ನಟಿ ಶೃತಿ ಹರಿಹರನ್​ಗೆ ಹಿನ್ನೆಡೆ: ಮಾನನಷ್ಟ ಮೊಕದ್ದಮೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Actor Shruti Hariharn: ವಿಸ್ಮಯ ಚಿತ್ರದ ಶೂಟಿಂಗ್​ ವೇಳೆ ನಟ ಅರ್ಜುನ್​ ಸರ್ಜಾ ಅನುಚಿತವಾಗಿ ವರ್ತಿಸಿದ್ದರು ಎಂದು ಅವರು ಮೀಟೂ ಆರೋಪವನ್ನು ಹೊರಿಸಿದ್ದರು. ತಮ್ಮ ವಿರುದ್ಧ ಗುರುತರ ಆರೋಪಹೊರಿಸಿದ್ದ ನಟಿ ಆರೋಪವನ್ನು ನಟ ಅರ್ಜುನ್​ ಸರ್ಜಾ ನಿರಾಕರಿಸಿದ್ದರು.

Seema.R | news18-kannada
Updated:August 26, 2019, 12:30 PM IST
ನಟಿ ಶೃತಿ ಹರಿಹರನ್​ಗೆ ಹಿನ್ನೆಡೆ: ಮಾನನಷ್ಟ ಮೊಕದ್ದಮೆ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ಶ್ರುತಿ ಹರಿಹರನ್
  • Share this:
ಬೆಂಗಳೂರು (ಆ.22): ತಮ್ಮ ಮೇಲೆ ಹೂಡಿರುವ ಮಾನನಷ್ಟ ಮೊಕ್ಕದ್ಧಮೆಯನ್ನು ರದ್ದುಗೊಳಿಸಬೇಕು ಎಂದು ನಟಿ ಶೃತಿ ಹರಿಹರನ್​ ಸಲ್ಲಿಸಿದ್ದ ಅರ್ಜಿಯನ್ನು 23ನೇ ಹೆಚ್ಚುವರಿ ನ್ಯಾಯಾಲಯ ವಜಾಗೊಳಿಸಿದೆ. ಈ ಮೂಲಕ ನಟಿ ಶೃತಿ ಹರಿಹರನ್​ಗೆ ಭಾರೀ ಹಿನ್ನೆಡೆಯಾಗಿದೆ.

'ವಿಸ್ಮಯ' ಚಿತ್ರದ ಶೂಟಿಂಗ್​ ವೇಳೆ ನಟ ಅರ್ಜುನ್​ ಸರ್ಜಾ ಅನುಚಿತವಾಗಿ ವರ್ತಿಸಿದ್ದರು ಎಂದು ಅವರು ಮೀಟೂ ಆರೋಪವನ್ನು ಹೊರಿಸಿದ್ದರು. ತಮ್ಮ ವಿರುದ್ಧ ಗುರುತರ ಆರೋಪಹೊರಿಸಿದ್ದ ನಟಿ ಆರೋಪವನ್ನು ನಟ ಅರ್ಜುನ್​ ಸರ್ಜಾ ನಿರಾಕರಿಸಿದ್ದರು.

ಫಿಲ್ಮ್​ ಚೇಂಬರ್​ನಲ್ಲಿಯೂ ತಾರಕ್ಕೇರಿದ್ದ ಈ ವಿಷಯದಲ್ಲಿ ತಮ್ಮ ತೇಜೋವಧೆ ಮಾಡಲಾಗಿದೆ ಎಂದು ಆರೋಪಿಸಿ ನಟ ಅರ್ಜುನ್​ ಸರ್ಜಾ ಮೂರನೇ ವ್ಯಕ್ತಿಮೂಲಕ ಮಾನನಷ್ಟ ಮೊಕ್ಕದ್ದಮೆ ದಾಖಲಿಸಿದ್ದರು. ತಮ್ಮ ಅಳಿಯ ಧೃವ ಸರ್ಜಾ ಮೂಲಕ 5 ಕೋಟಿ ರೂ ಮಾನನಷ್ಟ ಮೊಕ್ಕದ್ಧಮೆಯನ್ನು ಅರ್ಜುನ್​ ಸರ್ಜಾ ದಾಖಲಿಸಿದ್ದರು.

ಇದನ್ನು ಓದಿ: Yash Radhika Pandit: ಕನ್ನಡ ಮರೆತ ರಾಕಿಂಗ್​ ಜೋಡಿ ಯಶ್​​-ರಾಧಿಕಾರನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು..!

ಬಳಿಕ, ಮಾನನಷ್ಟ ಮೊಕದ್ದಮೆ ವಿವಾರಣೆಗೆ ಅರ್ಹವಲ್ಲ. ಈ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ರದ್ದುಗೊಳಿಸುವಂತೆ ಕೋರಿ ನಟಿ ಶೃತಿಹರಿಹರನ್​ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.  ಆದರೆ, ನ್ಯಾಯಾಲಯ ಶೃತಿ ಹರಿಹರನ್​ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಈ ಪ್ರಕರಣದ ಬಳಿಕ ತಮ್ಮ ಬಹುಕಾಲದ ಗೆಳೆಯ ನೃತ್ಯಪಟುವನ್ನು ಮದುವೆಯಾಗಿರುವ ನಟಿ ಶೃತಿ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

First published: August 22, 2019, 6:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading