ಕೈಗಾರಿಕಾ ಇಲಾಖೆಯಲ್ಲಿ ಹಗಲು ದರೋಡೆ; ಮಂತ್ರಿಗಿರಿ ಹೋದರೂ ಅವರನ್ನು ಮಟ್ಟಹಾಕುತ್ತೇನೆ; ಎಚ್ ಡಿ ರೇವಣ್ಣ

news18
Updated:September 1, 2018, 2:41 PM IST
ಕೈಗಾರಿಕಾ ಇಲಾಖೆಯಲ್ಲಿ ಹಗಲು ದರೋಡೆ; ಮಂತ್ರಿಗಿರಿ ಹೋದರೂ ಅವರನ್ನು ಮಟ್ಟಹಾಕುತ್ತೇನೆ; ಎಚ್ ಡಿ ರೇವಣ್ಣ
news18
Updated: September 1, 2018, 2:41 PM IST
ಅಶೋಕ್​, ನ್ಯೂಸ್​ 18 ಕನ್ನಡ

ಹಾಸನ,(ಸೆ.01): ಕೈಗಾರಿಕಾ ಇಲಾಖೆಯಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಮಂತ್ರಿಗಿರಿ ಹೋದರೂ ಪರವಾಗಿಲ್ಲ ಅವರನ್ನು ಮಟ್ಟಹಾಕುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್​.ಡಿ ರೇವಣ್ಣ ಅವರು ಶಪಥ ತೊಟ್ಟಿದ್ಧಾರೆ. ಅಲ್ಲದೇ ಶೀಘ್ರದಲ್ಲಿಯೇ ದರೋಡೆಕಾರರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗುತ್ತೇನೆ ಎಂದು ಭರವಸೆ ನೀಡಿದ್ಧಾರೆ.

ಹಾಸನದಲ್ಲಿ ಮಾತನಾಡಿದ ಅವರು, ಬಡವರ ಮಕ್ಕಳಿಗೆ ಅನ್ಯಾಯವಾಗುತ್ತಿದೆ.  ಸ್ಥಳೀಯರು ನನಗೆ ದೂರು ನೀಡಿದ್ದಾರೆ. ಕಂಪನಿಗಳಲ್ಲಿ ನಡೆಯುತ್ತಿರುವ ಮೋಸದ ಜಾಲೆಯ ಬಗ್ಗೆ ಸಿಎಂಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕೂಡಲೇ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿದೆ ಎಂದು ತಿಳಿಸಿದ್ದಾರೆ.

ಭೂಗಳ್ಳರಿಗಾಗಿಯೇ ಕರ್ನಾಟಕ ಕೈಗಾರಿಕ ಪ್ರಾದೇಶಾಭಿವೃದ್ದಿ ಮಂಡಳಿ ಕಚೇರಿಯಿದೆ. ಕೈಗಾರಿಕೆ ಮಾಡಲು ಜಮೀನು ಪಡೆದು ಬೇರೆಯವರಿಗೆ ಬಾಡಿಗೆಗೆ ನೀಡಲಾಗುತ್ತಿದೆ.  ಮಂತ್ರಿಗಿರಿ ಹೋದರು ಚಿಂತೆಯಿಲ್ಲ. ಭೂಗಳ್ಳರನ್ನು ಹಿಡಿದು ಮಟ್ಟ ಹಾಕುತ್ತೇನೆ. ಅಧಿಕಾರಿಗಳ ಸಭೆ ನಡೆಸಿ ಕ್ರಮಕೈಗೊಳ್ಳಲು ಮುಂದಾಗುತ್ತೇನೆ ಎಂದರು.

2446 ಎಕರೆ ಜಮೀನು ಕೈಗಾರಿಕೆಗೆ ಮಂಜೂರು ಮಾಡಿದ್ದೇವೆ.  400 ಎಕರೆಯನ್ನು ಹಿಮನ್ ಸಿಂಗ್ ಕಾರ್ಖಾನೆಗೆ ನೀಡಲಾಗಿದೆ. ಒಂದು ಎಕರೆಗೆ 16 ಲಕ್ಷ ರೂ. ಹಣದಂತೆ ಕೊಂಡುಕೊಂಡಿದ್ದಾರೆ. ಯುವಕರಿಗೆ ಉದ್ಯೋಗ ತರಬೇತಿ ಹೆಸರಿನಲ್ಲಿ 500 ಕೋಟಿ ಹಣವನ್ನು ಸರ್ಕಾರದಿಂದ ಸಬ್ಸಿಡಿ ಪಡೆದಿದ್ದಾರೆ. ಆದರೂ, ಹಿಮನ್ ಸಿಂಗ್ ಕಾರ್ಖಾನೆ ನೂರಾರು ಕೋಟಿ ಲೂಟಿ ಮಾಡಿದೆ ಎಂದು ಆರೋಪಿಸಿದರು.

ಆಪ್ಟೋ ಇನ್ ಫ್ರಾಸ್ಟ್ರಕ್ಚರ್ ಎಂಬ ಕಂಪನಿಯಿಂದ ಸರ್ಕಾರಕ್ಕೆ ಮಹಾಮೋಸವಾಗಿದೆ.  10 ಕೋಟಿಗೆ 250 ಎಕರೆ ಜಮೀನು ಪಡೆದಿದ್ದಾರೆ.  ವಿದೇಶದಿಂದ 100 ಕೋಟಿ ಹಣ ಸಾಲ ಪಡೆದಿದ್ದಾರೆ.  ಈ ಕೈಗಾರಿಕೆಯವರು ಜಮೀನು ಪಡೆದು ಬೇರೆಯವರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.

ಕರ್ನಾಟಕ ಕೈಗಾರಿಕ ಪ್ರಾದೇಶಾಭಿವೃದ್ದಿ ಮಂಡಳಿ ಅಧಿಕಾರಿಗಳು ಶಾಮೀಲಾಗಿ ಸರ್ಕಾರಿ ಜಮೀನು ಲೂಟಿ ಮಾಡಿದ್ದಾರೆ. ಪ್ರತೀ ಎಕರೆಗೆ ರೈತರ ಬಳಿ ಒಂದರಿಂದ ಎರಡು ಲಕ್ಷ ಹಣಕ್ಕೆ ಖರೀದಿ ಮಾಡಿದ್ದಾರೆ.  ಆಪ್ಟೋ ಎಂಬ ಕಂಪನಿಯವರು ಸರ್ಕಾರಿ ಜಮೀನು ಲೂಟಿ ಮಾಡಿದ್ದಾರೆಂದು ಸಚಿವ ರೇವಣ್ಣ ತಿಳಿಸಿದರು.
First published:September 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ