ಮುಖ್ಯಮಂತ್ರಿಗಳನ್ನು ಭೇಟಿಯಾಗುವ ಸಾರ್ವಜನಿಕರಿಗೆ ಕೋವಿಡ್​ ಪರೀಕ್ಷೆ ಕಡ್ಡಾಯ

ಗೃಹ ಕಚೇರಿಗೆ ಆಗಮಿಸುವ ಸಾರ್ವಜನಿಕರು ಅಂಟಿಜನ್​ ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ. ಈ ಪರೀಕ್ಷೆಯಲ್ಲಿ ವರದಿ ನೆಗಟಿವ್​ ಬಂದ ಬಳಿಕ ಅವರನ್ನು ಮಾತ್ರ ಸಿಎಂ ಬಳಿ ಬಿಡಲಾಗುವುದು

ಸಿಎಂ ಬಿಎಸ್​ ಯಡಿಯೂರಪ್ಪ

ಸಿಎಂ ಬಿಎಸ್​ ಯಡಿಯೂರಪ್ಪ

  • Share this:
ಬೆಂಗಳೂರು (ಅ.8): ಮುಖ್ಯಮಂತ್ರಿಯನ್ನು ಭೇಟಿಯಅಗಲೂ ಬರುವ ಸಾರ್ವಜನಿಕರಿಗೆ ಇನ್ಮುಂದೆ ಕೋವಿಡ್​ ಪರೀಕ್ಷೆ ಕಡ್ಡಾಯ. ಪರೀಕ್ಷೆ ಮಾಡದೇ ಯಾರು ಕೂಡ ಸಿಎಂ ಅವರನ್ನು ಭೇಟಿಯಾಗಲು ಸಾಧ್ಯವಿಲ್ಲ. ಅದರಲ್ಲಿಯೂ ವರದಿ ನೆಗೆಟಿವ್​ ಬಂದವರಿಗೆ ಮಾತ್ರ ಸಿಎಂ ಗೃಹ ಕಚೇರಿ ಕೃಷ್ಣಗೆ ಪ್ರವೇಶ ಸಾಧ್ಯ ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ. ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಈ ಕ್ರಮಕ್ಕೆ ಮುಂದಾಗಲಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಒಮ್ಮೆ ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದಾರೆ. ಈ ಹಿನ್ನಲೆ ಈ ರೀತಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಗೃಹ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ. 

ಮುಖ್ಯಮಂತ್ರಿಗಳನ್ನು ಭೇಟಿಯಾಗಲು ದಿನಕ್ಕೆ ನೂರಾರು ಜನ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುತ್ತಾರೆ. ಇದರಲ್ಲಿ ಯಾರಿಗೆ ಸೋಂಕಿದೆ ಇಲ್ಲವೋ ಎಂಬುದು ತಿಳಿದಿರುವುದಿಲ್ಲ. ಈ ಹಿನ್ನಲೆ ಗೃಹ ಕಚೇರಿಗೆ ಆಗಮಿಸುವವರಿಗೆ ಅಂಟಿಜನ್​ ಪರೀಕ್ಷೆ ಕಡ್ಡಾಯವಾಗಿ ಒಳಗಾಗಬೇಕು. ಈ ಪರೀಕ್ಷೆಯಲ್ಲಿ ವರದಿ ನೆಗಟಿವ್​ ಬಂದ ಬಳಿಕ ಅವರನ್ನು ಮಾತ್ರ ಸಿಎಂ ಬಳಿ ಬಿಡಲಾಗುವುದು ಎಂದಿದ್ದಾರೆ.

ಕೋವಿಡ್​ ಪರೀಕ್ಷೆಗೆ ಒಳಗಾಗಿ ಅದರ ವರದಿಯನ್ನು ತಂದರೂ ಪ್ರಯೋಜನವಿಲ್ಲ. ಕಾರಣ ಯಾವಾಗ ಹೇಗೆ ಸೋಂಕು ಹರಡಿರುತ್ತದೆ ಎಂಬುದು ತಿಳಿಯದು. ಈ ಹಿನ್ನಲೆ ಸ್ಥಳದಲ್ಲಿಯೇ ಪರೀಕ್ಷೆಗೆ ಒಳಗಾಗಬೇಕು. ಯಾವ ಸಾರ್ವಜನಿಕರು ಜೊತೆಯಲ್ಲಿಯೇ ವರದಿ ತರುವುದು ಅನವಶ್ಯಕ ಎಂದಿದ್ದಾರೆ.ಕಳೆದ ಆಗಸ್ಟ್​ನಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಇವರ ಬೆನ್ನಲ್ಲೇ ಅವರ ಮಗಳು ಕೂಡ ಪದ್ಮಾವತಿ ಕೂಡ ಸೋಂಕು ದೃಢಪಟ್ಟಿತ್ತು. ಈ ಹಿನ್ನಲೆ ಮುಖ್ಯಮಂತ್ರಿ ಕಾವೇರಿ ನಿವಾಸದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.  ಇತ್ತೀಚೆಗೆ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಅವರಿಗೂ ಕೂಡ ಕೊರೋನಾ ಸೋಂಕು ದೃಢಪಟ್ಟಿತ್ತು.
Published by:Seema R
First published: