Sister Kidnap: ತವರು ಮನೆಗೆ ಹೋದವಳು ನಾಪತ್ತೆ, ರಿಸೆಪ್ಷನ್​ಗೂ ಮುನ್ನ ತಂಗಿಯನ್ನೇ ಕಿಡ್ನ್ಯಾಪ್ ಮಾಡಿದ್ನಾ ಸಹೋದರ?

ಸಹೋದರಿಯನ್ನೇ ಕಿಡ್ನ್ಯಾಪ್ ಮಾಡಿ ಅರತಕ್ಷತೆಗೆ ಅಡ್ಡಿ ಪಡಿಸಲು ಯತ್ನಿಸಿದ್ದಾನೆಂಬ ಆರೋಪ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ವಿರುದ್ಧ ಕೇಳಿ ಬಂದಿದೆ. ಚೇತನ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರೋ ಸಹನಾಳ ಹುಡುಕಾಟ ನಡೆಸಲಾಗಿದೆ.

ಚೇತನ್​

ಚೇತನ್​

  • Share this:
ಹುಬ್ಬಳ್ಳಿ (ಜೂ 25) : ಸಹೋದರಿಯನ್ನೇ ಕಾರ್ಪೋರೇಟರ್ ಕಿಡ್ನ್ಯಾಪ್ (Kidnap) ಮಾಡಿದ್ನಾ? ಇಂಥದ್ದೊಂದು ಪ್ರಶ್ನೆ ಹುಬ್ಬಳ್ಳಿಯಲ್ಲಿ ಎದ್ದಿದ್ದು, ಕಾರ್ಪೊರೇಟರ್ ಚೇತನ್ ಹಿರೇಕೆರೂರ ವಿರುದ್ಧ ಸಹೋದರಿಯನ್ನು (Sister) ಕಿಡ್ನ್ಯಾಪ್ ಮಾಡಿದ ಪ್ರಕರಣ (Kidnap Case) ದಾಖಲಾಗಿದೆ. ವಿಚಿತ್ರವೆಂದರೆ ಸಹೋದರಿಯ ಪತಿಯೇ ಈ ದೂರು ನೀಡಿದ್ದಾನೆ. ತನ್ನ ಸಹೋದರಿಯನ್ನೇ ಅಪಹರಿಸಿ ಅಜ್ಞಾತ ಸ್ಥಳದಲ್ಲಿಟ್ಟ ಆರೋಪ ಹುಬ್ಬಳ್ಳಿಯ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ ಮೇಲೆ ಬಂದಿದ್ದು, ಆತನ ವಿರುದ್ಧ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಲಾಗಿದೆ.

ಸಹನಾ ಪ್ರೀತಿಗೆ ಸಿಕ್ಕಿಲ್ಲ ಪೋಷಕರ ಒಪ್ಪಿಗೆ

ಚೇತನ್ ಸಂಬಂಧಿ ಹಾಗೂ ಸಹೋದರಿ ಸಹನಾಳ ಗಂಡ ನಿಖಿಲ್ ದಾಂಡೇಲಿ ಎಂಬಾತ ದೂರು ನೀಡಿದ್ದು, ಚೇತನ್ ನನ್ನು ಪೊಲೀಸ್ ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ಮಾಡಿದ್ದಾರೆ. ನಿಖಿಲ್ ದಾಂಡೇಲಿ ಹಾಗೂ ಸಹನಾ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ನಾಳೆ ನಡೆಯಬೇಕಿದ್ದ ಇಬ್ಬರ ಅರತಕ್ಷತೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.

‘ಆತನ ಸಹೋದರನೇ ಕಿಡ್ಯಾಪ್​ ಮಾಡಿದ್ದಾನೆ’

ಅರತಕ್ಷತೆ ಆಹ್ವಾನ ಪತ್ರಿಕೆಯಲ್ಲಿ ತಂದೆ - ತಾಯಿ ಹೆಸರನ್ನೂ ಸಹನಾ ಹಾಕಿಕೊಂಡಿದ್ದಳು. ಪ್ರೀತಿಸಿ ಮದುವೆಯಾಗಿದ್ದಲ್ಲದೆ, ತಮ್ಮ ಹೆಸರನ್ನೂ ಹಾಕಿ ಮರ್ಯಾದೆ ತೆಗೆದಿದ್ದಾಳೆ ಎಂದು ತಂದೆ - ತಾಯಿಯಲ್ಲಿ ಅಸಮಾಧಾನ ಇತ್ತು ಎನ್ನಲಾಗಿದೆ.
ಅರತಕ್ಷತೆಯ ಆಹ್ವಾನ ಪತ್ರಿಕೆ ಕೊಡಲು ಬಂದಾಗ ಮಾತನಾಡುವ ನೆಪದಲ್ಲಿ ಸಹನಾಳನ್ನು ಪಕ್ಕಕ್ಕೆ ಕರೆದೊಯ್ದು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ನಿಖಿಲ್ ದಾಂಡೇಲಿ ಆರೋಪಿಸಿದ್ದಾನೆ.

ಇದನ್ನೂ ಓದಿ: Bengaluru University: ಮೊದಲು ಡಿಸ್ಟಿಂಕ್ಷನ್​ನಲ್ಲಿ ಪಾಸ್ ಅಂದ್ರು ಆಮೇಲೆ ನೀವೆಲ್ಲಾ ಫೇಲ್ ಅಂದ್ರು; ಬೆಂಗಳೂರು ವಿವಿ ಎಡವಟ್ಟಿಗೆ ವಿದ್ಯಾರ್ಥಿಗಳ ಸಿಟ್ಟು

ಸುಳ್ಳು ಕೇಸ್​ ಎಂದು ಚೇತನ ಬೆಂಬಲಿಗರ ಆಕ್ರೋಶ

ನಿಖಿಲ್ ದಾಂಡೇಲಿ ನೀಡಿದ ದೂರಿನ ಅನ್ವಯ ಚೇತನ್ ಹಿರೇಕೆರೂರ ನನ್ನು ಪೊಲೀಸರು ಕರೆತಂದು ವಿಚಾರಣೆ ನಡೆಸಿದು. ಇದಕ್ಕೆ ಚೇತನ್ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಸುಳ್ಳು ಪ್ರಕರಣ ದಾಖಲಿಸಿ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಗೋಕುಲ್ ರೋಡ್ ಪೊಲೀಸ್ ಠಾಣೆ ಎದುರು ಜಮಾಯಿಸಿ, ಚೇತನ್ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಚೇತನ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ವಾರ್ಡ್ ಸಂಖ್ಯೆ 52ರ ನಿವಾಸಿಗಳು ಮತ್ತು ಚೇತನ್ ಅಭಿಮಾನಿಗಳು ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚೇತನ್ ಹಿರೇಕೆರೂರ ತನ್ನ ಸಹೋದರಿಯನ್ನೇ ಏಕೆ ಕಿಡ್ನ್ಯಾಪ್ ಮಾಡ್ತಾರೆ ಅಂತ ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ, ಇಲ್ಲದಿದ್ದಲ್ಲಿ ಬಿಟ್ಟು ಬಿಡಿ ಎಂದು ಆಗ್ರಹಿಸಿದ್ದಾರೆ. ವಿಚಾರಣೆಯ ನಂತರ ಪೊಲೀಸರು ಚೇತನ್ ಹಿರೇಕೆರೂನನ್ನು ಬಿಟ್ಟು ಕಳುಹಿಸಿದ್ದಾರೆ.

ನಾಪತ್ತೆಯಾಗಿರೋ ಸಹನಾಳಿಗಾಗಿ ಹುಡುಕಾಟ

ಚೇತನ್ ಹಿರೇಕೆರೂರ ಜೊತೆಗೆ ಶಿವು ಹಿರೇಕೆರೂರು ಮತ್ತು ಜಯಲಕ್ಷ್ಮಿ ಹಿರೇಕೆರೂರು ವಿರುದ್ಧವೂ ದೂರು ನೀಡಲಾಗಿದೆ. ಮೂವರ ವಿರುದ್ಧ ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಪತ್ತೆಯಾಗಿರೋ ಸಹನಾಳ ಹುಡುಕಾಟ ಮುಂದುವರೆದಿದೆ. 7 ತಿಂಗಳ ಹಿಂದೆ ನಮ್ಮ ಲವ್ ಮ್ಯಾರೇಜ್ ಆಗಿತ್ತು. ನಮ್ಮ ಚಿಕ್ಕಪ್ಪ ನಿಧನರಾಗಿದ್ದರಿಂದ ಅರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿರಲಿಲ್ಲ. ಜೂನ್ 26 ರಂದು ಅರತಕ್ಷತೆ ಕಾರ್ಯಕ್ರಮ ಆಯೋಜಿಸಿದ್ದೆವು.

ಇದನ್ನೂ ಓದಿ: Bengaluru: ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮೇಲುಸ್ತುವಾರಿ ಡಿಸಿಪಿಗಳ ಹೆಗಲಿಗೆ: ಸಿಎಂ ಸೂಚನೆ

ಆಹ್ವಾನ ಪತ್ರಿಕೆ ನೀಡಲು ಹೋದಾಗ ಉಡಿ ತುಂಬಿಸಿಕೊಂಡು ಬಹೋದಾಗಿ ಕರೆದೊಯ್ದು ನಾಪತ್ತೆ ಮಾಡಿದ್ದಾರೆ. ಚೇತನ್ ಹಿರೇಕೆರೂರ ಮತ್ತು ಹೆತ್ತ ತಂದೆ - ತಾಯಿಗಳೇ ಕಿಡ್ನ್ಯಾಪ್ ಮಾಡಿದ್ದಾರೆ. ಈ ಹಿಂದೆಯ ತನ್ನ ತಂದೆ - ತಾಯಿಗಳಿಂದ ಥ್ರೆಟ್ ಇದೆ ಅಂತ ಸಹನಾ ದೂರು ನೀಡಿದ್ದಳು. ಇದೀಗ ಅದು ಸತ್ಯವಾಗಿದೆ. ಕಿಡ್ನ್ಯಾಪ್ ಆಗಿರೋ ನನ್ನ ಹೆಂಡತಿಯನ್ನು ಹುಡುಕಿ ಕೊಡಬೇಕು. ಅರತಕ್ಷತೆ ಕಾರ್ಯಕ್ರಮದ ಒಳಗಾಗಿಯೇ ಕರೆತರಬೇಕೆಂದು ನಿಖಿಲ್ ದಾಂಡೇಲಿ ಆಗ್ರಹಿಸಿದ್ದಾರೆ.
Published by:Pavana HS
First published: