COVID-19 Vaccination: ಬೆಂಗಳೂರಿನ 4 ಕಡೆ ವ್ಯಾಕ್ಸಿನ್ ಡ್ರೈ ರನ್; ಶೀಘ್ರವೇ ಲಸಿಕೆ ಬಿಡುಗಡೆ ಭರವಸೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ವಿದ್ಯಾಪೀಠ ಹಾಗೂ‌ ಕಾಮಾಕ್ಷಿಪಾಳ್ಯ ಆರೋಗ್ಯ ಕೇಂದ್ರದಲ್ಲಿ ನಿರೀಕ್ಷಿತ ವ್ಯಾಕ್ಸಿನ್ ಡ್ರೈ ರನ್ ಯಶಸ್ವಿಯಾಗಿದೆ. ಇದರ ಜೊತೆಗೆ ಔಟರ್ ಬೆಂಗಳೂರಿ‌ನ ಯಲಹಂಕ ಹಾಗೂ ಆನೇಕಲ್​​ನಲ್ಲೂ ಡ್ರೈ ರನ್ ನಡೆದಿದ್ದು, ಅಚ್ಚುಕಟ್ಟು ತಾಲೀಮು ನಡೆದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು(ಜ.02): ಬಹು ನಿರೀಕ್ಷಿತ ಲಸಿಕೆಯ ಮೊದಲ ಹಂತ ಎಂಬಂತೆ ಇಂದು ಇಡೀ ದೇಶದಲ್ಲಿ ವ್ಯಾಕ್ಸಿನ್ ಡ್ರೈ ರನ್ ನಡೆದಿದೆ. ಇದರ ಭಾಗವಾಗಿ ಬೆಂಗಳೂರಿನಲ್ಲೂ ಕೆಲವು ಕಡೆ ಡ್ರೈ ರನ್ ಯಶಸ್ವಿಯಾಗಿ ನಡೆದಿದೆ. ಇದೊಂದು ಆಶಾಭಾವನೆ ಹುಟ್ಟಿಸಿದ ಕ್ಷಣ. ಇದೊಂದು ಸಮಾಧನಕರ ಬೆಳವಣಿಗೆ. ಇದೊಂದು ನಿಟ್ಟುಸಿರು ಬಿಡುವ ಸಂಗತಿ. ಹೌದು, ಮಹಾಮಾರಿ ಕೊರೋನಾಗೆ ಲಸಿಕೆ ಸಿಗುವ ಕಾಲ ಸನ್ನಿಹಿತವಾಗಿದೆ. ಅದರ ಮೊದಲ ಹೆಜ್ಜೆ ಎಂಬಂತೆ ಇಡೀ‌ ದೇಶದಲ್ಲಿ ವ್ಯಾಕ್ಸಿನ್ ಡ್ರೈ ರನ್ ಯಶಸ್ವಿಯಾಗಿ ನೆರವೇರಿದೆ.‌ ಇದರ ಭಾಗವಾಗಿ ಬೆಂಗಳೂರಿನಲ್ಲೂ ಡ್ರೈ ರನ್ ಸಕ್ಸಸ್ ಫುಲ್ ಆಗಿ ನಡೆದಿದೆ. ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ಕಡೆ ಹಾಗೂ ಹೊರವಲಯದಲ್ಲಿ ಎರಡು ಕಡೆ, ಒಟ್ಟು ನಾಲ್ಕು ಕಡೆ ಇಂದು ಡ್ರೈ ರನ್ ಮಾಕ್ ಡ್ರಿಲ್ ಯಶಸ್ವಿಯಾಗಿದೆ.

    ಬಿಬಿಎಂಪಿ ವ್ಯಾಪ್ತಿಯಲ್ಲಿ ವಿದ್ಯಾಪೀಠ ಹಾಗೂ‌ ಕಾಮಾಕ್ಷಿಪಾಳ್ಯ ಆರೋಗ್ಯ ಕೇಂದ್ರದಲ್ಲಿ ನಿರೀಕ್ಷಿತ ವ್ಯಾಕ್ಸಿನ್ ಡ್ರೈ ರನ್ ಯಶಸ್ವಿಯಾಗಿದೆ. ಇದರ ಜೊತೆಗೆ ಔಟರ್ ಬೆಂಗಳೂರಿ‌ನ ಯಲಹಂಕ ಹಾಗೂ ಆನೇಕಲ್​​ನಲ್ಲೂ ಡ್ರೈ ರನ್ ನಡೆದಿದ್ದು, ಅಚ್ಚುಕಟ್ಟು ತಾಲೀಮು ನಡೆದಿದೆ. ನಾಲ್ಕು ಕಡೆಯಲ್ಲೂ ತಲಾ 25 ಕೋವಿಡ್ ವಾರಿಯರ್ಸ್ ತಾಲೀಮಿನಲ್ಲಿ ಭಾಗಿಯಾಗಿದ್ದು ಶಿಸ್ತು ಬದ್ಧವಾಗಿ ನಡೆಸಲಾಯಿತು.

    ನಾಲ್ಕು ಹಂತಗಳಲ್ಲಿ ನಡೆದ ಡ್ರೈ ರನ್

    • ರಿಜಿಸ್ಟ್ರೇಶನ್ ವಿಭಾಗ
    • ವೈಟಿಂಗ್ ರೂಮ್
    • ವ್ಯಾಕ್ಸಿನ್ ರೂಮ್
    • ಅಬ್ಸರ್ವೇಶನ್ ರೂಮ್

    ರಿಜಿಸ್ಟ್ರೇಶನ್ ವಿಭಾಗ

    ವ್ಯಾಕ್ಸಿನ್ ಪಡೆಯಲು ಬಂದ ವ್ಯಕ್ತಿಗಳು ಕಡ್ಡಾಯವಾಗಿ ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕು.‌ ರಿಜಿಸ್ಟ್ರೇಶನ್ ಗೆ ಅಡ್ರೆಸ್ ಪ್ರೂಪ್ ಬೇಕು . ಅಡ್ರೆಸ್​ ಪ್ರೂಪ್ ಗೆ ಈ ಕೆಳಕಂಡ ದಾಖಲಾತಿ ಇರಬೇಕು.
    • ಪಾನ್ ಕಾರ್ಡ್
    • ವೋಟರ್ ಐಡಿ
    • ಡ್ರೈವಿಂಗ್ ಲೈಸೆನ್ಸ್
    • ಸರ್ಕಾರಿ ಅಧಿಕಾರಿಯಾಗಿದ್ರೆ ಐಡಿ ಕಾರ್ಡ್
    • ಸರ್ಕಾರದಿಂದ ಮಾನ್ಯತೆ ಪಡೆದ  ಉದ್ಯೋಗಿ ಆಗಿದ್ರೆ ಐಡಿ ಕಾರ್ಡ್

    ಪ್ರತಿ ಜಿಲ್ಲೆಯಲ್ಲೂ ವಿಚಕ್ಷಣ ತಂಡ ರಚನೆ; ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ: ಸಚಿವ ಸುರೇಶ್ ಕುಮಾರ್

    ವೈಟಿಂಗ್ ರೂಮ್

    ರಿಜಿಸ್ಟ್ರೇಶನ್ ಆದ ನಂತರ ವ್ಯಕ್ತಿಗೆ ನಂಬರ್ ಕೊಡ್ತಾರೆ.‌‌ ನಂಬರ್ ಪ್ರಕಾರ  ವೈಟಿಂಗ್ ರೂಮ್ ನಲ್ಲಿ ಕುಳಿತುಕೊಳ್ಳಬೇಕು. ವೈಟಿಂಗ್ ರೂಮ್ ನಲ್ಲಿ ಕುಳಿತುಕೊಂಡ ನಂತರ ನಿಮ್ಮ ಹೆಸರು ಬಂದಾಗ ವ್ಯಾಕ್ಸಿನ್ ರೂಮ್‌ಗೆ ಹೋಗಬೇಕು.

    ವ್ಯಾಕ್ಸಿನ್ ರೂಮ್

    ವೈಟಿಂಗ್ ರೂಮ್ ನಲ್ಲಿ ಕುಳಿತುಕೊಂಡ ನಂತರ ವ್ಯಾಕ್ಸಿನ್ ರೂಮ್ ಗೆ ಹೋಗಬೇಕು. ವ್ಯಾಕ್ಸಿನ್ ರೂಮ್ ನಲ್ಲಿ ಡಾಕ್ಟರ್ ರೋಗಿಯನ್ನು ಕೂರಿಸಿಕೊಂಡು ವಿಚಾರಣೆ ಮಾಡಿ ವ್ಯಾಕ್ಸಿನ್ ಇಂಜೆಕ್ಷನ್ ಕೊಡ್ತಾರೆ.  ವ್ಯಾಕ್ಸಿನ್ ಇಂಜೆಕ್ಷನ್ ಕೊಟ್ಟ ನಂತರ ಅಬ್ಸರ್ವೇಶನ್ ರೂಮ್ ಗೆ ಹೋಗಬೇಕು.

    ಅಬ್ಸರ್ವೇಶನ್ ರೂಮ್

    ವ್ಯಾಕ್ಸಿನ್ ಪಡೆದ  ನಂತರ ವ್ಯಕ್ತಿಯನ್ನ ಅಬ್ಸರ್ವೇಶನ್ ರೂಮ್ ಗೆ ಶಿಫ್ಟ್​ ಮಾಡ್ತಾರೆ. 30  ನಿಮಿಷಗಳ ಕಾಲ ವೈದ್ಯರ ನಿಗಾದಲ್ಲೆ ಇರಬೇಕು.  30 ನಿಮಿಷದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದರೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ‌. ನಂತರ ಆಸ್ಫತ್ರೆಗೆ ಶಿಫ್ಟ್​ ಮಾಡ್ತಾರೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿಲ್ಲ ಅಂದರೆ ಎಕ್ಸಿಟ್​ ಆಗಿ ಮನೆಗೆ ಹೋಗಬಹುದು.

    ಒಟ್ಟಾರೆಯಾಗಿ ಲಸಿಕೆ ಮೊದಲ ಹಂತವಾಗಿ ದೇಶದ 1.65 ಲಕ್ಷ ಕೋವಿಡ್ ವಾರಿಯರ್ಸ್ ಗೆ ಸಿಗಲಿದೆ. ಹೀಗಾಗಿ ದೇಶದಾದ್ಯಂತ ವ್ಯಾಕ್ಸಿನ್ ಡ್ರೈ ರನ್ ನಡೆಸಲಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ 1700 ಸಿಬ್ಬಂದಿಗಳಿಗೆ ಲಸಿಕೆ ನೀಡುವ ಕುರಿತು ತರಬೇತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ಬಿದ್ದರೆ ಖಾಸಗಿ ವೈದ್ಯಕೀಯ ಸಿಬ್ಬಂದಿಗಳನ್ನು ಕೆಲಸಕ್ಕೆ ನೇಮಿಸುವ ಯೋಚನೆ ಸರ್ಕಾರಕ್ಕಿದೆ.

    -ವರದಿ: ಆಶಿಕ್ ಮುಲ್ಕಿ
    Published by:Latha CG
    First published: