Udupi: ಕಾರ್ ನಲ್ಲಿ ಪೆಟ್ರೋಲ್ ಸುರಿದುಕೊಂಡು ಜೋಡಿ ಆತ್ಮಹತ್ಯೆ; ಇಬ್ಬರ ಪೋಷಕರು ಹೇಳಿದ್ದೇನು?

ನನ್ನ ಮಗ ಈ ರೀತಿ ಮಾಡಿಕೊಳ್ಳುತ್ತಾನೆ ಅಂತ ಎಂದುಕೋಂಡಿರಲೇ ಇಲ್ಲ. ನನ್ನ ಮಗ ತುಂಬ ಮುಗ್ಧ ಸ್ವಭಾವದವನು ಈಗ ಈ ನಿರ್ಧಾರಕ್ಕೆ ಬಂದು ಅನಾಹುತ ಮಾಡಿಕೊಂಡಿದ್ದಾನೆ ಎಂದು ಕಣ್ಣೀರು ಹಾಕಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬಾಡಿಗೆ ಕಾರ್ ನಲ್ಲಿ (Rented Car) ಪೆಟ್ರೋಲ್ (Petrol) ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಜೋಡಿಯ ಪೋಷಕರು ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ್ದಾರೆ. ಉಡುಪಿಯ ಬ್ರಹ್ಮಾವರ ತಾಲೂಕಿನ ಮಂದಾರ್ಥಿ‌ ಸಮೀಪದ ಹೆಗ್ಗುಂಜೆ (Heggunje, Udupi) ಗ್ರಾಮದಲ್ಲಿ ಈ ದುರ್ಘಟನೆ ನಡೆದಿತ್ತು. ಬೆಂಗಳೂರಿನ ಆರ್.ಟಿ.ನಗರದ ಯಶವಂತ್ (23) ಮತ್ತು ಜ್ಯೋತಿ (19) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಇಬ್ಬರು ಮಂಗಳೂರಿನಲ್ಲಿ (Mangaluru) ‌ಬಾಡಿಗೆ ಕಾರು ಪಡೆದು ಹೆಗ್ಗುಂಜೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕಾರಿನ ಹಿಂಬದಿ ಸೀಟಲ್ಲಿ ಕುಳಿತು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು. ಸದ್ಯ ಮಕ್ಕಳ ಮೃತದೇಹ ಕಾಣಲು ಪೋಷಕರು ಉಡುಪಿಗೆ ಬಂದಿದ್ದು, ಇಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಿ ಕುಟುಂಬಸ್ಥರು ಬೆಂಗಳೂರಿಗೆ ಹಿಂದಿರುಗಿದ್ದಾರೆ

ಮಾಧ್ಯಮಗಳ ಜೊತೆ ಮಾತನಾಡಿರುವ ಪೋಷಕರು, ನಮ್ಮ ಮಕ್ಕಳು ಪ್ರೀತಿಯಲ್ಲಿ ಬಿದ್ದಿರುವುದೇ ಗೊತ್ತಿಲ್ಲ. ಪ್ರೀತಿ ವಿಷಯ ಪ್ರಸ್ತಾಪ ಮಾಡಿದ್ದರೆ ಕೂತು ಮಾತಾಡಿ ಮದುವೆ ಆದರೂ ಮಾಡಿಸುತ್ತಿದ್ದೇವು. ಹಣ ಖಾಲಿಯಾಗುವವರೆಗೆ ಸುತ್ತಾಡಿ ಕೈಯಲ್ಲಿ ಹಣ ಇಲ್ಲದಿದ್ದಾಗ ಬದುಕುವ ಧೈರ್ಯ ಇಲ್ಲವಾಯಿತು. ಕಷ್ಟ ಪಟ್ಟು ದುಡಿದು ಸಾಕುವ ತಾಕತ್ತು ಇಲ್ಲದ ಮೇಲೆ ಪ್ರೀತಿ ಮಾಡಿ ಏಕೆ ಓಡಿ ಹೋಗಬೇಕಿತ್ತು ಎಂದು ಪ್ರಶ್ನೆ ಮಾಡುತ್ತಾ ಕಣ್ಣೀರು ಹಾಕಿದ್ದಾರೆ.

ಹುಡುಗಿಯನ್ನು ಕರೆದುಕೊಂಡು ಬಂದು ಶೋಕಿ ಮಾಡಬಾರದು

ಪ್ರೀತಿ ಮಾಡಿ ಹುಡುಗಿಯನ್ನ ಕರೆದುಕೊಂಡು ಹೋಗಿ ಶೋಕಿ ಮಾಡಬಾರದು. ಕೂಲಿ ನಾಲಿ ಮಾಡಿ ಹುಡುಗಿಯನ್ನು ಸಾಕಬೇಕು. ಭಯಬಿದ್ದು ಜೀವ ತೆಗೆದುಕೊಳ್ಳೋದು ತುಂಬಾ ‌ತಪ್ಪು.  ಹುಡುಗಿ ಬಿಕಾಂ ಓದಿದ್ದಾಳೆ ಬುದ್ದಿವಂತೆ ಕೂಡ ಆದರೆ ಭಯದ ಸ್ವಭಾವ.ಎರಡು ವರ್ಷದಿಂದ ಮನೆಯಲ್ಲೇ ಇದ್ಲು ಎಲ್ಲೂ ಆಚೆ ಹೋಗ್ತಿರಲಿಲ್ಲ. ಅದ್ಹೇಗೆ ಈ ಹುಡುಗನೊಂದಿಗೆ ಸಂಪರ್ಕ ಆಯಿತು ಗೊತ್ತಿಲ್ಲ ಎಂದಿದ್ದಾರೆ.

ಇದನ್ನೂ ಓದಿ:  Bengaluru Airport: ಇನ್ಮುಂದೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೆಲಿಕಾಪ್ಟರ್ ನಲ್ಲಿ ಹೋಗಿ; ಎಷ್ಟು ದರ?

ಬುಧವಾರ ಬೆಳಗ್ಗೆ 11.30ಕ್ಕೆ ಇಂಟರ್ ವ್ಯೂ ಹೇಳಿ ಹೊರಗೆ ಹೋದ ಮನೆ ಮಗಳು ಸಂಜೆವರೆಗೂ ಬಂದಿಲ್ಲ. ಮರುದಿನ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಆತ್ಮಹತ್ಯೆ ಗಮನಕ್ಕೆ ಬಂದಿದೆ ಎಂದು ಯುವತಿ ಪೋಷಕರು ಹೇಳಿದ್ದಾರೆ.

12 ಸಾವಿರಕ್ಕೆ ಬಾಡಿಗೆ ಮನೆ ಪಡೆದಿದ್ರು!

ಮಂಗಳೂರಿನಲ್ಲಿ 12 ಸಾವಿರಕ್ಕೆ ಬಾಡಿಗೆ ಮನೆಯಲ್ಲೂ ಇದ್ದಿದ್ದಾರೆ. ತದನಂತರ ಸುತ್ತಾಡಲು ಹೋಗಿ ಹಣ ಖಾಲಿಯಾದ ಮೇಲೆ ಈ ನಿರ್ಧಾರಕ್ಕೆ ಬಂದಿದ್ದಾರೆ. ಸುಮಾರು 20 ರಿಂದ 30 ಸಾವಿರ  ರೂ. ಹಣ ಖರ್ಚು ಮಾಡಿ ಖಾಲಿಯಾಗಿದೆ. ಚೀಟಿಯಲ್ಲಿ ಕೂಡ ಬದುಕಲು ಕಷ್ಟವಾಗಿದೆ. ಮನೆಗೆ ಬಂದರೆ ಮದುವೆ ಮಾಡಿಸುತ್ತಿರೋ ಅನ್ನೋದು ಅನುಮಾನ ಈ ರೀತಿ ಬರೆದಿರೋ ಪತ್ರ ಸಿಕ್ಕಿದೆ.

ಮನೆಯವರಿಗೂ ಈ ಬಗ್ಗೆ ಲೊಕೇಶನ್ ಸಹಿತ ಮೆಸೆಜ್ ರವಾನಿಸಿದ್ದಾರೆ. ಎರಡು ಕುಟುಂಬದ ನಡುವೆ ಅನುಮಾನ ಇಲ್ಲ ‌ಇದ್ದಿದ್ದರೆ ಹೊಡೆದಾಟ ಆಗುತ್ತಿತ್ತು. ಹುಡುಗ ಹುಡುಗಿ ಇಬ್ಬರದ್ದು ತಪ್ಪಿದೆ ಈ ತಪ್ಪಿನಿಂದ ಈ ಅನಾಹುತ ‌ನಡೆದಿದೆ ಎಂದು ನ್ಯೂಸ್ 18 ಕನ್ನಡ ಹುಡುಗಿ ಸಂಬಂಧಿ ಧನರಾಜು ಹಾಗೂ ಸೀನಪ್ಪ ಹೇಳಿದ್ದಾರೆ.

ನನ್ನ ಮುಗ್ಧ ಸ್ವಭಾವದವನು

ಇನ್ನು ನ್ಯೂಸ್ 18 ಜೊತೆ ಮಾತನಾಡಿದ ಮೃತ ಯಶವಂತ್ ತಂದೆ ವೆಂಕಟರಾವ್, ನನ್ನ ಮಗ ಈ ರೀತಿ ಮಾಡಿಕೊಳ್ಳುತ್ತಾನೆ ಅಂತ ಎಂದುಕೋಂಡಿರಲೇ ಇಲ್ಲ. ನನ್ನ ಮಗ ತುಂಬ ಮುಗ್ಧ ಸ್ವಭಾವದವನು ಈಗ ಈ ನಿರ್ಧಾರಕ್ಕೆ ಬಂದು ಅನಾಹುತ ಮಾಡಿಕೊಂಡಿದ್ದಾನೆ ಎಂದು ಕಣ್ಣೀರು ಹಾಕಿದರು.

ಬುಧವಾರ ಮಧ್ಯಾಹ್ನ ಲ್ಯಾಪ್ ಟ್ಯಾಪ್ ತೆಗೆದುಕೊಂಡು ಕಂಪ್ಯೂಟರ್ ತರಗತಿಗೆ ಎಂದು ಹೋಗಿದ್ದಾನೆ. ಆ ಬಳಿಕ ಮೊಬೈಕ್ ಸ್ವಿಚ್ ಆಫ್ ಮಾಡಿದವ ಈವರೆಗೂ ಆನ್ ಮಾಡಿಲ್ಲ. ಬೇರೆಯವರ ಮೊಬೈಲ್ ನಿಂದ 3 ಗಂಟೆ ಏಳು ನಿಮಿಷಕ್ಕೆ ಲಾಸ್ಟ್ ಮೆಸೆಜ್ ಮಾಡಿದ್ದಾನೆ.

ಇದನ್ನೂ ಓದಿ:  Crime News: ರಾಜ್ಯದ ಪಾಲಿಗಿಂದು 'ಸಾವಿನ ಸಂಡೇ'! ವಿವಿಧ ಪ್ರಕರಣಗಳಲ್ಲಿ ಐದಕ್ಕೂ ಹೆಚ್ಚು ಮಂದಿ ದುರ್ಮರಣ

ಮೊಬೈಲ್ ನಲ್ಲಿಯೇ ಹೆಚ್ಚು ಸಮಯ ಕಳೆಯುತ್ತಿದ್ದ

ಕ್ಷಮಿಸಿ ತಂದೆ ತಾಯಿಗೆ ತುಂಬ ನೋವು ಕೊಟ್ಟಿದ್ದೇನೆ. ನಾನು ಒಬ್ಬನೇ ಇರಕ್ಕಾಗುತ್ತಿಲ್ಲ ನಾನು ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದಾನೆ. ಹುಡುಗಿ ಬಗ್ಗೆ ಈವರೆಗೆ ನಮಗೆ ಗೊತ್ತೇ ಇಲ್ಲ. ಈ ಮೊದಲು ಮನೆಯಲ್ಲೂ ಹೇಳಿಕೊಂಡಿಲ್ಲ. ಹೊರಗೆ ಸ್ನೇಹಿತರೂ ಕಡಿಮೆ ಹೆಚ್ಚಾಗಿ ಮನೆಯಲ್ಲಿರುತ್ತಿದ್ದನು. ಟಿವಿ ನೋಡುವುದು ಬಿಟ್ಟರೆ‌ ಮೊಬೈಲ್ ನಲ್ಲೇ ಹೆಚ್ಚು ಇರುತ್ತಿದ್ದ . ಕೇಳಿದಾಗಲೆಲ್ಲ ಬ್ಯಾಂಕ್ ಎಕ್ಸಾಮ್ ಗೆ ತಯಾರಿ ನಡೆಸುತ್ತಿದ್ದೇನೆ ಎನ್ನುತ್ತಿದ್ದ. ಆದರೆ ಈ ಘಟನೆ ಬಳಿಕ ನಮಗೆ ಶಾಕ್ ಆಗಿದೆ.

ಪ್ರೀತಿ ಬಗ್ಗೆ ಹೇಳಿದ್ದರೆ ನಾವೇ ಮದುವೆ ಮಾಡಿ ಕೊಡುತ್ತಿದ್ದೇವು. ಈ ಕೆಟ್ಟ ನಿರ್ಧಾರಕ್ಕೆ ಬರುವ ಮೊದಲು ಹೆತ್ತವರಿಗೆ ಕರೆ ಮಾಡಬಹುದಿತ್ತು ಎಂದು ಯಶವಂತ್ ತಂದೆ ಕಣ್ಣೀರು ಹಾಕುತ್ತಾರೆ.
Published by:Mahmadrafik K
First published: