D.K Shivakumar: ಹಣ ಕೊಟ್ರೆ ಕೆಲಸ, ಪ್ರತಿಯೊಂದು ಹುದ್ದೆಗೂ ರೇಟ್ ಫಿಕ್ಸ್; ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ- ಡಿಕೆಶಿ

ಪಿಎಸ್‌ಐ, ಸಿಪಿಐ, ಡಿವೈಎಸ್‌ಪಿ, ಎಸ್‌ಪಿ ಹೀಗೆ ಪ್ರತಿಯೊಂದೂ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ. ಅಷ್ಟು ಹಣ ಕೊಟ್ಟರೆ ಮಾತ್ರ ಹುದ್ದೆ ದೊರೆಯುತ್ತದೆ ಎಂದು ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

ಡಿಕೆ ಶಿವಕುಮಾರ್

ಡಿಕೆ ಶಿವಕುಮಾರ್

  • Share this:
ಚಿಕ್ಕಬಳ್ಳಾಪುರ (ಮಾ.7): ಸರ್ಕಾರಿ ಇಲಾಖೆಗಳಲ್ಲಿ (Government Departments) ಭ್ರಷ್ಟಾಚಾರದ ಸುದ್ದಿಗಳಿಗೆ ಬ್ರೇಕೇ ಇಲ್ಲ, ಅದ್ರಲ್ಲೂ ಸರ್ಕಾರಿ ಹುದ್ದೆಗಳ ನೇಮಕದ ವಿಚಾರದಲ್ಲಂತೂ ಭ್ರಷ್ಟಾಚಾರ (Corruption) ತಾಂಡವವಾಡ್ತಿದೆ. ವಿವಿಧ ಹುದ್ದೆಗಳಿಗೆ ನಡೆಸೋ ಪರೀಕ್ಷೆಯಿಂದ ಹಿಡಿದು ನೇಮಕಾತಿ ವರೆಗೂ ಕಾಂಚಾಣದ ಹೊಳೆಯೇ ಹರಿಯುತ್ತಿದೆ. ಬೇರೆ ಇಲಾಖೆ ಬಿಡಿ ಪೊಲೀಸ್​ ಇಲಾಖೆಯಲ್ಲೂ ಕೆಲಸ ನೀಡಲು ಲಕ್ಷ ಲಕ್ಷ ಹಣ ಪಡೆಯುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakuamr)​ ಆರೋಪಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮಾತನಾಡಿದ ಡಿಕೆಶಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದ್ರು. ಹೋಟೆಲ್ ಮೆನು ಮಾದರಿಯಲ್ಲಿ ಆಯಾ ಹುದ್ದೆಗಳಿಗೆ ರೇಟ್ ಫಿಕ್ಸ್ (Rate Fix) ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಪಿಎಸ್‌ಐ, ಸಿಪಿಐ, ಡಿವೈಎಸ್‌ಪಿ, ಎಸ್‌ಪಿ ಹೀಗೆ ಪ್ರತಿಯೊಂದೂ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ. ಅಷ್ಟು ಹಣ ಕೊಟ್ಟರೆ ಮಾತ್ರ ಹುದ್ದೆ ದೊರೆಯುತ್ತದೆ ಎಂದು ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದರು.

‘ಪೊಲೀಸ್​ ಇಲಾಖೆಯಲ್ಲಿ ಹೆಚ್ಚಾಗಿದೆ ಭ್ರಷ್ಟಾಚಾರ’

ರಾಜ್ಯದ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ನಿರತವಾಗಿದ್ದು, ಪೊಲೀಸ್ ಇಲಾಖೆಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ರಾಜ್ಯದ ಜನರ ಮುಂದೆ ಬಯಲಾಗಿದೆ ಎಂದು ಡಿಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಪಿಎಸ್‌ಐ, ಸಿಪಿಐ, ಡಿವೈಎಸ್‌ಪಿ, ಎಸ್‌ಪಿ ಹೀಗೆ ಪ್ರತಿಯೊಂದೂ ಹುದ್ದೆಗೂ ರೇಟ್ ಫಿಕ್ಸ್ ಮಾಡಲಾಗಿದೆ. ಇಲಾಖೆಯ ಭ್ರಷ್ಟಾಚಾರಗಳು ಒಂದೊಂದೆ ಬಯಲಾಗುತ್ತೆ ಅಂತ ಡಿಕೆಶಿ ಹೇಳಿದ್ದಾರೆ.

‘ನೀರಿನ ರಾಜಕೀಯ ಮಾಡುವುದು ನಮ್ಮ ಉದ್ದೇಶ ಅಲ್ಲ‘

ಇನ್ನು ಮೇಕೆದಾಟು ಯೋಜನೆ ಕುರಿತು ಎಚ್‌ಡಿ ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿದ ಡಿಕೆಶಿ, ಜೆಡಿಎಸ್‌ ಮಾಡಲು ಹೊರಟಿರುವ ಜಲಧಾರೆ ಕಾರ್ಯಕ್ರಮದ ಅರ್ಥ ತಿಳಿಸಲಿ ಎಂದು ವ್ಯಂಗ್ಯವಾಡಿದರು. ಮೇಕೆದಾಟು ಯೋಜನೆಯಿಂದ ನೀರು ಹರಿಯಲ್ಲ ಎಂದಿದ್ದ ಸಿಎಂ ಈಗ ಬಜೆಟ್‌ನಲ್ಲಿ ಯೋಜನೆಗೆ ಸಾವಿರ ಕೋಟಿ ಮೀಸಲಿಟ್ಟಿದ್ದು ಏಕೆ ಎಂದು ಪ್ರಶ್ನಿಸಿದ ಡಿಕೆಶಿ, ನೀರಿನ ರಾಜಕೀಯ ಮಾಡುವುದು ನಮ್ಮ ಉದ್ದೇಶ ಅಲ್ಲ. ನಮ್ಮ ಪಾಲಿನ ಕುಡಿಯುವ ನೀರು ಪಡೆಯಲು ನಾವು ಪ್ರಯತ್ನ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Siddaramaiah: ಡಬಲ್ ಇಂಜಿನ್ ಸರ್ಕಾರ ಅಲ್ಲ ಡಬ್ಬಾ ಸರ್ಕಾರ ಎಂದ್ರು ಸಿದ್ದು; ಕಲಾಪದಲ್ಲಿ ಅನುದಾನದ ಬಗ್ಗೆ ವಾಕ್ಸಮರ

ಇತ್ತ ರಾಮನಗರದಲ್ಲೂ ಪೊಲೀಸರ ವಿರುದ್ಧ HDK ಕಿಡಿ

ರಾಮನಗರ  ಜಿಲ್ಲೆಯಾದ್ಯಂತ ಪೊಲೀಸರ  ವಸೂಲಿ ಕಾಟ ಹೆಚ್ಚಾಗಿದೆ ಅಂತ ಕುಮಾರಸ್ವಾಮಿ ಆರೋಪಿಸಿದ್ದಾರೆ. ಬೈಕ್​, ಕಾರುಗಳನ್ನು ಎಲ್ಲೆಂದರಲ್ಲಿ ಅಡ್ಡ ಹಾಕಿ ಪೊಲೀಸರು ಹಣ ಕೀಳ್ತಿದ್ದಾರೆ. ಎಲ್ಲ ದಾಖಲೆ ಇದ್ರೂ ದಂಡ ಹಾಕ್ತಾರೆ. ರೈತರು ಎಲ್ಲಿಂದ ತರಬೇಕು ಅಷ್ಟು ದುಡ್ದು ಅಂತ ನಡುರಸ್ತೆಯಲ್ಲಿ ಎಸ್​ಪಿ ಬಗ್ಗೆ ಮಾತಾಡಿ ಅಧಿಕಾರಿಗಳನ್ನ ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸ ವಸೂಲಿ ಬಗ್ಗೆ ನನಗೆ ಹಲವು ದೂರುಗಳು ಬಂದಿವೆ. ಪೊಲೀಸರಿಗೆ 500 ರೂಪಾಯಿ ವ್ಯಾಲ್ಯೂ ಗೊತ್ತಿರುವುದಿಲ್ಲ. ಆದರೆ ರೈತನಿಗೆ ಪ್ರತಿ ರೂಪಾಯಿಯೂ ಮುಖ್ಯವಾಗಿರುತ್ತೆ. ಇದೇ ರೀತಿ ದಂಡ ವಿಧಿಸುತ್ತಿದ್ದರೆ ಪ್ರತಿಭಟನೆ ಮಾಡುತ್ತೇನೆ. ಎಸ್‌ಪಿ ಕಚೇರಿ ಮುಂದೆ ಧರಣಿ ಕೂರುವುದಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (H.D Kumaraswamy) ಎಚ್ಚರಿಕೆ ಕೊಟ್ಟಿದ್ದಾರೆ. ಅವನು ಇಲ್ಲಿಗೆ ಏಕೆ ಬಂದಿದ್ದಾನೆಂದು ನನಗೆ ಗೊತ್ತಿದೆ ಎಂದು ರಾಮನಗರ ಎಸ್.ಪಿ ಸಂತೋಷ್ ಬಾಬು ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಗುಡುಗಿದ್ದಾರೆ.

ಇದನ್ನೂ ಓದಿ: ಒಂದು ವೇಳೆ ಈ ಯೋಜನೆ ಆದ್ರೆ ನಾನು ನೇಣು ಹಾಕಿಕೊಳ್ತೀನಿ: ಸಚಿವರಿಗೆ MLC Bojegowda ಸವಾಲ್

ಸರ್ಕಾರ ಪೊಲೀಸರಿಗೆ ಸಂಬಳ ಕೊಡಲ್ವಾ?‘
 ಇಲ್ಲಿ ಪೊಲೀಸರು ದಂಡ ವಿಧಿಸುವುದು ಹೆಚ್ಚಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರಿಂದ ಕುಮಾರಸ್ವಾಮಿಗೆ ದೂರು ನೀಡಲಾಗಿದೆ. ಈ ವೇಳೆ ಪೊಲೀಸರ ವಿರುದ್ಧ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೀಗೆ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕ ಸರ್ಕಾರ ಪೊಲೀಸರಿಗೆ ಸಂಬಳ ನೀಡುವುದಿಲ್ಲವಾ? ನಾನು ರಾಮನಗರ ಎಸ್‌ಪಿ ಜತೆ ಮಾನತಾಡುವುದಿಲ್ಲ. ನೀವು ಹೋಗಿ ಎಸ್‌ಪಿಯನ್ನು ಕೇಳಿ ಎಂದು ಹೆಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ
Published by:Pavana HS
First published: