Ramanagara: ಹಳಿತಪ್ಪಿದ ಆಡಳಿತ ವ್ಯವಸ್ಥೆ, ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!

ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ವೇ ನಂ.118 ರಲ್ಲಿ ಒಟ್ಟು 198 ಎಕರೆ ಸರ್ಕಾರಿ ಗೋಮಾಳ ಇದ್ದು, ಇದರಲ್ಲಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಕೊಡಬೇಕಿತ್ತು. ಆದರೆ 25 ಕೋಟಿ ಬೆಲೆಬಾಳುವ 23.10 ಎಕರೆ ಸರ್ಕಾರಿ ಗೋಮಾಳ ಜಾಗದ ನಕಲಿ ದಾಖಲೆ ಪತ್ರ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಮಾರಾಟ ಮಾಡಿದ್ದು ಈಗ ಕಂದಾಯ ಇಲಾಖೆಯ ಸಿಬ್ಬಂದಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ರಾಮನಗರ(ಜೂ.08): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy)ಸ್ವಕ್ಷೇತ್ರ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸರ್ಕಾರಿ ಅಧಿಕಾರಿಗಳೇ (Govt Officers) ಸರ್ಕಾರದ ಗೋಮಾಳ ಜಾಗವನ್ನ ನುಂಗಿ ಪೊಲೀಸರ (Police) ಅತಿಥಿಗಳಾಗಿರುವ ಘಟನೆ ನಡೆದಿದೆ. ಚನ್ನಪಟ್ಟಣ (Channapattana) ತಾಲೂಕಿನ ಕೋಲೂರು ಗ್ರಾಮದ ಸರ್ವೇ ನಂ.118 ರಲ್ಲಿ ಒಟ್ಟು 198 ಎಕರೆ ಸರ್ಕಾರಿ ಗೋಮಾಳ ಇದ್ದು, ಇದರಲ್ಲಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಕೊಡಬೇಕಿತ್ತು. ಆದರೆ 25 ಕೋಟಿ ಬೆಲೆಬಾಳುವ 23.10 ಎಕರೆ ಸರ್ಕಾರಿ ಗೋಮಾಳ ಜಾಗದ ನಕಲಿ ದಾಖಲೆ ಪತ್ರ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಮಾರಾಟ ಮಾಡಿದ್ದು ಈಗ ಕಂದಾಯ ಇಲಾಖೆಯ ಸಿಬ್ಬಂದಿಗಳು ಪೊಲೀಸರ (Police) ಅತಿಥಿಯಾಗಿದ್ದಾರೆ. 02-06-2022 ರಂದು ಚನ್ನಪಟ್ಟಣದ ಉಪತಹಶೀಲ್ದಾರ್ ಲಕ್ಷ್ಮೀದೇವಮ್ಮ ಚನ್ನಪಟ್ಟಣದ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಕಂದಾಯ ಇಲಾಖೆಯ ರೆಕಾರ್ಡ್ ಸೆಕ್ಷನ್ ನಲ್ಲಿ ಭಾರೀ ಗೋಲ್ ಮಾಲ್ ಆಗಿದೆ ಎಂದು ದೂರು ನೀಡಿದ್ದಾರೆ.

ಈ ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ತಹಶೀಲ್ದಾರ್ ಹರ್ಷವರ್ಧನ್ ತನಿಖೆ ನಡೆಸಿದ ಹಿನ್ನೆಲೆ ಈ 23.10 ಎಕರೆ ಭೂಮಿಗೆ ಸಂಬಂಧಿಸಿದಂತೆ 50 ಪುಟಗಳ ನಕಲಿ ಮಾಡಿರುವುದು ಕಂಡುಬಂದ ಹಿನ್ನೆಲೆ ಕಂದಾಯ ಇಲಾಖೆ ಎಸ್ಡಿಎ ಹರೀಶ್ ಕುಮಾರ್, ರೆಕಾರ್ಡ್ ಸೆಕ್ಷನ್ ನಾಗರಾಜು ರನ್ನ ಅಮಾನತ್ತು ಮಾಡಿ ಪೊಲೀಸರಿಗೆ ಒಪ್ಪಿಸಿದ್ದರು.

ಕಾಣದ ಕೈಗಳು ಇನ್ನು ಹತ್ತು ಹಲವಿದ್ದಾವೆ

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುಮಾಸ್ತನಾಗಿರುವ ಚಿಕ್ಕಸಿದ್ದಯ್ಯ ತಲೆಮರೆಸಿಕೊಂಡಿದ್ದಾನೆ. ಲೋಕೇಶ್, ಬೋರಲಿಂಗಯ್ಯರನ್ನ ಅರೆಸ್ಟ್ ಮಾಡಲಾಗಿದೆ. ಕಾಣದ ಕೈಗಳು ಇನ್ನು ಹತ್ತು ಹಲವಿದ್ದಾವೆ ಎನ್ನಲಾಗ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ನ್ಯೂಸ್ 18 ಜೊತೆಗೆ ಮಾತನಾಡಿ ತನಿಖೆ ಮಾಡಲಾಗ್ತಿದೆ ಸೂಕ್ತ ಕ್ರಮವಹಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: Threat: ಬಿಜೆಪಿ‌ ಮುಖಂಡ, ಶ್ರೀರಾಮಸೇನೆ ಮುಖ್ಯಸ್ಥನ ತಲೆಗೆ ತಲಾ 10 ಲಕ್ಷ ಘೋಷಣೆ; Instagramನಲ್ಲಿ ಬೆದರಿಕೆ

ಎಸ್ಪಿ ಸಂತೋಷ್ ಬಾಬು ಸಹ ಮಾತನಾಡಿ ಯಾರೇ ತಪ್ಪು ಮಾಡಿದ್ದರೂ ಸಹ ಕಾನೂನು ಕ್ರಮ ಎಂದು ನ್ಯೂಸ್ 18 ಮೂಲಕ ಎಚ್ಚರಿಕೆ ನೀಡಿದ್ದಾರೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕ್ಷೇತ್ರದ ಜನರು ಆಕ್ರೋಶಹೊರಹಾಕಿದ್ದಾರೆ.

ಕ್ಷೇತ್ರದಲ್ಲಿ ಕೈತಪ್ಪಿದ ಕುಮಾರಸ್ವಾಮಿ ಹಿಡಿತ, ಭ್ರಷ್ಟರದ್ದೇ ಆಡಳಿತ :

ಚನ್ನಪಟ್ಟಣದಲ್ಲಿ ಸರ್ಕಾರಿ ಗೋಮಾಳಕ್ಕೆ ಸರ್ಕಾರಿ ಅಧಿಕಾರಿಗಳೇ ಕತ್ತರಿ ಹಾಕಿರುವ ಘಟನೆ ಈಗ ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತದ ವೈಖರಿಯನ್ನ ಎತ್ತಿ ತೋರಿಸುತ್ತಿದೆ.ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಭಾರೀ ಅಕ್ರಮ ಬಯಲಾಗಿದ್ದು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಗೋಮಾಳಕ್ಕೆ ಕನ್ನ ಹಾಕಲಾಗಿದೆ.‌ ಕೋಲೂರು ಗ್ರಾಮದ ಸರ್ವೆ ನಂ.118 ರಲ್ಲಿ ಒಟ್ಟು 198 ಎಕರೆ ಸರ್ಕಾರಿ ಗೋಮಾಳ ಜಾಗ ಇದ್ದು, ಅದರಲ್ಲಿ 23.10 ಎಕರೆ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ.

ಅರ್ಹ ಫಲಾನುಭವಿಗಳಿಗೆ ಕೊಡದೇ ಲಂಚ ಪಡೆದು ನಕಲಿ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ.  ಚನ್ನಪಟ್ಟಣದ ತಾಲೂಕು ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕಂದಾಯ ಇಲಾಖೆಯ SDA ಆಗಿದ್ದ ಹರೀಶ್ ಕುಮಾರ್, ರೆಕಾರ್ಡ್ ಸೆಕ್ಷನ್ ನಾಗರಾಜು ಅಕ್ರಮ ಬಯಲಿಗೆ ಬಂದಿದೆ.

ಇದನ್ನೂ ಓದಿ: Kolara: ದೇಗುಲದ ಬಾಗಿಲು ತೆರೆಯಲು ಹೋದ ನಗರಸಭೆ ಸದಸ್ಯನ ಕಗ್ಗೊಲೆ!

ಇಬ್ಬರನ್ನು ಅಮಾನತ್ತು ಮಾಡಿದ ಚನ್ನಪಟ್ಟಣ ತಹಶೀಲ್ದಾರ್ ಹರ್ಷವರ್ಧನ್ ಈಗ ಈ ಇಬ್ಬರೂ ಚನ್ನಪಟ್ಟಣ ನಗರ ಪೊಲೀಸರ ವಶಕ್ಕೆ ಪಡೆದಿದ್ದಾರೆ.‌ 02-06-2022 ರಂದು ಉಪತಹಶೀಲ್ದಾರ್ ಲಕ್ಷ್ಮೀದೇವಮ್ಮ ದೂರು ನೀಡಿದ್ದರು. ‌ಚನ್ನಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ತನಿಖೆ ಮಾಡಿದಾಗ ಅಕ್ರಮ ಬಯಲಾಗಿದೆ.‌

ಈ ಪ್ರಕರಣದಲ್ಲಿ ಬೋರಲಿಂಗಯ್ಯ, ಲೋಕೇಶ್ ಸಹ ಬಂಧಿತರಾಗಿದ್ದು, ತನಿಖೆ ಮುಂದುವರೆಸಿರುವ ಚನ್ನಪಟ್ಟಣ ನಗರ ಪೊಲೀಸರು ಮತ್ತಷ್ಟು ಜನರನ್ನ ಹುಡುಕುತ್ತಿದ್ದಾರೆ. ಒಟ್ಟಾರೆ ಕುಮಾರಸ್ವಾಮಿ ಕ್ಷೇತ್ರದ ಕಡೆಗೆ ಗಮನಹರಿಸದ ಕಾರಣ ಇಷ್ಟೆಲ್ಲ ಅವಾಂತರಗಳು ನಡೆಯುತ್ತಿವೆ.
Published by:Divya D
First published: