HOME » NEWS » State » COUPLE DIED IN A ACCIDENT DURING THEY WENT TO GET BACK THEIR SON TO NATIVE HK

ಊರಿನಲ್ಲಿದ್ದ ಮಗನನ್ನ ಕರೆತರಲು ಹೋದ ದಂಪತಿ ರಸ್ತೆ ಅಪಘಾತದಲ್ಲಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೂದಿಹಾಳ್ ಬಳಿ ನಡೆದ ಅಪಘಾತದಲ್ಲಿ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ‌. ಮೃತರನ್ನು ಬೆಂಗಳೂರು ಉತ್ತರ ತಾಲೂಕಿನ ನಗರೂರು ನಿವಾಸಿಗಳಾದ ನರಸಿಂಹಮೂರ್ತಿ (40 ವರ್ಷ) ಹಾಗೂ ಲತಾ (35 ವರ್ಷ) ಗುರುತಿಸಲಾಗಿದೆ

news18-kannada
Updated:August 18, 2020, 6:25 PM IST
ಊರಿನಲ್ಲಿದ್ದ ಮಗನನ್ನ ಕರೆತರಲು ಹೋದ ದಂಪತಿ ರಸ್ತೆ ಅಪಘಾತದಲ್ಲಿ ಸಾವು
ಪ್ರಾತಿನಿಧಿಕ ಚಿತ್ರ
  • Share this:
ನೆಲಮಂಗಲ(ಆಗಸ್ಟ್​.18): ದಂಪತಿಗಳು ಇನ್ನೇನು ಕೆಲವೇ ನಿಮಿಷಗಳಲ್ಲಿ ತನ್ನ ಮಗನನ್ನು ನೋಡುತ್ತಿದ್ದರು. ಆದರೆ, ಕೊರೋನಾ ವೇಳೆ ಭಯಬಿದ್ದು ಎಳೆ ಕಂದನನ್ನ ತವರು ಮನೆಗೆ ಬಿಟ್ಟು ಬಂದಿದ್ದರು. ಮಗನ್ನ ನೋಡಿ ತುಂಬಾ ದಿನ ಆಗಿದೆ ಕರೆದುಕೊಂಡು ಬರೋಣ ಎಂದು ಹೊರಟಿದ್ದ ದಂಪತಿ ಕಂಡಿದ್ದು ಮಾತ್ರ ದುರಂತ ಅಂತ್ಯ, ತವರು ಮನೆ ಕಡೆ ಹೊರಟಿದ್ದ ಆ ದಂಪತಿಗಳು ಮಸಣ ಸೇರಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೂದಿಹಾಳ್ ಬಳಿ ನಡೆದ ಅಪಘಾತದಲ್ಲಿ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ‌. ಮೃತರನ್ನು ಬೆಂಗಳೂರು ಉತ್ತರ ತಾಲೂಕಿನ ನಗರೂರು ನಿವಾಸಿಗಳಾದ ನರಸಿಂಹಮೂರ್ತಿ (40 ವರ್ಷ) ಹಾಗೂ ಲತಾ (35 ವರ್ಷ) ಗುರುತಿಸಲಾಗಿದೆ.

ಕೊರೋನಾ ಸಂಕಷ್ಟದ ನಡುವೆ ವೈರಸ್‌ಗೆ ಹೆದರಿಕೊಂಡು ತಮ್ಮ 6 ವರ್ಷದ ಕಂದನನ್ನು ತುಮಕೂರಿನ ವರದನಹಳ್ಳಿಯಲ್ಲಿರುವ ಲತಾ ತವರು ಮನೆಗೆ ಬಿಟ್ಟಿ ಬಂದಿರುತ್ತಾರೆ. ಮಗನನ್ನು ನೋಡಿ ತುಂಬಾ ದಿನಗಳು ಆಗಿದೆ ಕರೆದುಕೊಂಡು ಬರೋಣ ಎಂದು ಇಂದು ಮುಂಜಾನೆ ಹೊರಟಿದ್ದರು.

ಇದನ್ನೂ ಓದಿ : ಮುಂದುವರೆದ ಮಹಾ ಮಳೆ, ಕೃಷ್ಣಾ ತೀರದಲ್ಲಿ ಪ್ರವಾಹದ ಆತಂಕ; ನಡುಗಡ್ಡೆಯಾದ ತೋಟದ ವಸತಿ ಪ್ರದೇಶಗಳು

ರಾಷ್ಟ್ರೀಯ ಹೆದ್ದಾರಿ 4ರ ‌ಮೂಲಕ ತವರು ಮನೆ ತಲುಪಿ ಮಗನನ್ನ ಮಡಿಲಿಗೆ ಸೇರಿಸಿಕೊಳ್ಳುವ ಕಾತರದಲ್ಲಿ ಇದ್ದರು. ಆದರೆ, ಬೈಕ್​​​ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಬಂಕ್‌ಗೆ ಹೋಗಿ ಹೊರಗಡೆ ಬರುವಷ್ಟರಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದ. ಬಂಕ್​​ ನಿಂದ ಹೆದ್ದಾರಿಗೆ ಬರುತ್ತಿದ್ದಂತೆ ಕಂಟೈನರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತವಾಗಿದ್ದು, ದಂಪತಿಗಳಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ವೇಳೆ ಚಾಲಕ ಲಾರಿ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ.

ಒಟ್ಟಾರೆ ಅಧಿಕ ಸಂಚಾರ ದಟ್ಟಣೆಯ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು‌ ಆರೋಪಿಸುತ್ತಿದ್ದು, ಹೆದ್ದಾರಿ ಸುರಕ್ಷತಾ ಬಗ್ಗೆ ಪ್ರಾಧಿಕಾರಿ ಗಮನ ವಹಿಸಬೇಕಿದೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.
Published by: G Hareeshkumar
First published: August 18, 2020, 6:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading