ಇಂದಿನಿಂದ ಕೋವಿಡ್ ಡ್ರೈ ರನ್ ಆರಂಭ; ವ್ಯಾಕ್ಸಿನ್​ ಸೆಂಟರ್​​ನಲ್ಲಿ ನಡೆಯುವ ಪ್ರಕ್ರಿಯೆಗಳೇನು?

ಬೆಂಗಳೂರಿನ ವಿದ್ಯಾಪೀಠ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಡ್ರೈ ರನ್ ಗೆ ಸಕಲ ಸಿದ್ಧತೆ ನಡೆದಿದೆ. ಇಂದು ಆರೋಗ್ಯ ಇಲಾಖೆ ನಗರದ ಎರಡು ಕಡೆ ಡ್ರೈನ್ ರನ್ ನಡೆಸಲಿದೆ.  ತಲಾ 25 ಕೋವಿಡ್ ವಾರಿಯರ್ಸ್ ಗೆ ಲಸಿಕೆ ಪ್ರಯೋಗ ಮಾಡಲಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು(ಜ.02): ಇಂದು ದೇಶಾದ್ಯಂತ ಕೋವಿಡ್ ವ್ಯಾಕ್ಸಿನ್​ ಡ್ರೈ ರನ್​ ಆರಂಭವಾಗುತ್ತಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿಯೂ ಡ್ರೈ ರನ್​​ಗೆ ಸಕಲ ಸಿದ್ಧತೆ ನಡೆದಿದೆ. ಈ ಡ್ರೈ ರನ್​ನಲ್ಲಿ 200 ಮಂದಿ ಕೊರೋನಾ ವಾರಿಯರ್ಸ್​ ಭಾಗವಹಿಸಲಿದ್ದಾರೆ. ಈ  ಡ್ರೈ ರನ್ ಕೇಂದ್ರದಲ್ಲಿ ವ್ಯಾಕ್ಸಿನ್ ಬಂದವರು ಕೆಲವೊಂದು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗಿದೆ. ಡ್ರೈ ರನ್ ಕೇಂದ್ರದ ವಿಭಾಗದಲ್ಲಿ ಒಟ್ಟು 4 ವಿಭಾಗಗಳು ಬರುತ್ತವೆ. 

  1.ರಿಜಿಸ್ಟ್ರೇಶನ್ ವಿಭಾಗ

  2. ವೈಟಿಂಗ್ ರೂಮ್

  3. ವ್ಯಾಕ್ಸಿನ್ ರೂಮ್

  4.ಅಬ್ಸರ್ವೇಶನ್ ರೂಮ್  1. ರಿಜಿಸ್ಟ್ರೇಶನ್ ವಿಭಾಗ

  ವ್ಯಾಕ್ಸಿನ್ ಪಡೆಯಲು ಬಂದ ವ್ಯಕ್ತಿಗಳು ಕಡ್ಡಾಯವಾಗಿ ರಿಜಿಸ್ಟ್ರೇಶನ್ ಮಾಡಿಕೊಳ್ಳಬೇಕು.‌ ರಿಜಿಸ್ಟ್ರೇಶನ್ ಗೆ ಅಡ್ರೆಸ್ ಪ್ರೂಪ್ ಬೇಕು . ಅಡ್ರೆಸ್​ ಪ್ರೂಪ್​ಗೆ ಈ ಕೆಳಕಂಡ ದಾಖಲಾತಿ ಇರಬೇಕು.

  • ಪಾನ್ ಕಾರ್ಡ್

  •  ವೋಟರ್ ಐಡಿ

  •  ಡ್ರೈವಿಂಗ್ ಲೈಸೆನ್ಸ್

  • ಸರ್ಕಾರಿ ಅಧಿಕಾರಿಯಾಗಿದ್ದರೆ ಐಡಿ ಕಾರ್ಡ್

  • ಸರ್ಕಾರದಿಂದ ಮಾನ್ಯತೆ ಪಡೆದ ಉದ್ಯೋಗಿ ಆಗಿದ್ರೆ ಐಡಿ ಕಾರ್ಡ್​
  Farmers Protest: 40ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ; ಸೋಮವಾರ ಮತ್ತೊಂದು ಸುತ್ತಿನ ಸಭೆ

  2. ವೈಟಿಂಗ್​ ರೂಮ್

  ರಿಜಿಸ್ಟ್ರೇಶನ್ ಆದ ನಂತರ ವ್ಯಕ್ತಿಗೆ ನಂಬರ್ ಕೊಡ್ತಾರೆ.‌‌ ನಂಬರ್ ಪ್ರಕಾರ ವೈಟಿಂಗ್​ ರೂಮ್​​ನಲ್ಲಿ ಕುಳಿತುಕೊಳ್ಳಬೇಕು. ವೈಟಿಂಗ್ ರೂಮ್ ನಲ್ಲಿ ಕುಳಿತುಕೊಂಡ ನಂತರ ನಿಮ್ಮ ಹೆಸರು ಬಂದಾಗ ವ್ಯಾಕ್ಸಿನ್ ರೂಮ್‌ಗೆ ಹೋಗಬೇಕು.

  3. ವ್ಯಾಕ್ಸಿನ್ ರೂಮ್

  ವೈಟಿಂಗ್ ರೂಮ್ ನಲ್ಲಿ ಕುಳಿತುಕೊಂಡ ನಂತರ ವ್ಯಾಕ್ಸಿನ್ ರೂಮ್ ಗೆ ಹೋಗಬೇಕು. ವ್ಯಾಕ್ಸಿನ್ ರೂಮ್ ನಲ್ಲಿ ಡಾಕ್ಟರ್ ರೋಗಿಯನ್ನು ಕೂರಿಸಿಕೊಂಡು ವಿಚಾರಣೆ ಮಾಡಿ ವ್ಯಾಕ್ಸಿನ್ ಇಂಜೆಕ್ಷನ್ ಕೊಡ್ತಾರೆ. ವ್ಯಾಕ್ಸಿನ್ ಇಂಜೆಕ್ಷನ್ ಕೊಟ್ಟ ನಂತರ ಅಬ್ಸರ್ವೇಶನ್ ರೂಮ್ ಗೆ ಹೋಗಬೇಕು.  4. ಅಬ್ಸರ್ವೇಶನ್ ರೂಮ್

  ವ್ಯಾಕ್ಸಿನ್ ಪಡೆದ ನಂತರ ವ್ಯಕ್ತಿಯನ್ನ ಅಬ್ಸರ್ವೇಶನ್ ರೂಮ್ ಗೆ ಶಿಫ್ಟ್​ ಮಾಡ್ತಾರೆ. 30 ನಿಮಿಷಗಳ ಕಾಲ ವೈದ್ಯರ ನಿಗಾದಲ್ಲೆ ಇರಬೇಕು. 30 ನಿಮಿಷದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ಪ್ರಾಥಮಿಕ ಚಿಕಿತ್ಸೆಯನ್ನು ಅಲ್ಲಿಯೇ ಕೊಡ್ತಾರೆ‌.‌ ನಂತರ ಆಸ್ಫತ್ರೆಗೆ ಶಿಫ್ಟ್​ ಮಾಡ್ತಾರೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿಲ್ಲ ಅಂದರೆ ಎಕ್ಸಿಟ್​ ಆಗಿ ಮನೆಗೆ ಹೋಗಬಹುದು.

  ಬೆಂಗಳೂರಿನ ವಿದ್ಯಾಪೀಠ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ಡ್ರೈ ರನ್ ಗೆ ಸಕಲ ಸಿದ್ಧತೆ ನಡೆದಿದೆ. ಇಂದು ಆರೋಗ್ಯ ಇಲಾಖೆ ನಗರದ ಎರಡು ಕಡೆ ಡ್ರೈನ್ ರನ್ ನಡೆಸಲಿದೆ.  ತಲಾ 25 ಕೋವಿಡ್ ವಾರಿಯರ್ಸ್ ಗೆ ಲಸಿಕೆ ಪ್ರಯೋಗ ಮಾಡಲಿದ್ದಾರೆ.

  ಮೊದಲು ವಾರಿಯರ್ಸ್ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಅದಾದ ಬಳಿಕ ಆರೋಗ್ಯ ತಪಾಸಣೆ ಮಾಡಲಾಗುತ್ತದೆ. ನಂತರ ಅಲ್ಲಿಂದ ಲಸಿಕಾ ಕೊಠಡಿಗೆ ಕರೆದೊಯ್ಯಲಾಗುತ್ತದೆ.  ನಂತರ ಅರ್ಧ ತಾಸು‌ ಕಾಲ ಅಬ್ಸರ್ ವೇಷನ್ ಹಾಲ್ ನಲ್ಲಿಟ್ಟು ನಿಗಾ ವಹಿಸಲಾಗುತ್ತದೆ.  ಹೀಗೆ ಹಂತ ಹಂತವಾಗಿ ಲಸಿಕೆ ಪ್ರಯೋಗ ಮಾಡಲಾಗುತ್ತದೆ.
  Published by:Latha CG
  First published: