• Home
  • »
  • News
  • »
  • state
  • »
  • Karnataka Covid Guidelines: ಮಾಸ್ಕ್ ಮರೆಯಲ್ಲಿ ಹೊಸ ವರ್ಷದ ಸಂಭ್ರಮ, ಪಾರ್ಟಿಗಳಿಗೆ 1 ಗಂಟೆವರೆಗೆ ಡೆಡ್‌ಲೈನ್! ಸಚಿವರ ಸಭೆಯಲ್ಲಿ ಮಹತ್ವದ ನಿರ್ಧಾರ

Karnataka Covid Guidelines: ಮಾಸ್ಕ್ ಮರೆಯಲ್ಲಿ ಹೊಸ ವರ್ಷದ ಸಂಭ್ರಮ, ಪಾರ್ಟಿಗಳಿಗೆ 1 ಗಂಟೆವರೆಗೆ ಡೆಡ್‌ಲೈನ್! ಸಚಿವರ ಸಭೆಯಲ್ಲಿ ಮಹತ್ವದ ನಿರ್ಧಾರ

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ಹೊಸ ವರ್ಷಾಚರಣೆ ಮಧ್ಯ ರಾತ್ರಿ 1 ಗಂಟೆ ವರೆಗೂ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ವಹಿಸಿ ಕೊರೊನಾ ಟೆಸ್ಟ್​ಗೆ ಒಳಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕೊರೊನಾ ಭೀತಿ ಮಧ್ಯೆ ಹೊಸ ವರ್ಷಾಚರಣೆಗೆ ಮಾರ್ಗಸೂಚಿ ರಚಿಸಲು ಇಂದು ಕಂದಾಯ ಸಚಿವ ಆರ್​.ಅಶೋಕ್ (Minister R Ashok)​ ಮತ್ತು (MInister Dr. K Sduhakar) ಆರೋಗ್ಯ ಸಚಿವ ಡಾ.ಕೆ ಸುಧಾಕರ್ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಕೋವಿಡ್​ ತಾಂತ್ರಿಕ ಸಲಹಾ ಸಮಿತಿ (COVID-19 Technical Advisory Committee) ನೀಡಿರುವ ಕೆಲವು ಕ್ರಮಗಳನ್ನು ಜಾರಿ ಮಾಡುತ್ತಿದ್ದೇವೆ. ಅದರಲ್ಲಿ ಪ್ರಮುಖವಾಗಿ ಹೊಸ ವರ್ಷಾಚರಣೆ (New Year Celebrations) ಮಧ್ಯ ರಾತ್ರಿ 1 ಗಂಟೆ ವರೆಗೂ ಮಾತ್ರ ಅವಕಾಶ ನೀಡಲಾಗುತ್ತಿದೆ. ಉಳಿದಂತೆ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ವಹಿಸಿ ಕೊರೊನಾ ಟೆಸ್ಟ್​ಗೆ ಒಳಪಡಿಸುವ ಕಾರ್ಯ ಮಾಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.


ಥಿಯೇಟರ್ ಗಳಲ್ಲಿ ಮಾಸ್ಕ್ ಕಡ್ಡಾಯ


ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಅಶೋಕ್​ ಅವರು, ಚೀನಾ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಕೋವಿಡ್ ಸಂಖ್ಯೆ ಜಾಸ್ತಿಯಾಗಿದೆ. ಚೀನಾ ಸೇರಿದಂತೆ ಅಂತರಾಷ್ಟ್ರೀಯದಿಂದ ಬರುವವರ ಮೇಲೆ ಕಣ್ಗಾವಲು ವಹಿಸುತ್ತೇವೆ. ಅದಕ್ಕೂ ಮಂಗಳೂರಿನಲ್ಲಿ ವೆನ್ಲಾಕ್ ಆಸ್ಪತ್ರೆ, ಬೆಂಗಳೂರಿಲ್ಲಿ ಬೌರಿಂಗ್ ಆಸ್ಪತ್ರೆಯ ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ: Covid Alert: ಈ ದೇಶಗಳಲ್ಲಿ ಹೆಚ್ಚುತ್ತಿವೆ ಕೊರೊನಾ ಪ್ರಕರಣಗಳು: ಇಲ್ಲಿಗೆ ಹೋಗದೆ ಇರೋದೆ ಒಳ್ಳೆಯದು


ರೋಗ ಲಕ್ಷಣಗಳು ಕಂಡು ಬಂದರೇ ಆಸ್ಪತ್ರೆ ಯಲ್ಲಿ ಅಡ್ಮಿಟ್ ಮಾಡಲು ಕ್ರಮಕೈಗೊಳ್ಳುತ್ತೇವೆ. ಥಿಯೇಟರ್ ಗಳಲ್ಲಿ ಮಾಸ್ಕ್ ಕಡ್ಡಾಯ ಮಾಡಿ ಎಲ್ಲಾ ಥಿಯೇಟರ್ ಮಾಲೀಕರಿಗೆ ಸೂಚನೆ ಕೊಡಲಾಗಿದೆ. ಸುವರ್ಣ ಸೌಧದಲ್ಲಿ ಇಂದಿನಿಂದ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಆಸ್ಪತ್ರೆಗಳಲ್ಲಿ ಕೊರೊನಾ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.


ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವರು ಮಾಸ್ಕ್ ಕಡ್ಡಾಯ


ಶಾಲಾ - ಕಾಲೇಜುಗಳು ಕೈಗೆ ಸ್ಯಾನಿಟೈಜ್ ಮಾಡಬೇಕು, ಕ್ಲಾಸ್ ರೂಮ್ ಒಳಗೆ ಮಾಸ್ಕ್ ಧರಿಸಬೇಕು. ಹೋಟೆಲ್ ಗಳಿಗೆ ಆಗಮಿಸುವವರು ಎರಡು ಡೋಸ್ ಕಡ್ಡಾಯ ಹಾಕಿರಲೇಬೇಕು. ಮೂರನೇ ಡೋಸ್ ಹಾಕಿಕೊಂಡರೆ ಒಳ್ಳೆಯದು. ಹೋಟೆಲ್​ಗಳಲ್ಲಿ ಟೇಬಲ್ ನಲ್ಲಿ ಕುಳಿತು ಕೊಳ್ಳಲು ಮಾತ್ರ ಅವಕಾಶ, ಅದಕ್ಕಿಂತ ಹೆಚ್ಚು ಕೂರಲು ಅವಕಾಶ ಇಲ್ಲ. ರಾತ್ರಿ 12 ರಿಂದ 1 ಗಂಟೆ ವರೆಗೆ ಮಾತ್ರ ಸಂಭ್ರಮಕ್ಕೆ ಅವಕಾಶ ನೀಡಲಾಗಿದೆ.


ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವರು ಮಾಸ್ಕ್ ಕಡ್ಡಾಯ. ಎಲ್ಲಿ ಸಂಭ್ರಮಾಚರಣೆ ಮಾಡುತ್ತಾರೋ ಅಲ್ಲಿ ಎಲ್ಲಾ ಕಡೆಯೂ ಇದು ಅನ್ವಯ. ಉಳಿದಂತೆ ರೆಸ್ಟೋರೆಂಟ್ ರಾತ್ರಿ 1 ಗಂಟೆ ವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದವರ ಬಗ್ಗೆ ಸದ್ಯಕ್ಕೆ ಏನು ದಂಡ ಹಾಕುವ ಬಗ್ಗೆ ನಿರ್ಧಾರ ಮಾಡಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದರು.


minister r ashok speak about bbmp demolish encroachment pvn
ಸಚಿವ ಆರ್.ಅಶೋಕ್


ಇದನ್ನೂ ಓದಿ: Covid Booster Dose: ಕೊರೊನಾ ಬೂಸ್ಟರ್ ಲಸಿಕೆ ಅನಿವಾರ್ಯವೇ? ಕೇಂದ್ರ ಸಚಿವರಿಂದ ಮಹತ್ವದ ಸೂಚನೆ


ಸಚಿವ ಸುಧಾಕರ್ ಮಾತನಾಡಿ ನಾವು ಹೊಸ ವರ್ಷಕ್ಕೆ ಯಾವುದೇ ನಿರ್ಬಂಧಗಳನ್ನು ಹಾಕಿಲ್ಲ. ಮಾಸ್ಕ್​ ಧರಿಸಿ ಹಾಗೂ ಬೂಸ್ಟರ್​ ಡೋಸ್​ ಪಡೆಯಿರಿ ಅಂತ ಮನವಿ ಮಾಡ್ತಿದ್ದೇವೆ ಅಷ್ಟೇ. ತಾಂತ್ರಿಕ ಸಲಹಾ ಸಮಿತಿ, ವಿಪತ್ತು ನಿರ್ವಹಣಾ ಅಧಿಕಾರಿಗಳ ಜೊತೆ ಚರ್ಚಿಸಿ ಈ ನಿರ್ಣಯ ತಗೊಂಡಿದ್ದೇವೆ. ಕೇಂದ್ರ ಆರೋಗ್ಯ ಇಲಾಖೆ ಏನು ಮಾರ್ಗಸೂಚಿ ಕೊಟ್ಟಿದೆಯೋ, ಅದೇ ರೀತಿ ವಿಮಾನ ನಿಲ್ದಾಣ ಗಳಲ್ಲಿ ಟೆಸ್ಟ್ ಮಾಡಿ, ಕ್ವಾರಂಟೈನ್ ಮಾಡಲು ಎರಡು ಆಸ್ಪತ್ರೆ ಗಳನ್ನು ತೆರೆದಿದ್ದೇವೆ. ಬೂಸ್ಟರ್ ಡೋಸ್​​ನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡುವುದು. ಈಗ ಶೇ.25 ರಷ್ಟು ಕೊಟ್ಟಿದ್ದೇವೆ, ಮುಂದೆ ಶೇ.50 ರಷ್ಟು ಕೊಡಲು ತೀರ್ಮಾನ ಮಾಡಿದ್ದೇವೆ. ಗ್ರಾಮ, ತಾಲ್ಲೂಕು, ಜಿಲ್ಲಾ ಕೇಂದ್ರ ಗಳಲ್ಲಿ ಲಸಿಕಾ ಕೇಂದ್ರ ಗಳನ್ನು ತೆರೆಯುತ್ತೇವೆ.


ಹಿರಿಯ, ಗರ್ಭಿಣಿಯರು, ಮಕ್ಕಳು ಹೊಸ ವರ್ಷದ ಸಂಭ್ರಮಾಚರಣೆಯಿಂದ ದೂರ ಇರಿ


ಹೊಸ ವರ್ಷಾಚರಣೆಗೆ ಕೆಲ ಕ್ರಮ ತೆಗೆದುಕೊಳ್ಳಬೇಕು. ಸಾವಿರಾರು ಜನರು ಒಂದು ಕಡೆ ಸೇರಿದಾಗ, ಹಿರಿಯ ನಾಗರಿಕರು, ಆರೋಗ್ಯದ ಇತರೆ ಸಮಸ್ಯೆಗಳು ಇರುವವರು, ಗರ್ಭಿಣಿಯರು ಹಾಗೂ ಮಕ್ಕಳು ಸೇರಬಾರದು. ರೆಸ್ಟೋರೆಂಟ್, ಪಬ್ ಗಳಲ್ಲಿ ಆಸನಗಳ ಗರಿಷ್ಠ ಮೀರಬಾರದು. ಹೊಸ ವರ್ಷಾಚರಣೆಗೆ ಮಾಸ್ಕ್ ನ್ನು ಧರಿಸಬೇಕು. ಎಲ್ಲಾ ಒಳಾಂಗಣದಲ್ಲಿ ಮಾಸ್ಕ್ ಧರಿಸಬೇಕು. ಒಮಿಕ್ರಾನ್ BF.7 ನಿಂದ ಯಾವುದೇ ಆತಂಕ ಪಡುವ ಅಗತ್ಯತೆ ಸದ್ಯಕ್ಕೆ ಇಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಸರ್ಕಾರ ಮುನ್ನೆಚ್ಚರಿಕೆ ಕ್ರಮ ತಗೊಂಡಿದೆ. ಅದಕ್ಕೆ ಸಾರ್ವಜನಿಕರು ಕೂಡ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

Published by:Sumanth SN
First published: