ಜಾಮೂನ್ ಬಟ್ಟಲಿನಲ್ಲಿ ಸತ್ತ ಜಿರಳೆ: ಬೆಂಗಳೂರಿನ ವ್ಯಕ್ತಿಗೆ 55 ಸಾವಿರ ಪರಿಹಾರ ನೀಡಲು ಹೋಟೆಲ್‌ಗೆ ಆದೇಶಿಸಿದ ಕೋರ್ಟ್‌

ಗ್ರಾಹಕ ರಾಜಣ್ಣನಿಗೆ ಜಾಮೂನ್ ಜತೆಗೆ ಸತ್ತ ಜಿರಳೆ ನೀಡಿದ್ದಕ್ಕೆ 50,000 ರೂ ಪರಿಹಾರ ನೀಡಬೇಕು ಮತ್ತು ನ್ಯಾಯಾಲಯದ ವೆಚ್ಚಗಳಿಗೆ ಹೆಚ್ಚುವರಿಯಾಗಿ 5,000 ರೂ. ನೀಡಬೇಕು ಎಂದು ರಾಜ್ಯ ಗ್ರಾಹಕರ ವೇದಿಕೆ ತೀರ್ಪು ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಿನ ವಕೀಲರೊಬ್ಬರು ಹೋಟೆಲ್​ಗೆ ಹೋದಾಗ ತಾನು ಆರ್ಡರ್‌ ಮಾಡಿದ್ದ ಜಾಮೂನ್‌ ಬಟ್ಟಲಿನಲ್ಲಿ ಸತ್ತ ಜಿರಳೆ ಪತ್ತೆಯಾಗಿತ್ತು. ನಂತರ, ಆ ವಕೀಲರು ಕಲಬೆರಕೆ ಆಹಾರ ನೀಡಿದ್ದಕ್ಕಾಗಿ ನಗರದ ಗ್ರಾಹಕರ ನ್ಯಾಯಾಲಯದಲ್ಲಿ ಆ ಹೋಟೆಲ್‌ ವಿರುದ್ಧ ಕೇಸ್‌ ಹಾಕಿ 55,000 ರೂಪಾಯಿ ಪರಿಹಾರ ಪಡೆದಿದ್ದಾರೆ. ತೀರ್ಪಿನ ವಿರುದ್ಧ ಉಪಾಹಾರ ಗೃಹದ ಮಾಲೀಕರು ಮೇಲ್ಮನವಿ ಸಲ್ಲಿಸಿದರೂ ಸಹ ರಾಜ್ಯ ಗ್ರಾಹಕರ ವೇದಿಕೆಯು ಬೆಂಗಳೂರಿನ ಗ್ರಾಹಕರ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿಹಿಡಿಯಿತು. ಹೋಟೆಲ್‌ ತನ್ನ ಲೋಪಗಳಿಗೆ ಗ್ರಾಹಕರಿಗೆ ಪಾವತಿಸಲೇಬೇಕೆಂದು ಹೇಳಿದರು.

ಸೆಪ್ಟೆಂಬರ್ 15, 2016 ರಂದು, ವಕೀಲ ಮತ್ತು ಬೆಂಗಳೂರಿನ ಗಾಂಧಿ ನಗರ ನಿವಾಸಿ 57 ವರ್ಷದ ಕೆ.ಎಂ. ರಾಜಣ್ಣ ಮತ್ತು ಅವರ ಸ್ನೇಹಿತ ಗಾಂಧಿನಗರದ ಕಪಾಲಿ ಥಿಯೇಟರ್ ಎದುರಿನ ಕಾಮತ್ ಹೋಟೆಲ್‌ಗೆ ಭೇಟಿ ನೀಡಿದ್ದರು. ಆ ವೇಳೆ ಅವರು ದೋಸೆ ಹಾಗೂ ಜಾಮೂನನ್ನು ಆರ್ಡರ್‌ ಮಾಡಿದ್ದರು. ಆದರೆ, ಸತ್ತ ಜಿರಳೆಯೊಂದು ಜಾಮೂನಿನ ಬಟ್ಟಲಿನಲ್ಲಿ ತೇಲುತ್ತಿರುವುದನ್ನು ಕಂಡು ಕೋಪಗೊಂಡ ರಾಜಣ್ಣ ಸರ್ವ್‌ ಮಾಡಿದ ಮಾಣಿಯನ್ನು ಪ್ರಶ್ನೆ ಮಾಡಿದ್ದಾರೆ.

cockroch
ಸಾಂದರ್ಭಿಕ ಚಿತ್ರ.


ಅಲ್ಲದೆ, ಅದರ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದುಕೊಳ್ಳಲು ಹೋದಾಗ ವೇಟರ್‌ ತನ್ನ ಸೆಲ್‌ಫೋನ್‌ ಅನ್ನು ಕಸಿದುಕೊಳ್ಳಲು ಪ್ರಯತ್ನಿಸಿದರು ಮತ್ತು ಅವ್ಯವಸ್ಥೆ ಉಂಟಾಯಿತು ಎಂದು ವಕೀಲರು ಆರೋಪಿಸಿದ್ದಾರೆ.

ಬಳಿಕ ವಕೀಲರು ಮೊದಲು ಸ್ಥಳೀಯ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಿದರು. ನಂತರ ಬೆಂಗಳೂರಿನ ಶಾಂತಿನಗರದಲ್ಲಿರುವ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದರು. ಕಲಬೆರಕೆ ಅಥವಾ ವಿಷಪೂರಿತ ಆಹಾರವನ್ನು ಪೂರೈಸುವ ಮೂಲಕ ಸೇವೆಯ ಕೊರತೆ ಹಿನ್ನೆಲೆ ಕಾಮತ್‌ ಹೋಟೆಲ್‌ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: Shah Rukh Khan ಸಿನಿಮಾ ನೋಡಿ ಮೋಸ ಹೋದ ಅಭಿಮಾನಿ: 15 ಸಾವಿರ ದಂಡ ವಿಧಿಸಿದ ಸುಪ್ರೀಂ ಕೋರ್ಟ್

ಇನ್ನು, ಸೆಪ್ಟೆಂಬರ್ 24, 2018 ರಂದು ಹೋಟೆಲ್ ಪ್ರತಿನಿಧಿಗಳಿಗೆ ಕಾನೂನು ನೋಟಿಸ್ ನೀಡಲಾಗಿದ್ದರೂ, ಉಪಾಹಾರ ಗೃಹವು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ನಂತರ ಗ್ರಾಹಕ ವೇದಿಕೆಯ ನ್ಯಾಯಾಧೀಶರು, ಹೋಟೆಲ್ ಗ್ರಾಹಕರ ಸೇವೆಯಲ್ಲಿನ ಕೊರತೆಯಿಂದಾಗಿ 5 ಸಾವಿರ ಕೋರ್ಟ್‌ ವೆಚ್ಚಗಳ ಜತೆಗೆ 50,000 ರೂ. ಪರಿಹಾರ ನೀಡಬೇಕೆಂದು ತೀರ್ಪು ನೀಡಿತು.

ಆದರೆ, ಕಾಮತ್‌ ಹೋಟೆಲ್‌ ಪ್ರತಿನಿಧಿಗಳು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಬಸವ ಭವನದಲ್ಲಿರುವ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವನ್ನು ಸಂಪರ್ಕಿಸಿದರು. ತಮ್ಮ ವಿರುದ್ಧದ ಗ್ರಾಹಕ ನ್ಯಾಯಾಲಯದ ಪ್ರಕರಣದ ಬಗ್ಗೆ ತಮಗೆ ತಿಳಿದಿರಲಿಲ್ಲ ಮತ್ತು ತೀರ್ಪು ಜಾರಿಗೊಳಿಸುವ ನೋಟಿಸ್‌ ತಮಗೆ ತಲುಪಿದ ನಂತರವೇ ನಾವು ಆ ಬಗ್ಗೆ ತಿಳಿದುಕೊಂಡೆವು.

ಇದನ್ನೂ ಓದಿ: ಕಸ ವಿಲೇವಾರಿ ಮಾಡಿಲ್ಲವೆಂದು ದೂರು; ಆಯುಕ್ತರಿಗೇ ದಂಡ ವಿಧಿಸಿದ ಗ್ರಾಹಕರ ನ್ಯಾಯಾಲಯ

ಗ್ರಾಹಕರ ಮೇಲೆ ವೇಟರ್‌ ದಾಳಿ ಮಾಡಲು ಹೋಗಿದ್ದು ಸುಳ್ಳು ಎಂದು ಹೇಳಿಕೊಂಡ ಹೋಟೆಲ್‌, ಗ್ರಾಹಕರು ದುರುದ್ದೇಶಪೂರಿತ ಉದ್ದೇಶದಿಂದ 2 ವರ್ಷಗಳ ನಂತರ ನಗರದ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದ್ದಾರೆ ಎಂದು ದೂರು ನೀಡಿದ್ದಾರೆ.

ಆದರೆ, ಇದನ್ನೊಪ್ಪದ ರಾಜ್ಯ ಗ್ರಾಹಕರ ವೇದಿಕೆಯ ನ್ಯಾಯಾಧೀಶರು, ಗ್ರಾಹಕ ಪೊಲೀಸರಿಗೆ ದೂರು ನೀಡಿದ್ದಾರೆ ಹಾಗೂ ಲೀಗಲ್‌ ನೋಟಿಸ್‌ ಕಳಿಸಿದ್ದಾರೆ. ಅಲ್ಲದೆ, ಇಷ್ಟೆಲ್ಲ ಆದ ಬಳಿಕವೂ ಕೋರ್ಟ್‌ಗೆ ಹಾಜರಾಗದಿರುವುದು ಸ್ವೀಕಾರಾರ್ಹವಲ್ಲ ಎಂದು ತಿಳಿಸಿದರು.ನಂತರ, ಸೆಪ್ಟೆಂಬರ್ 24, 2021ರಂದು ರಾಜ್ಯ ಗ್ರಾಹಕರ ವೇದಿಕೆಯು ಮೂಲ ತೀರ್ಪನ್ನು ಎತ್ತಿಹಿಡಿದು, ವಕೀಲ ಹಾಗೂ ಗ್ರಾಹಕ ರಾಜಣ್ಣನಿಗೆ ಜಾಮೂನ್ ಜತೆಗೆ ಸತ್ತ ಜಿರಳೆ ನೀಡಿದ್ದಕ್ಕೆ 50,000 ರೂ ಪರಿಹಾರ ನೀಡಬೇಕು ಮತ್ತು ನ್ಯಾಯಾಲಯದ ವೆಚ್ಚಗಳಿಗೆ ಹೆಚ್ಚುವರಿಯಾಗಿ 5,000 ರೂ. ನೀಡಬೇಕು ಎಂದು ತೀರ್ಪು ನೀಡಿದೆ.
Published by:Anitha E
First published: