COVID-19 Protocols: ಕೊಡಗಿನಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಮಸೀದಿ ಮೇಲೆ ತಹಶೀಲ್ದಾರ್ ದಾಳಿ

ಮಸೀದಿ ಒಳಗೆ 150 ಕ್ಕೂ ವಿದ್ಯಾರ್ಥಿಗಳು ಕನಿಷ್ಠ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವೂ ಇಲ್ಲದೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಸ್ಥಳದಲ್ಲಿಯೇ ಧರ್ಮಗುರುಗಳು ಪ್ರವಚನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಮಸೀದಿ

ಮಸೀದಿ

  • Share this:
ಕೊಡಗು(ಏ.28): ಕೋವಿಡ್ ಮಹಾಮಾರಿಯನ್ನು ಕಟ್ಟಿ ಹಾಕುವುದಕ್ಕೆ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದರೆ ಜನಗಳು ಮಾತ್ರ ಸರ್ಕಾರದ ಆದೇಶಕ್ಕೆ ಕವಡೆಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ. ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳಲ್ಲಿ ಜನರು ಸೇರಬಾರದು ಎನ್ನೋ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ. ಆದರೂ ಕೆಲವು ಸ್ಥಳಗಳಲ್ಲಿ ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಲಾಗುತ್ತಿದೆ. ಯಾವುದೇ ನಿಯಮಗಳು ಪಾಲನೆ ಆಗದೆ ಎಲ್ಲಾ ನಿಯಮ ಉಲ್ಲಂಘನೆ ಆಗುತ್ತಿವೆ.

ಹೌದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಆರ್ಜಿ ಗ್ರಾಮದ  ಮಸೀದಿಯೊಂದರಲ್ಲಿ 150 ಕ್ಕೂ ಹೆಚ್ಚು ಮಕ್ಕಳಿಗೆ ಪ್ರವಚನ ಮಾಡುತಿದ್ದ ಘಟನೆ ಗೊತ್ತಾಗಿದೆ. ಮಸೀದಿಯ ಹೊರಗೆ ಕೊವಿಡ್ ನಿಯಮದ ಪ್ರಕಾರ ಮಸೀದಿಯನ್ನು ಮುಚ್ಚಲಾಗಿದೆ ಎಂದು ಬರೆದು ಬೋರ್ಡ್ ದೊಡ್ಡದಾಗಿ ಹಾಕಲಾಗಿದೆ. ಆದರೆ ಮಸೀದಿ ಒಳಗೆ 150 ಕ್ಕೂ  ಅಧಿಕ ವಿದ್ಯಾರ್ಥಿಗಳಿಗೆ ಧಾರ್ಮಿಕ ಪ್ರವಚನ ಮಾಡಿದ್ದರು. ಈ ಖಚಿತ ಮಾಹಿತಿ ‌ಆಧರಿಸಿದ ವಿರಾಜಪೇಟೆ ತಾಲ್ಲೂಕಿನ ತಹಶೀಲ್ದಾರ್ ಯೋಗಾನಂದ್ ಮತ್ತು ವಿರಾಜಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.

Astrology: ಈ ದಿನ ಯಾವ ರಾಶಿಗೆ ಯಾವ ಫಲ; ಇಲ್ಲಿದೆ ದ್ವಾದಶ ರಾಶಿ ಭವಿಷ್ಯ

ಈ ಸಂದರ್ಭ ಕೋವಿಡ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ‌ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ದಾಳಿ ಮಾಡಿದ ವೇಳೆ ತಹಶೀಲ್ದಾರ್ ಅವರಿಗೆ ಮಸೀದಿಯ ಮೌಲ್ವಿಗಳು ಸಬೂಬು ಉತ್ತರ ಕೊಟ್ಟು ಅದನ್ನು ಸರಿ ಮಾಡುವ ಪ್ರಯತ್ನ ನಡೆಸಿದ್ದಾರೆ. ಮಸೀದಿ ಒಳಗೆ 150 ಕ್ಕೂ ವಿದ್ಯಾರ್ಥಿಗಳು ಕನಿಷ್ಠ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರವೂ ಇಲ್ಲದೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಸ್ಥಳದಲ್ಲಿಯೇ ಧರ್ಮಗುರುಗಳು ಪ್ರವಚನ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಮಸೀದಿ ಆಡಳಿತ ಮಂಡಳಿ ‌ವಿರುದ್ಧ ವಿರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಅವರು ಎಫ್ಐಆರ್ ದಾಖಲು ಮಾಡಿ ಶಿಸ್ತು ಕ್ರಮ ಜರುಗಿಸಿದ್ದಾರೆ. ಸೋಮವಾರವಷ್ಟೇ ವಿರಾಜಪೇಟೆಯ ಹೊರವಲಯದಲ್ಲಿರುವ ಕೂರ್ಗ್  ಡೆಂಟಲ್ ಕಾಲೇಜಿನಲ್ಲೂ ಕೊವಿಡ್ ನಿಯಮಗಳನ್ನು ಉಲ್ಲಂಘಿಸಿ ತರಗತಿಗಳನ್ನು ನಡೆಸುತ್ತಿದ್ದರು. ಈ ಕಾಲೇಜಿನ ಮೇಲೆ ದಾಳಿ ನಡೆಸಿದ್ದ ತಹಶೀಲ್ದಾರ್ ಯೋಗಾನಂದ್ ಅವರು ಕಾಲೇಜಿನ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿರಾಜಪೇಟೆ ಶಾಸಕರ ಕೆ.ಜಿ ಬೋಪಯ್ಯ ಎಜುಕೇಟೆಡ್ಸೇ ಈ ರೀತಿ ಮಾಡುವುದು ಸರಿಯಲ್ಲ. ಜನರು ಅರ್ಥ ಮಾಡಿಕೊಳ್ಳುತ್ತಾರೆ ಅಂತಲೇ ಸರ್ಕಾರ ಕೆಲವು ದಿನಗಳ ಹಿಂದೆ ನಿಯಮಗಳನ್ನು ಸಡಿಲಿಕೆ ಮಾಡಿತ್ತು. ಆದರೆ ಜನರು ಅದನ್ನು ದುರ್ಬಳಕೆ ಮಾಡಿಕೊಂಡರು. ಶಾಲಾ ಕಾಲೇಜು ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಬೇಕೆಂಬ ಸ್ಪಷ್ಟ ನಿಯಮವಿದೆ. ಅರ್ಚಕರು, ಮೌಲ್ವಿಗಳು ಮಾತ್ರವೇ ದೇವಾಲಯ ಮತ್ತು ಮಸೀದಿ ಚರ್ಚ್ ಗಳಲ್ಲಿ ಪಾದ್ರಿಗಳು ಇರಬೇಕೆಂಬ ನಿಯಮವಿದೆ. ಇಷ್ಟೆಲ್ಲಾ ಆದರೂ ಕೆಲವರು ಹೀಗೆ ತಪ್ಪು ಮಾಡಿರುವುದು ಅಕ್ಷಮ್ಯ ಅಪರಾಧ. ಇಂತಹ ಪ್ರಕರಣಗಳು ನಡೆಯಬಾರದೆಂದೇ ಸರ್ಕಾರ ಮೇ ಹತ್ತನೇ ತಾರೀಖಿನವರೆಗೆ ಎಲ್ಲವನ್ನೂ ಬಂದ್ ಮಾಡಿ ಆದೇಶ ಹೊರಡಿಸಿದೆ. ಹೀಗೆ ಕಾನೂನು ಉಲ್ಲಂಘನೆ ಮಾಡಿರುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
Published by:Latha CG
First published: