ಚಾಮರಾಜನಗರದಲ್ಲಿ ಯುವಜನತೆಯಲ್ಲಿಯೇ ಹೆಚ್ಚಾಗಿ ಕಾಣಿಸುತ್ತಿದೆ ಸೋಂಕು; ಆತಂಕ ಮೂಡಿಸುತ್ತಿದೆ ಅಂಕಿಅಂಶ

 21 ರಿಂದ 40 ವಯೋಮಾನದವರ ಪೈಕಿ ಹೆಚ್ಚಿನವರು ಹೋಂ ಐಸೋಲೇಷನ್ ನಲ್ಲಿದ್ದು, ಬೇಕಾಬಿಟ್ಟಿ ಓಡಾಟ ನಡೆಸುತ್ತಿರುವುದು ಕಂಡುಬಂದಿದ್ದು ಸೂಪರ್ ಸ್ಪ್ರೆಡರ್ಸ್ ಆಗಿದ್ದಾರೆ

ಕೊರೋನಾ ಸಾಂದರ್ಭಿಕ ಚಿತ್ರ

ಕೊರೋನಾ ಸಾಂದರ್ಭಿಕ ಚಿತ್ರ

  • Share this:
ಚಾಮರಾಜನಗರ (ಮೇ.01) ಜಿಲ್ಲೆಯಲ್ಲಿ 21 ರಿಂದ 40 ವರ್ಷ ವಯೋಮಾನದವರಲ್ಲೆ ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬರುತ್ತಿವೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 3950 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಪ್ರಸ್ತುತ 2312 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ  ಶೇಕಡಾ 46 ರಿಂದ 48 ರಷ್ಟು ಮಂದಿ 21 ರಿಂದ 40 ರ ವಯೋಮಾನದವರಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಶೇಕಡಾ 9 ರಷ್ಟು  ಪಾಸಿಟಿವ್ ಪ್ರಕರಣ 60  ವರ್ಷ ಮೇಲ್ಪಟ್ಟ ಹಿರಿಯರಲ್ಲಿ  ಕಂಡು ಬಂದಿದೆ. ಇನ್ನುಳಿದ ಶೇಕಡಾ 12 ರಷ್ಟು ಪಾಸಿಟಿವ್ ಪ್ರಕರಣ 20 ವರ್ಷ ಒಳಪಟ್ಟವರಲ್ಲಿ ಕಂಡುಬಂದಿದೆ. 21 ರಿಂದ 40 ವಯೋಮಾನದವರ ಪೈಕಿ ಹೆಚ್ಚಿನವರು ಹೋಂ ಐಸೋಲೇಷನ್ ನಲ್ಲಿದ್ದು ಬೇಕಾಬಿಟ್ಟಿ ಓಡಾಟ ನಡೆಸುತ್ತಿರುವುದು ಕಂಡುಬಂದಿದ್ದು ಸೂಪರ್ ಸ್ಪ್ರೆಡರ್ಸ್ ಆಗಿದ್ದಾರೆ  ಈ ಹಿನ್ನಲೆಯಲ್ಲಿ  ಹೋಂ ಐಸೊಲೇಷನಲ್ಲಿರುವ ಪ್ರತಿಯೊಬ್ಬ ಸೋಂಕಿತರಿಗೂ ನಾನು ಕೋವಿಡ್ ಸೋಂಕಿತ ಎಂಬ ಮುದ್ರೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್.  ರವಿ ತಿಳಿಸಿದ್ದಾರೆ. ಹೋಂ ಐಸೋಲೇಷನ್ ನಲ್ಲಿ ಇರುವವರು ಮನೆಯಿಂದ ಆಚೆ ಬಂದರೆ  ಅಂತಹವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ

60 ವರ್ಷ ಮೇಲ್ಪಟ್ಟ ಸೋಂಕಿತರು ಕಡಿಮೆ ಪ್ರಮಾಣದಲ್ಲಿದ್ದರು.  ಈ ವಯೋಮಾನದವರಲ್ಲಿ  ಮರಣ ಪ್ರಮಾಣ ಹೆಚ್ಚಾಗಿದೆ ಎ‌ಂದ ಅವರು 20 ರಿಂದ 40 ವಯೋಮಾನದವರಲ್ಲಿ  ಮರಣ ಪ್ರಮಾಣ ಶೇಕಡ 0.3 ಇದ್ದು 40 ರಿಂದ 60 ವಯೋಮಾನದ ವರಲ್ಲಿ  ಮರಣ ಪ್ರಮಾಣ ಶೇಕಡಾ 1 ರಷ್ಟಿದೆ ಎಂದು ತಿಳಿಸಿದರು

ಕಳೆದ ಒಂದು ತಿಂಗಳ ಅವಧಿಯಲ್ಲಿ 26 ಮಂದಿ ಪುರುಷರು, 10 ಮಂದಿ ಮಹಿಳೆಯರು ಒಟ್ಟು 36 ಮಂದಿ ಕೋವಿಡ್ ನಿಂದ  ಮೃತಪಟ್ಟಿದ್ದು ಇವರಲ್ಲಿ 60 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು

ಇದನ್ನು ಓದಿ: ಕೂಲಿ ಮಾಡಿ ಮೊಮ್ಮಗಳ ಮದುವೆಗೆ ಕೂಡಿಟ್ಟ ಹಣ ಬೆಂಕಿಗಾಹುತಿ

ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ನಿನ್ನೆಯವರೆಗಿನ 2312 ಸಕ್ರಿಯ ಪ್ರಕರಣಗಳಲ್ಲಿ ಶೇಕಡಾ 79 ರಷ್ಟು ಪ್ರಕರಣಗಳು ಗ್ರಾಮೀಣ ಭಾಗದಲ್ಲಿ  ಶೇಕಡಾ 21 ನಗರ ಪ್ರದೇಶಗಳಲ್ಲಿ ಕಂಡು ಬಂದಿವೆ. ಹಳ್ಳಿಗಳ ಗಳಲ್ಲು ಕೊರೋನಾ ವ್ಯಾಪಿಸಿದೆ, 15 ಗ್ರಾಮಗಳಲ್ಲಿ ತಲಾ 10 ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ ಹಾಗಾಗಿ ಕಠಿಣ ಕ್ರಮ ಅನಿವಾರ್ಯ ವಾಗಿದೆ ಎಂದು ಅವರು ಹೇಳಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಪಟ್ಟಣ ಪ್ರದೇಶಗಳಲ್ಲಿ  100 ಮೀಟರ್ ವ್ಯಾಪ್ತಿಯಲ್ಲಿ  5 ಅಥವಾ 5 ಕ್ಕಿಂತ ಹೆಚ್ಚಿನ ಪ್ರಕರಣ ಕಂಡುಬಂದಲ್ಲಿ ಆ ಪ್ರದೇಶವನ್ನು ಕಂಟೈನ್ ಮೆಂಟ್ ವಲಯ ಎಂದು ಘೋಷಿಸಲಾಗುವುದು, ಇಡೀ ಹಳ್ಳಿಯ ವ್ಯಾಪ್ತಿಯಲ್ಲಿ 10 ಅಥವಾ 10 ಕ್ಕಿಂತ ಹೆಚ್ಚಿನ ಪ್ರಕರಣಗಳು ವರದಿಯಾಗಿ ಹಳ್ಳಿ ಚಿಕ್ಕದಾಗಿದ್ದರೆ ಇಡೀ ಹಳ್ಳಿಯನ್ನು ಕಂಟೈನ್ಮೆಂಟ್  ವಲಯವೆಂದು ಪರಿಗಣಿಸಲಾಗುವುದು.

ಇದನ್ನು ಓದಿ: ದೇಶದ ಅತಿದೊಡ್ಡ ಆಕ್ಸಿಜನ್​ ಉತ್ಪಾದನಾ, ಪೂರೈಕೆ ಕೇಂದ್ರವಾಗಿ ಹೊರಹೊಮ್ಮಿದ ರಿಲಯನ್ಸ್​​

ಹಳ್ಳಿ ದೊಡ್ಡದಾಗಿದ್ದಲ್ಲಿ  ಹೆಚ್ಚಿನ ಪ್ರಕರಣಗಳು ಕಂಡು ಬರುವ ಆ ಹಳ್ಳಿಯ ಬೀದಿ ಅಥವಾ ಗಲ್ಲಿಯನ್ನು ಕಂಟೈನ್ಮೆಂಟ್ ವಲಯ ಎಂದು ಪರಿಗಣಿಸಲಾಗುವುದು. ಪಟ್ಟಣ ಪ್ರದೇಶಗಳಲ್ಲಿ ನಿರ್ದಿಷ್ಟ ಬಡಾವಣೆ ಅಥವಾ ವಾರ್ಡ್ ವ್ಯಾಪ್ತಿಯಲ್ಲಿ 10 ಅಥವಾ 10 ಕ್ಕಿಂತ ಹೆಚ್ಚು ಪ್ರಕರಣ ಕಂಡುಬಂದಲ್ಲಿ ಆ ಬಡಾವಣೆ ಅಥವಾ ವಾರ್ಡ್‌ ನ ನಿರ್ದಿಷ್ಟ ಬೀದಿ ಅಥವಾ ಗಲ್ಲಿಯನ್ನು ಕಂಟೈನ್ಮೆಂಟ್ ವಲಯ ಎಂದು ಘೋಷಿಸಿಲಾಗುವುದು, ಕಂಟೈನ್ಮೆಂಟ್ ವಲಯದ ವ್ಯಾಪ್ತಿಯಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಇತರೆ ಚಟುವಟಿಕೆ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿ ತಿಳಿಸಿದರು

(ವರದಿ: ಎಸ್.ಎಂ.ನಂದೀಶ್)
Published by:Seema R
First published: