• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Karnataka Politics: ಬಿಜೆಪಿಗೆ ಬಿಸಿತುಪ್ಪವಾದ ಈಶ್ವರಪ್ಪ ಮಾಜಿ ಪಿಎ; ಗೆಲುವಿಗಾಗಿ ಕಮಲ ಹರಸಾಹಸ

Karnataka Politics: ಬಿಜೆಪಿಗೆ ಬಿಸಿತುಪ್ಪವಾದ ಈಶ್ವರಪ್ಪ ಮಾಜಿ ಪಿಎ; ಗೆಲುವಿಗಾಗಿ ಕಮಲ ಹರಸಾಹಸ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿನಯ್ ಅವರು ವೀರಶೈವರಾಗಿದ್ದುಮ, ಕ್ಷೇತ್ರದಲ್ಲಿ ಹೆಚ್ಚು ಮತಗಳಿವೆ. ಮೈ ಸಿ ರವಿಶಂಕರ್ ಗೆ ಬ್ರಾಹ್ಮಣ ಸಮುದಾಯದ ಮತಗಳು 10 ಸಾವಿರ ದಾಟಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಪ್ರಬಲ ಒಕ್ಕಲಿಗ ಸಮುದಾಯದವರು.

  • Share this:

ದಕ್ಷಿಣ ಪಧವೀಧರ ಪರಿಷತ್ ಚುನಾವಣೆಗೆ (Karnataka Legislative Council) ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ನಿಂದ ಮಧು ಮಾದೇಗೌಡ (Madhu Madegowda), ಜೆಡಿಎಸ್ ನಿಂದ ರಾಮು (JDS Ramu) ಮತ್ತು ಬಿಜೆಪಿಯಿಂದ ಮೈ.ಸಿ.ರವಿಶಂಕರ್ (BJP Mai. Si Ravishankar) ಕಣದಲ್ಲಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa_ ಅವರ ಪಿಎ ಎನ್.ಎಸ್.ವಿನಯ್ (NS Vinay) ಕಣದಲ್ಲಿರೋದು ಬಿಜೆಪಿಗೆ (BJP) ಬಿಸಿ ತುಪ್ಪವಾಗಿದೆ. ಹಾಗಾಗಿ ಕ್ಷೇತ್ರದಲ್ಲಿ  ಆರಕ್ಕೂ ಅಧಿಕ ಸಚಿವರು ಮತ್ತು ಸಿಎಂ ಬಸವರಾಜ್ ಬೊಮ್ಮಾಯಿ (CM Basavaaraj Bommai) ಪಕ್ಷದ ಅಭ್ಯರ್ಥಿ  ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಮಧು ಮಾದೇಗೌಡರು ಸಹ ಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ.


ಕಳೆದ ಬಾರಿ 8866 ಮತಗಳಿಂದ ಬಿಜೆಪಿ ಅಭ್ಯರ್ಥಿ ಮೈ ಸಿ ರವಿಶಂಕರ್ ಸೋತಿದ್ದರು. ಈ ಬಾರಿ ಗೋ ಮಧುಸೂದನ್ ಅವರಿಗೆ ಟಿಕೆಟ್ ತಪ್ಪಿಸಿ ಮೈ ಸಿ ರವಿಶಂಕರ್ ಅವರನ್ನ ಎರಡನೇ ಬಾರಿ ಕಣಕ್ಕಿಳಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂ ಕಾರ್ಯದರ್ಶಿ ಆಪ್ತರಾಗಿರೋ ರವಿಶಂಕರ್, ಕಳೆದ ಭಾರೀ ಜೆಡಿಎಸ್ ನ ಶ್ರೀಕಂಠೇಗೌಡರ ಎದುರು ಪರಾಭವಗೊಂಡಿದ್ದರು.


ಮೈ ಸಿ ರವಿಶಂಕರ್ ಗೆಲ್ಲಿಸಲೇಬೇಕೆಂದು ಸಿಎಂ ಆದಿಯಾಗಿ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಗೆ ಟಾಸ್ಕ್ ನೀಡಲಾಗಿದೆ. ಖುದ್ದು ಬಿ ಎಲ್ ಸಂತೋಷ್ ಅವರಿಂದಲೇ ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ:  Rajya Sabha Election: ಕೊನೇ ಕ್ಷಣದವರೆಗೂ ಕಾಂಗ್ರೆಸ್ ಬೆಂಬಲಿಸುವ ಭರವಸೆ ಇದೆ, ಸಿದ್ದರಾಮಯ್ಯರನ್ನು ಭೇಟಿಯಾಗುವ- ರೇವಣ್ಣ


ಎನ್.ಎಸ್.ವಿನಯ್ ಪ್ಲಸ್ ಪಾಯಿಂಟ್ ಏನು?


ಎನ್.ಎಸ್.ವಿನಯ್ ಕಳೆದ ಎರಡು ವರ್ಷದಿಂದ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ನಟ ಪ್ರೇಮ್ ಸಹಾಯ ಪಡೆದು 40 ಸಾವಿರಕ್ಕೂ ಹೆಚ್ಚು ಎನ್ರೋಲ್ಮೆಂಟ್ ಮಾಡಿದ್ದಾರೆ. 30 ಸಾವಿರ ಪಧವೀಧರ ಮತದಾರರಿಗೆ 1 ಲಕ್ಷದ ಅಪಘಾತ ಬೆನಿಫಿಟ್ ವಿಮೆ ಮಾಡಿಸಿದ್ದಾರೆ.


ವಿನಯ್ ಅವರು ವೀರಶೈವರಾಗಿದ್ದುಮ, ಕ್ಷೇತ್ರದಲ್ಲಿ ಹೆಚ್ಚು ಮತಗಳಿವೆ. ಮೈ ಸಿ ರವಿಶಂಕರ್ ಗೆ ಬ್ರಾಹ್ಮಣ ಸಮುದಾಯದ ಮತಗಳು 10 ಸಾವಿರ ದಾಟಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳಿಬ್ಬರೂ ಪ್ರಬಲ ಒಕ್ಕಲಿಗ ಸಮುದಾಯದವರು. ಜಾತಿ ಲೆಕ್ಕಚಾರದಲ್ಲಿ ಮತವಿಭಜನೆ ಆದರೆ ಗೆಲುವಿನ ಲೆಕ್ಕಚಾರವೇ ಉಲ್ಟಾ ಆಗಲಿದೆ ಎಂದು ಗುಪ್ತಚರ ಇಲಾಖೆ ವರದಿ ನೀಡಿದೆ ಎಂದು ತಿಳಿದು ಬಂದಿದೆ.


ವಿನಯ್ ಮಿಂಚಿನ ಸಂಚಾರ


ಇನ್ನು ಕ್ಷೇತ್ರದಲ್ಲಿ ವಿನಯ್ ಅವರ ಮಿಂಚಿನ ಸರ್ಕಾರ ಬಿಜೆಪಿಗರ  ನಿದ್ದೆ ಕೆಡಿಸಿದೆ. ಹಾಗಾಗಿ ವಿನಯ್ ಅವರನ್ನು ಕಣದಿಂದ ಹಿಂದೆ ಸರಿಸಲು ಪ್ರಯತ್ನ ಮಾಡಲಾಗಿತ್ತು. ಖುದ್ದು ಕೆ ಎಸ್ ಈಶ್ವರಪ್ಪರಿಂದಲೂ ಪ್ರಯತ್ನ ನಡೆದಿದೆ. ಸಂಘದ ಪ್ರಮುಖರು ಸಹ ವಿನಯ್ ಮನವೊಲಿಕೆ ಮುಂದಾದ್ರೂ ಚುನಾವಣೆಯಿಂದ ಹಿಂದೆ ಸರಿಯಲು ಒಪ್ಪಿಲ್ಲ ಎನ್ನಲಾಗುತ್ತಿದೆ.


ಕ್ಷೇತ್ರದಲ್ಲಿ ಬಿಜೆಪಿ ಬಿರುಸಿನ ಪ್ರಚಾರ


ವಿನಯ್ ಚುನಾವಣೆಯಿಂದ ಹಿಂದೆ ಸರಿಯಲು ಒಪ್ಪದಿದ್ದಾಗ ಬಿಜೆಪಿಯ 6ಕ್ಕೂ ಹೆಚ್ಚು ಸಚಿವರು ಪ್ರಚಾರ ನಡೆಸುತ್ತಿದ್ದಾರೆ. ಸಿಎಂ ಬೊಮ್ಮಾಯಿ ಪ್ರಚಾರವೂ ನಿಗದಿ ಮಾಡಲಾಗಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರರಿಂದಲೂ ಪ್ರಚಾರಕ್ಕೆ ಸೂಚನೆ ನೀಡಲಾಗಿದೆ.


ಇದನ್ನೂ ಓದಿ:  Nalin Kumar Kateel: ಚಡ್ಡಿಗೆ ಬೆಂಕಿ ಹಾಕಿ ಅಂತ ಹೇಳ್ತಿರೋ ಸಿದ್ದರಾಮಯ್ಯನೇ ಆ ಬೆಂಕಿಯಲ್ಲಿ ಸುಟ್ಟು ಹೋಗ್ತಾರೆ: ಕಟೀಲ್


ಜೂನ್ 15ರಂದು ಫಲಿತಾಂಶ


ಪಕ್ಷೇತರ ಅಭ್ಯರ್ಥಿ  ಆಗಿರುವ ವಿನಯ್ ಮೂರು ಪಕ್ಷಗಳ ಅಭ್ಯರ್ಥಿಗಳ ನಿದ್ದೆಗೆಡಿಸಿರೋದಂತತು ನಿಜ. ಕ್ಷೇತ್ರದಲ್ಲಿ 1 ಲಕ್ಷದ 41 ಸಾವಿರ ಮತಗಳಿವೆ. ದಕ್ಷಿಣ ಪಧವೀಧರ ಕ್ಷೇತ್ರದಲ್ಲಿ ಮೈಸೂರು, ಚಾಮರಾಜನಗರ , ಹಾಸನ , ಮಂಡ್ಯ ಜಿಲ್ಲೆಗಳು ಬರುತ್ತವೆ. ಜೂನ್  13 ರಂದು ಮತದಾನ ನಡೆಯಲಿದ್ದು, ಜೂನ್ 15ರಂದು ಫಲಿತಾಂಶ ಬರಲಿದೆ.

First published: