ಏರಿಕೆಯಾಯ್ತು ಕೊರೋನಾ ಸೋಂಕಿತರ ಸಂಖ್ಯೆ; ರಾಜ್ಯದಲ್ಲಿ ಇಂದು 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು

Covid-19 cases raising in Karnataka: ರಾಜಧಾನಿಯಲ್ಲಿ ಕಡಿಮೆಗೊಂಡಿದ್ದ ಸೋಂಕಿನ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಈ ಹಿಂದಿನ ಅಂಕಿ ಅಂಶಕ್ಕೆ  ಬಂದು ನಿಂತಿದೆ. ಅಲ್ಲದೇ ಇಳಿಕೆ ಕಂಡಿದ್ದ ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದೆ.

news18-kannada
Updated:September 29, 2020, 9:52 PM IST
ಏರಿಕೆಯಾಯ್ತು ಕೊರೋನಾ ಸೋಂಕಿತರ ಸಂಖ್ಯೆ; ರಾಜ್ಯದಲ್ಲಿ ಇಂದು 10 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲು
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಸೆ.29): ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚಾಗಿದ್ದು, ಇಂದು  ಒಂದೇ ದಿನ ದಾಖಲೆಯ  10ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಇದುವರೆಗೂ ದಾಖಲಾದ ಗರಿಷ್ಠ ಸಂಖ್ಯೆ ಇದಾಗಿದೆ. ಇಂದು ಕೋವಿಡ್​ಗೆ 136 ಮಂದಿ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ 4868ಜನ ಸೋಂಕಿತರು ಕಂಡು ಬಂದಿದ್ದು, 67 ಜನ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ದಿನೇ ದಿನೇ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸರ್ಕಾರಕ್ಕೂ ಇದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ವೈದ್ಯಕೀಯ ಸಚಿವ ಡಾ. ಸುಧಾಕರ್​ ಕೂಡ ಕಳವಳ ವ್ಯಕ್ತಪಡಿಸಿದ್ದಾರೆ. ಅಷ್ಟೇ  ಅಲ್ಲದೇ ಕೇಂದ್ರ ಸರ್ಕಾರ ಕೂಡ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ. ಇದೇ ಹಿನ್ನಲೆ ಕಳೆದೆರಡು ದಿನಗಳ ಹಿಂದೆ ಪ್ರಧಾನಿ ಮೋದಿಯವರು ಈ ಕುರಿತು ವಿಡಿಯೋ ಕಾನ್ಫರೆನ್ಸ್​ ಮೂಲಕ ಚರ್ಚೆ ನಡೆಸಿದ್ದರು.

ರಾಜಧಾನಿಯಲ್ಲಿ ಕಡಿಮೆಗೊಂಡಿದ್ದ ಸೋಂಕಿನ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಈ ಹಿಂದಿನ ಅಂಕಿ ಅಂಶಕ್ಕೆ  ಬಂದು ನಿಂತಿದೆ. ಅಲ್ಲದೇ ಇಳಿಕೆ ಕಂಡಿದ್ದ ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 1,07,737 ಕೊರೋನಾ ಸೋಂಕಿತ ಪ್ರಕರಣಗಳು ಸಕ್ರಿಯವಾಗಿದೆ. ಇದರಲ್ಲಿ 6628 ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.

ಮೈಸೂರಿನಲ್ಲಿ 414 ಪ್ರಕರಣ, ಹಾಸನ 475 ದಕ್ಷಿಣ ಕನ್ನಡದಲ್ಲಿ 362, ಶಿವಮೊಗ್ಗದಲ್ಲಿ 347, ಬೆಂಗಳೂರು ಗ್ರಾಮಾಂತರ 305 ಉಡುಪಿಯಲ್ಲಿ 319 ಪ್ರಕರಣಗಳು ಕಂಡು ಬಂದಿದೆ. ಇಂದು ಹಾಸನದಲ್ಲಿ ಕೋವಿಡ್​ಗೆ 10 ಜನರು ಸಾವನ್ನಪ್ಪಿದ್ದು, ಮೈಸೂರಿನ 7 ಮಂದಿ, ದಕ್ಷಿಣ ಕನ್ನಡದಲ್ಲಿ 9, ಶಿವಮೊಗ್ಗದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನು ಓದಿ: ಜನರ ನಿರ್ಲಕ್ಷ್ಯದಿಂದ ಕೊರೋನಾ ಸೋಂಕು ಹೆಚ್ಚಳ; ಕಟ್ಟುನಿಟ್ಟಿನ ಕ್ರಮಕ್ಕೆ ಚಿಂತನೆ: ಸಚಿವ ಸುಧಾಕರ್​

ವೇತನ ಹೆಚ್ಚಳ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ರಾಜ್ಯ ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣದ ಗುತ್ತಿಗೆ-ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದ ಹಿನ್ನಲೆ   ಕಳೆದೆರಡು ದಿನಗಳಿಂದ ಸೋಂಕಿತರ ನಿಖರ ಸಂಖ್ಯೆ ಸಿಗುತ್ತಿರಲಿಲ್ಲ. ಈ ಹಿನ್ನಲೆ ಕಳೆದೆರಡು ದಿನ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಗಲು ಜನರ ನಿರ್ಲಕ್ಷ್ಯ ಕೂಡ ಕಾರಣವಾಗುತ್ತಿದೆ. ಲಾಕ್​ಡೌನ್​ ಬಳಿಕ ಜನರು ಸಾಮಾಜಿಕ ಅಂತರ ಮರೆತಿದ್ದು, ಮಾಸ್ಕ್​ ಧರಿಸುತ್ತಿಲ್ಲ. ಸಭೆ ಸಮಾರಂಭಗಳು ಕೂಡ ಸೋಂಕು ಹೆಚ್ಚಲು ಕಾರಣವಾಗಿದೆ. ಈ ಹಿನ್ನಲೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವ ಕುರಿತು ಮುಖ್ಯಮಂತ್ರಿಗಳೊಂದಿಗೆ ನಾಳೆ ಚರ್ಚಿಸಲಾಗುವುದು ಎಂದು ಸಚಿವ ಸುಧಾಕರ್​ ತಿಳಿಸಿದ್ದಾರೆ.
Published by: Seema R
First published: September 29, 2020, 9:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading