Corruption Case​: ಬಿಎಸ್​ವೈ, ಕುಟುಂಬಕ್ಕೆ ಹೈಕೋರ್ಟ್​ ಆದೇಶದಿಂದ ಮತ್ತೆ ಸಂಕಷ್ಟ!

ಬಿ. ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ಮರು ವಿಚಾರಣೆಗೆ ಹೈಕೋರ್ಟ್ ಆದೇಶ ನೀಡಿದೆ. ಹೀಗಿರುವಾಗ ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿ ಹೈಕೋರ್ಟ್​ಗೆ ಬಿಎಸ್​ವೈ ಪರ ವಕೀಲ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ.

ಬಿಎಸ್​ವೈ ಹಾಗೂ ಕುಟುಂಬಕ್ಕೆ ಹೈಕೋರ್ಟ್​ ಆದೇಶದಿಂದ ಮತ್ತೆ ಸಂಕಷ್ಟ

ಬಿಎಸ್​ವೈ ಹಾಗೂ ಕುಟುಂಬಕ್ಕೆ ಹೈಕೋರ್ಟ್​ ಆದೇಶದಿಂದ ಮತ್ತೆ ಸಂಕಷ್ಟ

  • Share this:
ಬೆಂಗಳೂರು(ಸೆ.07): ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ಬಿ. ಎಸ್​ ಯಡಿಯೂರಪ್ಪಗೆ (Former Chief Minister BS Yediyurappa) ಮತ್ತೊಂದು ಸಂಕಷ್ಟ ಬಂದೊದಗಿದೆ. ಹೌದು ಭ್ರಷ್ಟಾಚಾರ ಆರೋಪ ಪ್ರಕರಣ (Corruption Case) ಸಂಬಂಧ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕುಟುಂಬದ ವಿರುದ್ಧ ಮರು ವಿಚಾರಣೆಗೆ ಹೈಕೋರ್ಟ್ (Karnataka High Court) ಆದೇಶ ನೀಡಿದೆ. ಈ ಹಿಂದೆ ಪ್ರಾಸಿಕ್ಯೂಷನ್​​ಗೆ ಪೂರ್ವಾನುಮತಿ ಸಿಗದ ಕಾರಣ ಈ ಕೇಸ್ ವಜಾಗೊಂಡಿದ್ದು, ಮಾಜಿ ಸಿಎಂಗೆ ಕೊಂಚ ನೆಮ್ಮದಿ ಕೊಟ್ಟಿತ್ತು. ಆದರೀಗ ಹೈಕೋರ್ಟ್ ವಿಚಾರಣಾ ಕೋರ್ಟ್​​​ ಹಿಂದಿನ ವಜಾ ಆದೇಶ ರದ್ದುಪಡಿಸಿ, ಪ್ರಕರಣ ಮರು ವಿಚಾರಣೆಗೆ ಆದೇಶಿಸಿದೆ.

ಇದನ್ನೂ ಓದಿ: BS Yediyurappa: ಬಸವ ಭೂಷಣ ಪ್ರಶಸ್ತಿ ಸ್ವೀಕಾರಕ್ಕೆ ದುಬೈಗೆ ತೆರಳಿದ ಮಾಜಿ ಸಿಎಂ

ಯಾರೆಲ್ಲರ ವಿರುದ್ಧ ಕೇಸ್​?

ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಅವರ ಪುತ್ರ ಬಿ. ವೈ. ವಿಜಯೇಂದ್ರ,‌ ಶಶಿಧರ ಮರಡಿ, ಸಂಜಯ್​​ಶ್ರೀ, ಚಂದ್ರಕಾಂತ ರಾಮಲಿಂಗಮ್, ಎಸ್​. ಟಿ. ಸೋಮಶೇಖರ್, ಡಾ. ಜಿ. ಸಿ. ಪ್ರಕಾಶ್, ಕೆ. ರವಿ, ವಿರುಪಾಕ್ಷಪ್ಪ ಯಮಕನಮರಡಿ ಇವರೆಲ್ಲರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಕೇಸ್ ದಾಖಲಾಗಿತ್ತು. ಟಿ. ಜೆ. ಅಬ್ರಹಾಂ ಈ ಒಂದು ದೂರಿನ ಅರ್ಜಿ ಸಲ್ಲಿಸಿದ್ದು, ಅಮಿಕಸ್ ಕ್ಯೂರಿಯಾಗಿ ವೆಂಕಟೇಶ್ ಅರಬಟ್ಟಿ ವಾದಿಸಿದ್ದರು.

ಇನ್ನು ಸುಪ್ರೀಂಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲು ಕಾಲಾವಕಾಶ ಕೋರಿ ಹೈಕೋರ್ಟ್​ಗೆ ಬಿಎಸ್​ವೈ ಪರ ವಕೀಲ ಸಂದೀಪ್ ಪಾಟೀಲ್ ಮನವಿ ಮಾಡಿದ್ದಾರೆ. ಕಾಲಾವಕಾಶದ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ತೀರ್ಮಾನಿಸಲಿ ಎಂದು ಬಿ.ಎಸ್.ಯಡಿಯೂರಪ್ಪ ಪರ ವಕೀಲರಿಗೆ ಹೈಕೋರ್ಟ್ ಪ್ರತಿಕ್ರಿಯೆ ನೀಡಿದೆ.

ಏನಿದು ಪ್ರಕರಣ?

ಕೆಲ ದಿನಗಳ ಹಿಂದಷ್ಟೇ ಮಾಜಿ ಸಿಎಂ ಬಿ. ಎಸ್‌. ಯಡಿಯೂರಪ್ಪ ಮತ್ತು ಅವರ ಕುಟುಂಬದವರ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಹಾಗೂ ಈ ಬಗ್ಗೆ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ಕೊಡುವಂತೆ ಟಿ.ಜೆ.ಅಬ್ರಹಾಂ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಈ ಪಿಐಎಲ್ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್​, ಈ ಹಿಂದೆ ಅರ್ಜಿದಾರರು ಖಾಸಗಿ ದೂರು ಸಲ್ಲಿಸಿರುವ ಕಾರಣ ಈ ಅರ್ಜಿಯನ್ನು ಪಿಐಎಲ್ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ತಿರಸ್ಕರಿಸಿತ್ತು.

ಇದನ್ನೂ ಓದಿ: B S Yediyurappa: ರಾಜ್ಯ ಪ್ರವಾಸಕ್ಕೆ ಹೊಸ ಕಾರು ಖರೀದಿಸಿದ ಮಾಜಿ ಸಿಎಂ ಯಡಿಯೂರಪ್ಪ

ಅಲ್ಲದೇ ಅರ್ಜಿಯನ್ನು ಮಾರ್ಪಡಿಸಿ ಸೂಕ್ತ ಪೀಠಕ್ಕೆ ವರ್ಗಾಯಿಸಲು ರಿಜಿಸ್ಟ್ರಾರ್ ಜನರಲ್‌ರಿಗೆ ಹೈಕೋರ್ಟ್ ಸೂಚನೆ ನೀಡಿತ್ತು. ಆದರೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಪೂರ್ವಾನುಮತಿ ನಿರಾಕರಿಸಿದ್ದರಿಂದ ಇತ್ತೀಚೆಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಈ ಪ್ರಕರಣದ ತನಿಖೆಗೆ ಆದೇಶಿಸಲು ನಿರಾಕರಿಸಿತ್ತು. ಈ ಎಲ್ಲಾ ಕಾರಣಗಳಿಂದ ಟಿ.ಜೆ.ಅಬ್ರಹಾಂ ಹೈಕೋರ್ಟ್ ಮೆಟ್ಟಿಲೇರಿದ್ದರು.
Published by:Precilla Olivia Dias
First published: