• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಕೋವಿಡ್ ಹಣಕ್ಕೆ ಕನ್ನ; ತಹಶೀಲ್ದಾರರ ಖಾತೆಯಿಂದಲೇ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚನೆ

ಕೋವಿಡ್ ಹಣಕ್ಕೆ ಕನ್ನ; ತಹಶೀಲ್ದಾರರ ಖಾತೆಯಿಂದಲೇ ಲಕ್ಷಾಂತರ ರೂ. ಹಣ ವರ್ಗಾವಣೆ ಮಾಡಿ ವಂಚನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಚೆಕ್ ಮೇಲೆ ತಹಶೀಲ್ದಾರ ಹೆಸರಿನಲ್ಲಿ ನಕಲಿ ಸಹಿ ಹಾಗೂ ಶೀಲ್ ಹಾಕಿ ಹಣವರ್ಗಾವಣೆ ಮಾಡಿ ಸರಕಾರದ ಹಣವನ್ನೆ ದೋಚಿದ್ದಾರೆ.

  • Share this:

ಯಾದಗಿರಿ(ಸೆ.23): ಕೋವಿಡ್ ನಿರ್ವಹಣೆ ಹಾಗೂ ನೈಸರ್ಗಿಕ ಪ್ರಕೃತಿ ವಿಕೋಪ ನಿರ್ವಹಣೆಗೆಂದೇ ಸರಕಾರ ಕೋಟ್ಯಾಂತರ ರೂ ತಹಶೀಲ್ದಾರ ಖಾತೆಗೆ ಹಣ ಜಮಾ ಮಾಡುತ್ತದೆ. ಆದರೆ, ಈಗ ತಹಶೀಲ್ದಾರ ಖಾತೆಯಿಂದಲೇ ಲಕ್ಷಾಂತರ ಹಣ ಲೂಟಿ  ಮಾಡಿದ್ದಕ್ಕೆ ಈಗ ತಹಶೀಲ್ದಾರರಿಗೆ ಟೆನ್ಶನ್​​ ಶುರುವಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿಯೇ ಸರಕಾರಕ್ಕೆ ವಂಚನೆ ಮಾಡಿದ್ದ  ದಂಧೆ ಬೆಳಕಿಗೆ ಬಂದಿದೆ. ಸುರಪುರ ತಹಶೀಲ್ದಾರ ನಿಂಗಪ್ಪ ಬಿರಾದಾರ ಹೆಸರಿನಲ್ಲಿಯೇ ಚೆಕ್ ಪಡೆದು ತಹಶೀಲ್ದಾರ ಸುರಪುರ ಹೆಸರಿನಲ್ಲಿ ನಕಲಿ ಸಹಿ ಹಾಗೂ ಮೋಹರ್ ಹಾಕಿ ಹಣ ದೋಚಲಾಗಿದೆ. ಈ ಬಗ್ಗೆ ಈಗ ಸುರಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸುರಪುರ ಪಟ್ಟಣದ ಎಕ್ಸಿಸ್  ಬ್ಯಾಂಕ್  ಶಾಖೆಯಲ್ಲಿ ತಹಶೀಲ್ದಾರ ಸುರಪುರ ಹೆಸರಿನಲ್ಲಿ ಖಾತೆ ಇದ್ದು, ಬ್ಯಾಂಕ್ ಖಾತೆಯಲ್ಲಿ ಯಾದಗಿರಿ ಜಿಲ್ಲಾಧಿಕಾರಿ ಕಾರ್ಯಾಲಯದಿಂದ ನೈಸರ್ಗಿಕ ವಿಕೋಪದಡಿ ಕಳೆದ ವರ್ಷದ ಅಕ್ಟೋಬರ್ 19 ರಿಂದ ಈ ವರ್ಷದ ಜುಲೈ 23  ರ ವರಗೆ 3,55,00,000 ಖಾತೆಗೆ ಅನುದಾನ ಜಮೆ ಆಗಿರುತ್ತದೆ. ಈ ಅನುದಾನದಲ್ಲಿ ನೈಸರ್ಗಿಕ ವಿಕೋಪ ಪರಿಹಾರದ ಹಾಗೂ ಕೋವಿಡ್  ನಿರ್ವಹಣೆಗೆ ಹಣ ಖರ್ಚು ಮಾಡಲಾಗಿರುತ್ತದೆ.ಆದರೆ, ಇದೆ ಹಣದಲ್ಲಿ ನಕಲಿ ಚೆಕ್ ಪಡೆದು ಹಣ ದೋಚಲಾಗಿದೆ.ಎಸ್ ಡಿ ಆರ್ ಎಫ್ ಫಂಡ್ ಅನುದಾನದ ಬಗ್ಗೆ ಸ್ಟೆಟ್ ಮೆಂಟ್ ಪಡೆದಾಗ ಹಣ ಕೊಳ್ಳೆ ಹೊಡೆದಿದ್ದು ಬೆಳಕಿಗೆ ಬಂದಿದೆ‌.


ಲಾಕ್​​ಡೌನ್ ವೇಳೆ ಕಟಾವು ಮಾಡದೆ ಇದ್ದ ಶುಂಠಿ ಬೆಳೆಗೀಗ ಡಬಲ್ ಬೆಲೆ; ಕೋಲಾರದಲ್ಲಿ ರೈತರಿಗೆ ಭರ್ಜರಿ ಲಾಭ


ತಹಶೀಲ್ದಾರ ನಿಂಗಪ್ಪ ಬಿರಾದಾರ ಅವರು ತಮ್ಮ ತಹಶೀಲ್ದಾರ ಖಾತೆಯಿಂದ ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಹೆಸರಿನಲ್ಲಿ ಯಾವುದೇ ಚೆಕ್ ನೀಡದಿದ್ದರು. ಜೂನ್ 1 ರಂದು ತಹಶೀಲ್ದಾರ ಖಾತೆಯಿಂದ  ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಖಾತೆಗೆ ಚೆಕ್ ನೀಡಿ ಹಣ ವರ್ಗಾವಣೆ ಮಾಡಿದ್ದು ಬೆಳಕಿಗೆ ಬಂದಿದೆ. ಚೆಕ್ ಮೇಲೆ ತಹಶೀಲ್ದಾರ ಹೆಸರಿನಲ್ಲಿ ನಕಲಿ ಸಹಿ ಹಾಗೂ ಶೀಲ್ ಹಾಕಿ ಹಣವರ್ಗಾವಣೆ ಮಾಡಿ ಸರಕಾರದ ಹಣವನ್ನೆ ದೋಚಿದ್ದಾರೆ.


ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಮಾಲಿಕರಾದ ಲಕ್ಷ್ಮಿ ಗಂಡ ರಾಜು ಕಟ್ಟಮನಿ  ಅವರು ನಕಲಿ‌ ಸಹಿ ಮಾಡಿ ಹಣ ಲೂಟಿ ಮಾಡಿದ್ದಾರೆ. ಈ ಬಗ್ಗೆ ಸುರಪುರ ಠಾಣೆಯಲ್ಲಿ ತಹಶೀಲ್ದಾರ ನಿಂಗಪ್ಪ ಬಿರಾದರ ಅವರು ಲಕ್ಷ್ಮಿ ವಿರುದ್ಧ ದೂರು ನೀಡಿ ನಕಲಿ ಸಹಿ ಮಾಡಿ 75,59,900 ರೂ ವಂಚಿಸಿದ್ದಾರೆ. ಆ ಹಣವನ್ನು ವರ್ಗಾವಣೆ ಮಾಡಿದ್ದ ಬಗ್ಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸುರಪುರ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಹಣ ವರ್ಗಾವಣೆ ಆದ ಬಗ್ಗೆ ದೂರು ದಾಖಲಿಸಿಕೊಳ್ಳಲಾಗಿದೆ ತನಿಖೆ ಮಾಡಲಾಗುತ್ತಿದ್ದು, ಈ ಬಗ್ಗೆ ನಂತರ ಇನ್ನಷ್ಟು ಮಾಹಿತಿ ಗೊತ್ತಾಗಲಿದೆ ಎಂದರು.


ಶಾಮೀಲಾದವರು ಯಾರು...?


ತಹಶೀಲ್ದಾರರ ಚೆಕ್ ಅದೇಗೆ ಮಹಿಳೆ ಕೈಗೆ ಸಿಕ್ತು? ತಹಶೀಲ್ದಾರ್​​ ಮೊಹರು ಸಿಕ್ಕಿದ್ದು ಹೇಗೆ? ಲಕ್ಷ್ಮಿ ಎಂಬ ಮಹಿಳೆ ಚೆಕ್ ಪಡೆದು ನಕಲಿ ಸಹಿ ಹಾಗೂ ಮೊಹರು ಹಾಕಿ ಹಣ ವರ್ಗಾವಣೆ ಮಾಡಿಕೊಳ್ಳುವ ಹಂತದಲ್ಲಿ ಬ್ಯಾಂಕ್ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ಮಾಡಲಿಲ್ಲ ಯಾಕೆ? ಈ ಹಣ ವರ್ಗಾವಣೆ ದಂಧೆಯಲ್ಲಿ ಲಕ್ಷ್ಮಿ ಒಬ್ಬಳೆ ಹಣ ದೋಚಿದಳಾ? ಇದರ ಹಿಂದೆ ಗ್ಯಾಂಗ್ ಇದೆಯಾ ಈ ಬಗ್ಗೆ ಪೊಲೀಸರು ತನಿಖೆ ಮಾಡಿ ಆರೋಪಿಗಳನ್ನು ಜೈಲಿಗಟ್ಟಬೇಕಿದೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು