Corruption: ಬಾವ ಸುಂದರೇಶ್ ಹೆಸರಿನಲ್ಲಿ CT Ravi 800 ಕೋಟಿ ಆಸ್ತಿ: ಕಾಂಗ್ರೆಸ್ ಆರೋಪ

ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ಜಿಎಸ್‍ಟಿ (GST) ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ. ಪ್ರತಿ ಅಗತ್ಯ ವಸ್ತುವಿನ ಬೆಲೆಯು ಗಗನಕ್ಕೇರಿದೆ. ಇದೆಲ್ಲವನ್ನೂ ಜನರಿಗೆ ತಿಳಿಸುವುದಕ್ಕಾಗಿ ಮತ್ತು ಸಂವಿಧಾನದ ಆಶಯಗಳನ್ನು ಉಳಿಸುವುದಕ್ಕಾಗಿ ಭಾರತ್ ಜೋಡೋ ಕಾರ್ಯಕ್ರಮ ನಡೆಯುತ್ತಿದೆ ಎಂದರು.

ಸಿಟಿ ರವಿ

ಸಿಟಿ ರವಿ

  • Share this:
ಕೊಡಗು: ವಿಧಾನಸಭಾ ಅಧಿವೇಶನದ (Assembly Session) ಬಳಿಕ ಕೊಡಗು ಜಿಲ್ಲಾ ಎಸ್‍ಪಿ ಕಚೇರಿಗೆ (SP Office) ನಾವು ಮುತ್ತಿಗೆ ಹಾಕೇ ಹಾಕುತ್ತೇವೆ. ಜೊತೆಗೆ ಜಿಲ್ಲೆಯ ಇಬ್ಬರು ಶಾಸಕರ ಮನೆಗೂ (MLA House) ಮುತ್ತಿಗೆ ಹಾಕುತ್ತೇವೆ. ಅದೇನು ಮಾಡುತ್ತೀರೋ ಮಾಡಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ (KPCC Spoke person M Laxman) ಸವಾಲು ಹಾಕಿದ್ದಾರೆ. ಮಡಿಕೇರಿಯಲ್ಲಿ (Madikeri) ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಅವರು ಕೊಡಗಿಗೆ ಬಂದಾಗ ಅವರ ಕಾರಿನ ಮೇಲೆ ಮೊಟ್ಟೆ ಎಸೆದಿರಿ. ನಿಮ್ಮ ಹುಳುಕುಗಳು ಗೊತ್ತಾಗಬಾರದೆಂದು ಗಲಾಟೆ ಮಾಡಿಸಿದಿರಿ. ಬಳಿಕ ನಾವು ಪ್ರತಿಭಟನೆ ( Congress Protest) ಘೋಷಿಸುತ್ತಿದ್ದಂತೆ ನೀವು ಸಮಾವೇಶ ಮಾಡುವುದಾಗಿ ಹೇಳಿ 144 ಸೆಕ್ಷನ್ (Section 144) ಜಾರಿ ಮಾಡಿಸಿ ಕೊಡಗಿಗೆ (Kodagu) ಸಿದ್ದರಾಮಯ್ಯ ಬರಲಿ ನೋಡೋಣ ಎಂದು ಸವಾಲು ಹಾಕುತ್ತೀರಾ? ಇದೇ ನಿಮ್ಮ ತಾಕತ್ತು ಎಂದು ಟೀಕಿಸಿದರು.

ರೆಡ್ಡಿಗಳು ಇದೇ ರೀತಿ ಬಳ್ಳಾರಿಗೆ ಬನ್ನಿ ನೀವು ನೋಡೋಣ ಎಂದಿದ್ದರು. ಅವರನ್ನೇ ಬಿಡದ ಕಾಂಗ್ರೆಸ್ ನಿಮಗೆಲ್ಲಾ ಹೆದರುತ್ತದೆಯೇ ಎಂದು ಪ್ರಶ್ನಿಸಿದರು. ಕಳೆದ 20 ರಿಂದ 25 ವರ್ಷಗಳ ಕಾಲ ಜಿಲ್ಲೆಯಲ್ಲಿ ಶಾಸಕರಾಗಿದ್ದೀರ?. ಆದರೆ ಅದೇನು ಅಭಿವೃದ್ಧಿ ಮಾಡಿದ್ದೀರಾ ಇಬ್ಬರು ಶಾಸಕರು ಬಹಿರಂಗ ಚರ್ಚೆಗೆ ಬರಲಿ, ನಾನೂ ಚರ್ಚೆಗೆ ಬರುತ್ತೇನೆ ಎಂದು ಸವಾಲು ಹಾಕಿದರು.

ಬಿಜೆಪಿಗೆ ಎಂ.ಲಕ್ಷ್ಮಣ್ ಪ್ರಶ್ನೆ

ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ರಾಹುಲ್ ಗಾಂಧಿ (Congress Leader Rahul Gandhi) ಎಂದರೆ ಯಾವ ಲೆಕ್ಕವೂ ಇಲ್ಲ ಎನ್ನುತ್ತಾರೆ. ಆದರೆ ಭಾರತ್ ಜೋಡೋ (Bharat Jodo) ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಕೇಂದ್ರ ಸಚಿವ ಅಮಿತ್ ಶಾ (Union Minister Amit Shah) ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕರು ಮೈಗೆ ಚೇಳು ಬಿಟ್ಟುಕೊಂಡವರಂತೆ ಆಡುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

Corruption allegation against BJP MLA CT Ravi rsk mrq
ಕಾಂಗ್ರೆಸ್ ಸುದ್ದಿಗೋಷ್ಠಿ


ಇದನ್ನೂ ಓದಿ:  Karnataka Assembly Elections: ಯಾರಾಗುತ್ತಾರೆ ವಿಜಯನಗರದ ವೀರಪುತ್ರ? ಬೆಂಗಳೂರು ದಕ್ಷಿಣ ದಂಡಯಾತ್ರೆಯಲ್ಲಿ ಯಾರಿಗೆ ಗೆಲುವು?

ಸಂವಿಧಾನದ ಆಶಯ ಉಳಿಸಲು ಭಾರತ್ ಜೋಡೋ

ಬಿಜೆಪಿ ಒಡೆದಾಳುವ ನೀತಿ ಅನುಸರಿಸುತ್ತಿದೆ. ಜಿಎಸ್‍ಟಿ (GST) ಮೂಲಕ ಜನರನ್ನು ಸುಲಿಗೆ ಮಾಡುತ್ತಿದೆ. ಪ್ರತಿ ಅಗತ್ಯ ವಸ್ತುವಿನ ಬೆಲೆಯು ಗಗನಕ್ಕೇರಿದೆ. ಇದೆಲ್ಲವನ್ನೂ ಜನರಿಗೆ ತಿಳಿಸುವುದಕ್ಕಾಗಿ ಮತ್ತು ಸಂವಿಧಾನದ ಆಶಯಗಳನ್ನು ಉಳಿಸುವುದಕ್ಕಾಗಿ ಭಾರತ್ ಜೋಡೋ ಕಾರ್ಯಕ್ರಮ ನಡೆಯುತ್ತಿದೆ ಎಂದರು.

Corruption allegation agains BJP MLA CT Ravi rsk mrq
ಸಿ.ಟಿ.ರವಿ


ಬಾವನ ಹೆಸರಿನಲ್ಲಿ ಸಿ.ಟಿ.ರವಿ ಆಸ್ತಿ

ಸಿದ್ದರಾಮಯ್ಯ ಅವರ ವಿರುದ್ಧ ಅವಹೇಳನಕಾರಿ ಪದ ಬಳಸಿ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ (MLA CT Ravi) ಅವರು ತಮ್ಮ ಬಾವ ಸುಂದರೇಶ್ ಅವರ ಹೆಸರಿನಲ್ಲಿ ಪ್ರತಿಯೊಂದು ಗುತ್ತಿಗೆ ಕೆಲಸವನ್ನು ಮಾಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ಒಂದು ಸಣ್ಣ ಚರಂಡಿ ಆಗಬೇಕಾದರೂ ಅವರ ಹೆಸರಿನಲ್ಲಿಯೇ ಆಗುತ್ತದೆ. ಆ ಮೂಲಕ ಅವರು 800 ಕೋಟಿ ಆಸ್ತಿ ಹೊಂದಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.

ಇದನ್ನೂ ಓದಿ:  Traffic Rules: ವಾಹನ ಸವಾರರೇ ಎಚ್ಚರ; ಈ ಹೆಲ್ಮೆಟ್​ಗಳನ್ನು ಧರಿಸಿದ್ರೆ ಬೀಳುತ್ತೆ ಭಾರೀ ದಂಡ!

ಪ್ರವಾಹ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲ

ರಾಜ್ಯದಲ್ಲಿ 3.69 ಲಕ್ಷ ಮನೆಗಳಿಗೆ ಹಾನಿಯಾಗಿದ್ದು, 13 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. 11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಳೆಯಿಂದಾಗಿ ಬೆಳೆಯನ್ನೇ (Crop Loss) ಹಾಕಲು ಸಾಧ್ಯವಾಗಿಲ್ಲ. ಎಷ್ಟು ಜನರಿಗೆ ಸರ್ಕಾರ ಪರಿಹಾರ ನೀಡಿದೆ ಎಂದು ಲಕ್ಷ್ಮಣ್ ಪ್ರಶ್ನಿಸಿದರು. ಹಾನಿಯಾಗಿರುವ ಲೆಕ್ಕವನ್ನು ಬಿಜೆಪಿ ಮುಚ್ಚಿಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Published by:Mahmadrafik K
First published: