ಭ್ರಷ್ಟಾಚಾರ ಕಾಂಗ್ರೆಸ್ ಕಾಲದ ಬಳುವಳಿ : ಸಚಿವ KS Eshwarappa

ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದು  ನಾವು ಬಿಗಿ ಮಾಡಿದ್ದೇವೆ.  ಎಸಿಬಿ ಇನ್ನೂ ಬಿಗಿಯಾಗಿ ಯಾರು ಭ್ರಷ್ಟಾಚಾರ ಮಾಡಿದ್ದಾರೆ, ಲಂಚ ಸ್ವೀಕಾರ ಮಾಡಿದ ಎಲ್ಲರ ಮೇಲೆ ಬಿಗಿಯಾದ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಕೆ ಎಸ್ ಈಶ್ವರಪ್ಪ

ಕೆ ಎಸ್ ಈಶ್ವರಪ್ಪ

  • Share this:
ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ (Karnataka Politics) 40 ಪರ್ಸೆಂಟ್ ಸದ್ದು ಮಾಡುತ್ತಿದೆ. ಈಗಾಗಲೇ ಕಾಂಗ್ರೆಸ್ (Congress) ನಿಯೋಗ ರಾಜ್ಯಪಾಲರನ್ನು (Governor) ಭೇಟಿಯಾಗಿ ಸರ್ಕಾರ ವಜಾಗೊಳಿಸಬೇಕೆಂದು ಮನವಿ ಮಾಡಿಕೊಂಡಿದೆ.  ಕಾಂಗ್ರೆಸ್ ಆರೋಪಕ್ಕೆ ಇಂದು ದಾವಣಗೆರೆಯಲ್ಲಿ (Davanagere) ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಪ್ರತಿಕ್ರಿಯೆ ನೀಡಿದರು. ಭ್ರಷ್ಟಾಚಾರ ಕಾಂಗ್ರೆಸ್ ಕಾಲದ ಬಳುವಳಿ. ಯಾವುದೇ ಅಧಿಕಾರಿಗಳಿಗೆ ಭಯವಿಲ್ಲದೆ  ಇಷ್ಟು ಜನ ಎಸಿಬಿ (ACB)ಯಲ್ಲಿ ಸಿಗ್ತಿದ್ದಾರೆ .ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದು  ನಾವು ಬಿಗಿ ಮಾಡಿದ್ದೇವೆ.  ಎಸಿಬಿ ಇನ್ನೂ ಬಿಗಿಯಾಗಿ ಯಾರು ಭ್ರಷ್ಟಾಚಾರ ಮಾಡಿದ್ದಾರೆ, ಲಂಚ ಸ್ವೀಕಾರ ಮಾಡಿದ ಎಲ್ಲರ ಮೇಲೆ ಬಿಗಿಯಾದ ಕ್ರಮ ತೆಗೆದುಕೊಳ್ಳಲಿದೆ ಎಂದರು.

ಇದೆಲ್ಲಾ ಆಗೋಕೆ ಕಾಂಗ್ರೆಸ್  ಕಾಲದ ಬಳುವಳಿ. ಇದು ಅವರ ಕಾಲದ ಬಳುವಳಿ ಎಂದು ಸುಮ್ಮನೆ ಕೂರಕ್ಕೆ ಆಗಲ್ಲ. ಎಸಿಬಿ ಗೆ ಏನೂ ಸಹಕಾರ ಬೇಕು ಎಲ್ಲಾ ನಮ್ಮ ಸರ್ಕಾರ ಕೊಡುತ್ತದೆ ಎಂದು ಸಚಿವ ಈಶ್ವರಪ್ಪ ಹೇಳಿದರು.

ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಗೆ ಲಕ್ಷ್ಮಿ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ ಮಾಡಿದ್ದೇವೆ. ಅವರು ಡಿ ಲಿಮಿಟೇಶನ್  ತೀರ್ಮಾನ ಆದಷ್ಟು ಬೇಗ ಕೊಡಬೇಕು ಎಂದು ಪ್ರಾರ್ಥನೆ ಮಾಡಿದ್ದು, ಜನವರಿಯಲ್ಲಿ ನಿರ್ಧಾರ ಪ್ರಕಟವಾಗುವ ಸಾಧ್ಯತೆಗಳಿವೆ.ಫೆಬ್ರವರಿಯಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಆಗಬಹುದು ಎಂದು ಸುಳಿವು ನೀಡಿದರು.

ಕಾಂಗ್ರೆಸ್ ದುಡ್ಡಿನ ಲೆಕ್ಕದಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ

ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ದುಡ್ಡಿನ ಲೆಕ್ಕದಲ್ಲಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿದೆ. ಪಕ್ಷಕ್ಕೆ ಸಂಬಂಧ ಇಲ್ಲದೇ ಇರುವವರನ್ನು ಆಯ್ಕೆ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿರೋ ಅಪಮಾನ. ದುಡ್ಡು ಇರೋರನ್ನ ಹುಡುಕಿ ಹುಡುಕಿ ತಂದು ಜನಪ್ರತಿನಿಧಿಗಳನ್ನ ಕೊಂಡುಕೊಳ್ಳುವ ಕೆಲಸ ಮಾಡ್ತಾ ಇದ್ದಾರೆ. ಇವರಿಗೆ ಸರಿಯಾದ ಬುದ್ದಿಯನ್ನ ಜನರು ಕಲಿಸಬೇಕು ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:  ಎಲ್ಲರಿಗೂ ಸೊಕ್ಕು ಬಂದಾಗ ದೇವರು ಯಾರೋ ಒಬ್ಬರನ್ನು ತಯಾರು ಮಾಡ್ತಾನೆ: Ramesh Jarkiholi

ಬಿಜೆಪಿಯನ್ನು ಗೆಲ್ಲಿಸುವಂತೆ ಈಶ್ವರಪ್ಪ ಮನವಿ

ಪರಿಷತ್ ಅಂದರೆ ಚಿಂತರಕರ ಚಾವಡಿ ಅಂತ ಕರೆಸಿಕೊಳ್ಳುತ್ತದೆ. ಆದರೆ ರಾಜಕಾರಣ ಗಂಧ ಗಾಳಿ ಗೊತ್ತಿಲ್ಲದ, ಗ್ರಾಮೀಣ ಪ್ರದೇಶ ಸಮಸ್ಯೆ ಗೊತ್ತಿಲ್ಲದಂತಹ ಅಭ್ಯರ್ಥಿಗಳನ್ನ ಕಾಂಗ್ರೆಸ್ ನವರು ಆಯ್ಕೆ ಮಾಡಿದ್ದಾರೆ. ದುಡ್ಡಿರೋ ವ್ಯಕ್ತಿಗಳನ್ನ ಸೋಲಿಸಿ ಬಿಜೆಪಿಯನ್ನ ಗೆಲ್ಲಿಸಬೇಕು ಎಂದ ಕೆಎಸ್ ಈಶ್ವರಪ್ಪ ಮನವಿ ಮಾಡಿಕೊಂಡರು.

ನಮ್ಮ ನಾಯಕರಾದ ಯಡಿಯೂರಪ್ಪ ನವರ ಜೆಡಿಎಸ್ ಗೆ ಬೆಂಬಲ ಕೊಡುವಂತೆ ಕೇಳಿದ್ದಾರೆ.  ಅವರು 5 ದಿನದ ವರೆಗೆ ಕಾಲಾವಕಾಶ ಕೊಡಿ ಅಂತ ಕೇಳಿದ್ದಾರೆ. ನಮಗೆ ಬೆಂಬಲ ಕೊಡುವ ನಂಬಿಕೆ ಇದೆ.

ಸಿಎಂ ಮಾತಾಡಿದ್ರೂ ಲಖನ್ ನಾಮಪತ್ರ ವಾಪಸ್ ಪಡೆದಿಲ್ಲ

ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ವಿಚಾರಕ್ಕೆ ಪ್ರತಿಕ್ರಿಯಿಸಿ , ಇದು ಅವರ ವಯಕ್ತಿಕ ಅಭಿಪ್ರಾಯ ಸಿಎಂ ಕೂಡ ಅವರ ಜೊತೆ ಮಾತುಕತೆ ನಡೆಸಿದರೂ ನಾಮಪತ್ರ ವಾಪಸ್ ಪಡೆದಿಲ್ಲ.  ಆದರ ಕೂಡ ನಮ್ಮ ಪಕ್ಷದ ಅಭ್ಯರ್ಥಿಯನ್ನ ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:  Mandya Politics: ಅಂದು ಸುಮಲತಾ, ಇಂದು ಮಂಜುನಾಥ್: ಮತ್ತೇ ಹಳೆ ತಂತ್ರ ಪ್ರಯೋಗ ಮಾಡ್ತಾ ಜೆಡಿಎಸ್?

ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕಾರ್ಯದಲ್ಲಿ ಕಾಂಗ್ರೆಸ್

ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಮೇಲೆ ಅತಂತ್ರ ಸ್ಥಿತಿಯಲ್ಲಿ ಇದೆ.  ನಿರಂತರವಾಗಿ ಅಪಪ್ರಚಾರ ಮಾಡುವುದು, ಸುಳ್ಳು ಮಾಹಿತಿ ಕೊಡುವುದು,  ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕಾರ್ಯದಲ್ಲಿ ತೊಡಗಿದೆ. ಕಾಂಗ್ರೆಸ್ ನಾಯಕರಿಗೆ ಭಯ ಕಾಡ್ತಿದೆ. ಬಿಜೆಪಿ ಮಹಾನಗರ ಪಾಲಿಕೆ ಸೇರಿದಂತೆ ಅನೇಕ ಚುನಾವಣೆ ಅಭೂತಪೂರ್ವ ಗೆಲುವು ಸಾಧಿಸಿದೆ. ಇದೇ ರೀತಿ ಗೆಲುವಿನ ಅಂತರ ಜಾಸ್ತಿ ಆದ್ರೆ ನಾನು ನಿರುದ್ಯೋಗಿ ಆಗುತ್ತೇನೆ ಅಂತ ಸುಳ್ಳು ಸುದ್ದಿಗಳನ್ನ ಸೃಷ್ಟಿ ಮಾಡಿ ದೂರು ಕೊಡುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
Published by:Mahmadrafik K
First published: