Council Crisis: ಸೋನಿಯಾ ಗಾಂಧಿ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್; ಇಂದು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಡಿಕೆ ಶಿವಕುಮಾರ್ ಅವರಿಂದ ಅಭ್ಯರ್ಥಿಗಳ ಪಟ್ಟಿ ಪಡೆದಿರುವ ಸೋನಿಯಾ ಗಾಂಧಿ ಅವರು ಉಸ್ತುವಾರಿ ರಣದೀಪ್ ಸುರ್ಜೆವಾಲಾ ಜೊತೆ ಚರ್ಚೆ ಮಾಡಿ ಬಳಿಕ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಸೋನಿಯಾ ಗಾಂಧಿ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್

ಸೋನಿಯಾ ಗಾಂಧಿ ಭೇಟಿ ಮಾಡಿದ ಡಿ.ಕೆ.ಶಿವಕುಮಾರ್

  • Share this:
ನವದೆಹಲಿ, ನ. 20: ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ ಗೆ ( Legislative Council) ಆಯ್ಕೆ ಮಾಡಬೇಕಿರುವ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ ಕಾಂಗ್ರೆಸ್ (Congress) ಇನ್ನೂ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಇಂದು‌ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ (AICC President Sonia Gandhi) ಅವರನ್ನು ದೆಹಲಿಯ 10 ಜನಪತ್ (10 Janapath) ನಲ್ಲಿರುವ ಅವರ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ ಶಿವಕುಮಾರ್ (KPCC D.K. Shivakumar) ಭೇಟಿ ಮಾಡಿ‌‌ ಚರ್ಚೆ ನಡೆಸಿದ್ದಾರೆ.‌ ಡಿ.ಕೆ. ಶಿವಕುಮಾರ್ ಅಭ್ಯರ್ಥಿಗಳ ಪಟ್ಟಿಯನ್ನು ಸೋನಿಯಾ ಗಾಂಧಿ ಅವರಿಗೆ ನೀಡಿದ್ದು ಇಂದು ಸಂಜೆಯೊಳಗೆ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ನಿನ್ನೆ (ನವೆಂಬರ್ 19) ಡಿ.ಕೆ. ಶಿವಕುಮಾರ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ (Karnataka Congress In Charge and AICC General Secretary Randeep Surjewala) ಅವರನ್ನು ಭೇಟಿ ಮಾಡಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಸಿದ್ದರು.

ಇಂದು ಅಭ್ಯರ್ಥಿಗಳ ಪಟ್ಟಿ ಪ್ರಕಟ

ಇಂದು ಸೋನಿಯಾ ಗಾಂಧಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಅವರಿಂದ ಅಭ್ಯರ್ಥಿಗಳ ಪಟ್ಟಿ ಪಡೆದಿರುವ ಸೋನಿಯಾ ಗಾಂಧಿ ಅವರು ಉಸ್ತುವಾರಿ ರಣದೀಪ್ ಸುರ್ಜೆವಾಲಾ ಜೊತೆ ಚರ್ಚೆ ಮಾಡಿ ಬಳಿಕ ಅಧಿಕೃತವಾಗಿ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:  Karnataka MLC Elections- 20 ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ; ನಂದೀಶ್, ಲಖನ್​ಗಿಲ್ಲ ಟಿಕೆಟ್

ಒಂದೇ ಬಾರಿ ಅಭ್ಯರ್ಥಿಗಳ ಹೆಸರು ಪ್ರಕಟ!

ಸೋನಿಯಾ ಗಾಂಧಿ ಅವರ ಭೇಟಿ ಬಳಿಕ ನ್ಯೂಸ್ 18 ಕನ್ನಡದ (News18 Kannada) ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಸೋನಿಯಾ ಗಾಂಧಿ ಭೇಟಿ ಮಾಡಿ ಹಲವು ವಿಷಯ ಚರ್ಚಿಸಿದ್ದೇನೆ. ವಿಧಾನ ಪರಿಷತ್ ಅಭ್ಯರ್ಥಿಗಳ ಬಗ್ಗೆ ಚರ್ಚೆ ಆಗಿದೆ. ರಾಜ್ಯ ಉಸ್ತುವಾರಿ ಜೊತೆ ಚರ್ಚಿಸಿ ಅಭ್ಯರ್ಥಿಗಳನ್ನು ಪ್ರಕಟಿಸುತ್ತಾರೆ. ಎರಡು ಅಥವಾ ಮೂರು‌ ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲಾ ಕ್ಷೇತ್ರಗಳಿಗೆ ಒಂದೇ ಬಾರಿ ಅಭ್ಯರ್ಥಿಗಳ ಹೆಸರು ಪ್ರಕಟ ಆಗಲಿದೆ ಎಂದು ಹೇಳಿದರು.

ಇದಲ್ಲದೆ ಎಐಸಿಸಿ ಅಧ್ಯಕ್ಷೀಯ ಚುನಾವಣೆ (AICC Presidential Election) ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೊಂದಣಿ ಶುರುವಾಗಿದ್ದು ಆ ಬಗ್ಗೆ ಕೂಡ ಸೋನಿಯಾ ಗಾಂಧಿ ಅವರ ಜೊತೆ ಚರ್ಚೆ ಮಾಡಿದ್ದೇನೆ.

ಬಿಟ್ ಕಾಯಿನ್ ಹಗರಣದ ಚರ್ಚೆ ಇಲ್ಲ

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದೇನೆ. ರಾಜ್ಯ ಪ್ರವಾಸ ಮಾಡುವ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದು ಹೇಳಿದರು.  ಆದರೆ ರಾಜ್ಯದಲ್ಲಿ ಈಗ ಭಾರೀ ಚರ್ಚೆ ಆಗುತ್ತಿರುವ ಬಿಟ್ ಕಾಯಿನ್ ಹಗರಣದ (Bitcoin Scam) ಬಗ್ಗೆ ಚರ್ಚೆ ಮಾಡಿಲ್ಲ ಎಂದು ಡಿಕೆಶಿ ತಿಳಿಸಿದರು.

ಇದನ್ನೂ ಓದಿ:  ಪರಿಷತ್ ಪೈಟ್; ಜಾರಕಿಹೊಳಿ ಕುಟುಂಬದ ಸದಸ್ಯರು ಸ್ವತಂತ್ರರು, ಅವರದ್ದೇ ಆದ ನಿರ್ಣಯ ತೆಗೆದುಕೊಳ್ಳುತ್ತಾರೆ; Ramesh Jarkiholi

ಹೈಕಮಾಂಡಿಗೆ ರಾಜ್ಯ ಕಾಂಗ್ರೆಸ್ ನಾಯಕರು ಸಿದ್ದಪಡಿಸಿ ಕಳುಹಿಸಿರುವ ಪಟ್ಟಿ ಈ ರೀತಿ ಇದೆ.

ಪಟ್ಟಿಯಲ್ಲಿ ಒಂದೇ ಅಭ್ಯರ್ಥಿ ಹೆಸರಿರುವ ಕ್ಷೇತ್ರಗಳು
ಬೆಂಗಳೂರು ಗ್ರಾಮಾಂತರ- ಎಸ್. ರವಿ
ಕೋಲಾರ ಚಿಕ್ಕಬಳ್ಳಾಪುರ- ಗೋವಿಂದೇಗೌಡ
ಶಿವಮೊಗ್ಗ- ಪ್ರಸನ್ನ ಕುಮಾರ್
ಚಿಕ್ಕಮಗಳೂರು- ಗಾಯಿತ್ರಿ ಶಾಂತೇಗೌಡ
ತುಮಕೂರು- ರಾಜೇಂದ್ರ
ಚಿತ್ರದುರ್ಗ ದಾವಣಗೆರೆ- ಸೋಮಶೇಖರ್
ಮಂಡ್ಯ- ದಿನೇಶ್ ಗೂಳಿ ಗೌಡ
ಕೊಡಗು- ಮಂಥರ್ ಗೌಡ
ಹಾಸನ- ಶಂಕರ್ಕೊಪ್ಪಳ -ರಾಯಚೂರು- ಶರಣೇಗೌಡ ಬಯ್ಯಾಪುರ
ಬಳ್ಳಾರಿ- ಕೆಸಿ ಕೊಂಡಯ್ಯ
ಧಾರವಾಡ (ದ್ವಿ ಸದಸ್ಯ ಸ್ಥಾನ) - ಸಲೀಂ ಅಹಮ್ಮದ್
ಬೆಳಗಾವಿ (ದ್ವೀ ಸದಸ್ಯ ಸ್ಥಾನ)- ಚನ್ನರಾಜು
ಗದಗ- ಆರ್ ಎಸ್ ಪಾಟೀಲ್
ಉತ್ತರ ಕನ್ನಡ- ಭೀಮಣ್ಣ ನಾಯಕ
ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಅಭ್ಯರ್ಥಿ ಹೆಸರಿರುವ ಕ್ಷೇತ್ರಗಳು
ಮೈಸೂರು- ಚಾಮರಾಜನಗರ (ದ್ವಿ ಸದಸ್ಯ ಸ್ಥಾನ) ಧರ್ಮಸೇನ, ಹೆಚ್.ಸಿ. ಮಹದೇವಪ್ಪ
ಬೆಂಗಳೂರು ನಗರ- ಮಂಜುನಾಥ್ ರೆಡ್ಡಿ/ಚೇತನ್ ದೇವನಹಳ್ಳಿ
ಕಲಬುರ್ಗಿ- ನೀಲಕಂಠ ರಾವ್ ಮುಲಗಿ/ ಇಟಗಿ ಶಹಪುರ್
ವಿಜಯಪುರ-ಬಾಗಲಕೋಟೆ (ದ್ವಿ ಸದಸ್ಯ ಸ್ಥಾನ)- ಎಸ್.ಆರ್. ಪಾಟೀಲ್, ಸುನೀಲ್ ಗೌಡ ಪಾಟೀಲ್
ದಕ್ಷಿಣ ಕನ್ನಡ- ಉಡುಪಿ(ದ್ವಿ ಸದಸ್ಯ ಸ್ಥಾನ)- ರಾಜೇಂದ್ರ ಕುಮಾರ್, ಮಂಜುನಾಥ್ ಭಂಡಾರಿ, ಶಾಮಲ ಬಂಡಾರಿ, ಐವಾನ್ ಡಿಸೋಜ, ಕೃಪ ಅಳ್ವ
Published by:Mahmadrafik K
First published: