• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • BMTC: ಬಿಎಂಟಿಸಿಯ 3 ನಿರ್ದೇಶಕರ ಸಹಿ ನಕಲು ಮಾಡಿ ಲಕ್ಷಾಂತರ ರೂಪಾಯಿ ದೋಖಾ ಮಾಡಿದ ಅಧಿಕಾರಿ!

BMTC: ಬಿಎಂಟಿಸಿಯ 3 ನಿರ್ದೇಶಕರ ಸಹಿ ನಕಲು ಮಾಡಿ ಲಕ್ಷಾಂತರ ರೂಪಾಯಿ ದೋಖಾ ಮಾಡಿದ ಅಧಿಕಾರಿ!

ಬಿಎಂಟಿಸಿ ಭ್ರಷ್ಟ ಅಧಿಕಾರಿ

ಬಿಎಂಟಿಸಿ ಭ್ರಷ್ಟ ಅಧಿಕಾರಿ

ಬಿಎಂಟಿಸಿ ಎಂಡಿಗಳಾದ ಅನ್ಬು ಕುಮಾರ್, ಸಿ ಶಿಖಾ ಮತ್ತು ಸತ್ಯವತಿ ಅವರ ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದದ ಆದೇಶ ಪತ್ರಕ್ಕೆ ಬಳಕೆ ಮಾಡಿ ದುರುಪಯೋಗ ಮಾಡಿದ ಆರೋಪಿ ಬಿಎಂಟಿಸಿ ವಾಣಿಜ್ಯ ಶಾಖೆಯ ವ್ಯವಸ್ಥಾಪಕ ಶ್ರೀರಾಮ ಮುಲ್ಕಾವಾನ್ ಎಂದು ತಿಳಿದು ಬಂದಿದೆ.

  • Share this:

ಬೆಂಗಳೂರು: ಬಿಎಂಟಿಸಿ (BMTC) ನಿಗಮದ ಮೂವರು ನಿರ್ದೇಶಕರ (BMTC MD) ಸಹಿಯನ್ನೇ ನಕಲು ಮಾಡಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ (Corruption) ಮಾಡಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರು (Bengaluru) ನಗರದಲ್ಲಿ ಸಂಚರಿಸುವ ಬಿಎಂಟಿಸಿ ಬಸ್‌ಗಳ (BMTC Bus) ಮೇಲೆ ಜಾಹೀರಾತು (Advertisement) ಪ್ರದರ್ಶಿಸುವ ಟೆಂಡರ್ ನೀಡಲು ಮೇಲ್ಮಟ್ಟದ ಅಧಿಕಾರಿಗಳ ಸಹಿಯನ್ನೇ ನಕಲು ಮಾಡಲಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ದಾಖಲಾಗಿದೆ.


ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಎಂಡಿಗಳಾದ ಅನ್ಬು ಕುಮಾರ್, ಸಿ ಶಿಖಾ ಮತ್ತು ಸತ್ಯವತಿ ಅವರ ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದದ ಆದೇಶ ಪತ್ರಕ್ಕೆ ಬಳಕೆ ಮಾಡಲಾಗಿದ್ದು, ಟೆಂಡರ್ ನೀಡುವಲ್ಲೂ ಫೋರ್ಜರಿ ಮೂಲಕ ಸಹಿ ಮಾಡಿದ ಆರೋಪ ಕೇಳಿ ಬಂದಿದೆ. ಜೊತೆಗೆ ಜಾಹೀರಾತು ಏಜೆನ್ಸಿಯಿಂದ ಕಿಕ್‌ಬ್ಯಾಕ್‌ ಪಡೆದ ಆರೋಪವೂ ಇದೆ.


ಇದನ್ನೂ ಓದಿ: Student Pass: ಸಂಜೆ ಬಳಿಕ ಬಸ್​ನಲ್ಲಿ ಸ್ಟೂಡೆಂಟ್ ಪಾಸ್ ಮಾನ್ಯವಿಲ್ಲ ಎಂದು ಟಿಕೆಟ್ ನೀಡಬಾರದು; ಬಿಎಂಟಿಸಿ ಆದೇಶ


ಯಾರು ಈ ಖತರ್ನಾಕ್ ಆರೋಪಿ?


ಬಿಎಂಟಿಸಿ ಎಂಡಿಗಳಾದ ಅನ್ಬು ಕುಮಾರ್, ಸಿ ಶಿಖಾ ಮತ್ತು ಸತ್ಯವತಿ ಅವರ ಸಹಿಗಳನ್ನು ನಕಲು ಮಾಡಿ ಕರಾರು ಒಪ್ಪಂದದ ಆದೇಶ ಪತ್ರಕ್ಕೆ ಬಳಕೆ ಮಾಡಿ ದುರುಪಯೋಗ ಮಾಡಿದ ಆರೋಪಿ ಬಿಎಂಟಿಸಿ ವಾಣಿಜ್ಯ ಶಾಖೆಯ ವ್ಯವಸ್ಥಾಪಕ ಶ್ರೀರಾಮ ಮುಲ್ಕಾವಾನ್ ಎಂದು ತಿಳಿದು ಬಂದಿದ್ದು, ಈತನ ನೇತೃತ್ವದಲ್ಲಿ ಈ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಬಿಎಂಟಿಸಿಗೆ ಮಣ್ಣು ಮುಕ್ಕಿಸುವ ಕೆಲಸ ಮಾಡಿದ್ದಾನೆ. ಈತ ಸದ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.


ಇದನ್ನೂ ಓದಿ: Accident: ಮಾಗಡಿ ರಸ್ತೆ ಜಂಕ್ಷನ್ ಬಳಿ ಭೀಕರ ಅಪಘಾತ; ಬೆಂಗಳೂರಲ್ಲಿ ಕಿಲ್ಲರ್​ ಬಿಎಂಟಿಸಿಗೆ ಮತ್ತಿಬ್ಬರು ಬಲಿ!


ಅವಧಿ ಮುಗಿದ ಮೇಲೂ ಅವಕಾಶ!


ನಕಲಿ ಸಹಿ ಬಳಸಿ ಲಕ್ಷಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದ ಬಿಎಂಟಿಸಿ ವಾಣಿಜ್ಯ ಶಾಖೆಯ ವ್ಯವಸ್ಥಾಪಕನಾಗಿದ್ದ ಶ್ರೀರಾಮ ಮುಲ್ಕಾವಾನ್‌ ತನ್ನ ದುಷ್ಕೃತ್ಯಗಳಿಗೆ ಇನ್ನೂ ಕೆಲವರನ್ನು ಬಳಸಿರುವ ಸಾಧ್ಯತೆ ಇದ್ದು, ತನಿಖೆಯ ಬಳಿಕವಷ್ಟೇ ಇವೆಲ್ಲದರ ಸತ್ಯಾಸತ್ಯತೆ ಹೊರಬರಬೇಕಿದೆ. ಈತ ಜಾಹೀರಾತು ಟೆಂಡರ್‌ನ ಅವಧಿ ಮುಗಿದ ಮೇಲೂ ಮತ್ತೆ ಜಾಹೀರಾತಿಗೆ ಅನುಮತಿ ನೀಡಲು ನಕಲಿ ಸಹಿ ಬಳಸಿ ಜಾಹೀರಾತು ಏಜೆನ್ಸಿಯಿಂದ ಕಿಕ್‌ಬ್ಯಾಕ್‌ ಪಡೆದಿದ್ದಾನೆ ಎಂದು ಹೇಳಲಾಗಿದೆ.
ಬಿಎಂಟಿಸಿಯ ಎಂಡಿಗಳ ಸಹಿಯನ್ನು ನಕಲು ಮಾಡಿದ ಕೃತ್ಯಕ್ಕೆ ಸಂಬಂಧಿಸಿದಂತೆ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆಯನ್ನು ಮುಂದುವರಿಸಿದ್ದಾರೆ.


ಹಬ್ಬದ ದಿನ ಕೆಲಸ ಮಾಡುವ ಸಿಬ್ಬಂದಿಗೆ ಬಿಎಂಟಿಸಿ ಗಿಫ್ಟ್‌!


ಹಬ್ಬ ಹರಿದಿನದಂದು ಕೆಲಸ ಮಾಡುವ ಸಿಬ್ಬಂದಿಗಳಿಗೆ ಬಿಎಂಟಿಸಿಯಿಂದ ಬಂಪರ್ ಗಿಫ್ಟ್ ನೀಡಲು ರೆಡಿಯಾಗಿದೆ. ಹಬ್ಬ, ಜಾತ್ರೆ ಮತ್ತು ರಜಾ ದಿನಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚುವರಿ ವೇತನ ನೀಡೋದಾಗಿ ಸಾರಿಗೆ ಅಧಿಕೃತ ಆದೇಶ ಹೊರಡಿಸಿದೆ.


ಪ್ರಯಾಣಿಕರಿಗೆ ಗುಣಮಟ್ಟ ಸೇವೆ ನೀಡಲು ಸಿಬ್ಬಂದಿ ಕೊರತೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚುವರಿ ಹಣ ನೀಡಿದ್ರೆ ಸಿಬ್ಬಂದಿ ಕೂಡ ಖುಷಿಯಾಗಿ ಕೆಲಸ ಮಾಡ್ತಾರೆ ಎನ್ನುವ ಪ್ಲಾನ್ ಇಲಾಖೆಯದ್ದಾಗಿದೆ.


ಜನವರಿ 23 ರಿಂದ ಜೂನ್ 23 ರವರೆಗೆ ಹಬ್ಬ ಹಾಗೂ ಸಾರ್ವತಿಕ ರಜೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚುವರಿ ಸಂಬಳ ನೀಡಲಾಗುತ್ತದೆ. ಹೆಚ್ಚುವರಿ ವೇತನ ನೀಡುವಂತೆ ಬಿಎಂಟಿಸಿ ಆದೇಶ ಹೊರಡಿಸಿದ್ದು, ಎಲ್ಲ ಸಾರಿಗೆ ಡಿಪೋಗಳಿಗೂ ಆದೇಶ ನೀಡಲಾಗಿದೆ. ಹಬ್ಬದ ದಿನಗಳಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಿ ಅಂತ ಹೆಚ್ಚುವರಿ ಬಸ್​ಗಳನ್ನು ನಿಯೋಜನೆ ಮಾಡಲಾಗುತ್ತದೆ. ಈ ವೇಳೆ ಸಿಬ್ಬಂದಿ ರಜೆ ತಗೆದುಕೊಂಡರೆ ಪರಿಸ್ಥಿತಿ ನಿಭಾಯಿಸಲು ಕಷ್ಟವಾಗುತ್ತದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು