• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಲೈಂಗಿಕ ಕಿರುಕುಳ ಆರೋಪ, ಯೂತ್ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷನಿಗೆ ಬಂಧನ ಭೀತಿ! ಬಿವಿ ಶ್ರೀನಿವಾಸ್ ಜಾಮೀನು ಅರ್ಜಿ ವಜಾ

Bengaluru: ಲೈಂಗಿಕ ಕಿರುಕುಳ ಆರೋಪ, ಯೂತ್ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷನಿಗೆ ಬಂಧನ ಭೀತಿ! ಬಿವಿ ಶ್ರೀನಿವಾಸ್ ಜಾಮೀನು ಅರ್ಜಿ ವಜಾ

ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್

ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್

ಶ್ರೀನಿವಾಸ್ ವಿರುದ್ಧ ಅಸ್ಸಾಂನಲ್ಲಿ ಪ್ರಕರಣ ದಾಖಲಾಗಿದ್ದು, ಅಮಾನತುಗೊಂಡಿರುವ ಅಸ್ಸಾಂ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಎಂಬವರು ಬಿವಿ ಶ್ರೀನಿವಾಸ್ ವಿರುದ್ಧ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು.

  • Share this:

ಬೆಂಗಳೂರು: ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿವಿ ಶ್ರೀನಿವಾಸ್ (BV Srinivas) ಅವರು ಸಲ್ಲಿಕೆ ಮಾಡಿದ್ದ ನಿರೀಕ್ಷಣಾ ಜಾಮೀನಿಗೆ (Anticipatory Bail) ಅರ್ಜಿಯನ್ನು ಕೋರ್ಟ್​ ವಜಾ ಮಾಡಿದೆ. ಅಸ್ಸಾಂನಲ್ಲಿ (Assam) ಮಹಿಳಾ ಘಟಕದ ಅಧ್ಯಕ್ಷೆ ಗೌರವಕ್ಕೆ ಧಕ್ಕೆ ತಂದ ಆರೋಪ ಶ್ರೀನಿವಾಸ್​ ಅವರ ಕೇಳಿ ಬಂದಿತ್ತು. ಈ ಸಂಬಂಧ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿಗೆ (Bengaluru) ಬಂದಿದ್ದ ಅಸ್ಸಾಂ ಪೊಲೀಸರು, ಯೂತ್ ಕಾಂಗ್ರೆಸ್ (Youth Congress)​ ಅಧ್ಯಕ್ಷರ ಮನೆಗೆ ನೋಟಿಸ್​ ಅಂಟಿಸಿದ್ದರು. ಆ ಬಳಿಕ ಬಿವಿ ಶ್ರೀನಿವಾಸ್​ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್​​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಬೆಂಗಳೂರಿನ 72ನೇ ಸಿಸಿಎಚ್‌ ಕೋರ್ಟ್ ಅರ್ಜಿಯನ್ನು ವಿಚಾರಣೆ ನಡೆಸಿ, ಬಿವಿ ಶ್ರೀನಿವಾಸ್​ ಅವರ ಮನವಿಯನ್ನು ತಿರಸ್ಕರಿಸಿ ಜಾಮೀನು ಅರ್ಜಿಯನ್ನು ವಜಾ ಮಾಡಿ ಆದೇಶ ನೀಡಿದೆ.


ಶ್ರೀನಿವಾಸ್​ ಬಂಧನಕ್ಕೆ ಬೆಂಗಳೂರಿಗೆ ಬಂದಿದ್ದ ಅಸ್ಸಾಂ ಪೊಲೀಸರು


ಏಪ್ರಿಲ್​ 23ರಂದು ಬೆಂಗಳೂರಿಗೆ ಶ್ರೀನಿವಾಸ್ ಅವರನ್ನು ಹುಡುಕಿ ಬಂದಿದ್ದ ಅಸ್ಸಾಂ ಪೊಲೀಸರು, ಶ್ರೀನಿವಾಸ್​ ಮನೆಯಲ್ಲಿ ಇಲ್ಲದ ಕಾರಣ ಮನೆಗೆ ಎದುರು ನೋಟಿಸ್ ಅಂಟಿಸಿದ್ದರು.


ಇದನ್ನೂ ಓದಿ: Geetha Shivarajkumar: ಕಾಂಗ್ರೆಸ್​ ಪರ ಶಿವಣ್ಣ ಪ್ರಚಾರ ಮಾಡ್ತಾರಾ? ಕೈ ಸೇರ್ಪಡೆ ಬಳಿಕ ಗೀತಾ ಶಿವರಾಜ್​ಕುಮಾರ್ ಮೊದಲ ರಿಯಾಕ್ಷನ್​​


ಇನ್ನು, ಶ್ರೀನಿವಾಸ್ ವಿರುದ್ಧ ಅಸ್ಸಾಂನಲ್ಲಿ ಪ್ರಕರಣ ದಾಖಲಾಗಿದ್ದು, ಅಮಾನತುಗೊಂಡಿರುವ ಅಸ್ಸಾಂ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷೆ ಅಂಕಿತಾ ದತ್ತಾ ಎಂಬವರು ಬಿವಿ ಶ್ರೀನಿವಾಸ್ ವಿರುದ್ಧ ಕಿರುಕುಳದ ಆರೋಪ ಮಾಡಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಅಸ್ಸಾಂ ಪೊಲೀಸರು ಬಿವಿ ಶ್ರೀನಿವಾಸ್ ಬಂಧನಕ್ಕೆ ಬೆಂಗಳೂರಿಗೆ ಬಂದಿದ್ದರು.




ಲಿಂಗ ತಾರತಮ್ಯ ಮಾಡಿ ಕಿರುಕುಳ ನೀಡದ ಆರೋಪ


ಬಿವಿ ಶ್ರೀನಿವಾಸ್ ನೀಡುತ್ತಿರುವ ಕಿರುಕುಳದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಂಕಿತಾ ದತ್ತಾ ಅಸಮಾಧಾನ ಹೊರ ಹಾಕಿದ್ದಾರೆ.


ಈ ಬಗ್ಗೆ ಸಾಲು ಸಾಲು ಟ್ವೀಟ್ ಮಾಡಿದ್ದ ಅಂಕಿತಾ ದತ್ತಾ, ಹೆಣ್ಣು ಎಂಬ ಕಾರಣಕ್ಕೆ ಸತತವಾಗಿ ನನಗೆ ಕಿರುಕುಳ ಕೊಡಲಾಗಿತ್ತು. ಲಿಂಗ ತಾರತಮ್ಯ ಮಾಡಿ ಮಾನಸಿಕ ಕಿರುಕುಳ ನೀಡಿದ್ದಾರೆ. ನಿಮ್ಮ ಮದ್ಯ ಸೇವನೆ ಮಾಡ್ತೀರಾ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದರು ಎಂದು ಅಂಕಿತಾ ದತ್ತಾ ಆರೋಪಿಸಿದ್ದಾರೆ.

top videos
    First published: