Hubballi: ಬಂಧನದ ಭೀತಿಯಿಂದ ಪಾಲಿಕೆಯತ್ತ ಸುಳಿಯದ ಚೇತನ್ ಹಿರೇಕೆರೂರ

ಚೇತನ್ ಗಾಗಿ ಖಾಕಿ ಪಡೆ ಹುಡುಕಾಟ ನಡೆಸಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಪಕ್ಷೇತರ ಸದಸ್ಯನಾಗಿರೋ ಚೇತನ್, ಜೂನ್ 26 ರಿಂದ ನಾಪತ್ತೆಯಾಗಿದ್ದಾನೆ. ಅದಕ್ಕೂ ಮುಂಚೆ ಒಮ್ಮೆ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದ ಪೊಲೀಸರು ನಂತರ ಕಳುಹಿಸಿಕೊಟ್ಟಿದ್ದರು.

ಚೇತನ್ ಹಿರೇಕೆರೂರ

ಚೇತನ್ ಹಿರೇಕೆರೂರ

  • Share this:
ಹುಬ್ಬಳ್ಳಿ: 40 ತಿಂಗಳುಗಳ ನಂತರ ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ (Hubballi Dharwad Municipal Corporation) ಸಾಮಾನ್ಯ ಸಭೆ ನಡೆಯಿತು. ಸಭೆಗೆ ಸಾಮಾನ್ಯವಾಗಿ ಪಾಲಿಕೆ ಸದಸ್ಯರು ಆಗಮಿಸುತ್ತಾರೆ. ಆದ್ರೆ ಇಲ್ಲಿ ಅವರಿಗೂ ಮುನ್ನವೇ ಪೊಲೀಸರು (Police) ಆಗಮಿಸಿದ್ದರು. ಓರ್ವ ಆರೋಪಿಯನ್ನು ಬಂಧಿಸೋಕೆ ಅಂದ ಆಗಮಿಸಿದ್ದ ಪೊಲೀಸರು ಕೊನೆಗೆ ಬರಿಗೈಲಿ ವಾಪಸ್ಸಾಗಿರೋ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಹುಬ್ಬಳ್ಳಿಯಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಗೆ ಖಾಕಿ ಪಡೆ ಆಗಮಿಸಿತ್ತು. ಕಾಪೋರೇಟರ್ ಚೇತನ್ ಹಿರೇಕೆರೂರ (corporator Chetan Hirekeruru) ಅರೆಸ್ಟ್ ಮಾಡಲು ಗೋಕುಲ್ ಠಾಣೆ ಇನ್ ಸ್ಪೆಕ್ಟರ್ ಜೆ.ಎಂ.ಕಾಲಿಮಿರ್ಚಿ ನೇತೃತ್ವದ ತಂಡ ಆಗಮಿಸಿತ್ತು. ಆದರೆ ಪಾಲಿಕೆ ಸಭೆಗೆ ಚೇತನ್ ಹಿರೇಕೆರೂರ ಗೈರು ಹಾಜರಾಗಿದ್ದ.

ಆ ಹಿನ್ನೆಲೆ ಪಾಲಿಕೆಯ ಸಭಾಂಗಣದಲ್ಲೆ ಕಾಲಿಮಿರ್ಚಿ ಮತ್ತಿತರರು ಕಾಯುತ್ತಾ ಕುಳಿತರು. ತನ್ನ ಸಹೋದರಿ ಸಂಬಂಧಿಯನ್ನೇ ಕಿಡ್ನ್ಯಾಪ್ ಮಾಡಿದ ಆರೋಪ ಹೊತ್ತಿರೋ ಚೇತನ್ ಹಿರೇಕೆರೂರ ಸೇರಿ ಐವರ ವಿರುದ್ಧ ಹುಬ್ಬಳ್ಳಿಯ ಕೋರ್ಟ್ ನಿಂದ ವಾರಂಟ್ ಜಾರಿಯಾಗಿದೆ.

ಚೇತನ್ ಗಾಗಿ ಖಾಕಿ ಪಡೆ ಹುಡುಕಾಟ ನಡೆಸಿತಾದರೂ ಯಾವುದೇ ಪ್ರಯೋಜನವಾಗಿಲ್ಲ. ಪಕ್ಷೇತರ ಸದಸ್ಯನಾಗಿರೋ ಚೇತನ್, ಜೂನ್ 26 ರಿಂದ ನಾಪತ್ತೆಯಾಗಿದ್ದಾನೆ. ಅದಕ್ಕೂ ಮುಂಚೆ ಒಮ್ಮೆ ಪೊಲೀಸ್ ಠಾಣೆಗೆ ಕರೆಯಿಸಿ ವಿಚಾರಣೆ ಮಾಡಿದ್ದ ಪೊಲೀಸರು ನಂತರ ಕಳುಹಿಸಿಕೊಟ್ಟಿದ್ದರು.

ಇದನ್ನೂ ಓದಿ:  Karwar: ಮತ್ತೆ ಕಾರವಾರದಲ್ಲಿ ಕೊಂಕಣಿ, ಕನ್ನಡ ಭಾಷಾ ವಿವಾದ; ನಗರಸಭೆಯಲ್ಲಿ ಮಾತಿನ‌ ಚಕಮಕಿ

ಯುವತಿ ಗೋವಾದಲ್ಲಿ ಪತ್ತೆಯಾದ ನಂತರ ಆಕೆಯನ್ನು ಗಂಡನ ಜೊತೆ ಕಳುಹಿಸಿಕೊಟ್ಟಿದ್ದ ಪೊಲೀಸರು, ಅಪಹರಣಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಪಾಲಿಕೆ ಸದಸ್ಯ ಸೇರಿ ಐವರನ್ನು ಬಂಧಿಸೋಕೆ ಪ್ರಯತ್ನ ನಡೆಸಿದ್ದಾರೆ. ಪಾಲಿಕೆ ಸಾಮನ್ಯ ಸಭೆಗೆ ಬರೊ ಮಾಹಿತಿ ಹಿನ್ನೆಲೆಯಲ್ಲಿ ಗೋಕುಲ್ ರೋಡ್ ಪೊಲೀಸರು ಅರೆಸ್ಟ್ ಮಾಡಲು ಬಂದಿದ್ದರಾದರೂ, ಬರಿಗೈಲಿ ವಾಪಸ್ಸಾಗಿದ್ದಾರೆ.

ಪಾಲಿಕೆ ಸಭೆಗೂ ಮುನ್ನ ಪ್ರತಿಭಟನೆ

ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆಗೆ ಆಗ್ರಹಿಸಿ ಹುಬ್ಬಳ್ಳಿಯ ಮಹಾನಗರ ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಮಹಾನಗರ ಪಾಲಿಕೆ ಸಾಮಾನ್ಯ ಸಭೆ ವೇಳೆ ನಾಗರೀಕರು ಪ್ರತ್ಯೇಕ ಪಾಲಿಕೆ ಧ್ವನಿ ಮೊಳಗಿಸಿದರು. ಧಾರವಾಡದ ಹೋರಾಟಗಾರರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ಎಚ್ ಡಿ ಎಂ ಸಿ ಸಾಕು,  ಡಿ ಎಂ ಸಿ ಬೇಕು ಎಂದು ಘೋಷಣೆ ಕೂಗಿದರು. ಪದೇ ಪದೇ ಧಾರವಾಡಕ್ಕೆ ಅನ್ಯಾಯ ಮಾಡಲಾಗ್ತಿದೆ. ಧಾರವಾಡದ ಅಭಿವೃದ್ಧಿ ನಿರ್ಲಕ್ಷಿಸಲಾಗಿದೆ. ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಕೊಡಲು ಒತ್ತಾಯಿಲಾಯಿತು. ಎಚ್ ಡಿ ಎಮ್ ಸಿ ಮೊದಲ ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ಪಾಲಿಕೆ ನಿರ್ಣಯ ಅಂಗೀಕರಿಸುವ ಆಗ್ರಹಿಸಿದ ಪ್ರತಿಭಟನಾಕಾರರು, ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ಪ್ರತ್ಯೇಕ ಪಾಲಿಕೆ ವಿಚಾರಕ್ಕೆ ಪ್ರತ್ಯೇಕ ಸಭೆ ಮಾಡ್ತೀವಿ ಅಂದ ಮೇಯರ್

ಪ್ರತ್ಯೇಕ ಮಹಾನಗರ ಪಾಲಿಕೆಯು ಒತ್ತಾಯಿಸಿ ಧಾರವಾಡ ನಾಗರಿಕರಿಂದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ನೂತನ ಮೇಯರ್ ಈರೇಶ್ ಅಂಚಟಗೇರಿ, ಕೆಲ ವರ್ಷಗಳಿಂದಲೂ ಧಾರವಾಡ ಪಾಲಿಕೆಯ ಪ್ರತ್ಯೇಕ ಮಾಡಬೇಕೆಂಬ ಬೇಡಿಕೆ ಇದೆ. ಶೀಘ್ರವೇ ಸರ್ವ ಸದಸ್ಯರ ಸಭೆ ಕರೆಯಲಾಗುವುದು.

ಈಗಾಗಲೇ ಧಾರವಾಡ ಪ್ರತ್ಯೇಕ ಪಾಲಿಕೆ ಕುರಿತು ಜಿಲ್ಲಾಧಿಕಾರಿಗಳಿಂದ ರಾಜ್ಯ ಸರ್ಕಾರಕ್ಕೆ ವರದಿ ಹೋಗಿದೆ. ಸರ್ಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ಮಾಡಲು ತೀರ್ಮಾನಿಸಲಾಗಿದೆ. ನಾನು ಸಹ ಧಾರವಾಡ ನಗರದವನೇ ಆಗಿದ್ದೇನೆ. ಆದರೆ ಈ ವಿಚಾರದಲ್ಲಿ ಬಿಜೆಪಿಯ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿದೆ ಎಂದು ಈರೇಶ್ ಅಂಚಟಗೇರಿ ತಿಳಿಸಿದ್ದಾರೆ.

ಘನ ತ್ಯಾಜ್ಯ ವಿಲೇವಾರಿ ಕುರಿತು ಕಾವೇರಿದ ಚರ್ಚೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೊದಲ‌ ಸಾಮಾನ್ಯ ಸಭೆಯಲ್ಲಿ ತ್ಯಾಜ್ಯ ವಿಲೇವಾರಿ ಕುರಿತ ವಿಷಯಕ್ಕೆ ಗಲಾಟೆ ನಡೆಯಿತು. ಪಾಲಿಕೆ ಸದಸ್ಯರ ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು.  ಕಸ ವಿಲೇವಾರಿ ವಿಚಾರದಲ್ಲಿ‌ ನಿರ್ಲಕ್ಷ್ಯ ಧೋರಣೆ ತೋರುತ್ತಿರೋ ಅಧಿಕಾರಿಗಳ ವಿರುದ್ಧ ಸದಸ್ಯರು ಹರಿಹಾಯ್ದರು. ವಾರ್ಡ್ ವಾರು ಸಮರ್ಪಕ ತ್ಯಾಜ್ಯ ವಿಲೇವಾರಿಯಾಗುತ್ತಿಲ್ಲ ಎಂದ ಸದಸ್ಯರು ಕಿಡಿಕಾರಿದರು.  ತ್ಯಾಜ್ಯ ವಿಲೇವಾರಿ ವಿಚಾರವಾಗಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯಿತು.

ಇದನ್ನೂ ಓದಿ:  Siddaramaiah: ಕಾಂಗ್ರೆಸ್ 130ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ

ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆಂದು ಪಾಲಿಕೆ ಸದಸ್ಯ ಇಕ್ಬಾಲ್ ನವಲೂರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ನಂತರ ಮಾತನಾಡಿದ ಮೇಯರ್ ಈರೇಶ್ ಅಂಚಟಗೇರಿ, ಮುಂಚೆ 67 ವಾರ್ಡ್ ಗಳಿದ್ದವು. ಇದೀಗ ಅದರ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ. ಹೀಗಾಗಿ ಒಂದಷ್ಟು ಗೊಂದಲವಾಗಿದ್ದು, ಅದನ್ನು ಸರಿಪಡಿಸಲಾಗುವುದು. ಅಗತ್ಯವಿದ್ದಲ್ಲಿ ಹೆಚ್ಚಿನ ವಾಹನ ಮತ್ತು ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.

ಪಾಲಿಕೆ ಸಭೆಗೆ ಪಾಲಿಕೆ ಸದಸ್ಯೆಯರ ಪತಿ ಅಥವಾ ಮಕ್ಕಳು ಬಂದಿಲ್ಲ. ಅಂಥದ್ದಕ್ಕೆ ಇಲ್ಲಿ ಅವಕಾಶ ಮಾಡಿಕೊಟ್ಟಿಲ್ಲ ಎಂದು ಇದೇ ವೇಳೆ ಮೇಯರ್ ಸ್ಪಷ್ಟಪಡಿಸಿದರು.
Published by:Mahmadrafik K
First published: