ಬಾಗಲಕೋಟೆ: ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ಇಳಿವಯಸ್ಸಿನ ದಂಪತಿ ಕೋರ್ಟ್​​ನಲ್ಲೇ ಒಂದಾದ ಕಥೆ..!

ಬಾಗಲಕೋಟೆ ನಗರದ 64 ವರ್ಷದ ಚಂದ್ರಕಾಂತ ಮತ್ತು 54 ವರ್ಷದ ಶಾಂತಾ ಇಬ್ಬರು 28 ವರ್ಷದ ಹಿಂದೆ ಮದುವೆಯಾಗಿದ್ದರು, ಅವರಿಗೆ ಮಕ್ಕಳು, ಮೊಮ್ಮಕ್ಕಳು ಸಹ ಇದ್ದರು. ಇಷ್ಟು ವರ್ಷದ ಬಳಿಕ ಮನಸ್ತಾಪವಾಗಿ ಕಳೆದ 6 ವರ್ಷದಿಂದ ಬೇರೆ ಬೇರೆ ಇದ್ದು, ವಿವಾಹ ವಿಚ್ಛೇದನ ಕೋರಿ ಬಾಗಲಕೋಟೆಯ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ದಂಪತಿ

ದಂಪತಿ

  • Share this:
ಬಾಗಲಕೋಟೆ (ಮಾ. 27): ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ವಿಷಯಗಳಿಗೆ ಮನಸ್ತಾಪ ಬಂದು, ವಿವಾಹ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ ಮೂರು ಜೋಡಿಗಳು ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ್ ಅದಾಲತ್ ನಲ್ಲಿ ಒಂದಾಗಿ, ಮತ್ತೆ ಜೊತೆಯಾಗಿ ಬಾಳ ಬಂಡಿ ಸಾಗಿಸಲು ಅಣಿಯಾಗಿದ್ದಾರೆ. ವಯೋವೃದ್ಧ ದಂಪತಿ ಒಂದಾಗಿರುವ ವಿಶೇಷ ಸನ್ನಿವೇಶ ಕಂಡುಬಂದಿದೆ. ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಇಂತಹ ಅಪರೂಪದ ಘಟನೆ ಸಾಕ್ಷಿಯಾಗಿತ್ತು.

ವಿವಾಹ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದವರು ಬಹುತೇಕವಾಗಿ ಬೇರೆ ಬೇರೆ ಆಗುವ ಪ್ರಕರಣಗಳು ಹೆಚ್ಚು.ಅಂತಹದರಲ್ಲಿ ವಿಶೇಷ ಎಂಬಂತೆ ಮೂರು ಜೋಡಿಗಳ ಪೈಕಿ ಮೊದಲನೆ ಜೋಡಿ ನೋಡುವುದಾದರೆ, ಬಾಗಲಕೋಟೆ ನಗರದ 64 ವರ್ಷದ ಚಂದ್ರಕಾಂತ ಮತ್ತು 54 ವರ್ಷದ ಶಾಂತಾ ಇಬ್ಬರು 28 ವರ್ಷದ ಹಿಂದೆ ಮದುವೆಯಾಗಿದ್ದರು, ಅವರಿಗೆ ಮಕ್ಕಳು, ಮೊಮ್ಮಕ್ಕಳು ಸಹ ಇದ್ದರು. ಇಷ್ಟು ವರ್ಷದ ಬಳಿಕ ಮನಸ್ತಾಪವಾಗಿ ಕಳೆದ 6 ವರ್ಷದಿಂದ ಬೇರೆ ಬೇರೆ ಇದ್ದು, ವಿವಾಹ ವಿಚ್ಛೇದನ ಕೋರಿ ಬಾಗಲಕೋಟೆಯ ಕೌಟುಂಬಿಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು.

ಇದರಿಂದ ವಿಚಾರಣೆಗಳು ಸಹ ನಡೆದಿದ್ದವು, ಆದ್ರೆ ಲೋಕ್ ಅದಾಲತ್​ನಲ್ಲಿ ವಿಚಾರಣೆ ನಡೆದು ಅವರ ಮನವೊಲಿಸುವಲ್ಲಿ ಸಫಲತೆ ಕಂಡಿದ್ದು, ಈ ಹಿನ್ನೆಲೆಯಲ್ಲಿ ಇಂದು ಮತ್ತೆ ವಯೋವೃದ್ಧ ದಂಪತಿಗಳಾದ ಚಂದ್ರಕಾಂತ ಮತ್ತು ಶಾಂತಾ ಒಂದಾದರು, ಅಜ್ಜ ಅಜ್ಜಿಯರು ಒಂದಾಗಿದ್ದನ್ನ ನೋಡೋಕೆ ಸ್ವತ: ಮಕ್ಕಳು, ಮೊಮ್ಮಕ್ಕಳು ಬಂದು ಎಲ್ಲರೂ ಕುಟುಂಬ ಸಮೇತರಾಗಿ ಜೋಡಿಯನ್ನಾಗಿ ಒಂದಾಗಿಸಿ ಹೋಗಿದ್ದು ಸಂತಸ ತಂದಿತ್ತು.

ಕೆಲವೊಂದು ಕಾರಣದಿಂದ  ದೂರವಾಗಿದ್ದೆವು. ಇಂತಹ ಪರಿಸ್ಥಿತಿಯನ್ನು ಯಾರು ತಂದುಕೊಳ್ಳಬಾರದು. ಹೊಂದಾಣಿಕೆಯಿಂದ ಹೋಗಬೇಕು ಎಂದು ಅಜ್ಜಿ ಶಾಂತಾ ಹೇಳಿದರು.

Belagavi Lok Sabha Bypoll: ಮಾರ್ಚ್ 30ಕ್ಕೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ನಾಮಪತ್ರ ಸಲ್ಲಿಕೆ

ಇನ್ನು 2ನೇ ಜೋಡಿ  ಜಿಲ್ಲೆಯ ಅಂಕಲಗಿ ಗ್ರಾಮದ ಪುಂಡಲೀಕ ಮತ್ತು ಮೀನಾಕ್ಷಿ ದಂಪತಿ, ಕಳೆದ 9 ವರ್ಷದ ಹಿಂದೆ ಇವರಿಗೆ ಮದುವೆಯಾಗಿತ್ತು, ಈ ಮಧ್ಯೆ 2 ವರ್ಷದ ಹಿಂದೆ ಪತ್ನಿ ತವರು ಮನೆಗೆ ಹೋದಾಗ ವ್ಯಾಜ್ಯವಾಗಿ ಅಲ್ಲಿಯೇ ಉಳಿದುಕೊಂಡಿದ್ದರು. ಇದರಿಂಧ ಪತಿ ಪುಂಡಲೀಕ ವಿವಾಹ ವಿಚ್ಛೇದನ ಕೇಳಿದ್ದರೆ, ಪತ್ನಿ ಮೀನಾಕ್ಷಿ ಜೀವನಾಂಶ ಕೇಳಿ ಕೋರ್ಟ್ ಗೆ ದಾವೆ ಹೂಡಿದ್ದರು.

ಆದರೆ ನಿರಂತರ 2 ವರ್ಷದ ಬಳಿಕ ಇವರಿಬ್ಬರಿಗೂ ಕೋರ್ಟ್ ಮೆಟ್ಟಿಲೇರಿ ಮುನ್ನಡೆಯಲಾಗದೇ, ಇಂದು ದುಡ್ಡಿನ ಕಾರಣದಿಂದಾಗಿ ಮತ್ತು ಇಬ್ಬರು ಒಪ್ಪಂದದಿಂದ ಒಂದುಗೂಡಿದ್ದೇವೆ ಎಂದಿದ್ದಾರೆ.

ಇತ್ತ ಇನ್ನೊಂದು ಜೋಡಿ ಜಿಲ್ಲೆಯ ಮುರನಾಳ ಗ್ರಾಮದ ಶಿವಶಂಕರ ಮತ್ತು ಸಂಗೀತಾ ಇಬ್ಬರು ಕೇವಲ 3 ವರ್ಷದ ಹಿಂದೆ ಅಂದರೆ 2018ರಲ್ಲಿ ಮದುವೆಯಾಗಿ, ಮನೆಯಲ್ಲಿನ ಜಗಳದ ಕಾರಣದಿಂದ ಒಂದೂವರೆ ವರ್ಷದಿಂದ ದೂರವಾಗಿದ್ದರು, ಆದ್ರೆ ಇಬ್ಬರು ಲೋಕಅದಾಲತ್​ನಲ್ಲಿ ಭಾಗವಹಿಸಿ ಮನ: ಪರಿವರ್ತನೆಯಾಗಿ ಇಬ್ಬರೂ ಡಿವೋರ್ಸ್​ ಕೈಬಿಟ್ಟು ಒಂದುಗೂಡಿ ಕೈ ಕೈ ಹಿಡಿದು ಮುನ್ನಡೆದರು.

ಈ ಮಧ್ಯೆ ಇಂತಹ ಪತಿಯನ್ನ ಬಿಟ್ಟು ದೂರ ಉಳಿದ ಕ್ಷಣಗಳ ಬಗ್ಗೆ ಮಾಧ್ಯಮಗಳೆದುರು ಹೇಳುತ್ತಾ ಪತ್ನಿ ಸಂಗೀತ ಭಾವುಕಳಾದಳು, ಅಲ್ಲದೇ  ಮನಸ್ತಾಪವಾದರೆ ಯಾವ ದಂಪತಿಗಳು ನ್ಯಾಯಾಲಯದ ಮೆಟ್ಟಿಲೇರುವುದಕ್ಕೆ ಹೋಗಬೇಡಿ, ಸಂಬಂಧದ ಬೆಲೆ ನನಗೆ ಮನವರಿಕೆ ಆಗಿದೆ. ಅದರ ನೋವು ನಮಗೆ ಗೊತ್ತಾಗಿದೆ. ಇನ್ಮುಂದೆ ಯಾರೂ ಇಂತಹದ್ದಕ್ಕೆ ಮುಂದಾಗಬೇಡಿ ಎಂದು ಶಿವಶಂಕರನ ಪತ್ನಿ ಸಂಗೀತಾ ಮನವಿ ಮಾಡಿದರು. ಕೋರ್ಟ್ ನಲ್ಲಿ ಒಂದಾಗಿ, ಮಹಾರಾಷ್ಟ್ರದ ಪುಣೆಗೆ ತೆರಳಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ ವೈವಾಹಿಕ ಜೀವನದಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಗಂಡ-ಹೆಂಡತಿಯಲ್ಲಿ ಬರುತ್ತವೆ .ಅವುಗಳನ್ನು ಮೆಟ್ಟಿ ನಿಂತು ಒಂದಾಗಿ ಬಾಳಬೇಕು. ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಮಾತನ್ನು ಅರಿತು ನಡೆದರೆ ಸಂಸಾರ ಸ್ವರ್ಗ ಸುಖ ಆಗಲಿದೆ.
Published by:Latha CG
First published: