HOME » NEWS » State » COVID EFFECT ON BANGALORE KARAGA AMTV SESR

Karaga: ಈ ಬಾರಿ ಕೂಡ ಕರಗ ಕಣ್ತುಂಬಿಕೊಳ್ಳುವ ಭಾಗ್ಯ ಬೆಂಗಳೂರಿಗರಿಗಿಲ್ಲ?; ಏ. 20ರ ಬಳಿಕ ಪರಿಸ್ಥಿತಿ ಅವಲೋಕನಕ್ಕೆ ನಿರ್ಧಾರ

ಏ. 19 ರಿಂದ ಏ. 27 ರವರೆಗೆ ದ್ರೌಪದಮ್ಮದೇವಿ ಕರಗ  ನಡೆಯಲಿದ್ದು, ಕೋವಿಡ್ ಎರಡನೇ ಅಲೆ ಇರುವುದರಿಂದ, ಪರಿಸ್ಥಿತಿ ನೋಡಿಕೊಂಡು ಆಚರಣೆಗೆ ಅನುಮತಿ ನೀಡಲಾಗುವುದು.

news18-kannada
Updated:April 5, 2021, 8:44 PM IST
Karaga: ಈ ಬಾರಿ ಕೂಡ ಕರಗ ಕಣ್ತುಂಬಿಕೊಳ್ಳುವ ಭಾಗ್ಯ ಬೆಂಗಳೂರಿಗರಿಗಿಲ್ಲ?; ಏ. 20ರ ಬಳಿಕ ಪರಿಸ್ಥಿತಿ ಅವಲೋಕನಕ್ಕೆ ನಿರ್ಧಾರ
ಕರಗ
  • Share this:
ಬೆಂಗಳೂರು (ಏ. 5): ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಈ ಬಾರಿಯೂ ವಿಘ್ನ ಎದುರಾಗಿದ್ದು, ಜನರ ವೀಕ್ಷಣೆಗೆ ಅವಕಾಶ ಸಿಗುವುದು ಬಹುತೇಕ ಅನುಮಾನವಾಗಿದೆ. ಕೊರೋನಾ ಎರಡನೇ ಅಲೆ ಕರಿನೆರಳು ಕರಗ ಉತ್ಸವದ ಮೇಲೆ ಬೀರಿದ್ದು,ಈ ಬಾರಿ ಕೂಡ ಸಾರ್ವಜನಿಕರಿಗೆ ದರ್ಶನದ ಸಿಗುವುದಿಲ್ಲ. ಇದೇ ಹಿನ್ನಲೆ ಇಂದು ಬಿಬಿಎಂಪಿ ಕಚೇರಿಯಲ್ಲಿ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ, ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ್ ಸೇರಿ ದೇವಸ್ಥಾನದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಸಭೆಯಲ್ಲಿ ಸರ್ಕಾರ ಸೂಚಿಸಿರುವ ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಕೊಂಡು ದೇವಸ್ಥಾನದ ಒಳಗೆ ಮಾತ್ರ ಆಚರಣೆಗೆ ಅವಕಾಶಕ್ಕೆ ನಿರ್ದೇಶನ ನೀಡಲಾಯಿತು.ಸದ್ಯ ಐತಿಹಾಸಿಕ ಕರಗ ಉತ್ಸವಕ್ಕೆ ಯಾವುದೇ ವ್ಯವಸ್ಥಾಪನಾ ಸಮಿತಿ ರಚನೆ ಮಾಡಿಲ್ಲ. ಹೀಗಾಗಿ ಮುಜರಾಯಿ ಇಲಾಖೆಯ ಸಹಾಯಕ ಆಯುಕ್ತರನ್ನು ಆಡಳಿತ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ. ಇದರ ಜೊತೆಗೆ ಉತ್ಸವ ಸಮಿತಿಯೂ ರಚನೆ ಮಾಡಬೇಕಿದ್ದು, ನಗರ ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ಕೊಡಲಾಗಿದೆ. ಹೀಗಾಗಿ ಉತ್ಸವ ಯಾವ ರೀತಿ ನಡೆಯಬೇಕೆಂಬ ಪರಿಶೀಲನೆಯನ್ನು ಉತ್ಸವ ಸಮಿತಿ ಮಾಡಲಿದ್ದಾರೆ. ವಾರದೊಳಗೆ ಮತ್ತೆ ಸಭೆ ನಡೆಸಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ತಿಳಿಸಿದರು.

ಏ. 19 ರಿಂದ ಏ. 27 ರವರೆಗೆ ದ್ರೌಪದಮ್ಮದೇವಿ ಕರಗ  ನಡೆಯಲಿದ್ದು, ಕೋವಿಡ್ ಎರಡನೇ ಅಲೆ ಇರುವುದರಿಂದ, ಪರಿಸ್ಥಿತಿ ನೋಡಿಕೊಂಡು ಆಚರಣೆಗೆ ಅನುಮತಿ ನೀಡಲಾಗುವುದು. ಸದ್ಯ ಸರ್ಕಾರದ ಆದೇಶದ ಪ್ರಕಾರ ಜಾತ್ರೆ, ಮೆರವಣಿಗೆ ನಡೆಸಲು ಅವಕಾಶ ಇಲ್ಲದಿರುವುದರಿಂದ ಕರಗ ವೀಕ್ಷಣೆಗೆ ಜನರಿಗೆ ಅವಕಾಶ ಇಲ್ಲ.‌ ಜನರೂ ಕೂಡ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಮನವಿ ಮಾಡಿದ್ದಾರೆ.


ಏಪ್ರಿಲ್‌ 20ರ ಬಳಿಕ ಸ್ಥಿತಿಗತಿ ನೋಡಿಕೊಂಡು ತೀರ್ಮಾನ.!!

ಪ್ರತಿ ವರ್ಷ ಲಕ್ಷಾಂತರ ಜನ ಬಂದು ಕಣ್ತುಂಬಿಕೊಳ್ಳುತ್ತಿದ್ದ ದ್ರೌಪದಮ್ಮನವರ ಕರಗ ಕಳೆದ ವರ್ಷ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಕೇವಲ ದೇವಸ್ಥಾನದ ಸಿಬ್ಬಂದಿಗಳಿಗಷ್ಟೇ ಸೀಮಿತವಾಗಿ ಉತ್ಸವಕ್ಕೆ ಚಾಲನೆ‌ ನೀಡಲಾಗಿತ್ತು.‌ ಅದೇ ರೀತಿ 2021 ನೇ ಸಾಲಿನ‌ ಕರೋತ್ಸವವೂ ಜರುಗಲಿದ್ದು, ಬೆಂಗಳೂರು ಕರಗಕ್ಕೆ ಕೊರೋನಾ ಕರಿನೆರಳಾಗಿ ಕಾಡಿದೆ. ಆದರೆ ಎಪ್ರಿಲ್ 20ರ ಬಳಿಕ ಮತ್ತೊಮ್ಮೆ ಪರಿಸ್ಥಿತಿಯನ್ನು ಪರಾಮರ್ಶೆ ಮಾಡಿಕೊಂಡು ನಿರ್ಧಾರ ಬಿಬಿಎಂಪಿ ಹಾಗೂ ನಗರ ಜಿಲ್ಲಾಡಳಿತ ತೆಗೆದುಕೊಳ್ಳಲಿದೆ. ಸದ್ಯಕ್ಕೆ ಈ ನಿರ್ಧಾರದಲ್ಲೇ ಮುಂದುವರೆಯಲು ತೀರ್ಮಾನಿಸಲಾಗಿದೆ.

(ವರದಿ- ಆಶಿಕ್ ಮುಲ್ಕಿ)
Published by: Seema R
First published: April 5, 2021, 8:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories