HOME » NEWS » State » COVID VACCINE BANGALORE AND BELAGAVI GET 7 LAKH COVISHIELD AHEAD OF CORONAVIRUS VACCINATION DRIVE SCT

Covid Vaccine: ನಾಳೆ ಕೊರೋನಾ ಲಸಿಕಾ ಅಭಿಯಾನ; ಬೆಂಗಳೂರು, ಬೆಳಗಾವಿಗೆ 7.94 ಲಕ್ಷ ಕೊವಿಶೀಲ್ಡ್​ ರವಾನೆ

Coronavirus Vaccine: ಕರ್ನಾಟಕಕ್ಕೆ ಈಗಾಗಲೇ ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ತಲುಪಿವೆ. ಬೆಂಗಳೂರಿಗೆ ಪುಣೆಯಿಂದ 6.48 ಲಕ್ಷ ಕೊವಿಶೀಲ್ಡ್ ರವಾನೆಯಾಗಿದೆ. ಬೆಳಗಾವಿಗೆ 1.47 ಲಕ್ಷ ಕೊವಿಶೀಲ್ಡ್ ಲಸಿಕೆ ಕಳುಹಿಸಲಾಗಿದೆ.

news18-kannada
Updated:January 15, 2021, 8:27 AM IST
Covid Vaccine: ನಾಳೆ ಕೊರೋನಾ ಲಸಿಕಾ ಅಭಿಯಾನ; ಬೆಂಗಳೂರು, ಬೆಳಗಾವಿಗೆ 7.94 ಲಕ್ಷ ಕೊವಿಶೀಲ್ಡ್​ ರವಾನೆ
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಜ. 15): ನಾಳೆಯಿಂದ ದೇಶದಲ್ಲಿ ಅತಿ ದೊಡ್ಡ ಕೊರೊನಾ ಲಸಿಕೆ ವಿತರಣೆ ಅಭಿಯಾನ ನಡೆಯಲಿದೆ. ನಾಳೆ ಬೆಳಗ್ಗೆ 10.30ಕ್ಕೆ ಕೊರೋನಾ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಈಗಾಗಲೇ ಕೊವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳು ತಲುಪಿವೆ. ಬೆಂಗಳೂರಿಗೆ ಪುಣೆಯಿಂದ 6.48 ಲಕ್ಷ ಕೊವಿಶೀಲ್ಡ್ ರವಾನೆಯಾಗಿದೆ. ಬೆಳಗಾವಿಗೆ 1.47 ಲಕ್ಷ ಕೊವಿಶೀಲ್ಡ್ ಲಸಿಕೆ ಕಳುಹಿಸಲಾಗಿದೆ. ನಿನ್ನೆ ಹೈದರಾಬಾದ್​ನಿಂದ 20 ಸಾವಿರ ಕೋವಿಡ್ ಲಸಿಕೆ ಬಂದಿದೆ. 

ಬೆಂಗಳೂರಿನ ರಾಜ್ಯ ಆರೋಗ್ಯ ಕಚೇರಿಯ ಉಗ್ರಾಣದಲ್ಲಿ ಕೊರೋನಾ ಲಸಿಕೆಗಳನ್ನು ಸಂಗ್ರಹ ಮಾಡಲಾಗುವುದು. ಬೆಂಗಳೂರು ಉಗ್ರಾಣದಿಂದ ಪ್ರಾದೇಶಿಕ ಕೇಂದ್ರಗಳ ಮೂಲಕ 22 ಜಿಲ್ಲೆಗೆ ಕೊರೋನಾ ಲಸಿಕೆ ರವಾನೆಯಾಗಲಿದೆ. ಬೆಳಗಾವಿ ಉಗ್ರಾಣದಿಂದ ಪ್ರಾದೇಶಿಕ ಕೇಂದ್ರಗಳ ಮೂಲಕ 8 ಜಿಲ್ಲೆಗೆ ರವಾನೆಯಾಗಲಿದೆ. ಕರ್ನಾಟಕಕ್ಕೆ ಬಂದಿರುವ ಲಸಿಕೆಯಲ್ಲಿ ಮೊದಲು ಕೊರೊನಾ ವಾರಿಯರ್ಸ್​ಗೆ, 15,730 ಕೇಂದ್ರ ಆರೋಗ್ಯ ಸಿಬ್ಬಂದಿಗೆ, 2,500 ಸೇನಾ ಸಿಬ್ಬಂದಿಗೆ, 7,75,400 ಡೋಸ್ ಆರೋಗ್ಯ ಕಾರ್ಯಕರ್ತರಿಗೆ ನೀಡಲಾಗುವುದು. ಹಾಗೇ, ಲಸಿಕೆಯ ಪ್ರಮಾಣವನ್ನು ಆಧರಿಸಿ 3,57,169 ಆರೋಗ್ಯ ಕಾರ್ಯಕರ್ತರಿಗೆ ನೀಡಲು ನಿರ್ಧಾರ ಮಾಡಲಾಗಿದೆ.

ನಾಳೆಯಿಂದ ದೇಶಾದ್ಯಂತ ಕೊರೋನಾ ಲಸಿಕಾ ಅಭಿಯಾನ ನಡೆಯಲಿದೆ. ನಾಳೆ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಲಸಿಕೆ ನೀಡಲಾಗುವುದು. ಮೊದಲು ನೋಂದಣಿ ಮಾಡಿದವರಿಗೆ ಲಸಿಕೆ ಸಿಗಲಿದೆ. ಪ್ರತಿ ಆರೋಗ್ಯ ಕೇಂದ್ರದಲ್ಲಿ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುವುದು.

ಇದನ್ನೂ ಓದಿ: ಯಲಚೇನಹಳ್ಳಿಯಿಂದ ರೇಷ್ಮೆ ಸಂಸ್ಥೆವರೆಗೂ ಹಸಿರು ಮಾರ್ಗದ ಮೆಟ್ರೋ ರೈಲಿಗೆ ಸಿಎಂ ಬಿಎಸ್​ವೈ ಚಾಲನೆ

ಇದುವರೆಗೂ ಕರ್ನಾಟಕಕ್ಕೆ 7,94,500 ಕೋವಿಶೀಲ್ಡ್ ಲಸಿಕೆ ಬಂದಿದೆ. ಇದರಲ್ಲಿ ಬಿಬಿಎಂಪಿಗೆ 1.05 ಡೋಸ್ ಬಂದಿದೆ. 18 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿ ಗೆ 0.5 ಎಂ .ಎಲ್ ಡೋಸ್ ಹಂಚಿಕೆ ಮಾಡಲಾಗುವುದು. ಒಂದು ಕೇಂದ್ರದಲ್ಲಿ 100 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು. ಮೊದಲ ಹಾಗೂ 2ನೇ ಡೋಸ್​ಗೆ 28 ದಿನಗಳ ಅಂತರ ಇರಲಿದೆ.

ನಾಳೆಯಿಂದ ಕೊರೊನಾ ವ್ಯಾಕ್ಸಿನ್ ಲಸಿಕೆ ವಿತರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯ ಕೊರೊನಾ ಲಸಿಕೆ ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಲಸಿಕೆಗಳನ್ನು ಶೇಖರಣೆ ಮಾಡಲಾಗಿದೆ. ಬೆಂಗಳೂರಿನ ಪ್ರಮುಖ ಆಸ್ಪತ್ರೆ ಮತ್ತು ಕೋಲ್ಡ್ ಸ್ಟೋರೇಜ್ ಗಳಿಗೆ ಲಸಿಕೆ ರವಾನೆಯಾಗಲಿದೆ. ಪ್ರತಿ ಕೇಂದ್ರದಲ್ಲಿ 100 ಜನರಿಗೆ ಲಸಿಕೆ ವಿತರಣೆ ಮಾಡಲಾಗುವುದು. ಈಗಾಗಲೇ ನೋಂದಣಿಯಾದವರಿಗೆ ಮಾತ್ರ ಕೊರೊನಾ ಲಸಿಕೆ ವಿತರಣೆ ಮಾಡಲಾಗುವುದು.
ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್​ಗಳಿಗೆ ಲಸಿಕೆ ನೀಡಲಾಗುವುದು. ಬೆಂಗಳೂರು ವ್ಯಾಪ್ತಿಯ ಲಸಿಕೆ ಸಂಗ್ರಹ ಮಾಡಿರುವ ದಾಸಪ್ಪ ಆಸ್ಪತ್ರೆಗೆ ಮಾರ್ಷಲ್​ಗಳಿಂದ ಭದ್ರತೆ ನೀಡಲಾಗಿದೆ. ಕೋಲ್ಡ್ ಸ್ಟೋರೇಜ್ ಬಳಿ ಐವರು ಮಾರ್ಷಲ್​ಗಳಿಂದ ಭದ್ರತೆ ಒದಗಿಸಲಾಗಿದೆ.
Published by: Sushma Chakre
First published: January 15, 2021, 8:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories