Bribe: ಬೆಂಗಳೂರು ನಗರ DHO ವಿರುದ್ಧ ಲಂಚ ಪಡೆದ ಆರೋಪ; AAPನಿಂದ ಪ್ರತಿಭಟನೆ

ಹಣದ ಕವರ್ ಬಗ್ಗೆ ಅನುಮಾನ ಬರುತ್ತಿದ್ದಂತೆ ಸುಹಾಸಿನಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಕರೆಸಿ ಅಧಿಕಾರಿ ಶ್ರೀನಿವಾಸ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು ನಗರ  ಡಿಎಚ್ಓ ಡಾ.ಶ್ರೀನಿವಾಸ್ (DHO Dr Srinivas) ವಿರುದ್ಧ ಲಂಚ (Birbe) ಪಡೆದಿರುವ ಆರೋಪಗಳು ಕೇಳಿ ಬಂದಿವೆ.ಡಾ.ಶ್ರೀನಿವಾಸ್ ವಿರುದ್ಧ ಆರೋಪ ಮಾಡಿರುವ AAP ಕಾರ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದೆ. ಡಾ.ಶ್ರೀನಿವಾಸ್ ಅವರಿಗೆ ಬಿಳಿ ಬಣ್ಣದ ಕವರ್ ನಲ್ಲಿ 500 ರೂ.ಗಳ ನೋಟುಗಳನ್ನು (Money) ಇರಿಸಿ ಹಣ ನೀಡಲಾಗಿದೆ. ಆ ಹಣದ ಕವರ್ ಶ್ರೀನಿವಾಸ್ ಅವರ ಟೇಬಲ್ ಮೇಲಿತ್ತು ಎಂದು ಟಿವಿ 9 ಕನ್ನಡ ವರದಿ ಮಾಡಿದೆ. ಯಲಹಂಕ ಭಾಗದಲ್ಲಿರುವ ಮುಚ್ಚಿರುವ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮರು ಆರಂಭಿಸಬೇಕು ಎಂದು ಮನವಿ ಸಲ್ಲಿಸಲು ಆಪ್ ಬೆಂಗಳೂರು ನಹರ ಕಾರ್ಯದರ್ಶಿ ಸುಹಾಸಿನಿ (AAP Leader Suhasini) ಅವರು ಡಿಎಚ್ಓ ಕಚೇರಿಗೆ ಬಂದಿದ್ದರು.

ಈ ವೇಳೆ ಮನವಿ ಸಲ್ಲಿಸಲು ಡಿಎಚ್ಓ ಕೋಣೆಯ ಹೊರಗೆ ಕಾಯುತ್ತಿರುವಾಗ, ಸುಹಾಸಿನಿ ಅವರ ಮುಂದೆ ಕೆಲವರು ಬಿಳಿ ಕವರ್ ನಲ್ಲಿ 500 ರೂ. ನೋಟು ಹಾಕುತ್ತಿರೋದನ್ನು ನೋಡಿದ್ದಾರೆ. ಒಳಗೆ ಹೋದಾಗ ಡಿಎಚ್ಓ ಡಾ.ಶ್ರೀನಿವಾಸ್ ಅವರ ಟೇಬಲ್ ಮೇಲೆ ಆ ಬಿಳಿ ಕವರ್ ಇರೋದನ್ನು ಗಮನಿಸಿ ಪ್ರಶ್ನೆ ಮಾಡಿದ್ದಾರೆ. ಹಣದ ಕವರ್ ಬಗ್ಗೆ ಅನುಮಾನ ಬರುತ್ತಿದ್ದಂತೆ ಸುಹಾಸಿನಿ ತಮ್ಮ ಪಕ್ಷದ ಕಾರ್ಯಕರ್ತರನ್ನು ಕರೆಸಿ ಅಧಿಕಾರಿ ಶ್ರೀನಿವಾಸ್ ಅವರನ್ನು ಪ್ರಶ್ನೆ ಮಾಡಿದ್ದಾರೆ.

ಹಣದ ಬಗ್ಗೆ ಸ್ಪಷ್ಟ ಉತ್ತರ ನೀಡದ ಶ್ರೀನಿವಾಸ್

ಸುಹಾಸಿನಿ ಪ್ರಶ್ನೆ ಮಾಡುತ್ತಿದ್ದಂತೆ ಶ್ರೀನಿವಾಸ್ ಆನ್ ಲೈನ್  ನಲ್ಲಿ ಫೀಸ್ ಕಟ್ಟಲು ಹಣ ನೀಡಿದ್ದಾರೆ ಎಂದು ಹೇಳಿದ್ದಾರೆ. ಯಾವುದಕ್ಕೆ ಈ ಫೀಸ್ ಎಂದು ಮರು ಪ್ರಶ್ನೆ ಹಾಕಿದಾಗ, ಹಣ ಕೊಟ್ಟವರು ಯಾರು ಅಂತ ನನಗೆ ಗೊತ್ತಿಲ್ಲ. ನನ್ನ ಟೇಬಲ್ ಮೇಲೆ ಹಣವಿಟ್ಟು ಹೋಗಿದ್ದಾರೆ ಎಂದು ಹೇಳಿ ಕಚೇರಿಯಿಂದ ಹೊರಗೆ ಹೋಗಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ:  Second PUC ಪರೀಕ್ಷಾ & ಮೌಲ್ಯಮಾಪನ ಕಾರ್ಯನಿರತ ಸಿಬ್ಬಂದಿಗೆ ಗುಡ್ ನ್ಯೂಸ್

corruption allegations against bengaluru DHO Srinivas ಡಿಎಚ್ಓ ಶ್ರೀನಿವಾಸ್

ಈ ವೇಳೆ ಆಪ್ ಕಾರ್ಯಕರ್ತರು ಕಾರ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಿದಾಗ, ಕೊನೆಗೆ ಶ್ರೀನಿವಾಸ್ ನಡೆದುಕೊಂಡು ಹೋಗಿದ್ದಾರೆ.

KS Eshwarappa ವಿರುದ್ಧ ದೆಹಲಿಯಲ್ಲಿ FIR ದಾಖಲು

ದೆಹಲಿಯ ಕೆಂಪುಕೋಟೆ (Delhi Red fort) ಮೇಲೆ ಕೇಸರಿ ಧ್ವಜ (Saffron Flag) ಹಾರಿಸುವ ಹೇಳಿಕೆ ನೀಡಿದ್ದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ (Former Minister KS Eshwarappa) ವಿರುದ್ಧ ದೆಹಲಿಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ (Rajyasabha MP Sanjay Singh) ದೆಹಲಿಯ ನಾರ್ಥ್ ಅವೆನ್ಯೂ ಠಾಣೆಯಲ್ಲಿ ಈಶ್ವರಪ್ಪ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕೆ.ಎಸ್.ಈಶ್ವರಪ್ಪ ಹೇಳಿಕೆ ಖಂಡಿಸಿ, ಕಾಂಗ್ರೆಸ್ (Congress Protest) ಅಧಿವೇಶನದ ವೇಳೆ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿತ್ತು.

ಇದನ್ನೂ ಓದಿ:  Malali Mosque: ಮಳಲಿ ದರ್ಗಾ ವಿಚಾರವನ್ನು ಶಾಂತಿಯಿಂದ ಮುಗಿಸಲು ನಿರ್ಧಾರ; ಭರತ್ ಶೆಟ್ಟಿ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಏನಾಯ್ತು?

ಕಾಂಗ್ರೆಸ್ ಗೆ ಗುಡ್ ಬೈ ಹೇಳಿಕ ಬ್ರಿಜೇಶ್ ಕಾಳಪ್ಪ

ಗ ವಿಧಾನ ಪರಿಷತ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬ್ರಿಜೇಶ್ ಕಾಳಪ್ಪ (Congress Spoke person Brijesh Kalappa) ಕಾಂಗ್ರೆಸ್ ಪಕ್ಷಕ್ಕೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಈ ಸಂಬಂಧ ತಮ್ಮ ರಾಜೀನಾಮೆ ಪತ್ರವನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಅವರಿಗೆ ಸಲ್ಲಿಸಿದ್ದಾರೆ. ಆದ್ರೆ ಇದುವರೆಗೂ ಡಿ.ಕೆ.ಶಿವಕುಮಾರ್ ರಾಜೀನಾಮೆ ಪತ್ರವನ್ನು ಅಂಗೀಕರಿಸಲ್ಲ. ಪಕ್ಷ ಬಿಡದಂತೆ ಬ್ರಿಜೇಶ್ ಕಾಳಪ್ಪ ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
Published by:Mahmadrafik K
First published: