ಬೆಂಗಳೂರು: ಚೀನಾದಲ್ಲಿ ಕೊರೊನಾ (Corona Virus) ಅಬ್ಬರಿಸ್ತಿದೆ. ಈ ಹಿನ್ನೆಲೆ ರಾಜ್ಯ, ದೇಶದಲ್ಲಿ ಕೊರೊನಾ ಆತಂಕ ಶುರುವಾಗಿದೆ. ಇಂದು ಮಧ್ಯಾಹ್ನ ಕೊರೊನಾ ಸಂಬಂಧ ಮಹತ್ವದ ಸಭೆ ನಡೆಯಲಿದ್ದು, ಕಂದಾಯ ಸಚಿವ ಆರ್.ಅಶೋಕ್ (Minister R Ashok), ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Minister Sudhakar) ನೇತೃತ್ವದಲ್ಲಿ ಸಭೆ ನಡೆಯಲಿದೆ. ಇವತ್ತೇ ಟಫ್ರೂಲ್ಸ್, ಮಾಸ್ಕ್ ಕಡ್ಡಾಯದ ಬಗ್ಗೆ ಮಾರ್ಗಸೂಚಿ ಪ್ರಕಟಿಸೋ ಸಾಧ್ಯತೆ ಇದೆ. ಸರ್ಕಾರದ ಸೂಚನೆಯಂತೆ ಆಸ್ಪತ್ರೆಗಳಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಆತಂಕದ ನಡುವೆ ಹೊಸ ವರ್ಷಾಚರಣೆ (New Year Celebration) ಬಂದಿರೋದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಕೊರೊನಾ ಆತಂಕದಲ್ಲಿ ಹೊಸ ವರ್ಷಾಚರಣೆ ಹೇಗಿರಬೇಕು ಎಂಬುದರನ ಬಗ್ಗೆ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿ ಸರ್ಕಾರಕ್ಕೆ ಅಷ್ಟ ಸೂತ್ರಗಳನ್ನು ನೀಡಿದೆ.
ಕೋವಿಡ್ ತಾಂತ್ರಿಕ ಸಲಹಾ ಸಮಿತಿ ನೀಡಿದ ಅಷ್ಟ ಸೂತ್ರಗಳು
1.ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾಸ್ಕ್ ಕಡ್ಡಾಯ ಮಾಡೋದು.
2.ಹೊಸ ವರ್ಷದ ಕಾರ್ಯಕ್ರಮಗಳನ್ನು ಹೊರಾಂಗಣದಲ್ಲಿ ಆಯೋಜಿಸುವಂತೆ ಸಲಹೆ.
3.ರಾತ್ರಿ ಅಥವಾ ಬೆಳಗಿನ ಜಾವ ಕಾರ್ಯಕ್ರಮ ಆಯೋಜನೆ ಬೇಡ.
4.60 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮನೆಯಲ್ಲಿರೋದು ಸೂಕ್ತ. ಆರೋಗ್ಯ ಚೆನ್ನಾಗಿದ್ರೆ ಮಾತ್ರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗೋದು.
5.ಕೊರೊನಾ ಆತಂಕ ಇರೋ ಹಿನ್ನೆಲೆ ಗರ್ಭಿಣಿಯರು ಮತ್ತು ಮಕ್ಕಳಿಗೆ ಹಾಲುಣಿಸುವ ತಾಯಂದಿರು ಆರೋಗ್ಯವಾಗಿದ್ರೆ ಮಾತ್ರ ಕಾರ್ಯಕ್ರಮಕ್ಕೆ ಅವಕಾಶ ನೀಡುವುದು.
6.ಇನ್ನು ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ, ಸ್ಯಾನಿಟೈಸರ್ ಬಳಕೆ ಸೇರಿದಂತೆ ಕೊರೊನಾ ನಿಯಮಗಳ ಪಾಲನೆ ಕಡ್ಡಾಯ ಮಾಡೋದು.
7.ಕೋವಿಡ್ ಚಿಕಿತ್ಸೆ ತರಬೇತಿ ಪಡೆದ ಸಿಬ್ಬಂದಿ ಮತ್ತು ಸ್ಥಳದಲ್ಲಿ ಅಂಬುಲೆನ್ಸ್ ವ್ಯವಸ್ಥೆ ಮಾಡೋದು.
8.ಕಾರ್ಯಕ್ರಮದ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇರಿಸೋದು. ಬರುವ ಅತಿಥಿಗಳ ಎಲ್ಲರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಮುನ್ನೆಚ್ಚರಿಕೆ ಕ್ರಮವಾಗಿ ಸಂಗ್ರಹಿಸುವುದು.
108 ಬೆಡ್ಗಳು ರೆಡಿ
ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯಲ್ಲಿ ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ನಿರ್ಮಾಣ ಮಾಡಲಾಗಿದೆ. SARI/ILI ಸಮಸ್ಯೆ ಇದ್ದವರಿಗೆ ಪ್ರತ್ಯೇಕ 180 ಬೆಡ್ಗಳು ರೆಡಿಯಾಗಿದೆ. ವೆಂಟಿಲೇಟರ್ ಸೇರಿದಂತೆ ಸೋಂಕಿತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ.
ರೆಡಿ ಆಗಿಲ್ಲ ಜಿನೋಮ್ ಲ್ಯಾಬ್!
ರಾಜ್ಯದಲ್ಲಿ ಕೊರೊನಾ ರೂಪಾಂತರಿ BF.7 ಆತಂಕ ಆವರಿಸಿದೆ. ಆದ್ರೆ ರಾಜ್ಯದಲ್ಲಿ ಜಿನೋಮ್ ಸೀಕ್ವೆನ್ಸಿಂಗ್ ಕೇಂದ್ರಗಳಿಲ್ಲ. 8 ರಿಂದ 14 ಹೊಸ ಲ್ಯಾಬ್ ತೆಗೆಯುವುದಾಗಿ ಸರ್ಕಾರ ಘೋಷಿಸಿತ್ತು. ಆದ್ರೆ ಸರ್ಕಾರಿ ಲ್ಯಾಬ್ಗಳಿಲ್ಲದೇ ಖಾಸಗಿ ಲ್ಯಾಬ್ಗಳ ಮೊರೆ ಹೋಗ್ತಿದೆ. 4ನೇ ಅಲೆ ಹೆಮ್ಮಾರಿ ಆತಂಕ ಸೃಷ್ಟಿಸಿದ್ರೂ ಆರೋಗ್ಯ ಇಲಾಖೆ ಮೌನವಾಗಿದೆ. ಜಿನೋಮ್ ಸೀಕ್ವೆನ್ಸಿಂಗ್ ಲ್ಯಾಬ್ಗಳಿಗೆ ಸರ್ಕಾರ ₹100 ಕೋಟಿ ಮೀಸಲಿಟ್ಟಿದೆ.
ಇದನ್ನೂ ಓದಿ: Corona Virus: ಚೀನಾ ಸೇರಿದಂತೆ ಈ ನಾಲ್ಕು ದೇಶಗಳಿಂದ ಬರೋರಿಗೆ ಇನ್ಮುಂದೆ ಕೊರೊನಾ ಟೆಸ್ಟ್ ಕಡ್ಡಾಯ!
ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ
ದೇಶದಲ್ಲಿ ರೂಪಾಂತರಿ ಕೊರೊನಾ BF.7 ಆತಂಕ ಇದೆ.. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಟಿ ಪಿಸಿಆರ್ ಟೆಸ್ಟಿಂಗ್ಗೆ ಸಿದ್ಧತೆ ಮಾಡಲಾಗುತ್ತಿದೆ. ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಆರ್ಟಿಪಿಸಿಆರ್ ಟೆಸ್ಟಿಂಗ್ ಮಾಡಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ