85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ; ಮದುವಣಗಿತ್ತಿಯಂತೆ ಶೃಂಗಾರಗೊಂಡ ಕಲಬುರ್ಗಿ

ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ 8.30ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್​​ ಎಸ್​ ವೆಂಕಟೇಶಮೂರ್ತಿಯವರ ಮೆರವಣಿಗೆ ನಡೆಯಲಿದೆ

ಸಮ್ಮೇಳನದ ಮುಖ್ಯ ವೇದಿಕೆ

ಸಮ್ಮೇಳನದ ಮುಖ್ಯ ವೇದಿಕೆ

  • Share this:
ಕಲಬುರ್ಗಿ(ಫೆ.05) :  ಕಲಬುರ್ಗಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮುಖ್ಯ ವೇದಿಕೆ, ಮಳಿಗೆ ನಿರ್ಮಿಸಲಾಗಿದೆ. ಮುಖ್ಯ ವೇದಿಕೆಗೆ ಶ್ರೀವಿಜಯನ ಹೆಸರಿಟ್ಟಿದ್ದು, ರಾಷ್ಟ್ರಕೂಟರ ಕೋಟೆ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗಿದೆ. ಅಂಬೇಡ್ಕರ್ ಹಾಗೂ ಮಹಾತ್ಮಾಗಾಂಧಿ ಸಭಾಂಗಣದಲ್ಲಿ ಸಮಾನಾಂತರ ಗೋಷ್ಠಿಗಳಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಸಮ್ಮೇಳನದ ಹಿನ್ನೆಲೆಯಲ್ಲಿ ನಗರ ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದು, ಸಾಹಿತ್ಯಾಸಕ್ತರು ಕಲಬುರ್ಗಿಯತ್ತ ಮುಖ ಮಾಡಿದ್ದಾರೆ.

ಬೆಳಿಗ್ಗೆ 8 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಂತರ 8.30ಕ್ಕೆ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎಚ್​​ ಎಸ್​ ವೆಂಕಟೇಶಮೂರ್ತಿಯವರ ಮೆರವಣಿಗೆ ನಡೆಯಲಿದೆ. ಎಸ್.ಎಂ.ಪಂಡಿತ ರಂಗಮಂದಿರದಿಂದ ಗುಲ್ಬರ್ಗಾ ವಿ.ವಿ. ಆವರಣದ ವೆರಗೂ ಮೆರವಣಿಗೆ ನಡೆಯಲಿದೆ. ಬೆಳಿಗ್ಗೆ 11.30ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ.

33 ವರ್ಷಗಳ ನಂತರ ಕಲಬುರ್ಗಿಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆತಿಥ್ಯ ಸಿಕ್ಕಿದೆ. ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ವಿಶ್ವವಿದ್ಯಾಲಯದ 30 ಎಕರೆ ಪ್ರದೇಶದಲ್ಲಿ ಮುಖ್ಯ ವೇದಿಕೆ, ಪುಸ್ತಕ ಮಳಿಗೆ ಮತ್ತು ಊಟದ ಟೆಂಟ್ ತಲೆಯೆತ್ತಿವೆ. ಮುಖ್ಯ ವೇದಿಕೆ ರಾಷ್ಟ್ರಕೂಟರ ಕೋಟೆ ಮಾದರಿಯಲ್ಲಿ ನಿರ್ಮಾಣಗೊಂಡಿರೋದು ಈ ಬಾರಿಯ ಸಮ್ಮೇಳನದ ವಿಶೇಷ.

ಕೋಟ ಮಾದರಿಯ ವೇದಿಕೆಯ ಅಕ್ಕ-ಪಕ್ಕದಲ್ಲಿ ಕಲ್ಯಾಣ ಕರ್ನಾಟಕಲ್ಲಿನ ಸಾಂಪ್ರದಾಯಿಕ ಮನೆ ಬಾಗಿಲ ಚೌಕಟ್ಟನ್ನು, ನಾಗಾವಿ ಶಾಸನ ಇತ್ಯಾದಿಗಳನ್ನು ಪ್ರತಿಬಿಂಬಿಸಲಾಗಿದೆ. ಮುಖ್ಯ ವೇದಿಕೆ ಇರೋ ಸಭಾಂಗಣದಲ್ಲಿ 20 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ. ಅದರ ಪಕ್ಕದಲ್ಲಿಯೇ ಪುಸ್ತಕ ಮತ್ತು ವಾಣಿಜ್ಯ ಮಳಿಗೆ ಸ್ಥಾಪಿಸಲಾಗಿದೆ. ಮುಖ್ಯ ವೇದಿಕೆಗೆ ಕವಿರಾಜಮಾರ್ಗ ಕೃತಿಯ ಕರ್ತೃ ಶ್ರೀವಿಜಯನ ಹೆಸರಿಡಲಾಗಿದೆ.

kalburgi
ಕಮಾನುಗಳಿಂದ ರಾರಾಜಿಸುತ್ತಿರುವ ಕಲಬುರ್ಗಿ ನಗರದ ರಸ್ತೆಗಳು


5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ

ವಿಶೇಷ ವಿಮಾನದ ಮೂಲಕ ಆಗಮಿಸಲಿರೋ ಯಡಿಯೂರಪ್ಪ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮದ ನಂತರ ಅದೇ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಹೋಮ್ ಗಾರ್ಡ್ ಸೇರಿ ಸುಮಾರು 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ : ಗಡಿ ವಿಷಯದಲ್ಲಿ ರಾಜಕೀಯ ಬೇಡ; ಪ್ರತ್ಯೇಕತೆಯ ಕೂಗು ಸಮ್ಮತವಲ್ಲ: ಎಚ್.ಎಸ್. ವೆಂಕಟೇಶಮೂರ್ತಿ

ಸಮ್ಮೇಳನದ ಹಿನ್ನೆಲೆಯಲ್ಲಿ ಕಲಬುರ್ಗಿ ನಗರ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ನಗರದೆಲ್ಲೆಡೆ ಕನ್ನಡ ಧ್ವಜಗಳ ಹಾರಾಟ ಜೋರಾಗಿದೆ. ಬ್ಯಾನರ್, ಬಂಟಿಂಗ್ ಗಳು ರಾರಾಜಿಸುತ್ತಿವೆ. 85ನೇ ಸಮ್ಮೇಳವಾಗಿರುವುದರಿಂದ 85 ಕಮಾನುಗಳನ್ನು ನಿರ್ಮಿಸಿ, ಹಿರಿಯ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರ ಹೆಸರಿಡಲಾಗಿದೆ.
First published: