News18 India World Cup 2019

ಸ್ವಘೋಷಿತ ದೇವಮಾನವ ನಿತ್ಯಾನಂದಗೆ ಬಂಧನದ ಭೀತಿ; ಜಾಮೀನು ರಹಿತ ವಾರಂಟ್​ ಜಾರಿ

ಪದೇ ಪದೇ ಕೋರ್ಟ್​ ಸೂಚನೆಯನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಾಮೀನು ರಹಿತ ವಾರಂಟ್​ ಆದೇಶ ಹೊರಡಿಸಲಾಗಿದೆ. ನ್ಯಾಯಾಂಗ ಪ್ರಕ್ರಿಯೆ ನಿಧಾನ ಗತಿಯಲ್ಲಿ ಸಾಗಲಿ ಎಂಬ ಕಾರಣಕ್ಕೆ ನಿತ್ಯಾನಂದ ಹಾಜರಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.

news18
Updated:September 6, 2018, 7:03 PM IST
ಸ್ವಘೋಷಿತ ದೇವಮಾನವ ನಿತ್ಯಾನಂದಗೆ ಬಂಧನದ ಭೀತಿ; ಜಾಮೀನು ರಹಿತ ವಾರಂಟ್​ ಜಾರಿ
ಸ್ವಾಮಿ ನಿತ್ಯಾನಂದ
news18
Updated: September 6, 2018, 7:03 PM IST
ರಾಮನಗರ: ಸ್ವಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದಗೆ ಮತ್ತೆ ಬಂಧನದ ಭೀತಿ ಆರಂಭವಾಗಿದೆ. ರಾಮನಗರ ಜಿಲ್ಲಾ ನ್ಯಾಯಾಲಯ ರಾಸಲೀಲೆ ಪ್ರಕರಣ ಸಂಬಂಧ ನಿತ್ಯಾನಂದ ವಿರುದ್ಧ ಜಾಮೀನು ರಹಿತ ವಾರಂಟ್​ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಮನಗರ ಪೊಲೀಸರು ನಿತ್ಯಾನಂದರನ್ನು ಬಂಧಿಸುವ ಸಾಧ್ಯತೆಯಿದೆ.

ನಿತ್ಯಾನಂದಸ್ವಾಮಿ ಅತ್ಯಾಚಾರ ಹಾಗೂ ರಾಸಲೀಲೆ ಪ್ರಕರಣ ಸಂಬಂಧ ರಾಮನಗರದ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನು ರಹಿತ ವಾರಂಟ್​ ಜಾರಿಗೊಳಿಸಿ ಆದೇಶ ಹೊರಡಿಸಿದೆ. ನ್ಯಾಯಾಧೀಶ ಗೋಪಾಲಕೃಷ್ಣ ರೈ ಅವರಿಂದ ಈ ಆದೇಶ ಹೊರಬಿದ್ದಿದೆ.

ನ್ಯಾಯಾಲಯದ ವಿಚಾರಣೆಗೆ ಗೈರಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಆದೇಶವನ್ನು ಕೋರ್ಟ್​ ಹೊರಡಿಸಿದೆ. ಹಲವು ಬಾರಿ ಖುದ್ದು ಕೋರ್ಟ್​ಗೆ ಹಾಜರಾಗುವಂತೆ ಕೋರ್ಟ್​ ನೊಟೀಸ್​ ನೀಡಿದ್ದರೂ, ನಿತ್ಯಾನಂದ ನ್ಯಾಯಾಲಯದ ಆದೇಶಕ್ಕೆ ಮನ್ನಣೆ ಕೊಟ್ಟಿರಲಿಲ್ಲ. ಕಳೆದು ಮೂರು ವಿಚಾರಣೆಗೆ ಗೈರು ಹಾಜರಾಗಿದ್ದ ನಿತ್ಯಾನಂದ.

ಪ್ರಮುಖ ಸಾಕ್ಷಿ ಲೆನಿನ್ ಕುರುಪ್ಪನ್ ವಿಚಾರಣೆ ವೇಳೆ ಹಾಜರಾಗಬೇಕಿತ್ತು. 2 ದಿನ ಇನ್ ಕ್ಯಾಮೆರಾ ಪ್ರೊಸೆಡಿಂಗ್ ಮೂಲಕ ವಿಚಾರಣೆ ನಡೆದಿತ್ತು. ವಿಚಾರಣೆಗೆ ಹಾಜರಾಗದೇ ಕೇಸ್ ನಿಧಾನಗತಿಯಲ್ಲಿ ಸಾಗುವಂತೆ ಮಾಡುವ ಹುನ್ನಾರ ನಿತ್ಯಾನಂದ ಮಾಡುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್​ ವಾದ ಮಂಡಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಂಗ ಪ್ರಕ್ರಿಯೆಗೆ ತೊಡಕು ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಜಾಮೀನು ರಹಿತ ವಾರಂಟ್​ ಜಾರಿ ಮಾಡಲಾಗಿದೆ.

ನಿತ್ಯಾನಂದಗೆ ವಾರಂಟ್​ ಜಾರಿ ಗೊಳಿಸಿದ ನಂತರ ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ನ್ಯಾಯಾಲಯ ಮುಂದೂಡಿದೆ.
First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...