• Home
  • »
  • News
  • »
  • state
  • »
  • Congress Twitter: ಕಾಂಗ್ರೆಸ್‌ಗೆ ಕೆಜಿಎಫ್‌ ಕಂಟಕ! ಅನುಮತಿ ಇಲ್ಲದೇ ಹಾಡು ಬಳಸಿದ್ದಕ್ಕೆ ಟ್ವಿಟರ್ ಅಕೌಂಟ್ ಬ್ಲಾಕ್!

Congress Twitter: ಕಾಂಗ್ರೆಸ್‌ಗೆ ಕೆಜಿಎಫ್‌ ಕಂಟಕ! ಅನುಮತಿ ಇಲ್ಲದೇ ಹಾಡು ಬಳಸಿದ್ದಕ್ಕೆ ಟ್ವಿಟರ್ ಅಕೌಂಟ್ ಬ್ಲಾಕ್!

ಕಾಂಗ್ರೆಸ್‌ ಟ್ವಿಟರ್‌ಗೆ ಕಂಟಕ

ಕಾಂಗ್ರೆಸ್‌ ಟ್ವಿಟರ್‌ಗೆ ಕಂಟಕ

ಕೆಜಿಎಫ್‌ ಸಿನಿಮಾದಿಂದಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಕಂಟಕ ಬಂದೊದಗಿದೆ. ಅನುಮತಿ ಇಲ್ಲದೇ ಕೆಜಿಎಫ್‌ ಹಾಡನ್ನು ಬಳಸಿಕೊಂಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಐಎನ್‌ಸಿ ಟ್ವಿಟರ್ (INC Twitter) ಅಕೌಂಟ್ ಬ್ಲಾಕ್ ಮಾಡಲು ಬೆಂಗಳೂರಿನ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ಕೆಜಿಎಫ್‌ (KGF) ಸಿನಿಮಾದ ಬಗ್ಗೆ ಎಲ್ಲರಿಗೂ ಗೊತ್ತು. ಕೆಜಿಎಫ್‌ ಚಾಪ್ಟರ್ 1 ಹಾಗೂ ಕೆಜಿಎಫ್‌ ಚಾಪ್ಟರ್ 2 (KGF Chapter 1 and KGF Chapter 2) ಈ ಎರಡೂ ಸಿನಿಮಾವೂ ಭಾರತೀಯ ಚಿತ್ರರಂಗದಲ್ಲಿ (Indian cinema) ಧೂಳೆಬ್ಬಿಸಿದ ಸಿನಿಮಾ. ಕನ್ನಡ ಚಿತ್ರರಂಗಕ್ಕೆ ಹೊಸ ತಿರುವು ನೀಡಿದ ಸಿನಿಮಾಗಳು. ಆದರೆ ಇದೇ ಕೆಜಿಎಫ್‌ ಸಿನಿಮಾ ಇದೀಗ ಕಾಂಗ್ರೆಸ್ (Congress) ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಕೆಜಿಎಫ್‌ 2 ಸಿನಿಮಾದ ಸುಲ್ತಾನ್ ಹಾಡನ್ನು (Sultan Song) ಬಳಸಿಕೊಳ್ಳಲಾಗಿತ್ತು. ಇದೇ ಹಾಡಿನಿಂದಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಕಂಟಕ ಬಂದೊದಗಿದೆ. ಅನುಮತಿ ಇಲ್ಲದೇ ಕೆಜಿಎಫ್‌ ಸಿನಿಮಾ ಹಾಡನ್ನು ಬಳಸಿಕೊಂಡಿದ್ದ ವಿವಾದಕ್ಕೆ ಸಂಬಂಧಿಸಿದಂತೆ ಐಎನ್‌ಸಿ ಟ್ವಿಟರ್ (INC Twitter) ಅಕೌಂಟ್ ಬ್ಲಾಕ್ ಮಾಡಲು ಬೆಂಗಳೂರಿನ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ.


ಭಾರತ್ ಜೋಡೋ ವಿಡಿಯೋಗೆ ಕೆಜಿಎಫ್ ಹಾಡು ಬಳಕೆ


ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ವಿಡಿಯೋಗಳಿಗೆ ಯಶ್‌ ಅಭಿನಯದ ಕೆಜಿಎಫ್‌ ಸಿನಿಮಾದ ಹಾಡುಗಳನ್ನು ಬಳಕೆ ಮಾಡಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಅನುಮತಿ ಪಡೆಯದೇ ಈ ಹಾಡು ಬಳಕೆ ಮಾಡಲಾಗಿದೆ ಅಂತ ಆರೋಪಿಸಿ ಎಂಟಿಆರ್‌ ಮ್ಯೂಸಿಕ್ ಕಂಪನಿ ಕಾನೂನು ಸಮರ ಸಾರಿತ್ತು.


ರಾಹುಲ್ ಗಾಂಧಿ ಸೇರಿ ಪ್ರಮುಖರ ಮೇಲೆ ಎಫ್ಐಆರ್‌


ಎಂಟಿಆರ್‌ ಮ್ಯೂಸಿಕ್ ಕಂಪನಿಯ ಹಾಡುಗಳನ್ನು ಬಳಸಿದ ಆರೋಪದಡಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥೆ ಸುಪ್ರಿಯಾ ಶ್ರೀನೆಟ್ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕೃತಿಸ್ವಾಮ್ಯ ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಎಫ್ಐಆರ್‌ ಕೂಡ ದಾಖಲಾಗಿತ್ತು.


ಇದನ್ನೂ ಓದಿ: Satish Jarkiholi Hindu Controversy: ಹಿಂದೂ ಪದದ ಅರ್ಥವೇ ಅಶ್ಲೀಲ! ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ


ದೂರಿನಲ್ಲಿ ಹೇಳಿದ್ದೇನು?


ಕಳೆದ ಶುಕ್ರವಾರ, ನವೆಂಬರ್ 4 ರಂದು ಯಶವಂತಪುರ ಪೊಲೀಸ್ ಠಾಣೆಗೆ ಎಂಆರ್‌ಟಿ ಮ್ಯೂಸಿಕ್‌ ಕಂಪನಿಯನ ಎಂ. ನವೀನ್ ಕುಮಾರ್ ದೂರು ನೀಡಿದ್ದರು. ದೇಶದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ವೇಳೆ ಕೆಜಿಎಫ್‌ನ ಹಿಂದಿ, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಜೈರಾಮ್ ರಮೇಶ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಯಾತ್ರೆಯ ಎರಡು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ, ಇದರಲ್ಲಿ ಕೆಜಿಎಫ್ 2 ಚಿತ್ರದ ಜನಪ್ರಿಯ ಹಾಡುಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.


ಬೆಂಗಳೂರಿನ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ


ಭಾರತ್‌ ಜೋಡೋ ಯಾತ್ರೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕೆಜಿಎಫ್‌- 2 ಸಿನಿಮಾದ ಹಾಡುಗಳನ್ನು ಬಳಸಿಕೊಂಡಿದೆ. ಇದಕ್ಕೆ ಎಂಆರ್‌ಟಿ ಕಂಪನಿಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ಕೋರ್ಟ್ ಮಹತ್ವದ ಆದೇಶ ನೀಡಿದೆ.


ಇದನ್ನೂ ಓದಿ: Chandrashekhar Death Case: ಡಯಾಟಮ್ ವರದಿಯಲ್ಲಿದ್ಯಾ ಚಂದ್ರಶೇಖರ್ ಸಾವಿನ ಕಾರಣ? ವಿನಯ್ ಗುರೂಜಿಯಿಂದಲೂ ಮಾಹಿತಿ ಪಡೆದ ಪೊಲೀಸರು


ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟ್ವಿಟರ್ ಬ್ಲಾಕ್


ಇಂದು ವಿಚಾರಣೆ ನಡೆಸಿದ ಬೆಂಗಳೂರಿನ ಸೆಷನ್ಸ್ ಕೋರ್ಟ್ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಟ್ವಿಟರ್‌ ಖಾತೆಯನ್ನು (Indian National Congress Twitter Account) ಬ್ಲಾರ್ ಮಾಡುವಂತೆ ಆದೇಶಿಸಿದೆ. ನವೆಂಬರ್ 21ರವರೆಗೆ ಐಎನ್‌ಸಿ ಟ್ವಿಟರ್ ಅಕೌಂಟ್ ಬ್ಲಾಕ್ ಮಾಡುವಂತೆ ಕೋರ್ಟ್ ಆದೇಶಿಸಿದೆ.

Published by:Annappa Achari
First published: