HOME » NEWS » State » COVID 19 DEATH CASES ARE RAISING IN KARNATAKA SESR

Covid 19: ಏರಿಕೆಯಾಗುತ್ತಿದೆ ಸೋಂಕಿತರ ಸಾವಿನ ಸಂಖ್ಯೆ; ರಾಜ್ಯದಲ್ಲಿ ಇಂದು 239 ಮಂದಿ ಕೋವಿಡ್​ಗೆ ಬಲಿ

ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವು ಚಿತಾಗಾರದಲ್ಲಿ ಬಿಡುವಿಲ್ಲದ ಅಂತ್ಯಕ್ರಿಯೆ ಕಾರ್ಯ ನಡೆಯುತ್ತಿದೆ. ಇದೇ ಹಿನ್ನಲೆ ರಾಜಧಾನಿಯ ಕೆಲವು ಚಿತಾಗಾರದಲ್ಲಿ ಹೌಸ್​ ಫುಲ್​ ಬೋರ್ಡ್​ಗಳು ಕಂಡು ಬಂದಿದೆ.

news18-kannada
Updated:May 3, 2021, 9:32 PM IST
Covid 19: ಏರಿಕೆಯಾಗುತ್ತಿದೆ ಸೋಂಕಿತರ ಸಾವಿನ ಸಂಖ್ಯೆ; ರಾಜ್ಯದಲ್ಲಿ ಇಂದು 239 ಮಂದಿ ಕೋವಿಡ್​ಗೆ ಬಲಿ
ಸಾಂದರ್ಭಿಕ ಚಿತ್ರ.
  • Share this:
 ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಾವಿನ ಸಂಖ್ಯೆ ಏರುತ್ತಲೇ ಇದೆ. ಇಂದು ರಾಜ್ಯದಲ್ಲಿ ಕೋವಿಡ್​ನಿಂದಾಗಿ 239 ಜನರು ಸಾವನ್ನಪ್ಪಿದ್ದು, ಬೆಂಗಳೂರಿನಲ್ಲಿ 115 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಂದು 44,438 ಹೊಸ ಕೋವಿಡ್​ ಪ್ರಕರಣಗಳು ದಾಖಲಾಗಿದ್ದು, ಒಟ್ಟು 4, 44, 734 ಸಕ್ರಿಯ ಪ್ರಕರಣಗಳು ಕಂಡು ಬಂದಿದೆ. ಬೆಂಗಳೂರಿನಲ್ಲಿ ಇಂದು 22,112 ಪ್ರಕರಣ ಪತ್ತೆಯಾಗಿದ್ದು, 2, 94, 917 ಸಕ್ರಿಯ ಪ್ರಕರಣಗಳು ಕಂಡು ಬಂದಿದೆ. ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಹಲವು ಚಿತಾಗಾರದಲ್ಲಿ ಬಿಡುವಿಲ್ಲದ ಅಂತ್ಯಕ್ರಿಯೆ ಕಾರ್ಯ ನಡೆಯುತ್ತಿದೆ. ಇದೇ ಹಿನ್ನಲೆ ರಾಜಧಾನಿಯ ಕೆಲವು ಚಿತಾಗಾರದಲ್ಲಿ ಹೌಸ್​ ಫುಲ್​ ಬೋರ್ಡ್​ಗಳು ಕಂಡು ಬಂದಿದೆ.

ಈಗಾಗಲೇ ಸೋಂಕಿತರಿಂದ ಆಸ್ಪತ್ರೆಗಳು ಭರ್ತಿಯಾಗಿದ್ದು, ರಾಜಧಾನಿಯಲ್ಲಿ ಬೆಡ್​ ಸಮಸ್ಯೆ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಇದೀಗ ಚಿತಾಗಾರಗಳಲ್ಲಿಯೂ ಹೌಸ್​ ಫುಲ್​ ಬೋರ್ಡ್​ಗಳು ಕಾಣಿಸಿಕೊಂಡಿದೆ. ಯುಗಾದಿ ಹಬ್ಬದ ಬಳಿಕ ರಾಜಧಾನಿಯಲ್ಲಿ ಸಾವಿನ ಪ್ರಕರಣಗಳು ಹೆಚ್ಚಾಗ ತೊಡಗಿದ್ದು, ಅಂತ್ಯಕ್ರಿಯೆಗೆ ಚಿತಾಗಾರದ ಎದುರು ಸಾಲು ಸಾಲು ಅಂಬ್ಯುಲೆನ್ಸ್​ಗಳು ನಿಂತಿರುವ ದೃಶ್ಯಗಳು ಕಂಡು ಬಂದಿದ್ದವು. ಈ ಘಟನೆ ಬಳಿಕ ಸರ್ಕಾರ ರಾಜಧಾನಿಯಲ್ಲಿ ಚಿತಾಗಾರದ ಸಂಖ್ಯೆಯನ್ನು ಏರಿಕೆ ಮಾಡಿತ್ತು. ಅಲ್ಲದೇ ಬಯಲು ಚಿತಾಗಾರಕ್ಕೆ ಕೂಡ ಸರ್ಕಾರ ವ್ಯವಸ್ಥೆ ಮಾಡಿತ್ತು . ಈ ನಡುವೆ ಕೂಡ ಸ್ಮಶಾನದಲ್ಲಿ ಸ್ಥಳಾವಕಾಶದ ಕೊರತೆ ಕಂಡು ಬಂದಿದೆ.

ಚಾಮರಾಜಪೇಟೆಯ ಸ್ಮಶಾನದಲ್ಲಿ ಶವಗಳ ಅಂತ್ಯ ಸಂಸ್ಕಾರಕ್ಕೆ ಸ್ಥಳವಕಾಶದ ಕೊರತೆ ಕಂಡು ಬಂದಿದೆ. ಇದೇ ಹಿನ್ನಲೆ ಸ್ಮಶಾನದ ಎದುರು ಹೌಸ್​ ಫುಲ್​ ಬೋರ್ಡ್​ ಕಂಡು ಬಂದಿದೆ. ಸ್ಮಶಾನದಲ್ಲಿ 20 ದೇಹಗಳನ್ನು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಳ್ಳಲಾಗುತ್ತದೆ. ಶವಸಂಸ್ಕಾರಕ್ಕಾಗಿ ಇನ್ನು ಹೆಚ್ಚಿನ ಶವಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಮಂಡಳಿ ಹಾಕಿದೆ.

ಇದನ್ನು ಓದಿ: ಆಕ್ಸಿಜನ್​ ಸಿಗದೇ ಸಾವನ್ನಪ್ಪಿದವರು ಕೇವಲ 3 ಮಂದಿ; ಉಳಿದವರ ಸಾವಿಗೆ ಸೋಂಕಿನ ಲಕ್ಷಣ ಕಾರಣ; ಸುಧಾಕರ್​

ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಬಿಬಿಎಂಪಿ, ಈ ಕುರಿತು ತಕ್ಷಣ ಕ್ರಮಕ್ಕೆ ಮುಂದಾಗಿದೆ. ಬಳಿಕ ಹೌಸ್​ಫುಲ್​ ಬೋರ್ಡ್​ಅನ್ನು ತೆಗೆಸಲಾಗಿದೆ

ಕೋವಿಡ್​ ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿಯೇ ಬೆಂಗಳೂರಿನ ಬಿಬಿಎಂಪಿ 13 ವಿದ್ಯುತ್​ ಚಿತಾಗಾರವನ್ನು ಮೀಸಲಿಡಲಾಗಿದೆ, ಇದರ ಜೊತೆಗೆ ಬಿಬಿಎಂಬಿ 230 ಎಕರೆ ಬಯಲು ಅಂತ್ಯಕ್ರಿಯೆಗೆ ಜಾಗ ಮೀಸಲಿರಿಸಿದೆ.

ಈ ನಡುವೆ ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್​ ಸಮಸ್ಯೆಯಿಂದ 24 ಗಂಟೆಯಲ್ಲಿ 24 ಮಂದಿ ಸಾವನ್ನಪ್ಪಿರುವುದ ಮತ್ತಷ್ಟು ಆಘಾತ ಮೂಡಿಸಿದೆ. ಈ ಮೂಲಕ ರಾಜ್ಯದಲ್ಲಿ ಆಕ್ಸಿಜನ್​ ಕೊರತೆ ಕೂಡ ಎದುರಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ, ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಸಚಿವ ಕೆ ಸುಧಾಕರ್​ ಆಕ್ಸಿಜನ್​ ಕೊರತೆಯಿಂದ ಮೂವರು ಮಾತ್ರ ಸಾವನ್ನಪ್ಪಿದ್ದು, ಉಳಿದವರು ಸೋಂಕಿನ ಲಕ್ಷಣಗಳಿಂದ ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಇನ್ನು ಈ ಘಟನೆಗೆ ವಿಪಕ್ಷಗಳು ತೀವ್ರ ಘಟನೆ ವ್ಯಕ್ತಪಡಿಸಿದ್ದು, ಸಿಎಂ ಬಿಎಸ್​ ವೈ ಮತ್ತು ಆರೋಗ್ಯ ಸಚಿವರ ರಾಜೀನಾಮೆಗೆ ಆಗ್ರಹಿಸಿವೆ. ಇದರ ಬೆನ್ನಲ್ಲೇ ಸಿಎಂ ಬಿಎಸ್​ ಯಡಿಯೂರಪ್ಪ ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದಿದ್ದಾರೆ.
Published by: Seema R
First published: May 3, 2021, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading