HOME » NEWS » State » COURT GIVES STAY FOR DASARAHALLI SLUM CLEARANCE MAK

ದಾಸರಹಳ್ಳಿ ಸ್ಲಂ ತೆರವಿಗೆ ತಡೆಯಾಜ್ಞೆ ನೀಡಿದ ಕೋರ್ಟ್; ನಿಟ್ಟುಸಿರು ಬಿಟ್ಟ ಸ್ಲಂ ನಿವಾಸಿಗಳು!

8 ವಾರಗಳ ಕಾಲ ತೆರವು ಸ್ಥಗಿತಗೊಳಿಸುವಂತೆ ಕೋರ್ಟ್ ಈಗ ಆದೇಶ ಹೊರಡಿಸಿದೆ. ಹೀಗಾಗಿ ಸ್ಲಂ ಬೋರ್ಡ್ ಅಧಿಕಾರಿಗಳು ತೆರವು ಕಾರ್ಯ ನಿಲ್ಲಿಸಿದ್ದಾರೆ. ಆದ್ರೆ ನಿವಾಸಗಳ ಮನೆ ಸಾಮಾಗ್ರಿಗಳನ್ನು ಎಳೆದು ರಸ್ತೆಯಲ್ಲಿಡಲಾಗಿದೆ.

news18-kannada
Updated:February 11, 2021, 7:07 PM IST
ದಾಸರಹಳ್ಳಿ ಸ್ಲಂ ತೆರವಿಗೆ ತಡೆಯಾಜ್ಞೆ ನೀಡಿದ ಕೋರ್ಟ್; ನಿಟ್ಟುಸಿರು ಬಿಟ್ಟ ಸ್ಲಂ ನಿವಾಸಿಗಳು!
ದಾಸರಹಳ್ಳಿ ಸ್ಲಂ.
  • Share this:
ಬೆಂಗಳೂರು (ಫೆಬ್ರವರಿ 11); ಅವ್ರು ಬಡವರು ನಿರಾಶ್ರಿತರು ಅಂತಾ ಸರ್ಕಾರ ಸ್ಲಂಬೋರ್ಡ್‌ನಲ್ಲಿ ಮನೆ ಮಾಡಿಕೊಟ್ಟಿತ್ತು. ಆದ್ರೆ ಈಗ ಅದೇ ಸರ್ಕಾರ ಇವತ್ತು ಅವರನ್ನು ಏಕಾಏಕಿ ಮನೆಯಿಂದ ಹೊರದಬ್ಬುವ ಕೆಲ್ಸ ಮಾಡಿತ್ತು. ಕಣ್ಣೀರ ಕೋಡಿ ಆಕ್ರೋಶದ ಮಾತು, ಆತ್ಮಹತ್ಯೆ ಮತ್ತು ಬೆಂಕಿ ಎಲ್ಲವೂ ಇಡೀ ಸ್ಲಂ ಅಂಗಳವನ್ನು  ರಣಾಂಗಣವಾಗಿ ಮಾಡಿತ್ತು. ನೀವು ನಮ್ಮನ್ನು ಮನೆಯಿಂದ ಹೊರದಬ್ಬಿದ್ರೇ ಇಲ್ಲಿಯೇ ಬಿಲ್ಡಿಂಗ್ ಹಾರ‍್ತೀವಿ. ನಾವು ವಿಷ ಕುಡೀವಿತಿ. ಇದೊಂದೆ ಮನೆ ನಮ್ಮ ಪಾಲಿಗಿರೋದು ಪುಟಾಣಿ ಮಕ್ಕಳನ್ನು ಕಟ್ಕೊಂಡು ನಾವು ಎಲ್ಲಿ ಹೋಗೋದು. ಹೀಗೆ ಕಣ್ಣೀರು ತುಂಬಿದ ಆಕ್ರೋಶದ ಮಾತುಗಳು. ಆದ್ರೇ ಅದನ್ನು ಕೇಳುವ ಗೋಜಿಗೆ ಹೋಗದ ಖಾಕಿ ಹಾಗೂ ಸ್ಲಂ ಬೋರ್ಡ್‌ನವರು ನೋಡ ನೋಡುತ್ತಿದ್ದಂತೆ ಮನೆಯೊಳಗಿನ ಸಾಮಾಗ್ರಿಗಳನ್ನು ಬೀದಿಗೆ ಹಾಕಿದ್ರು. ಅಂದಹಾಗೆ ಇದು ನಡೆದಿದ್ದು ಅಗ್ರಹಾರ ದಾಸರಹಳ್ಳಿ ಸ್ಲಂ ನಲ್ಲಿ. 65 ಮನೆಯಲ್ಲಿ ಒಟ್ಟು 17 ಮನೆಯವರ ಸಾಮಾಗ್ರಿಯನ್ನು ಮುಲಾಜಿಲ್ಲದೇ ಹೊರಹಾಕಿದ್ರು. ಎಪ್ಪತ್ತು ವರ್ಷದ ಅಜ್ಜಿ, ಕಣ್ಣು ಕಾಣದ ಇಬ್ಬರು ಕುರುಡ ದಂಪತಿ ಸೇರಿದಂತೆ ಅನೇಕ ಬಡ ಕುಟುಂಬ ಬೀದಿಗೆ ಬಂದು ನಿಲ್ಲುವಂತಾಯ್ತು. 

17 ಮನೆಯವರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎನ್ನುವ ಕಾರಣಕ್ಕೆ ಸ್ಥಳೀಯ  ಬಿಜೆಪಿ ಕೌನ್ಸಿಲರ್ ಶಿಲ್ಪಾ ಶ್ರೀಧರ್  ನಮ್ಮನ್ನು ಎತ್ತಂಗಡಿ ಮಾಡಿಸೋದಕ್ಕೆ ಪ್ರಯತ್ನಿಸುತ್ತಿದ್ದಾರೆ ಅಂತಾ ಕೆಲವರು ಆರೋಪಿಸಿದ್ರು. ಇನ್ನು ತುಂಬು ಗರ್ಭಿಣಿ ಮನೆಯಲ್ಲಿ ಇದ್ದಾಳೆ ಮನೆಯಿಂದ ಕಳಿಸಬೇಡಿ ಅಂತಾ ಬೇಡಿದ್ರೂ ಸ್ಲಂ ಬೋರ್ಡ್ ಅಧಿಕಾರಿಗಳು ಕೇಳದೇ ಇದ್ದಾರೆ.

ಬಾಬು ಅನ್ನೋ ವ್ಯಕ್ತಿ ಮನೆಯೊಳಗೆ ಸಿಲಿಂಡರ್‌ಗೆ ಬೆಂಕಿ ಹಚ್ಚಿ ಆತ್ಮಹತ್ಯಗೆ ಯತ್ನಿಸಿದ ಘಟನೆಯೂ ನಡೆಯಿತು. ಆದ್ರೇ ಇಷ್ಟೆಲ್ಲ ಘಟನೆ ನಡೆದ್ರೂ ಸಚಿವ ಸೋಮಣ್ಣ ಮಾತ್ರ, ಇವರಿಗೆಲ್ಲ ಎರಡು ಎರಡು ಮನೆ ಇದೆ, ಅದಕ್ಕೆ ತೆರವು ಮಾಡ್ತಾ ಇದ್ದೀವಿ ಅಂತಾ ಹೇಳಿದ್ರು.

ಇನ್ನು ಇಷ್ಟೆಲ್ಲ ಕಿರಿಕ್‌ಗೆ ಕಾರಣವಾಗಿದ್ದು ಬಿಬಿಎಂಪಿ ಎಡವಟ್ಟು ಅನ್ನೋದು ಸ್ವತಃ ಸ್ಲಂ ಬೋರ್ಡ್ ಅಧಿಕಾರಿಯೇ ಬಾಯಿಬಿಟ್ರು. ಹಳೆ ಲಿಸ್ಟ್‌ನಲ್ಲಿ ಇವ್ರ ಹೆಸ್ರು ಇದ್ರೂ ಹೊಸ ಲಿಸ್ಟ್‌ನಲ್ಲಿ ಇವ್ರ ಹೆಸ್ರು ಕೈಬಿಟ್ಟು ತಮ್ಗೆ ಬೇಕಾದವರ ಹೆಸ್ರನ್ನು ಸೇರಿಸಿದ್ದು ಗಮನಕ್ಕೆ ಬಂದಿದೆ. ಇನ್ನು ಮಧ್ಯಾಹ್ನದ ವೇಳೆಗೆ ಹೈಕೋರ್ಟ್ ಮತ್ತೆ ಯಥಾಸ್ಥಿತಿ ಕಾಪಾಡುವಂತೆ ಆದೇಶ ಕೊಟ್ಟಿತ್ತು.

ಇದನ್ನೂ ಓದಿ: Siddaramaiah: ಮತ್ತೆ ಸಿಎಂ ಆಗುವ ಇಂಗಿತ, ಎರಡು ವರ್ಷ ಕಾಯಿರಿ ನಮ್ಮದೇ ಸರ್ಕಾರ ಬರುತ್ತೆ ಎಂದ ಸಿದ್ದರಾಮಯ್ಯ

8 ವಾರಗಳ ಕಾಲ ತೆರವು ಸ್ಥಗಿತಗೊಳಿಸುವಂತೆ ಕೋರ್ಟ್ ಈಗ ಆದೇಶ ಹೊರಡಿಸಿದೆ. ಹೀಗಾಗಿ ಸ್ಲಂ ಬೋರ್ಡ್ ಅಧಿಕಾರಿಗಳು ತೆರವು ಕಾರ್ಯ ನಿಲ್ಲಿಸಿದ್ದಾರೆ. ಆದ್ರೆ ನಿವಾಸಗಳ ಮನೆ ಸಾಮಾಗ್ರಿಗಳನ್ನು ಎಳೆದು ರಸ್ತೆಯಲ್ಲಿಡಲಾಗಿದೆ.
ಅದನ್ನು ಈಗ ಯಾರು ಮನೆಯೊಳಕ್ಕೆ ಸೇರಿಸಲಿದ್ದಾರೆ ಅಂತ ಸ್ಲಂ ನಿವಾಸಿಗಳ ಪರ ವಕೀಲ ಶಂಕರ್ ಅಸಮಾಧಾನ ಹೊರ ಹಾಕಿದರು. ಯಾರದ್ದೋ ಎಡವಟ್ಟು ಯಾರದ್ದೋ ಬದುಕು ಬೀದಿಗೆ. ತಮ್ಮ ಹುಳುಕು ಮುಚ್ಚಿಕೊಳ್ಳೋಕೆ ಸಮರ್ಥನೆ ಮಾಡಿಕೊಳ್ಳುವ ಸಚಿವರು ಬೇರೆ. ನಿಜಕ್ಕೂ ಇವತ್ತಿನ ಘಟನೆ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.

(ವರದಿ- ಆಶಿಕ್ ಮುಲ್ಕಿ)
Published by: MAshok Kumar
First published: February 11, 2021, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories