Corruption Case: ಬಿಎಸ್​​​ವೈ ಆಂಡ್ ಸನ್ಸ್​ಗೆ ಕಂಟಕ, ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ಆದೇಶ

ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಿಸಿದ್ದರಿಂದ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಈ ಎಲ್ಲಾ ಕಾರಣಗಳಿಂದ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.

ಬಿ ಎಸ್ ಯಡಿಯುರಪ್ಪ ಮತ್ತು ವಿಜಯೇಂದ್ರ

ಬಿ ಎಸ್ ಯಡಿಯುರಪ್ಪ ಮತ್ತು ವಿಜಯೇಂದ್ರ

  • Share this:
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former BS Yediyurappa) ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರ (Corruption) ಆರೋಪ ಹಿನ್ನೆಲೆ ಎಫ್​​ಐಆರ್ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶ ನೀಡಿದೆ. ಲೋಕಾಯುಕ್ತ (Lokayukta) ಇನ್ಸ್​ಪೆಕ್ಟರ್​ಗೆ ಪ್ರಕರಣ ಸಂಬಂಧ ತನಿಖೆ ನಡೆಸಲು ಜನಪ್ರತಿನಿಧಿಗಳ ಕೋರ್ಟ್ ಸೂಚನೆ ನೀಡಿದೆ. ಬಿ.ಎಸ್.ಯಡಿಯುರಪ್ಪ, ಬಿ.ವೈ.ವಿಜಯೇಂದ್ರ, ಶಶಿಧರ್ ಮರಡಿ, ಸಂಜಯ್ ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್.ಟಿ.ಸೋಮಶೇಖರ್, ಡಾ.ಜಿ.ಸಿ.ಪ್ರಕಾಶ್, ಕೆ.ರವಿ, ವಿರುಪಾಕ್ಷಪ್ಪ ಯಮಕನಮರಡಿ ವಿರುದ್ಧ ಸಾಮಾಜಿಕ ಹೋರಾಟಗಾರ ಅಬ್ರಹಾಂ ನೀಡಿದ್ದ ಖಾಸಗಿ ದೂರಿನಡಿಯಲ್ಲಿ ಪ್ರಕರಣ ದಾಖಲಾಗಲಿದೆ.

2021ರಲ್ಲಿ ಈ ಖಾಸಗಿ ದೂರನ್ನು ಜನಪ್ರತಿನಿಧಿಗಳ ಕೋರ್ಟ್, ಪೂರ್ವಾನುಮತಿ ಇಲ್ಲ ಎಂಬ ಕಾರಣಕ್ಕೆ ಈ ಅರ್ಜಿಯನ್ನು ವಜಾಗೊಳಿಸಿತ್ತು. ಜನಪ್ರತಿನಿಧಿಗಳ ಕೋರ್ಟ್ ಆದೇಶ ಪ್ರಶ್ನಿಸಿ ಅಬ್ರಹಾಂ ಹೈಕೋರ್ಟ್​​ಗೆ ಮೇಲ್ಮನವಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ಸೂಚನೆ ಮೇರೆಗೆ ವಿಶೇಷ ನ್ಯಾಯಾಲಯ ತನಿಖೆಗೆ ಆದೇಶ ನೀಡಿದೆ.

ಏನಿದು ಪ್ರಕರಣ?

ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಹಾಗೂ ಈ ಬಗ್ಗೆ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ಕೊಡುವಂತೆ ಟಿ.ಜೆ.ಅಬ್ರಹಾಂ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು.

ಆದರೆ ಈ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​, ಈ ಹಿಂದೆ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿರುವ ಕಾರಣ ಈ ಅರ್ಜಿಯನ್ನು ಪಿಐಎಲ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿತ್ತು.

ಅಲ್ಲದೇ ಅರ್ಜಿಯನ್ನು ಮಾರ್ಪಡಿಸಿ ಸೂಕ್ತ ಪೀಠಕ್ಕೆ ವರ್ಗಾಯಿಸಲು ರಿಜಿಸ್ಟ್ರಾರ್ ಜನರಲ್‌ರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಿಸಿದ್ದರಿಂದ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಈ ಎಲ್ಲಾ ಕಾರಣಗಳಿಂದ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮೇಲ್ಮನವಿ ಸಲ್ಲಿಸಲು ಬಿಎಸ್​ವೈ ಪರ ವಕೀಲರ ಸಿದ್ಧತೆ

ಇನ್ನು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿ ಹೈಕೋರ್ಟ್​ಗೆ ಬಿಎಸ್​ವೈ ಪರ ವಕೀಲ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ. ಕಾಲಾವಕಾಶದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಮಾನಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಪರ ವಕೀಲರಿಗೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿದೆ.

Corruption Case, BS Yediyurappa and Sons, Karnataka High Court, kannada News, Karnataka News, ಭ್ರಷ್ಟಾಚಾರ ಪ್ರಕರಣ, ಬಿಎಸ್​​ವೈಗೆ ಕಂಟಕ
ಬಿ. ಎಸ್.ಯಡಿಯೂರಪ್ಪ


ಇದನ್ನೂ ಓದಿ:  Crime News: ಅಣ್ಣನ ಮಗಳ ಮೇಲೆ ತಮ್ಮನ ಕೆಟ್ಟ ದೃಷ್ಟಿ: ಚಿಕ್ಕಪ್ಪನ ಅಟ್ಟಹಾಸಕ್ಕೆ ಗರ್ಭಿಣಿಯಾದ ಮುಗ್ಧೆ

‘ಲೋಕಾ’ ಸಿಬ್ಬಂದಿ ಕೊರತೆ

ಲೋಕಾಯುಕ್ತಕ್ಕೆ ನಿತ್ಯ ಐದಾರು ದೂರು, ಮನವಿಗಳ ಸಲ್ಲಿಕೆಯಾಗುತ್ತಿದೆ. ಎಸಿಬಿ ರದ್ದು ಬಳಿಕ ಲೋಕಾಯುಕ್ತಕ್ಕೆ ಪ್ರತಿದಿನ 200ಕ್ಕೂ ಹೆಚ್ಚು ಮನವಿಗಳು ಬರುತ್ತಿವೆ. ಅಸ್ಪತ್ರೆ, ಸರ್ಕಾರಿ ಕಚೇರಿಗಳ ಬಗ್ಗೆ ಲೋಕಾಯುಕ್ತಕ್ಕೆ ದೂರುಗಳು ಬರುತ್ತಿರುವ ಮಾಹಿತಿ ಲಭ್ಯವಾಗಿದೆ. ಸೂಕ್ತ ದಾಖಲೆ ಸಿಕ್ಕಿದ್ರೆ FIR ದಾಖಲಿಸಿಕೊಂಡು ತನಿಖೆ ನಡೆಸಲು ಲೋಕಾಯುಕ್ತ ಸಿದ್ಧತೆ ನಡೆಸಿದೆ.

ಲೋಕಾಯುಕ್ತಕ್ಕೆ ಪವರ್ ಸಿಕ್ಕಿದ್ರು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದೆ. ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರಕ್ಕೆ ಅಧಿಕಾರಿಗಳು ಪತ್ರ ಬರೆದು, ಎಸಿಬಿಯಲ್ಲಿ ಕೆಲಸ ಮಾಡಿದ್ದವರ ವರ್ಗಾವಣೆಗೆ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸ್ ವಿಭಾಗದಲ್ಲಿ 1 ಎಡಿಜಿಪಿ, 17 ಎಸ್‌ಪಿ, 4 ಡಿವೈಎಸ್‌ಪಿ, 70 ಇನ್ಸ್‌ಪೆಕ್ಟರ್, 2 ಪಿಎಸ್‌ಐ, 4 ASI, 138 ಹೆಡ್‌ಕಾನ್ಸ್‌ಸ್ಟೇಬಲ್ಸ್‌, 133 ಕಾನ್‌ಸ್ಟೇಬಲ್‌ಗಳು ಕೆಲಸದಲ್ಲಿದ್ದಾರೆ.

ಇದನ್ನೂ ಓದಿ:  TB Canal: ತುಂಗಭದ್ರಾ ಕಾಲುವೆಗೆ ಬಿದ್ದ 10 ಪ್ರಯಾಣಿಕರಿದ್ದ ಆಟೋ; ಇಬ್ಬರ ಸಾವು, ಇನ್ನುಳಿದವರಿಗಾಗಿ ಶೋಧ

ಮಂತ್ರಿ ಮಾಡ್ತೀನಿ ಅಂತ ಮಾತು ತಪ್ಪಿದ್ರಿ, ಆರ್ ಶಂಕರ್ ಆಕ್ರೋಶ

ಬಿಜೆಪಿ (Karnataka BJP) ಮಂಗಳವಾರ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಸಭೆಯಲ್ಲಿ ಕಾಂಗ್ರೆಸ್ (Congress) ತಂತ್ರಗಳಿಗೆ ಮರುತಂತ್ರಗಳ ಚರ್ಚೆ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಈ ವೇಳೆ ಸಚಿವ ಸಂಪುಟ ವಿಸ್ತರಣೆ (Cabinet Expansion) ಆಗದ ವಿಚಾರದಲ್ಲಿ ಬಿಜೆಪಿ ನಾಯಕರ (BJP Leaders) ಮೇಲೆ ಮಾಜಿ ಸಚಿವ ಆರ್.ಶಂಕರ್ (Former Minister R Shankar) ಸಿಟ್ಟು ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಶಾಸಕಾಂಗ ಸಭೆಯಲ್ಲಿ (BJP CLP Meeting) ಏರುಧ್ವನಿಯಲ್ಲಿ ಆರ್.ಶಂಕರ್ ಮಾತನಾಡಿದ್ದಾರೆ ಎನ್ನಲಾಗಿದೆ.
Published by:Mahmadrafik K
First published: