Couple Suicide: ಸಾವಿನಲ್ಲಿ ಒಂದಾದ ಜೋಡಿ: ರೈಲಿಗೆ ತಲೆಕೊಟ್ಟು ಪ್ರೇಮಿಗಳ ಆತ್ಮಹತ್ಯೆ

ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಆನೇಕಲ್ (Anekal) ಸಂಮದೂರು ಬಳಿಯಲ್ಲಿ ರೈಲಿಗೆ ತಲೆಕೊಟ್ಟ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ.

ಆತ್ಮಹತ್ಯೆಗೆ ಶರಣಾದ ಜೋಡಿ

ಆತ್ಮಹತ್ಯೆಗೆ ಶರಣಾದ ಜೋಡಿ

  • Share this:
ಮದುವೆಗೆ (Love Marriage) ಪೋಷಕರು (Parents) ವಿರೋಧ ವ್ಯಕ್ತಪಡಿಸಿದ್ದರಿಂದ ಬೇಸರಗೊಂಡ ಜೋಡಿ (Couple) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ಆನೇಕಲ್ (Anekal) ಸಂಮದೂರು ಬಳಿಯಲ್ಲಿ ರೈಲಿಗೆ ತಲೆಕೊಟ್ಟ ಜೋಡಿ ಆತ್ಮಹತ್ಯೆ ಮಾಡಿಕೊಂಡಿದೆ. ಜೋಡಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರ ಮಧ್ಯಾಹ್ನದ ನಂತರ ಬೆಳಕಿಗೆ ಬಂದಿದೆ. ಮಣಿ ಮತ್ತು ಅನುಷಾ ಆತ್ಮಹತ್ಯೆಗೆ ಶರಣಾದ ಜೋಡಿ. ಮಾರನಾಯಕನಹಳ್ಳಿಯ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗಲು ಸಹ ನಿರ್ಧರಿಸಿದ್ದರು. ಆದ್ರೆ ಇಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿತ್ತು ಎಂದು ವರದಿಯಾಗಿದೆ.

ಪೋಷಕರು ಮದುವೆಗೆ ಒಪ್ಪದ ಹಿನ್ನೆಲೆ ಮಣಿ ಮತ್ತು ಅನುಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲು ಆಗಿದೆ.

ಕೈಯಲ್ಲಿ ಮಾರಾಕಾಸ್ತ್ರ ಹಿಡಿದು ವಿದೇಶಿ ಪ್ರಜೆಯ ಪುಂಡಾಟ

ಹೆಣ್ಣೂರು ಪೊಲೀಸ್ ಠಾಣೆ ಮುಂಭಾಗ ಮಾರಕಾಸ್ತ್ರ ಹಿಡಿದುಕೊಂಡು ಪುಂಡಾಟ ನಡೆಸುತ್ತಿದ್ದ ವಿದೇಶಿ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಐವರಿಕೋಸ್ಟ್ ದೇಶದ ಪ್ರಜೆ ಓಕಾವೋ ಲಿಯೋಸ್ ಬಂಧಿತ ಪ್ರಜೆ.

ಇದನ್ನೂ ಓದಿ: ಸಿದ್ದರಾಮಯ್ಯ ಒಂದು ಗುಟುರು ಹಾಕಿದ್ರೆ ಸಾಕು, ಸೋನಿಯಾ ಅಲರ್ಟ್ ಆಗ್ತಾರೆ: CT Ravi ಒಳಗುದ್ದು!

ಪೊಲೀಸ್ ಠಾಣೆಯ ಮುಂಭಾಗದಲ್ಲೇ ಮಾರಾಕಾಸ್ತ್ರ ಹಿಡಿದು ಓಡಾಡಿದ್ದನು. ಮದ್ಯದ ಅಮಲಿನಲ್ಲಿ ಮಾರಾಕಾಸ್ತ್ರ ಹಿಡಿದು ಸಾರ್ವಜನಿಕರಿಗೆ ಹೆದರಿಸಿದ್ದನು. ಆರೋಪಿಯನ್ನು ವಶಕ್ಕೆ ಪಡೆಯಲು ಹೋದ ಎಎಸ್ಐಗೆ ಕೈಯಿಂದ ಹಲ್ಲೆ ಮಾಡಿದ್ದನು. ಶರಣಾಗುವಂತೆ ಹೇಳಿದ್ರೂ ಮಾರಾಕಾಸ್ತ್ರ ಬೀಸುತ್ತಾ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದನು.

ಲಾಂಗ್ ಬೀಸುವ ವಿಡಿಯೋ ವೈರಲ್

ಸದ್ಯ ಪೊಲೀಸರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ, ಆರೋಪಿ ಪೊಲೀಸರ ಮೇಲೆ ಕೈ ಮಾಡಿದ ವಿಡಿಯೋ, ಲಾಂಗ್ ಬೀಸುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಬ್ಯಾಟರಿ ಕಳ್ಳರ ಬಂಧನ

ಬ್ಯಾಟರಿಗಳನ್ನ ಕದ್ದು ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಚಾಮರಾಜನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಚಾಮರಾಜಪೇಟೆ, ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯಲ್ಲಿ ಯುಪಿಎಸ್ ಬ್ಯಾಟರಿ (UPS Battery) ಕಳ್ಳತನ ಮಾಡುತ್ತಿದ್ದರು. ಬಂಧಿತರಿಂದ 1ಲಕ್ಷ ಮೌಲ್ಯದ 9 ಬ್ಯಾಟರಿಗಳು ಹಾಗೂ ಒಂದು ಆಟೋ ಜಪ್ತಿ ಮಾಡಲಾಗಿದೆ. ಈ ಸಂಬಂಧ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಇಲಿ ಪಾಷಾಣದಿಂದ ಹಲ್ಲುಜ್ಜಿ ಪ್ರಾಣಬಿಟ್ಟ ಯುವತಿ

ಯುವತಿಯೊಬ್ಬಳು ಮಾಡಿಕೊಂಡ ಸಣ್ಣ ತಪ್ಪಿನಿಂದ ಆಕೆಯ ಜೀವವೇ ಹೋಗಿದೆ. ಇತ್ತ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 22 ವರ್ಷದ ಶ್ರಾವ್ಯ ಮೃತ ಯುವತಿ. ಶ್ರಾವ್ಯ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಿವಾಸಿ. ಟೂಥ್ ಪೇಸ್ಟ್ ಬದಲಾಗಿ ಇಲಿ ಪಾಷಾಣದಿಂದ ಹಲ್ಲುಜ್ಜಿದ ಪರಿಣಾಮ ಶ್ರಾವ್ಯ ಮೃತಪಟ್ಟಿದ್ದಾಳೆ.

ಮನೆಯಲ್ಲಿ ವಿದ್ಯುತ್ ಕಡಿತವಾಗಿತ್ತು. ಮನೆಯ ಕಿಟಕಿಯಲ್ಲಿ ಟೂಥ್ ಪೇಸ್ಟ್ ಮತ್ತು ಇಲಿ ಪಾಷಾಣ ಇರಿಸಲಾಗಿತ್ತು. ಕತ್ತಲು ಇದ್ದಿದ್ದರಿಂದ ಶ್ರಾವ್ಯ ಟೂಥ್ ಪೇಸ್ಟ್ ಬದಲಾಗಿ ಇಲಿ ಪಾಷಾಣ ತೆಗೆದುಕೊಂಡಿದ್ದಾಳೆ. ಕತ್ತಲಿನಲ್ಲಿಯೇ ಶ್ರಾವ್ಯ ಇಲಿ ಪಾಷಾಣದಿಂದ ಹಲ್ಲುಜ್ಜಿದ್ದಾಳೆ. ಶ್ರಾವ್ಯಳಿಗೆ ತಾನು ಇಲಿ ಪಾಷಾಣದಿಂದ ಹಲ್ಲುಜ್ಜಿರೋದು ತಡವಾಗಿ ತಿಳಿದಿದೆ.

ಇದನ್ನೂ ಓದಿ:  Children Health Problems: ಶಾಲೆಗಳಲ್ಲಿ ಕೆಮ್ಮುವುದು, ಸೀನುವುದೂ ಕಷ್ಟ! ಕೋವಿಡ್‌ ಭಯದಿಂದ ರಾಜ್ಯದ ವಿದ್ಯಾರ್ಥಿಗಳು ಗೆಳೆಯರಿಂದಲೂ ದೂರ

ತೀವ್ರಅಸ್ವಸ್ಥಳಾದ ಶ್ರಾವ್ಯಳನ್ನು ಪೋಷಕರು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಶ್ರಾವ್ಯ ಸಾವನ್ನಪ್ಪಿದ್ದಾಳೆ.  ಶ್ರಾವ್ಯಳ ಸಣ್ಣ ತಪ್ಪು ಆಕೆಯ ಜೀವವನ್ನೇ ಬಲಿ ಪಡೆದುಕೊಂಡಿದೆ. ಮನೆಯಲ್ಲಿಯೂ ಇಲಿ ಪಾಷಾಣಗಳಂತ ವಿಷಕಾರಿ ವಸ್ತುಗಳನ್ನು ದಿನ ಬಳಕೆಯ ವಸ್ತುಗಳ ಜೊತೆ ಇರಿಸಬಾರದು.
Published by:Mahmadrafik K
First published: