಅಲ್ಲದೇ, ದೇಶದ ಮೊದಲ ಕೊರೋನಾ ಸಾವು ನಗರದಲ್ಲಿ ಸಂಭವಿಸಿತ್ತು. ಕೋವಿಡ್ ಸೋಂಕಿತರ ಸಂಖ್ಯೆಯೂ 20 ಸಾವಿರ ಗಡಿ ದಾಟಿದ್ದು, ಕ್ರಮೇಣ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖವಾಗಲಾರಂಭಿಸಿದೆ. ಇಂತಹ ಕೊರೋನಾ ಹಾಟ್ ಸ್ಪಾಟ್ ಜಿಲ್ಲೆಗೆ ಕೊನೆಗೂ ಕೋವಿಡ್ ವ್ಯಾಕ್ಸಿನ್ ಬಂದಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲಕ ಜಿಲ್ಲಾ ಆರೋಗ್ಯಾಧಿಕಾರಿಗಳ ಕಛೇರಿಗೆ ಆಗಮಿಸಿದ ಕೋವಿ ಶೀಲ್ಡ್, ಕೋವಿಡ್ ವ್ಯಾಕ್ಸಿನ್ ಲಸಿಕೆಗಳನ್ನು ಸ್ವತಃ ಡಿ.ಎಚ್.ಒ. ಡಾ.ರಾಜಶೇಖರ ಮಾಲಿ ಸ್ವಾಗತಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಕಲಬುರ್ಗಿ ವಿಭಾಗದ ನಾಲ್ಕು ಜಿಲ್ಲೆಗಳ ವ್ಯಾಕ್ಸಿನ್ ಗಳನ್ನು ಹೊತ್ತ ಕಂಟೇನರ್ ಬಂದಿದೆ. ಸಂಕ್ರಾಂತಿ ಹಿನ್ನೆಲೆಯಲ್ಲಿ ರಜೆ ಇದ್ದರೂ ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವ್ಯಾಕ್ಸಿನ್ ಹೊತ್ತ ಕಂಟೇನರ್ ಗಾಗಿ ಕಾದು, ಬಂದ ಕೂಡಲೇ ತೆಂಗಿನಕಾಯಿ ಒಡೆದು, ಪೂಜೆ ಸಲ್ಲಿಸಿದ್ದಾರೆ. ನಂತರ ವ್ಯಾಕ್ಸಿನ್ ಡೋಸ್ ಗಳನ್ನು ಡಿ.ಎಚ್.ಒ. ಕಛೇರಿ ಆವರಣದಲ್ಲಿರೋ ಕೋಲ್ಡ್ ಸ್ಟೋರೇಜ್ ಗೆ ಸಾಗಿಸಿದ್ದಾರೆ.


ಕಲಬುರ್ಗಿ ಜಿಲ್ಲೆಗೆ 12 ಸಾವಿರ ವ್ಯಾಕ್ಸಿನ್, ರಾಯಚೂರು ಜಿಲ್ಲೆಗೆ 9 ಸಾವಿರ ವ್ಯಾಕ್ಸಿನ್, ಬೀದರ್ ಜಿಲ್ಲೆಗೆ 5500 ಹಾಗೂ ಯಾದಗಿರಿ ಜಿಲ್ಲೆಗೆ 3 ಸಾವಿರ ಕೋವಿಡ್ ವ್ಯಾಕ್ಸಿನ್ ಬಂದಿದೆ. ನಾಲ್ಕೂ ಜಿಲ್ಲೆಗೆ ಸೇರಿ ಒಟ್ಟು 29,500 ಡೋಸ್ ವ್ಯಾಕ್ಸಿನ್ ಕಲಬುರ್ಗಿಗೆ ಬಂದಿದೆ. ಕಲಬುರ್ಗಿ ಜಿಲ್ಲೆಗೆ 21 ಸಾವಿರ ವ್ಯಾಕ್ಸಿನ್ ಅಗತ್ಯವಿತ್ತು. ಆದರೆ ಜಿಲ್ಲೆಗೆ 12 ಸಾವಿರ ವ್ಯಾಕ್ಸಿನ್ ಬಂದಿದೆ. ಉಳಿದ ಡೋಸ್ ನಂತರದಲ್ಲಿ ಬರಲಿವೆ. ಸದ್ಯಕ್ಕೆ ಕೋವಿ ಶೀಲ್ಡ್ ವ್ಯಾಕ್ಸಿನ್ ಬಂದಿದೆ. ಮುಂದಿನ ದಿನಗಳಲ್ಲಿ ಕೋವಿ ವ್ಯಾಕ್ಸಿನ್ ಸಹ ಬರಲಿದೆ. ನಾಳೆ ಎಲ್ಲಾ ಪ್ರಾಥಮಿಕ, ತಾಲೂಕು ಆರೋಗ್ಯ ಕೇಂದ್ರಗಳಿಗೆ ಕಳಿಸಲಾಗುವುದು. ಜನವರಿ 16 ಕ್ಕೆ ವ್ಯಾಕ್ಸಿನ್ ಗೆ ಚಾಲನೆ ನೀಡಲಾಗುವುದು. ಮೊದಲ ದಿನ ಜಿಲ್ಲಾ ಆಸ್ಪತ್ರೆ, ಆರು ತಾಲೂಕು ಆಸ್ಪತ್ರೆ ಮತ್ತು ಒಂದು ಸಮುದಾಯ ಆರೋಗ್ಯ ಕೇಂದ್ರ ಸೇರಿ ಒಟ್ಟು ಎಂಟು ಕಡೆ ಲಸಿಕೆ ಆರಂಭಿಸಲಾಗುವುದು.


ಜನವರಿ 18 ರಂದು ಎಲ್ಲಾ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ವ್ಯಾಕ್ಸಿನ್ ಕೊಡಲಾಗುವುದು. ಬೇರೆ ಜಿಲ್ಲೆಗಳ ವ್ಯಾಕ್ಸಿನ್ ಡೋಸ್ ಗಳನ್ನು ಪೊಲೀಸ್ ಭದ್ರತೆಯಲ್ಲಿ ಕಳಿಸಿಕೊಡಲಾಗುವುದು ಎಂದು ನ್ಯೂಸ್ 18 ಕನ್ನಡಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಸಜಶೇಖರ ಮಾಲಿ ತಿಳಿಸಿದ್ದಾರೆ.


ಬಹು ನಿರೀಕ್ಷಿತ ಕೋವಿಡ್ ವ್ಯಾಕ್ಸಿನ್ ಬಂದಿರೋದರಿಂದ ಅದನ್ನು ಕೊರೋನಾ ವಾರಿಯರ್ಸ್ ಗೆ ಕೊಡಲು ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದೆ. ಮೊದಲ ಹಂತದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಲು ಆಯ್ಕೆಯಾದವರಿಗೆ ಸಂದೇಶಗಳನ್ನು ಕಳುಹಿಸಿಕೊಡಲಾಗುತ್ತಿದ್ದು, ಜನವರಿ 16 ರಿಂದ ವ್ಯಾಕ್ಸಿನ್ ಕೊಡುವ ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ಎರಡು ಬಾರಿ ಕೋವಿಡ್ ವ್ಯಾಕ್ಸಿನ್ ಕೊಡುವ ಅಣಕು ಪ್ರಕ್ರಿಯೆ ಡ್ರೈ ರನ್ ಯಶಸ್ವಿಯಾಗಿದೆ.


(ವರದಿ - ಶಿವರಾಮ ಅಸುಂಡಿ)

Published by:Seema R
First published: