• Home
  • »
  • News
  • »
  • state
  • »
  • Siddu Nijakanasugalu: ‘ಸಿದ್ದು ನಿಜಕನಸುಗಳು’ ಪುಸ್ತಕಕ್ಕೆ ತಡೆ; ಕೈ-ಕಮಲ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ

Siddu Nijakanasugalu: ‘ಸಿದ್ದು ನಿಜಕನಸುಗಳು’ ಪುಸ್ತಕಕ್ಕೆ ತಡೆ; ಕೈ-ಕಮಲ ಕಾರ್ಯಕರ್ತರ ನಡುವೆ ತಳ್ಳಾಟ-ನೂಕಾಟ

ಸಿದ್ದು ನಿಜಕನಸುಗಳು

ಸಿದ್ದು ನಿಜಕನಸುಗಳು

ಸಿದ್ದು ನಿಜ ಕನಸುಗಳು ಪುಸ್ತಕ ಬಿಡುಗಡೆಯಿಂದ ಸಿದ್ದರಾಮಯ್ಯಗೆ ಹೆದರಿಕೆ ಶುರುವಾಗಿದೆ. ಕೋಲಾರದಲ್ಲಿ ಸಿದ್ದರಾಮಯ್ಯ ಸೋಲು ಶತಸಿದ್ಧ. ಮತ್ತೆ ವರುಣಾ ಕ್ಷೇತ್ರಕ್ಕೆ ಓಡಿ ಬರುತ್ತಾರೆ ಎಂದು ಛಲವಾದಿ ನಾರಾಯಣ ಸ್ವಾಮಿ ಟೀಕಿಸಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಸಿದ್ದು ನಿಜ ಕನಸುಗಳು (Siddu Nijakanasugalu) ಪುಸ್ತಕ ಬಿಡುಗಡೆ ಸಿಟಿ ಸಿವಿಲ್‌ ಕೋರ್ಟ್‌ ತಡೆ (City Civil Court) ನೀಡಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ (Bengaluru) ಪುರಭವನದಲ್ಲಿ ʼಸಿದ್ದು ನಿಜಕನಸುಗಳು ಸಂಪುಟ 1' ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಉನ್ನತ ಶಿಕ್ಷಣ ಸಚಿವ ಡಾ. ಸಿಎನ್‌ ಅಶ್ವತ್ಥನಾರಾಯಣ್  (Minister Ashwath Narayan) ಪುಸ್ತಕವನ್ನು ಬಿಡುಗಡೆಗೊಳಿಸಬೇಕಿತ್ತು. ಪುಸ್ತಕ ಬಿಡುಗಡೆ ವಿಚಾರದ ಚರ್ಚೆ ಆಗುತ್ತಿದ್ದಂತೆ ಸಿದ್ದರಾಮಯ್ಯ (Former CM Siddaramaiah) ಪುತ್ರ ಯತೀಂದ್ರ (Yathindra Siddaramaiah) ಕೋರ್ಟ್‌ ಮೊರೆ ಹೋಗಿ ತಡೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ನಗರದ ಸಿಟಿ ಸಿವಿಲ್‌ ಕೋರ್ಟ್‌ ಪುಸ್ತಕ ಬಿಡುಗಡೆಗೆ ತಡೆ ನೀಡಿದೆ.


ಪುಸ್ತಕ ಬಿಡುಗಡೆ, ಮಾರಾಟ ಮಾತ್ರವಲ್ಲದೇ ಮಾಧ್ಯಮ ಪ್ರಸಾರಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿ ಮುಂದಿನ ವಿಚಾರಣೆಯನ್ನು ಫೆಬ್ರವರಿ 9ಕ್ಕೆ ಮುಂದೂಡಿದೆ. ಬಿಜೆಪಿ ನಾಯಕರು ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆ ಮಾಡ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಟೌನ್​​ಹಾಲ್ ಬಳಿ ಪ್ರತಿಭಟನೆ ನಡೆಸಿದ್ದರು. ಕೋರ್ಟ್ ತಡೆಯಾಜ್ಞೆ ನೀಡಿದೆ. ಆದ್ದರಿಂದ ಕಾರ್ಯಕ್ರಮ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ತಡೆದು ವಶಕ್ಕೆ ಪಡೆದುಕೊಂಡು ಸ್ಥಳದಿಂದ ಕರೆದುಕೊಂಡು ಹೋದರು.


ಇದನ್ನೂ ಓದಿ: Siddaramaiah: ಕೋಲಾರದಿಂದಲೇ ಸ್ಪರ್ಧೆ ಮಾಡುತ್ತೇನೆ; ಅಧಿಕೃತವಾಗಿ ಘೋಷಿಸಿದ ಮಾಜಿ ಸಿಎಂ ಸಿದ್ದರಾಮಯ್ಯ


ಕೈ ಕೈ ಮಿಲಾಯಿಸೋ ಹಂತಕ್ಕೆ ಹೋದ ಪ್ರತಿಭಟನೆ


ಇತ್ತ, ಕಾರ್ಯಕ್ರಮದ ರದ್ದಾಗುತ್ತಿದ್ದಂತೆ ಟೌನ್ ಹಾಲ್ ಮುಂಭಾಗಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಸಿದ್ದರಾಮಯ್ಯಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡರು.


ಇದಕ್ಕೂ ಮುನ್ನ, ಸಿದ್ದು ನಿಜ ಜೀವನಗಳ ಪುಸ್ತಕ ಕುರಿತ ಬ್ಯಾನರ್ ಹಾಗೂ ಭಿತ್ತಿ ಪತ್ರ ಹಿಡಿದು ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದರು. ಈ ವೇಳೆ ಅದನ್ನು ಕಿತ್ತುಕೊಳ್ಳಲು ಕಾಂಗ್ರೆಸ್​ ಕಾರ್ಯಕರ್ತರು ಮುಂದಾದರು. ಪರಿಣಾಮ ಕೈ ಹಾಗೂ ಕಮಲ ಕಾರ್ಯಕರ್ತರ ನಡುವೆ ತಳ್ಳಾಟ - ನೂಕಾಟ ನಡೆಯಿತು.


ಸಿದ್ದರಾಮಯ್ಯಗೆ ಹೆದರಿಕೆ ಶುರುವಾಗಿದೆ ಎಂದ ಛಲವಾದಿ ನಾರಾಯಣ ಸ್ವಾಮಿ


ಆ ಬಳಿಕ ಪುಸ್ತಕ ಬಿಡುಗಡೆಗೆ ನ್ಯಾಯಾಲಯದಿಂದ ತಡೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜರು ಕೋರ್ಟ್ ಆದೇಶದ ಬಗ್ಗೆ ಮಾಹಿತಿ ಪಡೆದುಕೊಂಡರು. ಇತ್ತ ಕೋರ್ಟ್ ತಡೆಯಾಜ್ಞೆ ಹಿನ್ನೆಲೆಯಲ್ಲಿ ಸಚಿವ ಡಾ ಅಶ್ವತ್ಥ್ ನಾರಾಯಣ್ ಅವರು ಕೂಡ ಕಾರ್ಯಕ್ರಮಕ್ಕೆ ಗೈರಾದರು.


ಇನ್ನು, ಅಶ್ವತ್ಥ್ ನಾರಾಯಣ್ ಅವರೇ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಪುಸ್ತಕ ಲೋಕಾರ್ಪಣೆ ಮಾಡಬೇಕಿತ್ತು. ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ ಬಂದ ಕಾರಣ ಟೌನ್​ಹಾಲ್​ ಬಳಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಚಲವಾದಿ ನಾರಾಯಣಸ್ವಾಮಿ ಅವರು, ಮುಖ್ಯ ವೇದಿಕೆಗೆ ಆಗಮಿಸದೆ ಕೊಠಡಿಗೆ ತೆರಳಿದರು.


ಇದನ್ನೂ ಓದಿ: Siddaramaiah: ಮೋದಿ ಎದುರು ತುಟಿ ಬಿಚ್ಚಲಾಗದ ಸಿಎಂ ಬೊಮ್ಮಾಯಿಯನ್ನ ಹುಲಿ-ಸಿಂಹಕ್ಕೆ ಹೋಲಿಸಲು ಆಗುತ್ತಾ? ಮಾಜಿ ಸಿಎಂ ಸಿದ್ದರಾಮಯ್ಯ


ಕೋಲಾರದಲ್ಲಿ ಸಿದ್ದರಾಮಯ್ಯ ಸೋಲ್ತಾರೆ


ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಸ್ವಾಮಿ ಅವರು, ಈ ಪುಸ್ತಕ ಬಿಡುಗಡೆ ಯಿಂದ ಸಿದ್ದರಾಮಯ್ಯಗೆ ಹೆದರಿಕೆ ಶುರುವಾಗಿದೆ. ಕೋರ್ಟ್ ನಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡುತ್ತಿದ್ದೇವೆ. ಕೋಲಾರದಲ್ಲಿ ಸಿದ್ದರಾಮಯ್ಯ ಸೋಲು ಶತಸಿದ್ಧ. ಸಿದ್ದರಾಮಯ್ಯನವರು ಕೋಲಾರ ಕ್ಷೇತ್ರಕ್ಕೆ ಯಾಕೆ ಹೋದರೋ ಗೊತ್ತಿಲ್ಲ. ಅವರನ್ನು ಸ್ವ-ಪಕ್ಷದವರೇ ಸೋಲಿಸುತ್ತಾರೆ. ಮತ್ತೆ ಸಿದ್ದರಾಮಯ್ಯನವರು ಅಲ್ಲಿಂದ ವರುಣಾ ಕ್ಷೇತ್ರಕ್ಕೆ ಓಡಿ ಬರುತ್ತಾರೆ ಎಂದು ಹೇಳಿದರು.

Published by:Sumanth SN
First published: