• Home
  • »
  • News
  • »
  • state
  • »
  • Encroachment: ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಬೆದರಿಕೆ ಹಾಕಿದ ಮನೆ ಮಾಲೀಕರು

Encroachment: ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಬೆದರಿಕೆ ಹಾಕಿದ ಮನೆ ಮಾಲೀಕರು

ದಂಪತಿ

ದಂಪತಿ

ಸುಮಾರು ಒಂದೂವರೆ ಗಂಟೆಗಳ ಬಳಿಕ ದಂಪತಿ (Couple) ಮೇಲೆ ನೀರು ಸುರಿದು ರಕ್ಷಣೆ (Rescue) ಮಾಡಲಾಗಿದೆ. ಪೆಟ್ರೋಲ್ (Petrol) ಸುರಿದುಕೊಂಡಿದ್ದ ದಂಪತಿ, ತೆರವು ಕಾರ್ಯಕ್ಕೆ ಮುಂದಾದ್ರೆ ಬೆಂಕಿ ಹಚ್ಚಿಕೊಳ್ಳುವದಾಗಿ (Suicide Attempt) ಬೆದರಿಕೆ ಹಾಕಿದ್ದರು.

  • News18 Kannada
  • Last Updated :
  • Bangalore [Bangalore], India
  • Share this:

ರಾಜಕಾಲುವೆ ಒತ್ತುವರಿ (Rajakaluve Encroachment) ಮಾಡಿಕೊಂಡಿರುವ ಕಟ್ಟಡಗಳನ್ನು ತೆರವು ಕಾರ್ಯಚರಣೆಯನ್ನು ಬಿಬಿಎಂಪಿ (BBMP) ಮುಂದುವರಿಸಿದೆ. ಆದ್ರೆ ಇಂದು ಕೆಆರ್ ಪುರ (KR Pura) ಭಾಗದಲ್ಲಿ ತೆರವು ಕಾರ್ಯಾಚರಣೆಗೆ ದಂಪತಿ ವಿರೋಧ ವ್ಯಕ್ತಪಡಿಸಿದರು. ಸುಮಾರು ಒಂದೂವರೆ ಗಂಟೆಗಳ ಬಳಿಕ ದಂಪತಿ (Couple) ಮೇಲೆ ನೀರು ಸುರಿದು ರಕ್ಷಣೆ (Rescue) ಮಾಡಲಾಗಿದೆ. ಪೆಟ್ರೋಲ್ (Petrol) ಸುರಿದುಕೊಂಡಿದ್ದ ದಂಪತಿ, ತೆರವು ಕಾರ್ಯಕ್ಕೆ ಮುಂದಾದ್ರೆ ಬೆಂಕಿ ಹಚ್ಚಿಕೊಳ್ಳುವದಾಗಿ (Suicide Attempt) ಬೆದರಿಕೆ ಹಾಕಿದ್ದರು. ಸ್ಥಳಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಬರಬೇಕೆಂದು ದಂಪತಿಯ ಕುಟುಂಬಸ್ಥರು ಆಗ್ರಹಿಸಿದ್ದರು.


ನಾವು ಮನೆಯನ್ನ ಲೋನ್ ಪಡೆದು ಕಟ್ಟಿದ್ದೇವೆ. ನನ್ನ ಮನೆಯನ್ನು ಯಾವುದೇ ಕಾರಣಕ್ಕೂ ಒಡೆಯಕ್ಕೆ ಬಿಡಲ್ಲ. ಸಿಎಂ ಸ್ಥಳಕ್ಕೆ ಬರಬೇಕು. ಯಾವುದೇ ಕಾರಣಕ್ಕೂ ಮನೆ ಒಡೆಯಲು ಬಿಡಲ್ಲ. 40 ಲಕ್ಷ ಲೋನ್ ಇದೆ, 20 ವರ್ಷದಿಂದ ಇಲ್ಲದೇ ಇರೋ ರಾಜಕಾಲುವೆ ಈಗೆಲ್ಲಿಂದ ಬಂತು ? ನಾವೇನು ಪಾಕಿಸ್ತಾನದಿಂದ ಬಂದೀದ್ದಿವಾ ಅಂತ ದಂಪತಿ ಪ್ರಶ್ನೆ ಮಾಡಿದರು.


ಪ್ರತಿಭಟನೆಯಿಂದ ಹಿಂದೆ ಸರಿಯದ ದಂಪತಿ


ಕಾಂಪೌಂಡ್ ಒಡೆದುಕೊಳ್ಳಿ, ಅದು ಬಿಟ್ಟು ಮನೆಗೆ ಯಾಕೆ ಡ್ಯಾಮೇಜ್ ಮಾಡ್ತೀರಾ ಅಂತ ಕುಟುಂಬ ಪ್ರಶ್ನೆ ಮಾಡಿದ್ದಾರೆ. ಪೊಲೀಸರ ಮನವೊಲಿಸಲು ಮುಂದಾಗಿದ್ರೂ ದಂಪತಿ ಪ್ರತಿಭಟನೆಯಿಂದ ಹಿಂದೆ ಸರಿಯಲ್ಲಿಲ್ಲ.


20 ವರ್ಷದಿಂದ ತೆರಿಗೆ ಪಾವತಿ


ದಂಪತಿಯ ಮೂರು ಅಂತಸ್ತಿನ ಮನೆ ಕೆ.ಆರ್.ಪುರದಲ್ಲಿದ್ದು, 20 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಕಳೆದ 20 ವರ್ಷಗಳಿಂದ ದಂಪತಿ ತೆರಿಗೆ ಪಾವತಿಸುತ್ತಿದ್ದಾರೆ. ಬಿಬಿಎಂಪಿ ಅನುಮತಿ ಪಡೆದೇ ಕಟ್ಟಡ ಕಟ್ಟಲಾಗಿದೆ. ಕಟ್ಟಡದ ಮೇಲೆ 40 ಲಕ್ಷ ಸಾಲ ಇದೆ.


ಏಳು ಅಡಿ ಒತ್ತುವರಿ


ಈಗ ರಾಜಕಾಲುವೆ ಒತ್ತುವರಿ ಆರೋಪ ಮಾಡಲಾಗಿದೆ. 2 ಮೀ. ಅಂದ್ರೆ 7 ಅಡಿ ಒತ್ತುವರಿ ಆರೋಪವಿದೆ. 7 ಅಡಿ ಒತ್ತುವರಿ  ತೆರವುಗೊಳಿಸಲು ಮಾರ್ಕ್ ಮಾಡಲಾಗಿದೆ. ತೆರವುಗೊಳಿಸಿದ ಭಾಗ ಧ್ವಂಸಗೊಳಿಸಿದ್ರೆ ಇಡೀ ಕಟ್ಟಡ ಕುಸಿಯುವ ಭೀತಿ ಇದೆ. ಈ ಹಿನ್ನೆಲೆ ದಂಪತಿ ತೆರವು ಕಾರ್ಯಾಚರಣೆಗೆ ದಂಪತಿ ವಿರೋಧ ವ್ಯಕ್ತಪಡಿಸಿದರು.


ಇದನ್ನೂ ಓದಿ:  Youth Missing: ಆಧ್ಯಾತ್ಮದತ್ತ ನನ್ನ ಪಯಣ ಆರಂಭ, ಭಯಪಡಬೇಡಿ; ಸಂದೇಶ ಕಳುಹಿಸಿ ಯುವಕ ನಾಪತ್ತೆ


ವಿಶ್ವ ಬ್ಯಾಂಕ್ ಬಳಿ ಸಾಲು ಕೇಳಲು BBMP ಚಿಂತನೆ


ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (Bruhat Bengaluru Mahanagara Palike) ಬೆಂಗಳೂರನ್ನು (Bengaluru) ‌ನಿಭಾಯಿಸುವ ಶಕ್ತಿ ಇಲ್ಲವಾ? ನೆರೆ, ಬರ ನಿರ್ವಹಣೆ ಮಾಡದಷ್ಟರ ಮಟ್ಟಿಗೆ ಆರ್ಥಿಕ ದಿವಾಳಿಯಾಗಿ ಹೋಗಿದ್ಯಾ ಬಿಬಿಎಂಪಿ? ವಿಶ್ವ ಮಟ್ಟದಲ್ಲಿ ಮತ್ತೊಮ್ಮೆ ಬೆಂಗಳೂರಿನ ಮಾನ ಹರಾಜು ಹಾಕಲು‌ ಬಿಬಿಎಂಪಿ ಮುಂದಾಗಿದೆಯಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಜಾಗತಿಕ ಮಟ್ಟದಲ್ಲಿ ವಿಶ್ವ ಬ್ಯಾಂಕ್ (World Bank) ಮುಂದೆ ಸಾಲದ ರೂಪದಲ್ಲಿ (Loan) ಸಹಾಯ ಪಡೆಯಲು ಮುಂದಾಗಿದೆ.


ಇದನ್ನೂ ಓದಿ:  Madrasa Education: ಮದರಸಾ ರಹಸ್ಯ; ದಾಖಲೆಗಳಲ್ಲಿರೋದು ಒಂದು, ವಾಸ್ತವದಲ್ಲಿ ಬೇರೆನೇ ಇದೆಯಾ?


ಬೆಂಗಳೂರು (Namma Bengaluru) ದೇಶದಲ್ಲಿ ಎರಡನೇ ಅತಿ ಹೆಚ್ಚು GDP ಹೊಂದಿರುವ ನಗರವಾಗಿದೆ. ರಾಜ್ಯದ ಬೊಕ್ಕಸಕ್ಕೆ 60% ಆದಾಯವನ್ನು ಬೆಂಗಳೂರು ನೀಡುತ್ತದೆ. ಆದರೂ ಬೆಂಗಳೂರು ಅಭಿವೃದ್ಧಿಗಾಗಿ (Bengaluru Development) ವಿಶ್ವಬ್ಯಾಂಕ್ ಮುಂದೆ ಕೈ ಚಾಚಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಪ್ರಾಥಮಿಕ ಚರ್ಚೆಗಳು ನಡೆದಿರೋದನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ (Tushar Giri Nath, Chief Commissioner, BBMP) ಹೇಳಿದ್ದಾರೆ.


ಬೆಂಗಳೂರು ಸೇರಿದಂತೆ ರಾಜ್ಯದಲ್ಲಾಗಿರುವ ನೆರೆ, ಬರ ನಿರ್ವಹಣೆಗೂ ವಿಶ್ವ ಬ್ಯಾಂಕ್​​ನಿಂದ ಸಾಲ‌ ಕೇಳಲು ತಯಾರಿ ನಡೆಸಿದೆ. ಬೆಂಗಳೂರಿನ K100 ವ್ಯಾಲಿ ಪ್ರಾಜೆಕ್ಟ್ ರೀತಿಯಲ್ಲೇ ನಗರದ ರಾಜ ಕಾಲುವೆಗಳನ್ನು ಮೇಲ್ದರ್ಜೆಗೆ ಏರಿಸಲು ಬಿಬಿಎಂಪಿಯಿಂದ ಪ್ಲ್ಯಾನ್ ಮಾಡಿಕೊಂಡಿದೆ.

Published by:Mahmadrafik K
First published: