HOME » NEWS » State » COVID 19 VACCINE THIRD PHASE CORONA VACCINATION DISTRIBUTION START FROM TODAY ALL OVER INDIA LG

COVID-19 Vaccine: ಇಂದಿನಿಂದ ಮೂರನೇ ಹಂತದ ಲಸಿಕೆ ವಿತರಣೆ; ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನ್​

ಬೆಳಗ್ಗೆ 11:15 ಕ್ಕೆ‌ ಉತ್ತರ ಕನ್ನಡ ಜಿಲ್ಲೆ ಶಿರಸಿ ಜನರಲ್ ಆಸ್ಪತ್ರೆಯಲ್ಲಿ 3ನೇ ಹಂತದ ಕೊರೋನಾ ಲಸಿಕೆ ವಿತರಣೆಗೆ ಚಾಲನೆ ನೀಡಲಾಗುತ್ತದೆ. ಆರೋಗ್ಯ ಸಚಿವ ಡಾ.ಸುಧಾಕರ್​ ಮೂರನೇ ಹಂತದ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಲಿದ್ದಾರೆ. ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ವಿತರಣೆ ಮಾಡಲಾಗುತ್ತದೆ.

news18-kannada
Updated:March 1, 2021, 9:08 AM IST
COVID-19 Vaccine: ಇಂದಿನಿಂದ ಮೂರನೇ ಹಂತದ ಲಸಿಕೆ ವಿತರಣೆ; ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವ್ಯಾಕ್ಸಿನ್​
ಸಾಂದರ್ಭಿಕ ಚಿತ್ರ
 • Share this:
ಬೆಂಗಳೂರು(ಮಾ.01): ಕೊರೋನಾ ನಿರ್ಮೂಲನೆಗೆ ಮತ್ತೊಂದು ಮಹತ್ವ ಹೆಜ್ಜೆ ಇಡಲು ಭಾರತ ಮುಂದಾಗಿದೆ. ದೇಶದ ಹತ್ತು ಸಾವಿರ ಸರ್ಕಾರಿ, ಇಪ್ಪತ್ತು ಸಾವಿರ ಖಾಸಗಿ ಆಸ್ಪತ್ರೆಗಳಲ್ಲಿ ಇಂದು ಲಸಿಕೆ ವಿತರಣೆ ಮಾಡಲಾಗುತ್ತದೆ. 60 ವರ್ಷ ಮೇಲ್ಪಟ್ಟವರು, 45 ವರ್ಷ ಮೀರಿದ ರೋಗ ಪೀಡಿತರಿಗೆ ಲಸಿಕೆ ಹಾಕಲಾಗುತ್ತದೆ. ದೇಶಾದಾದ್ಯಂತ 27 ಕೋಟಿ ಜನರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರವು ಎರಡು ಹಂತದಲ್ಲಿ ಮೂರು ಕೋಟಿ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹೊಂದಿತ್ತು. ಮೂರನೇ ಹಂತದಲ್ಲಿ 27 ಕೋಟಿ ಜನರಿಗೆ ಲಸಿಕೆ ವಿತರಿಸುವ ಗುರಿ ಹೊಂದಿದೆ. ಸರ್ಕಾರ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ.

ರಾಜ್ಯದಲ್ಲಿ ಮೂರನೇ ಹಂತದ ಲಸಿಕೆ ವಿತರಣೆಗೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ 3ನೇ ಹಂತದ ಕೊರೋನಾ ವ್ಯಾಕ್ಸಿನ್ ವಿತರಣೆ ಆರಂಭವಾಗುತ್ತಿದೆ. ಜನಸಾಮಾನ್ಯರಿಗೂ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಬೆಂಗಳೂರಿನಲ್ಲಿ ಕೆಲ ಆಸ್ಪತ್ರೆಗಳಲ್ಲಿ ಮಾತ್ರ ಲಸಿಕೆ ವಿತರಣೆ ಮಾಡಲಾಗುತ್ತೆ,  ಬೆಂಗಳೂರಿನ ಕೆ.ಸಿ.ಜನರಲ್, ಜಯನಗರ ಜನರಲ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, ಬೌರಿಂಗ್ ಆಸ್ಪತ್ರೆ, ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಲಸಿಕೆಯನ್ನು ನೀಡಲಾಗುತ್ತದೆ.

BBMP ವ್ಯಾಪ್ತಿಯಲ್ಲಿ ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಹಾಕಲಾಗುತ್ತದೆ. • ವಿಕ್ರಂ ಆಸ್ಪತ್ರೆ

 • ಮಣಿಪಾಲ್ ಆಸ್ಪತ್ರೆ - ಓಲ್ಡ್ ಮದ್ರಾಸ್‌ ರಸ್ತೆ

 • ರಾಘವೇಂದ್ರ ಪೀಪಲ್ ಆಸ್ಪತ್ರೆ
 • ಸಪ್ತಗಿರಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್

 • ಕೊಲಂಬಿಯಾ ಏಷ್ಯಾ - ಯಶವಂತಪುರ

 • ಅಪೋಲೋ ಆಸ್ಪತ್ರೆ - ಶೇಷಾದ್ರಿಪುರಂ ರಸ್ತೆ

 • ಕೊಲಂಬಿಯಾ ಏಷ್ಯಾ - ಸರ್ಜಾಪುರ ರಸ್ತೆ

 • ಫೋರ್ಟೀಸ್ ಆಸ್ಪತ್ರೆ - ಬನ್ನೇರುಘಟ್ಟ ರಸ್ತೆ

 • ಅಪೋಲೋ ಆಸ್ಪತ್ರೆ - ಬನ್ನೇರುಘಟ್ಟ ರಸ್ತೆ

 • ಕೊಲಂಬಿಯಾ ಏಷ್ಯಾ - ವೈಟ್‌ಫೀಲ್ಡ್

 • ಸ್ಪರ್ಶ್ ಆಸ್ಪತ್ರೆ

 • ಬಿಜಿಎಸ್ ಆಸ್ಪತ್ರೆ

 • ಆಸ್ಟರ್ ಆಸ್ಪತ್ರೆ

 • ದಯಾನಂದ ಸಾಗರ್ - ಕುಮಾರಸ್ವಾಮಿ ಲೇಔಟ್

 • ಮಲ್ಲಿಗೆ ಆಸ್ಪತ್ರೆ

 • ಶುಶ್ರೂಷಾ ಆಸ್ಪತ್ರೆ

 • ಎಂಎಸ್ ರಾಮಯ್ಯ ಆಸ್ಪತ್ರೆ


ಪ್ರಧಾನಿ ಮೋದಿಯನ್ನು ನಾವು ಪ್ರೀತಿ ಮತ್ತು ಅಹಿಂಸೆಯಿಂದ ಸೋಲಿಸುತ್ತೇವೆ; ರಾಹುಲ್ ಗಾಂಧಿ

ಬೆಳಗ್ಗೆ 11:15 ಕ್ಕೆ‌ ಉತ್ತರ ಕನ್ನಡ ಜಿಲ್ಲೆ ಶಿರಸಿ ಜನರಲ್ ಆಸ್ಪತ್ರೆಯಲ್ಲಿ 3ನೇ ಹಂತದ ಕೊರೋನಾ ಲಸಿಕೆ ವಿತರಣೆಗೆ ಚಾಲನೆ ನೀಡಲಾಗುತ್ತದೆ. ಆರೋಗ್ಯ ಸಚಿವ ಡಾ.ಸುಧಾಕರ್​ ಮೂರನೇ ಹಂತದ ವ್ಯಾಕ್ಸಿನೇಷನ್​ಗೆ ಚಾಲನೆ ನೀಡಲಿದ್ದಾರೆ. ಮೂರನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ವಿತರಣೆ ಮಾಡಲಾಗುತ್ತದೆ. 45 ರಿಂದ 59 ವರ್ಷದೊಳಗಿನ ವಿವಿಧ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿರುವವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತದೆ.

ಲಸಿಕಾ ವಿತರಣೆ ಎಲ್ಲೆಲ್ಲಿ..?

ಸರ್ಕಾರಿ ಆಸ್ಫತ್ರೆ, ಖಾಸಗಿ ಆಸ್ಫತ್ರೆ ಮತ್ತು ಮೆಡಿಕಲ್ ಕಾಲೇಜ್ ಗಳಲ್ಲಿ ಲಸಿಕೆ ಹಾಕಲಾಗುತ್ತದೆ.

ಲಸಿಕಾ ವಿತರಣೆಗೆ ದರ ಎಷ್ಟು ?

 • ಸರ್ಕಾರಿ ಆಸ್ಫತ್ರೆಯಲ್ಲಿ ಉಚಿತವಾಗಿ ಲಸಿಕೆ

 • ಖಾಸಗಿ ಆಸ್ಪತ್ರೆಯಲ್ಲಿ ಒಂದು‌ ಡೋಸ್ ಗೆ 250 ರೂಪಾಯಿ ನಿಗದಿ

 • 150 ರೂ. ವ್ಯಾಕ್ಸಿನ್ ಶುಲ್ಕ, 100 ಸೇವಾ ಶುಲ್ಕ ಮಾತ್ರ‌ ಪಡೆಯಬೇಕು


ವ್ಯಾಕ್ಸಿನ್ ಪಡೆಯಲು ನೋಂದಣಿ ಹೇಗೆ ?

 • ವ್ಯಾಕ್ಸಿನ್ ಪಡೆಯುವ ಫಲಾನುಭವಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು.

 • Co-WIN ವೆಬ್ ಸೈಟ್ ಗೆ ಹೋಗಿ ಮೊಬೈಲ್ ನಂಬರ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಬಹುದು.

 • ಆರೋಗ್ಯ ಸೇತು ಆ್ಯಪ್ ಮೂಲಕವೂ ನೋಂದಣಿ ಮಾಡಿಕೊಳ್ಳಬಹುದು.

 • ಆನ್ ಲೈನ್ ನೋಂದಣಿ ಮಾಡದ ಫಲಾನುಭವಿಗಳು ಲಸಿಕಾ ಕೇಂದ್ರಗಳಿಗೆ ತೆರಳಿ ಆನ್ ಸ್ಪಾಟ್ ರಿಜಿಸ್ಟ್ರೇಷನ್ ಕೂಡ ಮಾಡಿಕೊಳ್ಳಬಹುದು.


ವ್ಯಾಕ್ಸಿನೇಷನ್‌ ನೊಂದಣಿಗೆ ಬೇಕಾದ ದಾಖಲಾತಿಗಳು

 • ರೇಷನ್ ಕಾರ್ಡ್

 • ಆಧಾರ್ ಕಾರ್ಡ್

 • ಓಟರ್ ಐಡಿ

 • 45 ವರ್ಷದಿಂದ 59 ವರ್ಷದವರು ಆರೋಗ್ಯ ಸಮಸ್ಯೆ ಇರುವ ಕುರಿತು ಮೆಡಿಕಲ್​ ಸರ್ಟಿಫಿಕೇಟ್ ಕಡ್ಡಾಯವಾಗಿ ಲಗತ್ತಿಸಬೇಕು.ಖಾಸಗಿ ಆಸ್ಫತ್ರೆಗಳಿಗೆ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

 • ಒಬ್ಬ ವ್ಯಕ್ತಿಗೆ ಒಂದು ಡೋಸ್ ಗೆ 250 ರೂಪಾಯಿ ಮಾತ್ರ ತೆಗೆದುಕೊಳ್ಳಬೇಕು.

 • ವ್ಯಾಕ್ಸಿನ್ ಪಡೆಯುವರು ರಿಜಿಸ್ಟ್ರೇಶನ್ ಆದವರ ವಿವರ CO-WIN ಸಾಫ್ಟ್ ವೇರ್ ಗೆ ಅಪ್ಲೋಡ್ ಮಾಡಬೇಕು.

 • ಕೋಲ್ಡ್ ಚೈನ್ ಲಿಂಕ್ ಫಾಲೋ ಮಾಡಬೇಕು.

 • ವ್ಯಾಕ್ಸಿನ್ ಸೈಟ್ಸ್ ವಿವರ ಮಸ್ಟ್ ಹಾಕಲೇಬೇಕು.

 • ಬೇರೆ ಬೇರೆ ಖಾಯಿಲೆಯಿಂದ ಬಳಲುತ್ತಾ ಇರೋರು ಮೆಡಿಕಲ್ ಸರ್ಟಿಫಿಕೇಟ್ ಅಪ್ಲೋಡ್ ಮಾಡಲೇಬೇಕು.

Published by: Latha CG
First published: March 1, 2021, 9:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories