ಬೆಂಗಳೂರು: ರಿಸಲ್ಟ್, ರಿಸಲ್ಟ್ (Result) ಇಡೀ ದೇಶವೇ ಎದುರು ನೋಡುತ್ತಿದ್ದ ಕರ್ನಾಟಕ ಚುನಾವಣೆ (Karnataka Election) ರಿಸಲ್ಟ್ ಇಂದು ಹೊರಬೀಳುತ್ತೆ. ಕಾಂಗ್ರೆಸ್-ಬಿಜೆಪಿಗೆ (Congress-BJP) ಕುರ್ಚಿ ಚಿಂತೆ, ದಳಪತಿಗಳಿಗೆ ಅತಂತ್ರ ಸ್ಥಿತಿ ನಿರ್ಮಾಣವಾದರೆ ನಮ್ ಗೇಮ್ ಹೆಂಗೆ ಅನ್ನೋ ಚಿಂತೆ. ಜನರು (People) ಮಾತ್ರ ಒಂದೇ ಪಕ್ಷಕ್ಕೆ ಅಧಿಕಾರ ಸಿಗಲಿ ಅಂತಿದ್ದಾರೆ. ಹೊಗಳೋರು ಹೊಗಳಿದ್ದರು, ತೆಗಳೋರು ತೆಗಳಿದ್ದರು. ಗೆಲ್ಲುತ್ತೇವೆ-ಸೋಲಿಸುತ್ತೇವೆ ಅಂತ ಹಠಕ್ಕೂ ಬಿದ್ದರು. ಧರ್ಮ-ಅಧರ್ಮ ಅಂತ ಅಬ್ಬರಿಸಿದ್ದೂ ಆಯ್ತು. ಜಾತಿ ಮೀಸಲಾತಿ (Reservation) ಹೆಸರಲ್ಲಿ ದಂಗಲ್ ಎಬ್ಬಿಸಿದ್ದೂ ಆಯ್ತು. ನೀನಾ, ನಾನಾ ಅಂತೆಲ್ಲಾ ತೊಡೆತಟ್ಟಿದವರ ತಾಕತ್ತು ಎಷ್ಟು? ಬೈದಾಟ, ಗುದ್ದಾಟ, ಹಾರಾಟ ಚೀರಾಡಿದವರ ಅಸಲಿಯತ್ತೇನು? ಎಲ್ಲದಕ್ಕೂ ಇಂದು ಸ್ಪಷ್ಟ ಉತ್ತರ ಮತದಾರ (Voter) ನೀಡಲಿದ್ದಾರೆ.
ಇಂದು ಕರ್ನಾಟಕ ಕುರುಕ್ಷೇತ್ರದ ಫಲಿತಾಂಶ ಹೊರಬೀಳಲಿದ್ದು, 113 ಗೆದ್ದು ಬೀಗುವ ಗಂಡುಗಲಿ ಯಾರು ಅನ್ನೋದು ಸ್ವತಂತ್ರ್ಯ ಸಿಗದೇ ಅತಂತ್ರವಾಗುವ ಸಮೀಕ್ಷೆ ಫಲಿತಾಂಶಗಳ ಅಸಲಿ ರಹಸ್ಯಕ್ಕೂ ಉತ್ತರ ಸಿಗಲಿದೆ.
ಇದನ್ನೂ ಓದಿ: Operation Kamala: ಆಪರೇಷನ್ ಕಮಲದ ಸುಳಿವು ಕೊಟ್ಟ ಜಾರಕಿಹೊಳಿ! ಸರ್ಕಾರ ರಚನೆಗೆ ಬಿಜೆಪಿ ಮಾಸ್ಟರ್ ಪ್ಲಾನ್ ಏನು?
ಬಿಜೆಪಿ-ಕಾಂಗ್ರೆಸ್ ಬಹುಮತದ ಲೆಕ್ಕಾಚಾರದಲ್ಲಿದ್ದರೆ, ಶಾಕಿಂಗ್ ಫಲಿತಾಂಶ ಬರುತ್ತೆ ದೊಡ್ಡ ಪಕ್ಷಗಳೆಲ್ಲಾ ನಮ್ ಮನೆ ಬಾಗಿಲು ಬಡಿಯುತ್ವೆ ಅಂತ ದಳಪತಿಗಳು ನಿರಾಳವಾಗಿ ಕೂತಿದ್ದಾರೆ.
ಯಾವುದೇ ಪಕ್ಷಕ್ಕೆ 113 ಸ್ಥಾನ ಬಂದರೆ ಎಲ್ಲಾ ನಿರಾಳ. ಒಂದು ವೇಳೆ ಅತಂತ್ರ ಆದರೆ ಪಕ್ಷೇತರರಿಗೆ ಎಲ್ಲಿಲ್ಲದ ಬೆಲೆ ಬರುತ್ತೆ. ಆಪರೇಷನ್ ಶುರುವಾಗುತ್ತೆ. ಕುದುರೆ ವ್ಯಾಪಾರದ ಭಯದಲ್ಲಿ ರೆಸಾರ್ಟ್ ರಾಜಕೀಯ ಜೋರಾಗಿ, ಕರುನಾಡ ಜನರಿಗೆ ತಲೆಕೆಟ್ಟು ಹೋಗುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ. ಆಪರೇಷನ್ ಆದರೆ, 5 ವರ್ಷದಲ್ಲಿ ಮತ್ತೆ ಇಬ್ಬರು-ಮೂವರು ಸಿಎಂಗಳನ್ನ ನೋಡುವ ದೌರ್ಭಾಗ್ಯ ಕರ್ನಾಟಕದ್ದಾಗಲಿದೆ.
ಕರ್ನಾಟಕ ಚುನಾವಣಾ ಕಣದಲ್ಲಿ 2615 ಅಭ್ಯರ್ಥಿಗಳಿದ್ದಾರೆ. ಬೆಳಗ್ಗೆ 8ಕ್ಕೆ ಮತಎಣಿಕೆ ಆರಂಭವಾಗಲಿದ್ದು, 10 ಗಂಟೆ ಹೊತ್ತಿಗೆ ಟ್ರೆಂಡ್ ಗೊತ್ತಾಗಲಿದೆ. 34 ಸೆಂಟರ್‌ಗಳಲ್ಲಿ ಮತಎಣಿಕೆ ಕಾರ್ಯ ನಡೆಯಲಿದ್ದು, ಮತಯಂತ್ರಗಳಿರುವ ಸ್ಟ್ರಾಂಗ್ ರೂಮ್ ಸುತ್ತ ಸಿಸಿಟಿವಿ ಇದ್ದು, ಬಿಎಸ್ಎಫ್ ಸೆಕ್ಯುರಿಟಿ ಇರುತ್ತೆ. ಇಂದು ಇಡೀ ದಿನ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಲಿದೆ.
ಬಿಜೆಪಿಯಲ್ಲಿ ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ, ಬಸವರಾಜ ಬೊಮ್ಮಾಯಿ, ಜಿ. ಸೋಮಶೇಖರ ರೆಡ್ಡಿ, ಬಿ.ವೈ. ವಿಜಯೇಂದ್ರ, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ, ವಿ. ಸುನೀಲ್ ಕುಮಾರ್, ಸಿ.ಟಿ. ರವಿ, ಡಾ. ಕೆ.ಸುಧಾಕರ್, ವರ್ತೂರು ಪ್ರಕಾಶ್, ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್, ಆರ್. ಅಶೋಕ್, ಸಿ.ಪಿ. ಯೋಗೇಶ್ವರ್, ಪ್ರೀತಂ ಗೌಡ, ವಿ. ಸೋಮಣ್ಣ ಸೇರಿದಂತೆ ಪ್ರಮುಖರು ಈ ಬಾರಿ ಕುತೂಹಲ ಕೆರಳಿಸಿದ್ದಾರೆ.
ಕಾಂಗ್ರೆಸ್ನಲ್ಲಿ ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಜಗದೀಶ್ ಶೆಟ್ಟರ್, ವಿನಯ್ ಕುಲಕರ್ಣಿ, ಕಿಮ್ಮನೆ ರತ್ನಾಕರ್, ಎಸ್ ಮಧು ಬಂಗಾರಪ್ಪ, ಗೋಪಾಲಕೃಷ್ಣ ಬೇಳೂರು, ಡಾ.ಜಿ. ಪರಮೇಶ್ವರ, ಕೋತೂರು ಮಂಜುನಾಥ್, ಸಿದ್ದರಾಮಯ್ಯ ಸೇರಿದಂತೆ ಪ್ರಮುಖರು ಈ ಬಾರಿ ಕುತೂಹಲ ಕೆರಳಿಸಿದ್ದಾರೆ.
ಜೆಡಿಎಸ್ ಪಕ್ಷದಲ್ಲಿ ಅನಿಲ್ ಲಾಡ್, ಆಯನೂರು ಮಂಜುನಾಥ್, ವೈಎಸ್ವಿ ದತ್ತಾ, ಎಂ.ಪಿ. ಕುಮಾರಸ್ವಾಮಿ, ಕೆ.ಪಿ. ಬಚ್ಚೇಗೌಡ, ನಿಖಿಲ್ ಕುಮಾರಸ್ವಾಮಿ, ಎಚ್.ಡಿ. ಕುಮಾರಸ್ವಾಮಿ, ಸಿ.ಎಸ್. ಪುಟ್ಟರಾಜು, ಎಚ್.ಟಿ. ಮಂಜುನಾಥ್, ಸ್ವರೂಪ್ ಪ್ರಕಾಶ್, ಎಚ್.ಡಿ. ರೇವಣ್ಣ, ಜಿ.ಟಿ. ದೇವೇಗೌಡ ಅವರು ಸ್ಪರ್ಧೆ ಬಾರಿ ಕುತೂಹಲ ಮೂಡಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ