Council Election: ಪ್ರಭಾಕರ್ ಕೋರೆ ಭೇಟಿಯಾದ ಸಿಎಂ ಬೊಮ್ಮಾಯಿ; ಯಾರಾದ್ರೂ ಬಿ ಟೀಂ ಆಗಲಿ, ನಾವ್ ಮಾತ್ರ ಎ ಟೀಂ

ಬೆಳಗಾವಿಯಲ್ಲಿ ಸಂಪೂರ್ಣ ಒಗ್ಗಟ್ಟಿದೆ, ನೂರಕ್ಕೆ ನೂರು ಒಗ್ಗಟ್ಟಿದೆ. ಎಲ್ಲಾ ಸಾಹುಕಾರ್‌ ಗಳು ಎಲೆಕ್ಷನ್ ಮಾಡ್ತಿದಾರೆ, ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಸಭೆ ಮಾಡಿದ್ದಾರೆ.

ಸಿಎಂ ಬಸವರಾಜ್ ಬೊಮ್ಮಾಯಿ

ಸಿಎಂ ಬಸವರಾಜ್ ಬೊಮ್ಮಾಯಿ

  • Share this:
ಬೆಳಗಾವಿ: ವಾಯವ್ಯ ಪದವೀಧರ-ಶಿಕ್ಷಕರ ಕ್ಷೇತ್ರದ ಚುನಾವಣೆ (Council Election) ಅಂತಿಮ ಘಟ್ಟ ತಲುಪಿದೆ. ಅಭ್ಯರ್ಥಿಗಳ ಪ್ರಚಾರ ನಡೆಸುತ್ತಿರುವ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಇಂದು ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ (KLE Secretary Prabhakar Kore) ಭೇಟಿಯಾದರು. ವಾಯವ್ಯ ಶಿಕ್ಷಕ ಕ್ಷೇತ್ರದ ಚುನಾವಣೆಯಲ್ಲಿ ಕೆಎಲ್ಇ ಸಂಸ್ಥೆಯ ಮತಗಳೇ ನಿರ್ಣಾಯವಾಗಿವೆ. ಮೂರು ಜಿಲ್ಲೆಯಲ್ಲಿ 95 ಶಿಕ್ಷಣ ಸಂಸ್ಥೆ ಹೊಂದಿರುವ ಕೆಎಲ್ಇ ಸಂಸ್ಥೆಯು ಒಟ್ಟು 3 ಸಾವಿರ ಶಿಕ್ಷಕ ಮತಗಳನ್ನು (Vote) ಹೊಂದಿದೆ. ಈ ಹಿನ್ನೆಲೆ ಪ್ರಭಾಕರ್ ಕೋರೆ ಅವರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳಿಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Ex DCM Laxman Savadi) ಸಾಥ್ ನೀಡಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ನಿನ್ನೆ ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಪಡೆದಿದ್ದೇವೆ. ಪ್ರಥಮ ಬಾರಿಗೆ ಬಿಜೆಪಿ ಮೂರು ಸ್ಥಾನ ಪಡೆದಿದೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪ್ರತಿನಿಧಿತ್ವ ಹೆಚ್ಚಾಗಿದೆ. ಅದೇ ರೀತಿ ವಿಧಾನ ಪರಿಷತ್‌ನ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು.

ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಯಡಿಯೂರಪ್ಪ ಸೇರಿ ನಮ್ಮ ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಎಲ್ಲಾ ಸಂಘ ಸಂಸ್ಥೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅರುಣ್ ಶಹಾಪುರ್, ಹನುಮಂತ ನಿರಾಣಿ ದೊಡ್ಡ ಲೀಡ್ ‌ನಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ಹೇಳಿದರು.

ಇದನ್ನೂ ಓದಿ:  Chaddi War: ಸಿದ್ದರಾಮಯ್ಯ ಮೂಗಿಗೆ ಈಗ ಚಡ್ಡಿ ವಾಸನೆ ಬಂದಿರುವ ಹಾಗಿದೆ; ರಿಷಿಕುಮಾರ ಸ್ವಾಮೀಜಿ

ಪ್ರಭಾಕರ್ ಕೋರೆ ನಮ್ಮ ಜೊತೆಗಿದ್ದಾರೆ

ಇದೇ ವೇಳೆ ಬಿಜೆಪಿ ವಿರುದ್ಧ ಕೆಎಲ್‌ಇ ಕಾರ್ಯಾಧ್ಯಕ್ಷ ಪ್ರಭಾಕರ್ ಕೋರೆ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನನಗೆ ಮುಂಚೆನೇ ಹೇಳಿದ್ದರು, ಪೂರ್ವಭಾವಿಯಾಗಿ ಡಾಕ್ಟರೇಟ್ ಕೊಡುವ ಕಾರ್ಯಕ್ರಮ ಇತ್ತು. ಆರು ತಿಂಗಳು ಮೊದಲೇ ನಿಶ್ಚಯವಾಗಿತ್ತು ನನಗೆ ಹೇಳಿಯೇ ಹೋಗಿದ್ದರು. ಎಲ್ಲೆಲ್ಲಿ ಇನ್ಸ್ಟ್ರಕ್ಷನ್ಸ್ ಕೊಡಬೇಕು ಅಲ್ಲಿ ಕೊಟ್ಟಿದ್ದು ಕೋರೆ ನಮ್ಮ ಜೊತೆಗಿದ್ದಾರೆ.

ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ದೊಡ್ಡಮಟ್ಟದ ಸಭೆ ಮಾಡ್ತಿದೀವಿ. ಪ್ರಭಾಕರ್ ಕೋರೆ ನಮ್ಮ ಹಿರಿಯರು ಮಾರ್ಗದರ್ಶಕರು ಸದಾ ಕಾಲ ನಮ್ಮ ಮಾರ್ಗದರ್ಶಕರಾಗಿ ಇರುತ್ತಾರೆ. ಪಕ್ಷವು ಗುರುತಿಸುತ್ತದೆ, ನಾವು ಗುರುತಿಸುತ್ತೇವೆ. ಅವರದ್ದೇ ಆದ ಸ್ಥಾನ ಇದೆ. ಸುದೀರ್ಘವಾಗಿ ನಾಲ್ಕು ದಶಕಗಳ ಕಾಲ ಸಾರ್ವಜನಿಕ ಜೀವನದಲ್ಲಿ ಮಾಡಿದ ಕೆಲಸ ನಮಗೆ ಮಾರ್ಗದರ್ಶನ.

ಬೆಳಗಾವಿಯಲ್ಲಿ ಸಂಪೂರ್ಣ ಒಗ್ಗಟ್ಟು

ಹೀಗಾಗಿ ಅದಕ್ಕೆ ಮಹತ್ವ ಇದೆ, ಯಾವುದೇ ಮಹತ್ವ ಅಲ್ಲಗಳೆದಿಲ್ಲ. ನಿಮ್ಮ ತಲೆಯಿಂದ ಅದನ್ನೆಲ್ಲ ತಗೆಯಿರಿ. ಗ್ರೌಂಡ್ ರಿಯಾಲಿಟಿ ನೋಡಿದಾಗ ಖಂಡಿತವಾಗಿ ಬಿಜೆಪಿಗೆ ಉತ್ತಮ ಅವಕಾಶ ಇದೆ. ಬೆಳಗಾವಿಯಲ್ಲಿ ಸಂಪೂರ್ಣ ಒಗ್ಗಟ್ಟಿದೆ, ನೂರಕ್ಕೆ ನೂರು ಒಗ್ಗಟ್ಟಿದೆ. ಎಲ್ಲಾ ಸಾಹುಕಾರ್‌ ಗಳು ಎಲೆಕ್ಷನ್ ಮಾಡ್ತಿದಾರೆ, ಈಗಾಗಲೇ ತಮ್ಮ ಕ್ಷೇತ್ರದಲ್ಲಿ ಸಭೆ ಮಾಡಿದ್ದಾರೆ.

ಬಿಜೆಪಿ ಬಿ ಟೀಂ ಯಾರು ಅಂತಾ ಗೊತ್ತಿದೆ ಎಂಬ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ನಿಮ್ಮ ಮೇಲೆ ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ಇದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ ನನ್ನ ವಿರುದ್ಧವೇ ಸಿದ್ದರಾಮಯ್ಯ ಜಾಸ್ತಿ ಮಾತನಾಡೋದು, ನೀವು ನೋಡ್ತಿರಲ್ಲ ಎಂದು ಉತ್ತರಿಸಿದರು.

ಯಾರಾದ್ರೂ ಬಿ ಟೀಂ ಆಗಲಿ, ನಾವ್ ಮಾತ್ರ ಎ ಟೀಂ

ಬೆಳಗಾವಿ ಬಂದಾಗ ಅವರು ಬಳಸುವ ಭಾಷೆ ನೋಡಿದಾಗ ಸಾಫ್ಟ್ ಅಥವಾ ಹಾರ್ಡ್ ನೀವೇ ತಿಳಿದುಕೊಳ್ಳಿ. ಸಿದ್ದರಾಮಯ್ಯ ಆಗಲಿ ಕುಮಾರಸ್ವಾಮಿ ಆಗಲಿ ವ್ಯಾಖ್ಯಾನ ಬಗ್ಗೆ ನಾನು ಹೋಗಬಾರದು ಅಂತಾ ತೀರ್ಮಾನ ಮಾಡಿದ್ದೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಬಿ ಟೀಂ ಅಂತಾರೆ, ಜೆಡಿಎಸ್‌ ಕಾಂಗ್ರೆಸ್ ಪಕ್ಷ ಬಿ ಟೀಂ ಅಂತಾರೆ. ಈ ಎರಡರ ಅರ್ಥ ಏನಂದ್ರೆ ಎ ಟೀಮ್ ಅಂತೂ ನಾವಾಗಿದ್ದೇವೆ. ಬಿಜೆಪಿ ಎ ಟೀಮ್ ಅಂತಾ ಎಲ್ಲರೂ ಒಪ್ಪಿಕೊಂಡಾಗಿದೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ:  Rajya Sabha Result: ನಿರ್ಮಲಾ ಸೀತಾರಾಮನ್, ಜಗ್ಗೇಶ್, ಜೈರಾಮ್ ರಮೇಶ್ ಗೆಲುವು; ತೀವ್ರ ಹಣಾಹಣಿಯಲ್ಲಿ ಲೆಹರ್ ಸಿಂಗ್ ವಿನ್

ಇನ್ನೂ ಬಿ ಟೀಮ್ ಯಾರಾದರೆ ನಮಗೇನೂ? ತಲೆಕೆಡಿಸಿಕೊಳ್ಳಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಪ್ರಾದೇಶಿಕ ಪಕ್ಷ ಮುಗಿಸಲು ಹೊರಟಿದ್ದಾರೆ ಎಂಬ ಹೆಚ್‌ಡಿಕೆ ಹೇಳಿಕೆಗೆ  ಯಾವ ಪಕ್ಷವನ್ನೂ ಇನ್ನೊಂದು ಪಕ್ಷ ಮುಗಿಸಲು ಸಾಧ್ಯವಿಲ್ಲ.  ಎಲ್ಲವೂ ಅಧಿಕಾರಕ್ಕೆ ಹೋಗೋದು ಅಧಿಕಾರ ತಗೆದುಕೊಳ್ಳೋದು ಜನರ ಕೈಯಲ್ಲಿದೆ ಎಂದು ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆಗೆ ಉತ್ತರಿಸದೇ ಹೊರಟು ಹೋದರು.
Published by:Mahmadrafik K
First published: